ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನ ಟಾಪ್-10 ಸುಶಿಕ್ಷಿತ ದೇಶಗಳು; ಭಾರತದ್ದೇನು ಸ್ಥಾನ?

|
Google Oneindia Kannada News

ಬೆಂಗಳೂರು, ಸೆ. 12: ಒಂದು ದೇಶ ಮತ್ತು ಸಮಾಜದ ಆರೋಗ್ಯಕ್ಕೆ ಅಲ್ಲಿನ ಶಿಕ್ಷಣ ವ್ಯವಸ್ಥೆ ಪ್ರಮುಖ ಮಾನದಂಡಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಸಾಕ್ಷರ ದೇಶ ಸುಭಿಕ್ಷ ದೇಶ ಎಂದು ಭಾವಿಸಲಾಗಿದೆ. ಭಾರತದಲ್ಲಿ ಹಲವಾರು ದಶಕಗಳಿಂದ ಪ್ರತಿಯೊಬ್ಬರನ್ನೂ ಸಾಕ್ಷರರನ್ನಾಗಿ ಮಾಡಲು ಸರಕಾರ ಅವಿರತ ಪ್ರಯತ್ನ ಮಾಡಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಆದರೂ ಕಾಲೇಜು ಹಂತಕ್ಕೆ ಬರುವ ಮುನ್ನವೇ ಶಿಕ್ಷಣಕ್ಕೆ ವಿದಾಯ ಹೇಳುತ್ತಿರುವ ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗಿಲ್ಲ.

ಇದೇ ವೇಳೆ, ಭಾರತದ ಉದ್ಯಮಿ ಅನಂದ್ ಮಹೀಂದ್ರ ಅವರು ವಿಶ್ವದಲ್ಲೇ ಅತಿ ಹೆಚ್ಚು ಸುಶಿಕ್ಷಿತ ದೇಶಗಳ ಪಟ್ಟಿಯೊಂದನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ. ವರ್ಲ್ಡ್ ಅಫ್ ಸ್ಟಾಟಿಸ್ಟಿಕ್ಸ್ ಎಂಬ ಅಕೌಂಟ್‌ನಿಂದ ಟಾಪ್-10 ಪಟ್ಟಿ ಟ್ವೀಟ್ ಆಗಿತ್ತು. ಅದನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡ ಆನಂದ್ ಮಹೀಂದ್ರ, ಈ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆಯಬೇಕೆಂಬ ಆಶಯ ವ್ಯಕ್ತಪಡಿಸಿದರು.

ಇಡಿ ರೇಡ್‌ನಿಂದ ಸಿಕ್ಕಿದೆ 1 ಲಕ್ಷ ಕೋಟಿ; ಎಲ್ಲಿ ಹೋಗುತ್ತೆ ಈ ಹಣ?ಇಡಿ ರೇಡ್‌ನಿಂದ ಸಿಕ್ಕಿದೆ 1 ಲಕ್ಷ ಕೋಟಿ; ಎಲ್ಲಿ ಹೋಗುತ್ತೆ ಈ ಹಣ?

ಈ ಪಟ್ಟಿಯಲ್ಲಿ ಕೆನಡಾ ಅಗ್ರಸ್ಥಾನದಲ್ಲಿದೆ. ಕುತೂಹಲವೆಂದರೆ ಅಮೆರಿಕ ಏಳನೇ ಸ್ಥಾನದಲ್ಲಿದೆ. ವಿಶ್ವದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಮತ್ತು ಶಿಕ್ಷಣಕ್ಕೆ ಉದಾರವಾಗಿ ಉತ್ತೇಜನ ನೀಡುವ ಅಮೆರಿಕ ದೇಶ ಈ ಪಟ್ಟಿಯಲ್ಲಿ ಒಂದು ಸ್ಥಾನ ಕುಸಿದಿದೆ.

Canada Tops List Of Most Educated Countries, Know How India Fares

ಟಾಪ್-10 ಸುಶಿಕ್ಷಿತ ದೇಶಗಳು
1) ಕೆನಡಾ
2) ರಷ್ಯಾ
3) ಜಪಾನ್
4) ಲುಕ್ಸೆಂಬೋರ್ಗ್
5) ಸೌತ್ ಕೊರಿಯಾ
6) ಇಸ್ರೇಲ್
7) ಅಮೆರಿಕ
8) ಐರ್ಲೆಂಡ್
9) ಬ್ರಿಟನ್
10) ಆಸ್ಟ್ರೇಲಿಯಾ

ಈ ಪಟ್ಟಿ ಯಾರು ಬಿಡುಗಡೆ ಮಾಡಿದ್ದು ಎಂದು ಗೊತ್ತಿಲ್ಲ. ಆದರೆ, ಆರ್ಗನೈಸೇಶನ್ ಫಾರ್ ಎಕನಾಮಿಕ್ ಕೋ ಆಪರೇಶನ್ ಅಂಡ್ ಡೆವಲಪ್ಮೆಂಟ್ (ಒಇಸಿಡಿ) ಸಂಸ್ಥೆಯಿಂದ 2018ರಲ್ಲಿ ಒಂದು ಪಟ್ಟಿ ಪ್ರಕಟವಾಗಿತ್ತು. ಅದರಲ್ಲೂ ಕೆನಡಾ ಅಗ್ರಸ್ಥಾನದಲ್ಲಿತ್ತು. ಟಾಪ್-10ನಲ್ಲಿ ರಷ್ಯಾ ಇರಲಿಲ್ಲ. ಆದರೆ, ಆನಂದ್ ಮಹೀಂದ್ರ ಶೇರ್ ಮಾಡಿರುವ ಪಟ್ಟಿಯಲ್ಲಿ ರಷ್ಯಾ ನಂಬರ್ 2 ಸ್ಥಾನದಲ್ಲಿರುವುದು ಅನೇಕ ಟ್ವೀಟಿಗರ ಹುಬ್ಬೇರಿಸಿದೆ.

World EV Day 2022: ಇವೇ ನೋಡಿ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್‌ಗಳು; ಬೆಲೆ ಎಷ್ಟು?World EV Day 2022: ಇವೇ ನೋಡಿ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್‌ಗಳು; ಬೆಲೆ ಎಷ್ಟು?

ಸುಶಿಕ್ಷಿತ ದೇಶ ಎಂದರೆ?
ಕಾಲೇಜು ಶಿಕ್ಷಣ, ಪ್ರೌಢಶಾಲೆ ಮತ್ತು ಮಾಧ್ಯಮಿಕ ಹಂತದ ಶಿಕ್ಷಣ ಇವುಗಳನ್ನು ಎಷ್ಟು ಮಂದಿ ಪಡೆದಿದ್ದಾರೆ ಎಂಬುದು ಸುಶಿಕ್ಷಿತ ದೇಶದ ಶ್ರೇಯಾಂಕಕ್ಕೆ ಮಾನದಂಡವೆನಿಸಿದೆ. ಕೆನಡಾದಲ್ಲಿ ಶೇ. 60ರಷ್ಟು ಜನರು ಕಾಲೇಜು ಶಿಕ್ಷಣ ಪಡೆದಿದ್ದಾರೆನ್ನಲಾಗಿದೆ. ಪ್ರೌಢಶಾಲಾ ಹಂತಕ್ಕಿಂತ ಕಡಿಮೆ ಶಿಕ್ಷಣ ಪಡೆದವರ ಸಂಖ್ಯೆ ಶೇ. 7.60 ಮಾತ್ರ.

Canada Tops List Of Most Educated Countries, Know How India Fares

ರಷ್ಯಾದ ಶೇ. 56.70ಯಷ್ಟು ಜನರು ಕಾಲೇಜು ಹಂತದಲ್ಲಿ ಶಿಕ್ಷಣ ಪಡೆದಿರುವುದು ಈ ಸಮೀಕ್ಷೆಯಿಂದ ತಿಳಿಯುತ್ತದೆ. 10ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದಲ್ಲಿ ಶೇ. 49.30ರಷ್ಟು ಜನರು ಟರ್ಷಿಯರಿ ಹಂತ ಪೂರೈಸಿದ್ದಾರೆ. ಪ್ರೌಢಶಾಲಾ ಹಂತಕ್ಕಿಂತ ಕಡಿಮೆ ಓದಿರುವವರ ಸಂಖ್ಯೆ ಶೇ. 16.20ರಷ್ಟು ಇದೆ.

ಭಾರತದಲ್ಲಿ ಎಷ್ಟಿದೆ ಶಿಕ್ಷಣ?
ಅತಿ ಹೆಚ್ಚು ಶಿಕ್ಷಣ ಹೊಂದಿದ ದೇಶಗಳ ಪಟ್ಟಿಯಲ್ಲಿ ಭಾರತ ಇಲ್ಲ. ಅದರ ಅಂಕಿ ಅಂಶವೂ ಲಭ್ಯ ಇಲ್ಲ. ಜಾಗತಿಕ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾಕ್ಷರತೆ ಪ್ರಮಾಣವೇ ಕಡಿಮೆ ಇದೆ. ಭಾರತದಲ್ಲಿ ಶೇ. 74.04ರಷ್ಟು ಮಂದಿ ಸಾಕ್ಷರರಾಗಿದ್ದಾರೆ. ಇದರಲ್ಲಿ ಪುರುಷರಲ್ಲಿ ಶೇ. 82.14, ಮಹಿಳೆಯರಲ್ಲಿ ಶೇ. 65.46 ಸಾಕ್ಷರತೆ ಇದೆ. ಜಾಗತಿಕವಾಗಿ ಪುರುಷರಲ್ಲಿ ಶೇ. 90 ಮತ್ತು ಮಹಿಳೆಯರಲ್ಲಿ ಶೇ. 82.7ರಷ್ಟು ಸಾಕ್ಷರತೆ ಇದೆ.

ಇಲ್ಲಿ ಸಾಕ್ಷರ ಎಂದರೆ ಅಕ್ಷರ ಬಲ್ಲವರು. ಭಾರತದಲ್ಲಿ ಓದಲು ಬರೆಯಲು ಮತ್ತು ಹಸ್ತಾಕ್ಷರ ಹಾಕಲು ಬಂದರೆ ಸಾಕ್ಷರ ಎಂದು ಪರಿಗಣಿಸಲಾಗುತ್ತದೆ. ಆಗಲೇ ಹೇಳಿದಂತೆ ಶಾಲೆ ಸೇರಿಕೊಂಡ ಬಹಳ ಮಂದಿ ಕಾಲೇಜು ಹಂತಕ್ಕೆ ಹೋಗುವ ಮುನ್ನವೇ ಹೊರಬೀಳುತ್ತಾರೆ.

ಭಾರತದಲ್ಲಿ ಆಗಿನಿಂದಲೂ ಶಿಕ್ಷಣಕ್ಕೆ ಹೆಚ್ಚು ಹಣ ಮೀಸಲಾಗಿಟ್ಟಿಲ್ಲ. 2019-20ರಲ್ಲಿ ಭಾರತದ ಜಿಡಿಪಿಯಲ್ಲಿ ಶಿಕ್ಷಣಕ್ಕಾಗಿ ವಿನಿಯೋಗಿಸಿದ್ದು ಶೇ. 3.1ರಷ್ಟು ಮಾತ್ರ. ಈಗ ಕೇಂದ್ರ ಸರಕಾರ ಹೊಸ ಶಿಕ್ಷಣ ನೀತಿಯನ್ನು ರೂಪಿಸಿದೆ. ಕೆಲ ರಾಜ್ಯಗಳಲ್ಲಿ ಎನ್‌ಇಪಿ ಜಾರಿಯಾಗುವ ಹಂತದಲ್ಲಿದೆ. ಸರಕಾರ ಕೂಡ ಹೆಚ್ಚು ಹಣ ವ್ಯಯಿಸಲು ಉತ್ಸುಕವಾಗಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಶಿಕ್ಷಣ ಗುಣಮಟ್ಟಕ್ಕೆ ಪ್ರಾಧಾನ್ಯತೆ ಕೊಟ್ಟರೆ ಸುಕ್ಷಿತ ದೇಶಗಳ ಸಾಲಿನಲ್ಲಿ ನಮ್ಮ ದೇಶವೂ ನಿಲ್ಲುವುದರಲ್ಲಿ ಸಂಶಯ ಇಲ್ಲ.

2016ರಲ್ಲಿ ಡಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಪ್ರಕಾರ, ಅವರ ದೇಶದ ಅತಿದೊಡ್ಡ ಸಂಪನ್ಮೂಲವೆಂದರೆ ಅದು ಶಿಕ್ಷಣವಂತೆ. ಭಾರತವೂ ಅದೇ ದಿಸೆಯಲ್ಲಿ ಮನೋಭಾವ ಬೆಳೆಸಿಕೊಂಡರೆ ಪ್ರಗತಿ ಸಾಧ್ಯ.

English summary
OECD has released list of top-10 most educated countries of 2022. Canda tops the list, while Australia at 10th place. India is yet t find place in the list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X