• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೃಶ್ಚಿಕ ಮತ್ತಿತರ ನಾಲ್ಕು ರಾಶಿಗಳ 2016ರ ವರ್ಷಭವಿಷ್ಯ

By ನಾಗನೂರಮಠ ಎಸ್ಎಸ್
|

ಸಾಡೇಸಾತಿಯ ಎರಡನೇ ಹಂತದಲ್ಲಿ ಕಾಲಿಟ್ಟಿರುವ ವೃಶ್ಚಿಕ ರಾಶಿಯವರು ಈ ವರ್ಷ ಅಂದರೆ ಆಗಸ್ಟ್ ವರೆಗೆ ಸಂತಸದಿಂದಿರಬಹುದು. ಆಗಸ್ಟ್ ತಿಂಗಳಿನ ನಂತರ ಗುರುಬಲ ಕೈಕೊಡುವುದರಿಂದ ಸ್ವಲ್ಪ ಜೀವನದಲ್ಲಿ ಏರುಪೇರಾಗುವುದು. ಇನ್ನು ರಾಹು-ಕೇತು ಸಹ ಸ್ವಲ್ಪ ಕಿರಿಕ್ ನೀಡುವುದರಿಂದ ಜಾಗೃತೆಯಿಂದಿರುವುದು ಒಳಿತು ಈ ರಾಶಿಯವರು. ಸಾಡೇಸಾತಿಗೆ ಸಂಬಂಧಪಟ್ಟ ಪರಿಹಾರಗಳನ್ನು ಮಾಡಿಕೊಂಡು ಆಗಷ್ಟ್ ನಲ್ಲಿ ಗುರುಶಾಂತಿ ಕೂಡ ಮಾಡಿಸಿಟ್ಟುಕೊಳ್ಳುವುದು ಮುಖ್ಯ.

ದೇಹಾರೋಗ್ಯದಲ್ಲಿ ತೊಂದರೆಗಳು ಸಣ್ಣದಾಗಿ ಪ್ರಾರಂಭವಾಗಿ ಮುಂದೆ ಉಗ್ರರೂಪ ಪಡೆದುಕೊಳ್ಳಬಹುದು. ಆದ್ದರಿಂದ ಎಚ್ಚರಿಕೆಯಿಂದಿರಲು ಕಲಿಯಬೇಕು. ಈ ರಾಶಿಯವರು ಗಣಪ ಮತ್ತು ಹನುಮನ ಆರಾಧನೆಯೊಂದಿಗೆ ಶಂಭೋಲಿಂಗನ ಆರಾಧನೆ ಕೂಡ ಮಾಡುತ್ತಿದ್ದರೆ ಎಲ್ಲದಕ್ಕೂ ಪರಿಹಾರ ಸಿಗಬಹುದು.

ಧನುಸ್ಸು ರಾಶಿ : ಸಾಡೇಸಾತಿಯ ಮೊದಲನೇ ಹಂತದಲ್ಲಿ ಕಾಲಿಟ್ಟಿರುವ ಧನುಸ್ಸು ರಾಶಿಯವರು ಈಗಾಗಲೇ ಶನಿಕಾಟದನುಭವ ಪಡೆದುಕೊಳ್ಳುತ್ತಿದ್ದಾರೆ. ಈ ವರ್ಷ ಗಣನೀಯ ಪ್ರಮಾಣದಲ್ಲಿ ಕಾಡಾಟ ಏರಿಕೆಯಾಗಲಿದೆ. ಆದ್ದರಿಂದ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾದ ವರ್ಷವಿದು. ರಾಹು-ಕೇತುಗಳು ಒಳಿತನ್ನು ಬಯಸುವುದಿಲ್ಲವಾದ್ದರಿಂದ. ಮೊದಲು ರಾಹು-ಕೇತು ಶಾಂತಿ ಹಾಗೂ ಶನಿಶಾಂತಿ ಮಾಡಿಸಿಟ್ಟುಕೊಳ್ಳುವುದು ಒಳ್ಳೆಯದು. [ಇಷ್ಟದಂತೆ ಇದ್ರೆ ಶಾಂತಸಾಗರ, ಇಲ್ಲ ಕುರುಕ್ಷೇತ್ರ]

ಮಕರ ರಾಶಿ : ಲಾಭ ಸ್ಥಾನದಲ್ಲಿ ಶನಿಯು ಇರುವುದರಿಂದ, ಮುಂದಿನ ವರ್ಷ ಮುಗಿಯುವವರೆಗೂ ಶನಿದೇವನ ಕೃಪಾಕಟಾಕ್ಷವಿರುವುದರಿಂದ, ಮುಖ್ಯವಾದ ಕೆಲಸಗಳನ್ನು ಈ ಕೂಡಲೇ ಆರಂಭಿಸಿಕೊಳ್ಳಬೇಕು. ಏಕೆಂದರೆ ಮುಂದಿನ ದಿನಗಳಲ್ಲಿ ಶನಿಕಾಟ ಶುರುವಾಗುವುದರಿಂದ ಸ್ವಲ್ಪ ಪ್ಲ್ಯಾನ್ ಮಾಡಿಕೊಂಡು ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ಕಾರ್ಯರೂಪಕ್ಕಿಳಿಸಬೇಕು.

ರಾಹು-ಕೇತುಗಳು ಮತ್ತು ಗುರು ಅಷ್ಟಕ್ಕಷ್ಟೇ ಆಗಿರುವುದರಿಂದ ಶನಿದೇವನ ಕೃಪಾಕಟಾಕ್ಷವನ್ನು ನಂಬಿಕೊಂಡರೆ ಸಾಕು. ಉಳಿದಿದ್ದೆಲ್ಲವೂ ತಾನಾಗಿಯೇ ಕೂಡಿಕೊಂಡು ಬರುವ ವರ್ಷವಿದು. [ಐ ಲವ್ ಯೂ ಹೇಳೋಕೆ ಬಿಂಕವೇಕೆ?]

ಕುಂಭ ರಾಶಿ : ಗುರುವಿನ ಕೃಪೆಯಿರುವುದರಿಂದ ಈ ವರ್ಷ ಈ ರಾಶಿಯವರಿಗೆ ನಷ್ಟವೇನೂ ಆಗೋದಿಲ್ಲ. ಲಾಭವೇ ಹೆಚ್ಚೆನ್ನಬಹುದು. ಆದರೆ, ದೇಹಾರೋಗ್ಯದಲ್ಲಿ ಸ್ವಲ್ಪಹೆಚ್ಚಿನ ತೊಂದರೆ ಬರುವುದರಿಂದ ಜಾಗೃತೆ ವಹಿಸಿಕೊಂಡರೆ ಸಾಕು. ಶನಿ, ರಾಹು ಮತ್ತು ಕೇತುಗಳು ಏನೂ ತೊಂದರೆ ಮಾಡುವುದಿಲ್ಲವಾದರೂ ದೈವಾರಾಧನೆ ತಪ್ಪಿಸದೇ ಮಾಡಿಕೊಳ್ಳುತ್ತಿದ್ದರೆ ಶುಭಫಲ ಶತಸಿದ್ಧ.

ಮೀನ ರಾಶಿ : ಅಷ್ಟಮ ಶನಿಕಾಟದಿಂದ ಪಾರಾಗಿ ಬಂದಿರುವ ಮೀನ ರಾಶಿಯವರು ಈಗ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಏಕೆಂದರೆ ಈ ವರ್ಷ ಅಂದುಕೊಂಡಿದ್ದನ್ನು ಸಾಧಿಸಿಕೊಳ್ಳಬಹುದು. ಜೊತೆಗೆ ರಾಹು ಮತ್ತು ಕೇತು ಹಾಗೂ ಗುರು ಅಲ್ಪಕಾಣಿಕೆ ಜೀವನಕ್ಕೆ ನೀಡುವುದರಿಂದ ಸಂತಸವಿರುತ್ತದೆ. ಒಟ್ಟಿನಲ್ಲಿ ಹೊಸ ವರ್ಷ ಹೊಸತನವನ್ನು ಜೀವನದಲ್ಲಿ ಮೂಡಿಸಿ ಮೀನ ರಾಶಿಯವರಿಗೆ ಸಂತಸವಿರುವಂತಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Yearly horoscope 2016 for Scorpio, Sagittarius, Capricorn, Aquarius, Pises zodiac signs. Astrologer SS Naganurmath explains what lies ahead of Scorpio and other zodiac sign people. Worship lord Shani to get rid of ill effects on life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more