Financial Horoscope 2023: ಹೊಸ ವರ್ಷದಲ್ಲಿ ಹೇಗಿರಲಿದೆ ನಿಮ್ಮ ಆರ್ಥಿಕ ಸ್ಥಿತಿ..?

ಆರ್ಥಿಕ ಸ್ಥಿತಿ ಎನ್ನುವುದು ಮನುಷ್ಯನ ಜೀವನದಲ್ಲಿ ಅತಿ ಮುಖ್ಯ ಪಾತ್ರವಹಿಸುತ್ತದೆ. ಹಣಕಾಸಿನ ಸ್ಥಿತಿಯ ಮೇಲೆ ಒಬ್ಬ ಮನುಷ್ಯನ ಸಂಪೂರ್ಣ ಜೀವನ ನಿಂತಿರುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೆ, ಆ ದಿನ , ಆ ತಿಂಗಳು ಅಥವಾ ಆ ವರ್ಷ ವ್ಯಕ್ತಿಯ ಜೀವನದಲ್ಲಿ ಸಂತೋಷ ಕೂಡ ಇರುತ್ತದೆ. ಹಣದ ಹಿಂದೆ ಓಡುವ ಪ್ರಸ್ತುತ ದಿನಗಳಲ್ಲಿ ಒಂದು ವೇಳೆ ಆರ್ಥಿಕ ಸ್ಥಿತಿಯಲ್ಲಿ ಏರಿಳಿತ ಉಂಟಾದರೆ ಮನುಷ್ಯನಲ್ಲಿ ಮಾನಸಿಕ ಒತ್ತಡ ಕೂಡ ಉಂಟಾಗಬಹುದು. ಆರೋಗ್ಯ ಹಾಗೂ ಆರ್ಥಿಕ ಈ ಎರಡೂ ಸ್ಥಿತಿಗಳು ಉತ್ತಮವಾಗಿದ್ದರೆ, ವ್ಯಕ್ತಿಯ ಜೀವನ ಸಂಪೂರ್ಣವಾಗಿರುತ್ತದೆ.

ಗ್ರಹ ಗತಿಗಳ ಚಲನದಿಂದ ಪ್ರತಿಯೊಬ್ಬರ ಜೀವನದಲ್ಲೂ ಆರ್ಥಿಕ ಏರಿಳಿತ ಉಂಟಾಗುತ್ತದೆ. ಆದರೆ ಅದನ್ನು ಸಮರ್ಥವಾಗಿ ನಿರ್ವಹಿಸುವ ಯೋಜನೆಯೂ ಜೊತೆಗಿರಬೇಕು. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಆಗಮಿಸಲಿದ್ದು, 2023ರಲ್ಲಿ 12 ರಾಶಿಗಳ ಆರ್ಥಿಕ ಸ್ಥಿತಿ ಹೇಗಿರಲಿದೆ ಎನ್ನುವ ಕುತೂಹಲ ಎಲ್ಲರಲ್ಲಿರಬಹುದು. ಹಾಗಾದರೆ 2023ರಲ್ಲಿ 12 ರಾಶಿಗಳ ಆರ್ಥಿಕ ಸ್ಥಿತಿ ಹೇಗಿರಲಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.

ಮೇಷ ರಾಶಿಯವರ ಆರ್ಥಿಕ ಜಾತಕ

ಮೇಷ ರಾಶಿಯವರ ಆರ್ಥಿಕ ಜಾತಕ

ಆರ್ಥಿಕ ಜಾತಕದ ಪ್ರಕಾರ ಮೇಷ ರಾಶಿಯವರಿಗೆ 2023 ಲಾಭದಾಯಕವಾಗಿರುತ್ತದೆ. ಈ ವರ್ಷ ನೀವು ಖರ್ಚು ಮತ್ತು ಆದಾಯ ಎರಡನ್ನೂ ಎದುರಿಸಬಹುದು. ನಿಮ್ಮ ರಾಶಿಯಲ್ಲಿ ಗುರು ಗ್ರಹದ ಉಪಸ್ಥಿತಿಯಿಂದ ಖರ್ಚುಗಳು ಹೆಚ್ಚಾಗಬಹುದು. ಜನವರಿ 17ರ ನಂತರ ನಿಮ್ಮ ಆದಾಯಕ್ಕೆ ಸಂಬಂಧಿಸಿದಂತೆ ಉತ್ತಮ ಫಲಿತಾಂಶಗಳು ಕಂಡುಬರುತ್ತದೆ. ನಂತರ ನಿಮಗೆ ಆದಾಯದ ಹರಿದು ಬರುತ್ತದೆ. ನೀವು ಆರ್ಥಿಕ ಲಾಭವನ್ನು ಪಡೆಯುತ್ತೀರಿ, ಆರ್ಥಿಕ ಬೆಳವಣಿಗೆಯನ್ನು ತರುತ್ತದೆ. ನಂತರದ ದಿನಗಳಲ್ಲಿ ಆದಾಯ ಮತ್ತು ವೆಚ್ಚಗಳ ಏರಿಳಿತ ಮುಂದುವರಿಯುತ್ತದೆ.

ನೀವು ವರ್ಷದ ಆರಂಭದ ಮೂರು ತಿಂಗಳು ಹಣಕಾಸಿನ ವಿಷಯದಲ್ಲಿ ಯಾವುದೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ನೋಡಿಕೊಳ್ಳಿ. ಖರ್ಚುಗಳಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ನಂತರ ಮೂರು ತಿಂಗಳ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ. ಅಕ್ಟೋಬರ್‌ನಲ್ಲಿ ನೀವು ಆರ್ಥಿಕ ಜೀವನದಲ್ಲಿ ಸವಾಲುಗಳನ್ನು ಎದುರಿಸಬಹುದು. ವೆಚ್ಚಗಳು ಹೆಚ್ಚಾಗುವುದರಿಂದ ನಿಮ್ಮ ಆರ್ಥಿಕ ಸ್ಥಿತಿಯ ದುರ್ಬಲತೆಗೆ ಕಾರಣವಾಗಬಹುದು. ಆದರೆ ವರ್ಷಾಂತ್ಯದ ವೇಳೆಗೆ ನಿಮ್ಮ ಆರ್ಥಿಕ ಸ್ಥಿತಿ ಕ್ರಮೇಣ ಸುಧಾರಿಸುತ್ತದೆ.

 ವೃಷಭ ರಾಶಿಯವರ ಆರ್ಥಿಕ ಜಾತಕ

ವೃಷಭ ರಾಶಿಯವರ ಆರ್ಥಿಕ ಜಾತಕ

ಆರ್ಥಿಕ ಜಾತಕದ 2023ರ ಪ್ರಕಾರ ವೃಷಭ ರಾಶಿಯವರಿಗೆ ಈ ವರ್ಷವು ಆರ್ಥಿಕ ಏರಿಳಿತಗಳಿಂದ ತುಂಬಿರಬಹುದು. ವರ್ಷದ ಆರಂಭದಿಂದ ಏಪ್ರಿಲ್‌ವರೆಗೆ ನಿಮ್ಮ ಆರ್ಥಿಕ ಸ್ಥಿತಿ ಅನುಕೂಲಕರವಾಗಿರುತ್ತದೆ. ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ನೀವು ಹಣ ಗಳಿಸಲು ಸಾಧ್ಯವಾಗುತ್ತದೆ. ನೀವು ಕೆಲಸದಲ್ಲಿದ್ದರೆ, ಇತರ ಕೆಲಸದಿಂದ ಸಹ ನೀವು ಉತ್ತಮ ಪ್ರಮಾಣದ ಲಾಭವನ್ನು ಗಳಿಸಬಹುದು.

ಮೇನಿಂದ ಆಗಸ್ಟ್‌ವರೆಗೆ ನಿಮ್ಮ ವೆಚ್ಚಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆಗಳು ಕಡಿಮೆ ಇರುತ್ತದೆ. ಅದಕ್ಕಾಗಿ ಖರ್ಚುಗಳನ್ನು ಹಿಡಿತದಲ್ಲಿಡಿ ಹಾಗೂ ಖರ್ಚಿನ ವಿಚಾರದಲ್ಲಿ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಈ ವರ್ಷ ನೀವು ಆರ್ಥಿಕ ನಷ್ಟವನ್ನು ಪಡೆಯುವ ಸಾಧ್ಯತೆಯಿದೆ. ಹೀಗಾಗಿ ನೀವು ಜಾಗರೂಕರಾಗಿರಬೇಕು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಅಕ್ಟೋಬರ್ ತಿಂಗಳು ಉತ್ತಮವಾಗಿರುತ್ತದೆ.

 ಮಿಥುನ ರಾಶಿಯವರ ಆರ್ಥಿಕ ಜಾತಕ

ಮಿಥುನ ರಾಶಿಯವರ ಆರ್ಥಿಕ ಜಾತಕ

ಆರ್ಥಿಕ ಜಾತಕದ 2023ರ ಪ್ರಕಾರ ಮಿಥುನ ರಾಶಿಯವರಿಗೆ, ವರ್ಷದ ಆರಂಭದಿಂದಲೂ ಆದಾಯದಲ್ಲಿ ಏರಿಕೆ ಕಂಡುಬರುತ್ತದೆ.ಹಣಕಾಸಿನ ಸ್ಥಿತಿಯು ದಿನದಿಂದ ದಿನಕ್ಕೆ ಸುಧಾರಿಸುತ್ತದೆ. ಜನವರಿಯಲ್ಲಿ ಆದಾಯದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ನಂತರದ ದಿನಗಳಲ್ಲಿ ನಿಮ್ಮ ಖರ್ಚುಗಳಲ್ಲಿ ಏರಿಕೆಯಾಗಬಹುದು. ಇದರಿಂದ ನಷ್ಟಗಳು ಸಂಭವಿಸಬಹುದು. ಹೀಗಾಗಿ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಉತ್ತಮ.

ಜುಲೈನಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ, ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಅಕ್ಟೋಬರ್‌ನಲ್ಲಿ ನೀವು ಮನೆಯಲ್ಲಿ ಏಕಾಂಗಿಯಾಗಿರುವ ಸಂದರ್ಭ ಬರಬಹುದು ಇದರಿಂದ ಖರ್ಚುಗಳು ಕಡಿಮೆಯಾಗಿ ಆರ್ಥಿ ಸ್ಥಿತಿ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ, ನೀವು ಮಾಡುವ ಪ್ರತಿಯೊಂದು ಪ್ರಯತ್ನವು ನಿಮಗೆ ಯಶಸ್ಸನ್ನು ತಂದುಕೊಡುತ್ತದೆ ಮತ್ತು ಆರ್ಥಿಕ ಪ್ರಯೋಜನಗಳನ್ನು ನೀಡುತ್ತದೆ. ಈ ವರ್ಷ ನೀವು ಸರ್ಕಾರಿ ಕೆಲಸಗಳಲ್ಲಿ ಸಹ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ.

 ಕರ್ಕಾಟಕ ರಾಶಿಯವರ ಆರ್ಥಿಕ ಜಾತಕ

ಕರ್ಕಾಟಕ ರಾಶಿಯವರ ಆರ್ಥಿಕ ಜಾತಕ

ಆರ್ಥಿಕ ಜಾತಕದ 2023ರ ಪ್ರಕಾರ ಕರ್ಕಾಟಕ ರಾಶಿಯವರಿಗೆ, ಹಣಕಾಸಿನ ದೃಷ್ಟಿಯಿಂದ 2023 ಏರಿಳಿತದ ವರ್ಷವಾಗಿದೆ. ವರ್ಷದ ಆರಂಭದಲ್ಲಿ ನೀವು ಕೆಲಸ ಅಥವಾ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಗುರುಗ್ರಹದ ಪ್ರಭಾವದಿಂದ ಆದಾಯದಲ್ಲಿ ಹೆಚ್ಚಳ ಇರುತ್ತದೆ. ಈ ವರ್ಷ ನಿಮ್ಮ ಜಾತಕದ ಪ್ರಕಾರ ಶನಿ 8ನೇ ಮನೆಯಲ್ಲಿರುವುದರಿಂದ ಹೂಡಿಕೆ ಮಾಡುವ ವಿಚಾರದಲ್ಲಿ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಯಾಕೆಂದರೆ ಹೂಡಿಕೆಯಿಂದ ಹಣ ನಷ್ಟ ಸಂಭವಿಸುವ ಸಾಧ್ಯತೆ ಇದೆ.

ಮೇನಿಂದ ಜುಲೈವರೆಗೆ ಹಣಕಾಸಿನ ಕೆಲವು ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. ಆಗಸ್ಟ್‌ನಲ್ಲಿ ಉತ್ತಮವಾಗಿರುವ ಆರ್ಥಿಕ ಸ್ಥಿತಿ ಮತ್ತೆ ಸೆಪ್ಟೆಂಬರ್ ನಿಂದ ಅಕ್ಟೋಬರ್ ವರೆಗೆ ಕುಗ್ಗಬಹುದು, ಆದ್ದರಿಂದ ಎಚ್ಚರಿಕೆಯಿಂದ ಇರಬೇಕು. ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ, ನಿಮ್ಮ ಮನೆಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ನೀವು ಹೆಚ್ಚು ಖರ್ಚು ಮಾಡುತ್ತೀರಿ. ಜೊತೆಗೆ ಈ ಸಮಯದಲ್ಲಿ ಆದಾಯದಲ್ಲಿ ಕೂಡ ಏರಿಕೆ ಕಂಡುಬರಲಿದೆ.

 ಸಿಂಹ ರಾಶಿಯವರ ಆರ್ಥಿಕ ಜಾತಕ

ಸಿಂಹ ರಾಶಿಯವರ ಆರ್ಥಿಕ ಜಾತಕ

ಸಿಂಹ ರಾಶಿಯವರಿಗೆ 2023ರ ವರ್ಷವು ಆರ್ಥಿಕವಾಗಿ ಅನುಕೂಲಕರವಾಗಿರುತ್ತದೆ. ವರ್ಷದ ಆರಂಭದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಈ ವೇಳೆ ನೀವು ಎಲ್ಲಾ ವಿಚಾರದಲ್ಲೂ ಉತ್ತಮವಾದದ್ದನ್ನೇ ಪಡೆಯಲು ಸಾಧ್ಯವಾಗುತ್ತದೆ. ಗುರು ಕೃಪೆಯಿಂದ ವ್ಯವಹಾರದಲ್ಲಿಯೂ ಉತ್ತಮ ಫಲಿತಾಂಶಗಳನ್ನು ಏಪ್ರಿಲ್‌ನಿಂದ ಜೂನ್‌ವರೆಗೆ ಸುವರ್ಣ ಅವಧಿಯನ್ನು ಅನುಭವಿಸುತ್ತೀರಿ. ಏಕೆಂದರೆ ಸರ್ಕಾರದಲ್ಲಿ ಆರ್ಥಿಕ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಗಳಿವೆ. ಅಕ್ಟೋಬರ್‌ನಲ್ಲಿ ವು ಕೆಲವು ಸವಾಲುಗಳನ್ನು ಎದುರಿಸಬಹುದು. ಈ ವೇಳೆ ಹಣಕಾಸಿನ ನಷ್ಟದ ಸಾಧ್ಯತೆಗಳಿವೆ. ನೀವು ಖರ್ಚುಗಳ ಮೇಲೆ ಹೆಚ್ಚಿನ ಗಮನವನ್ನು ಕೊಡಬೇಕು. ಏಕೆಂದರೆ ಯಾವುದೇ ತಪ್ಪು ನಷ್ಟವನ್ನು ತರಬಹುದು. ಇದರಿಂದ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬಹುದು.

 ಕನ್ಯಾ ರಾಶಿಯವರ ಆರ್ಥಿಕ ಜಾತಕ

ಕನ್ಯಾ ರಾಶಿಯವರ ಆರ್ಥಿಕ ಜಾತಕ

ಕನ್ಯಾ ರಾಶಿಯವರು 2023ರಲ್ಲಿ ಆರ್ಥಿಕವಾಗಿ ಜಾಗರೂಕರಾಗಿರಬೇಕು. ಈ ವರ್ಷ ಆರ್ಥಿಕ ತೊಂದರೆಗಳನ್ನು ಅನುಭವಿಸಬಹುದು. ಹೂಡಿಕೆ ಮಾಡಲು ಬಯಸುವವರು ಜನವರಿಯಿಂದ ಏಪ್ರಿಲ್ ವರೆಗೆ ಮಾಡಬಹುದು. ಏಕೆಂದರೆ ಪರಿಸ್ಥಿತಿಗಳು ಉತ್ತಮವಾಗಿರುತ್ತವೆ. ಇದರಿಂದ ನೀವು ಯಶಸ್ವಿಯಾಗುತ್ತೀರಿ.
ಅಕ್ಟೋಬರ್‌ನಲ್ಲಿ ನೀವು ಆರ್ಥಿಕ ತೊಂದರೆಗಳು ಮತ್ತು ಸಮಸ್ಯೆಗಳನ್ನು ಅನುಭವಿಸಬಹುದು. ಷೇರು ಮಾರುಕಟ್ಟೆಯಲ್ಲಿ ನಿಮ್ಮ ಹಣಕಾಸಿನ ಪರಿಸ್ಥಿತಿಯ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ಆರ್ಥಿಕ ಸಮಸ್ಯೆಗಳಿಗೆ ನೀವು ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಪರಿಹಾರವನ್ನು ಪಡೆಯುತ್ತೀರಿ. ಬಳಿಕ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ.

 ತುಲಾ ರಾಶಿಯವರ ಆರ್ಥಿಕ ಜಾತಕ

ತುಲಾ ರಾಶಿಯವರ ಆರ್ಥಿಕ ಜಾತಕ

ತುಲಾ ರಾಶಿಯಡಿಯಲ್ಲಿ ಜನಿಸಿದವರಿಗೆ 2023 ವರ್ಷ ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ. ಜನವರಿಯಲ್ಲಿ ನಿಮ್ಮ ಆದಾಯವು ಸುಧಾರಿಸುವ ಸಾಧ್ಯತೆಯಿದೆ. ಏಪ್ರಿಲ್‌ನಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿಯು ಅತ್ಯುತ್ತಮ ಸ್ಥಿತಿಯಲ್ಲಿರುತ್ತದೆ. ಆರ್ಥಿಕ ಸಮತೋಲನಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗದಂತೆ ನೋಡಿಕೊಳ್ಳಿ. ಅಕ್ಟೋಬರ್ ತಿಂಗಳಿನಲ್ಲಿ ರಾಹು ನಿಮ್ಮ ರಾಶಿಗೆ ಪ್ರವೇಶಿಸಿದಾಗ ನಿಮ್ಮ ಖರ್ಚುಗಳು ಗಗನಕ್ಕೇರುವ ಸಾಧ್ಯತೆಯಿದೆ. ಹೀಗಾಗಿ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನೀವು ಯಾವುದೇ ಮಹತ್ವದ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ವರ್ಷದ ಅಂತಿಮ ತಿಂಗಳು ಸೂಕ್ತವಾಗಿರುತ್ತದೆ.

 ವೃಶ್ಚಿಕ ರಾಶಿಯವರ ಆರ್ಥಿಕ ಜಾತಕ

ವೃಶ್ಚಿಕ ರಾಶಿಯವರ ಆರ್ಥಿಕ ಜಾತಕ

ವೃಶ್ಚಿಕ ರಾಶಿಯವರು 2023ರಲ್ಲಿ ಆರ್ಥಿಕ ಜೀವನವನ್ನು ನಿಯಂತ್ರಣದಲ್ಲಿಡಲು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಆದಾಯವು ಉತ್ತಮವಾಗಿರುತ್ತದೆ. ಆದರೆ ಈ ವರ್ಷ ಖರ್ಚು ಹೆಚ್ಚಾಗಿರುತ್ತದೆ. ಅನಗತ್ಯ ಖರ್ಚುಗಳು ಉಂಟಾಗಬಹುದು. ಅಂತಹ ಸನ್ನಿವೇಶ ನಿಮ್ಮ ಹಣಕಾಸಿನ ಪರಿಸ್ಥಿತಿ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳು ಹಣಕಾಸಿನ ವಿಚಾರದಲ್ಲಿ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹೀಗಾಗಿ ನಿಮ್ಮ ಹಣಕಾಸಿನ ಸ್ಥಿತಿಯನ್ನು ನೀವು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಈ ವಿಚಾರದಲ್ಲಿ ನೀವು ವಿಫಲರಾದರೆ ಹಣಕಾಸಿನ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ.

 ಧನು ರಾಶಿಯವರ ಆರ್ಥಿಕ ಜಾತಕ

ಧನು ರಾಶಿಯವರ ಆರ್ಥಿಕ ಜಾತಕ

ಧನು ರಾಶಿಯವರಿಗೆ 2023ರ ವರ್ಷ ಆರ್ಥಿಕವಾಗಿ ಸಮೃದ್ಧವಾಗಿರುತ್ತದೆ. ವರ್ಷದ ಆರಂಭದಲ್ಲಿ ಶುಕ್ರನು ಎರಡನೇ ಮನೆಯಲ್ಲಿದ್ದು ಶನಿಯು ಸ್ವರಾಶಿಯಲ್ಲಿದ್ದಾನೆ. ಗ್ರಹಗಳ ಸ್ಥಾನದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿಯು ಅತ್ಯುತ್ತಮವಾಗಿರುತ್ತದೆ. ಈ ವರ್ಷ ನೀವು ಜೀವನಕ್ಕೆ ಪ್ರಮುಖವಾದ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಹಣ ಸಂಪಾದಿಸಲು ನಿಮಗೆ ಉತ್ತಮ ಅವಕಾಶಗಳು ಸಿಗುತ್ತದೆ. ಹೀಗಾಗಿ ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

ಏಪ್ರಿಲ್‌ನಿಂದ ಸೆಪ್ಟೆಂಬರ್ ಆರಂಭದವರೆಗೆ, ನೀವು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಯಾವುದೇ ಪ್ರಮುಖ ಹೂಡಿಕೆಗಳನ್ನು ಎಚ್ಚರಿಕೆಯಿಂದ ಮಾಡಿ ಏಕೆಂದರೆ ಅವುಗಳಿಂದ ನೀವು ಸಮಸ್ಯೆಗಳನ್ನು ಎದುರಿಸಬಹದು. ಅಕ್ಟೋಬರ್‌ನಿಂದ ಡಿಸೆಂಬರ್ವೆರೆಗೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲು ಅನೇಕ ಅವಕಾಶಗಳಿವೆ. ವರ್ಷದ ಕೊನೆಯ ಮೂರು ತಿಂಗಳು ಒಟ್ಟಾರೆ ಆರ್ಥಿಕವಾಗಿ ನಿಮಗೆ ಉತ್ತಮವಾಗಿರುತ್ತದೆ.

 ಮಕರ ರಾಶಿಯವರ ಆರ್ಥಿಕ ಜಾತಕ

ಮಕರ ರಾಶಿಯವರ ಆರ್ಥಿಕ ಜಾತಕ

2023ರಲ್ಲಿ ಮಕರ ರಾಶಿಯವರಿಗೆ ಆರ್ಥಿಕ ಏರಿಳಿತ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಖರ್ಚುಗಳು ವರ್ಷದ ಆರಂಭದಲ್ಲಿ ಗಮನಾರ್ಹವಾಗಿ ಹೆಚ್ಚಾಗಬಹುದು. ಇದರಿಂದ ನಿಮ್ಮ ಆರ್ಥಿಕತೆಯ ಸ್ಥಿತಿಯೂ ಬದಲಾಗಬಹುದು. ನಿಮ್ಮ ಪೋಷಕರ ಆರೋಗ್ಯವನ್ನು ನೋಡಿಕೊಳ್ಳಲು ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗಬಹುದು.

ಮಾರ್ಚ್, ಜೂನ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ, ನೀವು ಸರ್ಕಾರಿ ವಲಯದಿಂದ ಹಣವನ್ನು ಗಳಿಸುವ ಉತ್ತಮ ಅವಕಾಶವನ್ನು ಹೊಂದಿರುತ್ತೀರಿ. ನವೆಂಬರ್ ಮತ್ತು ಡಿಸೆಂಬರ್‌ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಮಕರ ರಾಶಿಯವರಿಗೆ 2023 ಹಣಕಾಸಿನ ವಿಚಾರದಲ್ಲಿ ವರ್ಷದುದ್ದಕ್ಕೂ ಏರಿಳಿತಗಳನ್ನು ಹೊಂದಿರುತ್ತದೆ. ವರ್ಷದ ಕೊನೆಯ ಕೆಲವು ತಿಂಗಳುಗಳಲ್ಲಿ ನಿಮ್ಮ ಅದೃಷ್ಟ ಖುಲಾಯಿಸುತ್ತದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

 ಕುಂಭ ರಾಶಿಯವರ ಆರ್ಥಿಕ ಜಾತಕ

ಕುಂಭ ರಾಶಿಯವರ ಆರ್ಥಿಕ ಜಾತಕ

ಕುಂಭ ರಾಶಿಯವರು 2023ರಲ್ಲಿ ಆರ್ಥಿಕ ಏರಿಳಿತಗಳನ್ನು ಅನುಭವಿಸಬೇಕಾಗುತ್ತದೆ. ಜನವರಿ ತಿಂಗಳಿನಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದರೂ ಸಹ ಈ ಸಮಯದಲ್ಲಿ ನಿಮ್ಮ ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ. ನಂತರದ ದಿನಗಳಲ್ಲಿ ವಿವಿಧ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ನಿಮಗೆ ಅವಕಾಶವಿದೆ. ಇದರಿಂದ ಹಣಕಾಸಿನ ಸ್ಥಿತಿಯನ್ನು ಸಮತೋಲನದಲ್ಲಿಡಲು ನಿಮಗೆ ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನೀವು ಷೇರುಗಳನ್ನು ಖರೀದಿ ಅಥವಾ ಮಾರಾಟ ಮಾಡಲು ಯತ್ನಿಸಿದೆ. ಯಶಸ್ಸನ್ನು ಸಾಧಿಸಬಹುದು. ಜೂನ್ ಮತ್ತು ಜುಲೈ ತಿಂಗಳುಗಳು ನಿಮ್ಮ ಆರ್ಥಿಕ ಪರಿಸ್ಥಿತಿಗೆ ಅತ್ಯುತ್ತಮವಾಗಿರುತ್ತದೆ.

 ಮೀನ ರಾಶಿಯವರ ಆರ್ಥಿಕ ಜಾತಕ

ಮೀನ ರಾಶಿಯವರ ಆರ್ಥಿಕ ಜಾತಕ

2023ರಲ್ಲಿ ಮೀನ ರಾಶಿಯವರು ಆದಾಯ ಮತ್ತು ವೆಚ್ಚ ಎರಡನ್ನೂ ಎದುರಿಸಬೇಕಾಗುತ್ತದೆ ಹೊಸ ವರ್ಷದ ಆರಂಭವು ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ಆರ್ಥಿಕ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಜನವರಿ 17ರ ನಂತರ ನಿಮ್ಮ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ.

ಒಂದು ಖರ್ಚು ವರ್ಷವಿಡೀ ಇರುವ ಸಾಧ್ಯತೆ ಇದೆ. ಹೀಗಾಗಿ ಈ ಸಂದರ್ಭದಲ್ಲಿ ನೀವು ಹಲವಾರು ಹಣಕಾಸಿನ ತೊಂದರೆಗಳನ್ನು ಎದುರಿಸಬೇಕಾಗಬಹುದು. ಏಪ್ರಿಲ್ ಅಂತ್ಯದಿಂದ ಆಗಸ್ಟ್ ವರೆಗೆ ನಿಮ್ಮ ಸಮಸ್ಯೆಗಳು ಹೆಚ್ಚಾಗಬಹುದು. ಈ ಅವಧಿಯಲ್ಲಿ ನೀವು ಹಣವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಖರ್ಚುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಆಗಸ್ಟ್ ನಂತರ ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಕ್ರಮೇಣ ಸುಧಾರಣೆಯನ್ನು ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+