ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2023 Vrischika Rashi Bhavishya : 2023ರಲ್ಲಿ ವೃಶ್ಚಿಕ ರಾಶಿ ಭವಿಷ್ಯ ಹೇಗಿರಲಿದೆ?

|
Google Oneindia Kannada News

ಇನ್ನೇನು ಕೆಲವೇ ದಿನಗಳಲ್ಲಿ 2022 ಪೂರ್ಣಗೊಂಡು ಹೊಸ ವರ್ಷದ ಆಗಮನವಾಗಲಿದೆ. ಮುಂದಿನ ವರ್ಷ ವ್ಯವಹಾರ, ಶಿಕ್ಷಣ ಹಾಗೂ ವೈಯಕ್ತಿಕ ಜೀವನ ಹೇಗಿರಲಿದೆ ಎನ್ನುವ ಕುತೂಹಲ ಎಲ್ಲರಿಗಿರಲಿದೆ. ಗ್ರಹ ಗತಿಗಳ ಚಲನದಿಂದ ಬಹುತೇಕ ಎಲ್ಲಾ ರಾಶಿಯವರ ಜೀವನದಲ್ಲಿ 2023ರಲ್ಲಿ ಏರಳಿತಗಳು ಸಂಭವಿಸಲಿದೆ. ಇದೇ ರೀತಿ ವೃಶ್ಚಿಕ ರಾಶಿಯವರ ಜೀವನದಲ್ಲಿ 2023 ಪ್ರಮುಖವಾಗಿರಲಿದ್ದು, ಅನೇಕ ಸವಾಲು ಜೊತೆಗೆ ಪ್ರತಿಫಲವನ್ನು ಸಹ ಪಡೆಯಬಹುದಾಗಿದೆ.

ವೃಶ್ಚಿಕ ರಾಶಿಯವರು 2023ರಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಹಿಸಬೇಕಾಗಿದೆ. ಆರೋಗ್ಯ, ಅದೃಷ್ಟ ಸೇರಿದಂತೆ ಮುಂದಿನ ವರ್ಷ ಪ್ರೇಮ ಜೀವನ, ಆರ್ಥಿಕ ಜೀವನ, ವೈಯಕ್ತಿಕ, ವ್ಯಾಪಾರ, ವಿವಾಹ, ಆಸ್ತಿ, ಸಂಪತ್ತು ಜಾತಕ ಹೇಗಿರಲಿದೆ ಎನ್ನುವ ಪ್ರಶ್ನೆ ಕಾಡುತ್ತಿರಬಹುದು. ಹಾಗಾದರೆ ಮುಂದಿನ ವರ್ಷ ವೃಶ್ಚಿಕ ರಾಶಿ ಭವಿಷ್ಯ ಹೇಗಿರಲಿದೆ..? ಎನ್ನುವುದನ್ನು ವಿಸ್ತಾರವಾಗಿ ತಿಳಿಯೋಣ.

Surya Gochar 2022: ವೃಶ್ಚಿಕ ರಾಶಿಯಲ್ಲಿ ಸೂರ್ಯ ಸಂಚಾರ: ಯಾವ ರಾಶಿಯವರಿಗೆ ಲಾಭ? ಯಾರಿಗೆ ನಷ್ಟ..?Surya Gochar 2022: ವೃಶ್ಚಿಕ ರಾಶಿಯಲ್ಲಿ ಸೂರ್ಯ ಸಂಚಾರ: ಯಾವ ರಾಶಿಯವರಿಗೆ ಲಾಭ? ಯಾರಿಗೆ ನಷ್ಟ..?

ವೃಶ್ಚಿಕ: ಪ್ರೀತಿ ಜಾತಕ 2023

ವೃಶ್ಚಿಕ: ಪ್ರೀತಿ ಜಾತಕ 2023

ವೃಶ್ಚಿಕ ರಾಶಿಯವರ ಪ್ರೀತಿಯ ಜಾತಕದ ಪ್ರಕಾರ, 2023 ವೃಶ್ಚಿಕ ರಾಶಿಯವರ ಪ್ರೀತಿಯ ಜೀವನದಲ್ಲಿ ಏರಿಳಿತಗಳನ್ನು ತರುತ್ತದೆ. ಪ್ರೀತಿಯಲ್ಲಿ ಒಂಟಿಯಾಗಿರುವವರ ಜೀವನದಲ್ಲಿ ವರ್ಷದ ಆರಂಭದಲ್ಲಿ ಯಾರಾದರೂ ನಿಮ್ಮ ಜೀವನದಲ್ಲಿ ಬರುತ್ತಾರೆ. ಒಂದು ವೇಳೆ ನೀವು ಈಗಾಗಲೇ ಸಂಬಂಧದಲ್ಲಿದ್ದರೆ. ವರ್ಷದ ಆರಂಭದಲ್ಲಿ ನಿಮ್ಮ ಸಂಬಂಧ ಇನ್ನಷ್ಟು ಬಲಗೊಳ್ಳುತ್ತದೆ. ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ನಡುವೆ ಸಾಮರಸ್ಯವು ಉತ್ತಮವಾಗಿರುತ್ತದೆ.

ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ನಿಮ್ಮ ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಮದುವೆಯ ಸಾಧ್ಯತೆ ಇರಬಹುದು. ಏಪ್ರಿಲ್‌ವರೆಗೆ ನಿಮ್ಮ ಪ್ರೀತಿಯ ಜೀವನ ಅನುಕೂಲಕರವಾಗಿರುತ್ತದೆ. ಮೇನಿಂದ ಆಗಸ್ಟ್‌ ತಿಂಗಳವರೆಗೆ ನಿಮ್ಮ ಪ್ರೀತಿಯ ಜೀವನದಲ್ಲಿ ಹೆಚ್ಚು ಮನಸ್ತಾಪಗಳು ಉಂಟಾಗಬಹುದು. ಆದರೆ ನಿಮ್ಮ ನಡುವೆ ಹೊಂದಾಣಿಕೆ ಇದ್ದರೆ ಮನಸ್ತಾಪಗಳು ಕಡಿಮೆಯಾಗಿ ಜೊತೆಯಾಗಿ ಉತ್ತಮ ಸಮಯವನ್ನು ಕಳೆಯಬಹುದು. ಇನ್ನು ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳಿನಲ್ಲಿ ನಿಮ್ಮ ಪ್ರೀತಿ ಜೀವನ ಉತ್ತಮವಾಗಿರುತ್ತದೆ.

ವೃಶ್ಚಿಕ: ಉದ್ಯೋಗ ಜಾತಕ 2023

ವೃಶ್ಚಿಕ: ಉದ್ಯೋಗ ಜಾತಕ 2023

ವೃಶ್ಚಿಕ ರಾಶಿಯವರ ಉದ್ಯೋಗ ಜಾತಕದ ಪ್ರಕಾರ, 2023 ರಲ್ಲಿ ವೃಶ್ಚಿಕ ರಾಶಿಯವರು, ಉದ್ಯೋಗದಲ್ಲಿ ನಿಮ್ಮನ್ನು ನೀವು ಹೆಚ್ಚು ತೊಡಗಿಸಿಕೊಂಡು ನಿಮ್ಮ ಸಾಮರ್ಥ್ಯ ಏನು ಎನ್ನುವುದನ್ನು ತೋರಿಸಬೇಕಾಗುತ್ತದೆ. ಶನಿಯ ಕೃಪೆಯಿಂದ ನೀವು ಉದ್ಯೋಗದಲ್ಲಿ ಹೆಚ್ಚಿನ ಹಾಗೂ ಶಿಸ್ತುಬದ್ಧವಾಗಿ ಪ್ರಯತ್ನ ಮಾಡಿದರೆ ಉದ್ಯೋಗದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ವೃಶ್ಚಿಕ ರಾಶಿಯವರಿಗೆ 2023 ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಉದ್ಯೋಗದಲ್ಲಿ ಅಸಧಾರಣ ಫಲ ಸಿಗುತ್ತದೆ. ಈ ಸಮಯದಲ್ಲಿ ನೀವು ಬಡ್ತಿ ಪಡೆಯುವ ಸಾಧ್ಯತೆಗಳಿವೆ. ಜೂನ್‌ನಲ್ಲಿ ಉದ್ಯೋಗದಲ್ಲಿ ಏರಿಳಿತಗಳನ್ನು ಕಾಣಬಹುದುದಾಗಿದೆ. ವರ್ಷದಲ್ಲಿ ಸತತ ಪರಿಶ್ರಮದಿಂದ ನವೆಂಬರ್ ಮತ್ತು ಡಿಸೆಂಬರ್ ನಿಮಗೆ ಯಶಸ್ಸನ್ನು ತರುತ್ತದೆ.

ವೃಶ್ಚಿಕ: ಶಿಕ್ಷಣ ಜಾತಕ 2023

ವೃಶ್ಚಿಕ: ಶಿಕ್ಷಣ ಜಾತಕ 2023

ವೃಶ್ಚಿಕ ರಾಶಿಯವರ ಶಿಕ್ಷಣ ಜಾತಕದ ಪ್ರಕಾರ, 2023 ರಲ್ಲಿ ವೃಶ್ಚಿಕ ರಾಶಿಯ ವಿದ್ಯಾರ್ಥಿಗಳಿಗೆ ವರ್ಷದ ಮೊದಲ ಮೂರು ತಿಂಗಳು ಉತ್ತಮವಾಗಿರುತ್ತದೆ. ಈ ಸಮಯಲ್ಲಿ ನೀವು ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಅಧ್ಯಯನ ಬಗ್ಗೆ ಹೆಚ್ಚು ಆಸಕ್ತಿ ಹೊಂದುತ್ತೀರಿ. ಇದರಿಂದಾಗಿ ವಿದ್ಯಾರ್ಥಿಗಳು ಈ ಅವಧಿಯಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ.

ಮೇನಿಂದ ಆಗಸ್ಟ್‌ವರೆಗೆ ನಿಮ್ಮ ಅಧ್ಯಯನಕ್ಕೆಅಡೆತಡೆಗಳು ಉಂಟಾಗಬಹುದು. ನಂತರದ ದಿನಗಳಲ್ಲಿ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಈ ಸಮಯದಲ್ಲಿ ನಿಮ್ಮ ಅಧ್ಯಯನಕ್ಕೆ ಅಡ್ಡಿಪಡಿಸುವ ಇತರ ಸಮಸ್ಯೆಗಳನ್ನು ನೀವು ಎದುರಿಸಬಹುದು. ಶಿಕ್ಷಣದ ವಿಷಯದಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳು ಉತ್ತಮವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ವರ್ಷದ ಮೊದಲ ಆರು ತಿಂಗಳು ಉನ್ನತ ಶಿಕ್ಷಣವನ್ನು ಬಯಸುವ ವಿದ್ಯಾರ್ಥಿಗಳಿಗೆ ಉತ್ತಮವಾಗಿರುತ್ತದೆ. ಈ ವರ್ಷ ವಿದೇಶದಲ್ಲಿ ಓದಲು ಬಯಸುವ ವಿದ್ಯಾರ್ಥಿಗಳ ಕನಸು ನನಸಾಗುವ ಸಾಧ್ಯತೆಗಳಿದೆ.

ವೃಶ್ಚಿಕ: ಆರ್ಥಿಕ ಜಾತಕ 2023

ವೃಶ್ಚಿಕ: ಆರ್ಥಿಕ ಜಾತಕ 2023

ವೃಶ್ಚಿಕ ರಾಶಿಯವರ ಆರ್ಥಿಕ ಜಾತಕದ ಪ್ರಕಾರ, 2023 ರಲ್ಲಿ ವೃಶ್ಚಿಕ ರಾಶಿಯವರು ತಮ್ಮ ವೈಯಕ್ತಿಕ ಹಣಕಾಸುಗಳನ್ನು ಸಮತೋಲನದಲ್ಲಿಡಲು ವಿಶೇಷವಾಗಿ ಶ್ರಮಿಸಬೇಕಾಗುತ್ತದೆ. ಖರ್ಚುಗಳು ಹೆಚ್ಚಾಗುವ ಸಾಧ್ಯತೆಗಳಿವೆ. ನಿಮ್ಮ ಆದಾಯವು ಹೆಚ್ಚುತ್ತಿರುವಾಗ ವೆಚ್ಚಗಳು ವರ್ಷದುದ್ದಕ್ಕೂ ಒಂದೇ ಆಗಿರುತ್ತವೆ.

ಈ ವರ್ಷ ಅನಗತ್ಯ ವೆಚ್ಚಗಳು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಹಾಳುಮಾಡುವ ಸಾಧ್ಯತೆಯಿದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಹಣದ ವಿಚಾರದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಖರ್ಚುಗಳು ವಿಪರೀತ ಹೆಚ್ಚಾಗುವ ಸಾಧ್ಯತೆಗಳಿವೆ.

ವೃಶ್ಚಿಕ: ಕುಟುಂಬ ಜಾತಕ 2023

ವೃಶ್ಚಿಕ: ಕುಟುಂಬ ಜಾತಕ 2023

ವೃಶ್ಚಿಕ ರಾಶಿಯವರ ಕುಟುಂಬ ಜಾತಕದ ಪ್ರಕಾರ, 2023 ರಲ್ಲಿ ವೃಶ್ಚಿಕ ರಾಶಿಯವರು ಕುಟುಂಬ ಜೀವನವನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ವರ್ಷದ ಆರಂಭದಲ್ಲಿ ಪೋಷಕರ ಆರೋಗ್ಯದಲ್ಲಿ ಏರಿಳಿತ ಉಂಟಾಗುವ ಸಾಧ್ಯತೆಗಳಿವೆ. ನಿಮ್ಮ ಕೆಲಸದ ಹೊರೆ ಹೆಚ್ಚಾಗಬಹುದು. ಇದರಿಂದ ನಿಮಗೆ ಕುಟುಂಬದತ್ತ ಹೆಚ್ಚಿನ ಗಮನಕೊಡಲು ಕಷ್ಟವಾಗಬಹುದು.

ಜುಲೈನಿಂದ ಸೆಪ್ಟೆಂಬರ್ ತಿಂಗಳ ನಡುವೆ ಕುಟುಂಬದ ಹಿರಿಯ ಸದಸ್ಯರು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಪೋಷಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಈ ಸಮಯದಲ್ಲಿ ನಿಮ್ಮ ಒಡಹುಟ್ಟಿದವರು ನಿಮ್ಮೊಂದಿಗಿದ್ದು, ನಿಮಗೆ ನೆರವಾಗುತ್ತಾರೆ. ಈ ವರ್ಷ ವೃಶ್ಚಿಕ ರಾಶಿಯವರು ಕುಟುಂಬ ಜೀವನದಲ್ಲಿ ನಿಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗುತ್ತೀರಿ.

ವೃಶ್ಚಿಕ: ಮಕ್ಕಳ ಜಾತಕ 2023

ವೃಶ್ಚಿಕ: ಮಕ್ಕಳ ಜಾತಕ 2023

ವೃಶ್ಚಿಕ ರಾಶಿಯವರ ಮಕ್ಕಳ ಜಾತಕದ ಪ್ರಕಾರ, 2023 ರಲ್ಲಿ ವೃಶ್ಚಿಕ ರಾಶಿಯವರ ಮಕ್ಕಳಿಗೆ ವರ್ಷದ ಆರಂಭವು ಉತ್ತಮವಾಗಿರುತ್ತದೆ. ಜನವರಿಯಿಂದ ಏಪ್ರಿಲ್‌ ತಿಂಗಳ ಒಳಗೆ ಮಕ್ಕಳ ಬಗ್ಗೆ ಕೆಲವು ಉತ್ತಮ ಮಾಹಿತಿಯನ್ನು ನೀವು ಇತತರಿಗೆ ಬಹಿರಂಗಪಡಿಸಬಹುದು. ವೃಶ್ಚಿಕ ರಾಶಿಯವರ ಮಕ್ಕಳಿಗೆ ವಿವಾಹ ಮಾಡಲು ಸೂಕ್ತ ಸಮಯ. ನಿಮ್ಮ ಮಕ್ಕಳು ಉದ್ಯೋಗಗಳು ಅಥವಾ ವ್ಯವಹಾರಗಳಲ್ಲಿ ಪ್ರಯತ್ನ ಮಾಡುತ್ತಿದ್ದರೆ ಈ ವರ್ಷ ಯಶಸ್ವಿಯಾಗುವ ಸಾಧ್ಯತೆಗಳಿವೆ. ವರ್ಷದ ಮಧ್ಯಭಾಗದಲ್ಲಿ ಏರಿತಳನ್ನು ಕಾಣಬಹುದು.

ಏಪ್ರಿಲ್ ಅಂತ್ಯದಿಂದ ಆಗಸ್ಟ್ ಅಂತ್ಯದವರೆಗೆ ಮಕ್ಕಳಿ ಕಷ್ಟಕರವಾದ ಸಂದರ್ಭಗಳನ್ನು ಎದುರಿಸುವ ಸಾಧ್ಯತೆಗಳಿವೆ. ಕೆಲಸದಲ್ಲಿ ಅಥವಾ ಆರೋಗ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು.ಸೆಪ್ಟೆಂಬರ್‌ನಲ್ಲಿ ಪರಿಸ್ಥಿತಿಗಳು ಕ್ರಮೇಣ ಸಾಮಾನ್ಯ ಸ್ಥಿತಿಗೆ ಮರಳುತ್ತವೆ. ನವೆಂಬರ್ ಅಥವಾ ಡಿಸೆಂಬರ್‌ನ ವೇಳೆಗೆ ಉತ್ತಮ ಸ್ಥಿತಿಗೆ ತಲುಪುತ್ತಾರೆ.

ವೃಶ್ಚಿಕ: ವಿವಾಹ ಜಾತಕ 2023

ವೃಶ್ಚಿಕ: ವಿವಾಹ ಜಾತಕ 2023

ವೃಶ್ಚಿಕ ರಾಶಿಯವರ ವಿವಾಹ ಜಾತಕದ ಪ್ರಕಾರ, 2023 ರಲ್ಲಿ ವೃಶ್ಚಿಕ ರಾಶಿಯವರ ವೈವಾಹಿಕ ಜೀವನವು ಉತ್ತಮವಾಗಿರುತ್ತದೆ. ವರ್ಷದ ಆರಂಭದಲ್ಲಿ ವೈವಾಹಿಕ ಜೀವನದಲ್ಲಿ ಹೆಚ್ಚಿನ ಪ್ರೀತಿ ಪಡೆಯುತ್ತೀರಿ. ನೀವು ಮದುವೆಯಾಗಲು ಬಯಸಿದರೆ ಇದು ಉತ್ತಮ ಸಮಯ. ಆದರೆ ಕೆಲವು ಸಂದರ್ಭದಲ್ಲಿ ನಿಮ್ಮ ಮತ್ತು ಸಂಗಾತಿ ನಡುವೆ ಮನಸ್ತಾಪ ಉಂಟಾಗಬಹುದು. ನೀವು ಕೋಪದಲ್ಲಿ ವರ್ತಿಸುವ ಸ್ಥಿತಿ ಹೆಚ್ಚಾಗಬಹುದು.ಕೇತುವಿನ ಸಂಚಾರದ ಸಂಬಂಧದಲ್ಲಿ ಸಮಸ್ಯೆಗಳು ಉಂಟಾಗಬಹುದು. ಏಪ್ರಿಲ್ 22ರ ನಂತರ ಮನಸ್ತಾಪ ಶಮನವಾಗಿ ಒಬ್ಬರನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತೀರಿ. ವರ್ಷದ ಕೊನೆಯ ಕೆಲವು ತಿಂಗಳುಗಳಲ್ಲಿ ನಿಮ್ಮ ದಾಂಪತ್ಯ ಉತ್ತಮವಾಗಿರುತ್ತದೆ.

ವೃಶ್ಚಿಕ: ವ್ಯವಹಾರ ಜಾತಕ 2023

ವೃಶ್ಚಿಕ: ವ್ಯವಹಾರ ಜಾತಕ 2023

ವೃಶ್ಚಿಕ ರಾಶಿಯವರ ವ್ಯವಹಾರ ಜಾತಕದ ಪ್ರಕಾರ, 2023 ರಲ್ಲಿ ವೃಶ್ಚಿಕ ರಾಶಿಯವರು ವ್ಯವಹಾರದಲ್ಲಿ ಏರಿಳಿತಗಳನ್ನು ಕಾಣಬಹುದು. ಜನವರಿಯಲ್ಲಿ ನಿಮ್ಮ ಅದೃಷ್ಟವು ಉತ್ತಮವಾಗಿರುತ್ತದೆ. ಈಸಮಯದಲ್ಲಿ ವಿದೇಶದಲ್ಲಿ ಸಂಪರ್ಕಗಳನ್ನು ಹೊಂದುವುದರಿಂದ ಲಾಭವನ್ನು ಪಡೆಯುತ್ತೀರಿ. ಧನಾತ್ಮಕ ವ್ಯವಹಾರ ಬೆಳವಣಿಗೆಗೆ ಅವಕಾಶಗಳಿವೆ.

ಫೆಬ್ರವರಿನಿಂದ ಏಪ್ರಿಲ್‌ವೆರೆಗೆ ವ್ಯವಾಹರದಲ್ಲಿ ಕಷ್ಟಗಳು ಎದುರಾಗುವ ಸಾಧ್ಯತೆಗಳಿವೆ. ಸರ್ಕಾರಿ ನೀತಿಗೆ ವಿರುದ್ಧವಾಗಿ ಯಾವುದೇ ಕೆಲಸವನ್ನು ಮಾಡಬಾರದು. ಸಮಯಕ್ಕೆ ತೆರಿಗೆ ಪಾವತಿಸದಿದ್ದರೇ, ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ನಿಮ್ಮ ಕೆಲಸವನ್ನು ಎಚ್ಚರಿಕೆಯಿಂದ ಪೂರ್ಣಗೊಳಿಸಿ. ಸೆಪ್ಟೆಂಬರ್‌ನಿಂದ ನಿಮ್ಮ ವ್ಯವಹಾರ ಪ್ರಗತಿಗೆ ಅವಕಾಶಗಳಿವೆ. ಕೆಲವು ಕಂಪನಿಗಳು ನಿಮ್ಮೊಂದಿಗೆ ಕೈಜೋಡಿಸುವ ಸಾಧ್ಯತೆಯಿದೆ. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಕಂಪನಿಯಿಂದ ನಿರೀಕ್ಷಿತ ಅಭಿವೃದ್ಧಿ ಮತ್ತು ಯಶಸ್ಸಿನ ಸೂಚನೆಗಳಿವೆ.

ವೃಶ್ಚಿಕ: ವಾಹನ ಮತ್ತು ಆಸ್ತಿ ಜಾತಕ 2023

ವೃಶ್ಚಿಕ: ವಾಹನ ಮತ್ತು ಆಸ್ತಿ ಜಾತಕ 2023

ವೃಶ್ಚಿಕ ರಾಶಿಯವರ ವಾಹನ ಮತ್ತು ಆಸ್ತಿ ಜಾತಕದ ಪ್ರಕಾರ, 2023 ರಲ್ಲಿ ವೃಶ್ಚಿಕ ರಾಶಿಯ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಉತ್ತಮವಾಗಿರುತ್ತದೆ. ವರ್ಷದ ಮೊದಲ ತಿಂಗಳು ಏರಿಳಿತಗಿದ್ದು, ಆಸ್ತಿಯನ್ನು ಮಾರಾಟ ಮಾಡುವ ಸಂದರ್ಭಗಳು ಎದುರಾಗಬಹುದು. ಜನವರಿ 17ರ ಬಳಿಕ ನಿಮ್ಮ ಆಸ್ತಿ ಅಭಿವೃದ್ಧಿಗೆ ಅನುಕೂಲಕರ ಸಂದರ್ಭಗಳು ಉಂಟಾಗಬಹುದು.

ಈ ವರ್ಷ ನೀವು ಕೆಲವು ದೊಡ್ಡ ಆಸ್ತಿಯನ್ನು ಗಳಿಸಬಹುದು. ಜುಲೈ ಹಾಗೂ ಆಗಸ್ಟ್‌ನಲ್ಲಿ ನೀವು ಹೊಸ ಮನೆ ಅಥವಾ ಭೂಮಿಯನ್ನು ಖರೀದಿಸಬಹುದು. ಅಥವಾ ಮನೆ ನವೀಕರಣಕ್ಕೆ ಸಾಕಷ್ಟು ಖರ್ಚು ಮಾಡಬಹುದು. ಇನ್ನು ಖರೀದಿಸಲು ಜನವರಿ 22 ರಿಂದ ಮಾರ್ಚ್ 12ರ ವರೆಗಿನ ಸಮಯ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ಖರೀದಿಸಿದ ಕಾರು ನಿಮಗೆ ಸಾಕಷ್ಟು ಉಪಯುಕ್ತವಾಗುತ್ತದೆ.

ವೃಶ್ಚಿಕ: ಸಂಪತ್ತು ಮತ್ತು ಲಾಭ ಜಾತಕ 2023

ವೃಶ್ಚಿಕ: ಸಂಪತ್ತು ಮತ್ತು ಲಾಭ ಜಾತಕ 2023

ವೃಶ್ಚಿಕ ರಾಶಿಯವರ ಸಂಪತ್ತು ಮತ್ತು ಲಾಭ ಜಾತಕದ ಪ್ರಕಾರ, 2023 ವೃಶ್ಚಿಕ ರಾಶಿಯವರಿಗೆ ಆರ್ಥಿಕವಾಗಿ ಏರಿಳಿತಗಳ ವರ್ಷವಾಗಿರುತ್ತದೆ. ಈ ವರ್ಷ ನೀವು ವಿದೇಶಕ್ಕೆ ಪ್ರಯಾಣಿಸುವ ಸಾಧ್ಯತೆಗಗಳಿವೆ. ಆಗಸ್ಟ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಉತ್ತಮ ಹಣವನ್ನು ಗಳಿಸುವಿರಿ. ಮಾತ್ರವಲ್ಲದೆ ಈ ವರ್ಷದ ನಿಮ್ಮ ಪರಿಸ್ಥಿತಿಯು ಬಹುಶಃ ಸುಧಾರಿಸಲಿದೆ. ನಿಮ್ಮ ಸ್ವಂತ ಪ್ರಯತ್ನಗಳು ನಿಮಗೆ ಆರ್ಥಿಕವಾಗಿ ಉತ್ತಮವಾಗಿ ಪ್ರತಿಫಲಗಳನ್ನು ನೀಡಲಿದೆ.

ಫೆಬ್ರವರಿ, ಏಪ್ರಿಲ್, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನೀವು ಸರ್ಕಾರಿ ವಲಯದಿಂದ ಪ್ರಯೋಜನ ಪಡೆಯಬಹುದು. ಏಪ್ರಿಲ್ ಅಂತ್ಯದಿಂದ ಆಗಸ್ಟ್ ಆರಂಭದವರೆಗೆ ಆರ್ಥಿಕ ನಷ್ಟ ಉಂಟಾಗಬಹುದು. ಈ ಸಮಯದಲ್ಲಿ ಯಾವುದಾರೂ ಹಣ ಹೂಡಿಕೆಗಳಿದ್ದರೆ ತಪ್ಪಿಸಿ, ಈ ವರ್ಷ ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗುತ್ತದೆ. ಇದರಿಂದ ನೀವು ಬಯಸಿದ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.

ವೃಶ್ಚಿಕ: ಆರೋಗ್ಯ ಜಾತಕ 2023

ವೃಶ್ಚಿಕ: ಆರೋಗ್ಯ ಜಾತಕ 2023

ವೃಶ್ಚಿಕ ರಾಶಿಯವರ ಆರೋಗ್ಯ ಜಾತಕದ ಪ್ರಕಾರ, 2023ರಲ್ಲಿ ವೃಶ್ಚಿಕ ರಾಶಿಯವರು, ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ವರ್ಷದ ಆರಂಭವು ಅನುಕೂಲಕರವಾಗಿರುತ್ತದೆ. ಜನವರಿ 17ರ ನಂತರ ಆರೋಗ್ಯದಲ್ಲಿ ಏರಿಳಿತ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಈ ಸಮಯದಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ನಿಮಗೆ ಮಾನಸಿಕ ಒತ್ತಡ ಉಂಟಾಗಬಹುದು. ಯಾವುದೇ ದೈಹಿಕ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ನೀವು ಯಾವುದೇ ಹೊಟ್ಟೆ ಅಥವಾ ದೊಡ್ಡ ಕರುಳಿನ ಸಮಸ್ಯೆಗಳನ್ನು ಅನುಭವಿಸಬಹುದು. ಕಣ್ಣಿನ ಕಾಯಿಲೆಗಳು ಮತ್ತು ದೇಹದ ನೋವು, ಮೂತ್ರದ ಸೋಂಕುಗಳು ಮತ್ತು ಇತರ ಸಮಸ್ಯೆಗಳನ್ನು ನೀವು ಅನುಭವಿಸಬಹುದು. ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ಅಕ್ಟೋಬರ್ ನಂತರ ನಿಮ್ಮ ಆರೋಗ್ಯ ಸುಧಾರಿಸುವ ಸಾಧ್ಯತೆ ಇದೆ.

ವೃಶ್ಚಿಕ: ಅದೃಷ್ಟ ಜಾತಕ 2023

ವೃಶ್ಚಿಕ: ಅದೃಷ್ಟ ಜಾತಕ 2023

ವೃಶ್ಚಿಕ ರಾಶಿಯವರ ಅದೃಷ್ಟ ಜಾತಕದ ಪ್ರಕಾರ, 2023ರಲ್ಲಿ ವೃಶ್ಚಿಕ ರಾಶಿಯವರ ಅದೃಷ್ಟ ಸಂಖ್ಯೆಗಳು 2 ಮತ್ತು 9. ಆರೋಗ್ಯದ ಹೊರತಾಗಿ ವೃಶ್ಚಿಕ ರಾಶಿಯವರಿಗೆ 2023 ತುಂಬಾ ಅನುಕೂಲಕರ ವರ್ಷವಾಗಿದೆ. ಆರೋಗ್ಯ ಸಮಸ್ಯೆಗಳನ್ನು ಎದುರಾಗಬಹುದು ಹೀಗಾಗಿ ಈ ಬಗ್ಗೆ ತಿಳಿದಿರುವ ನೀವು ವೈದ್ಯಕೀಯ ಆರೈಕೆಯನ್ನು ಪಡೆಯಬೇಕು. ಈ ವರ್ಷ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ಇದರಿಂದ ನಿಮ್ಮ ಕೆಲಸದಲ್ಲಿ ನೀವು ಮುನ್ನಡೆಯಲು ಸಹಾಯವಾಗುತ್ತದೆ.

English summary
Vrischika Rashi Varshika Bhavishya 2023 : Here in this article we are sharing Scorpio yearly horoscope 2023 predictions related to education, finance, health, life, love, marriage, career and more in Kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X