Get Updates
Get notified of breaking news, exclusive insights, and must-see stories!

2023 Karkataka Rashi Bhavishya : 2023ರಲ್ಲಿ ಕರ್ಕಾಟಕ ರಾಶಿ ಭವಿಷ್ಯ ಹೇಗಿರಲಿದೆ?

2022ರ ವರ್ಷವನ್ನು ಏರಿಳಿತಗಳಿಂದ ಮುಗಿಸಿರುವ ಜನರು 2023ರ ಹೊಸ ವರ್ಷಕ್ಕಾಗಿ ಕಾತುರರಾಗಿದ್ದಾರೆ. ಹೊಸ ವರ್ಷವನ್ನು ಹೊಸ ಆಸೆ ಕನಸುಗಳೊಂದಿಗೆ ಬರಮಾಡಿಕೊಳ್ಳು ಸಿದ್ಧರಾಗಿರುವ ಜನರು 2023ರಲ್ಲಿ ತಮ್ಮ ಜೀವನದಲ್ಲಿ ಸಕರಾತ್ಮಕ ಬದಲಾವಣೆಗಳು ಸಂಭವಿಸಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಗ್ರಹ-ಗತಿಗಳ ಚಲನ ವ್ಯಕ್ತಿಯ ಜೀವನದ ಮೇಲೂ ಪ್ರಭಾವ ಬೀರಲಿದ್ದು, ಗ್ರಹಗಳ ಸ್ಥಾನ ಪಲ್ಲಟದಿಂದ ಕರ್ಕಾಟಕ ರಾಶಿಯವರ ಜೀವನದ ಮೇಲೆ ಶುಭ ಹಾಗೂ ಅಶುಭಗಳು ಸಂಭವಿಸಹುದು.

ಕರ್ಕಾಟಕ ರಾಶಿಯವರಿಗೆ ಮುಂದಿನ ವರ್ಷ ಪ್ರೇಮ ಜೀವನ, ಆರ್ಥಿಕ ಜೀವನ, ವೈಯಕ್ತಿಕ, ವ್ಯಾಪಾರ, ಆರೋಗ್ಯ, ಮದುವೆ, ಆಸ್ತಿ, ಜಾತಕ ಹೇಗಿರಲಿದೆ ಎನ್ನುವ ಪ್ರಶ್ನೆ ಕಾಡುತ್ತಿರಬಹುದು. ಹಾಗಾದರೆ ಮುಂದಿನ ವರ್ಷ ಕರ್ಕಾಟಕ ರಾಶಿ ಭವಿಷ್ಯ ಹೇಗಿರಲಿದೆ..? ಎನ್ನುವುದನ್ನು ವಿಸ್ತಾರವಾಗಿ ತಿಳಿಯೋಣ.

ಕರ್ಕಾಟಕ: ಪ್ರೀತಿಯ ಜಾತಕ 2023

ಕರ್ಕಾಟಕ: ಪ್ರೀತಿಯ ಜಾತಕ 2023

ಕರ್ಕಾಟಕ ರಾಶಿಯವರ ಪ್ರೀತಿಯ ಜಾತಕದ ಪ್ರಕಾರ, 2023ರಲ್ಲಿ ಕರ್ಕಾಟಕ ರಾಶಿಯವರು ಪ್ರೀತಿಯ ಸಂಬಂಧಗಳಲ್ಲಿ ಏರಿಳಿತಗಳನ್ನು ಕಾಣಲಿದ್ದಾರೆ. ವರ್ಷದ ಆರಂಭದಲ್ಲಿ ಸಂಬಂಧಗಳಲ್ಲಿ ಮನಸ್ತಾಪ ಉಂಟಾಗಬಹುದು. ಏಪ್ರಿಲ್‌ವರೆಗೆ ಸಂಬಂಧಗಳಲ್ಲಿ ಅನೇಕ ತೊಂದರೆಗಳು ಕಂಡು ಬಂದರೂ, ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಕೆಲಸದ ಒತ್ತಡದಿಂದ ಸಂಗಾತಿಯೊಡನೆ ಘರ್ಷಣೆ ಉಂಟಾಗಬಹುದು. ಇದು ಇನ್ನಷ್ಟು ನೆಮ್ಮದಿ ಕೆಡಿಸಬಹುದು. ವರ್ಷದ ಕೊನೆಯ ತಿಂಗಳಲ್ಲಿ ನಿಮ್ಮ ಸಂಬಂಧವು ಹೆಚ್ಚು ಉತ್ತಮವಾಗಿರುತ್ತದೆ. ನಿಮ್ಮ ಜೀವನಕ್ಕೆ ವಿಶೇಷ ವ್ಯಕ್ತಿಯೊಂದಿಗೆ ನೀವು ಸಂತೋಷದ ಕ್ಷಣಗಳನ್ನು ಕಳೆಯಲಿದ್ದೀರಿ.

ಕರ್ಕಾಟಕ: ಉದ್ಯೋಗ ಜಾತಕ 2023

ಕರ್ಕಾಟಕ: ಉದ್ಯೋಗ ಜಾತಕ 2023

ಕರ್ಕಾಟಕ ರಾಶಿಯವರ ಉದ್ಯೋಗ ಜಾತಕದ ಪ್ರಕಾರ, 2023 ರಲ್ಲಿ ಕರ್ಕಾಟಕ ರಾಶಿಯವರು ವರ್ಷದ ಆರಂಭದಲ್ಲಿ ಕೆಲವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಮಾನಸಿಕ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವನ್ನು ನಿಮ್ಮದಾಗುತ್ತದೆ. ನಿಮಗೆ ಇಷ್ಟವಾದ ಕ್ಷೇತ್ರದಲ್ಲಿ ಕೆಲಸ ಮಾಡುವ ನಿಮ್ಮ ಬಯಕೆಯು ಈಡೇರುತ್ತದೆ. ಕೆಲಸದ ಸ್ಥಳಗಳಲ್ಲಿ ಯಾವುದೇ ರೀತಿಯ ಘರ್ಷಣೆಯಲ್ಲಿ ಭಾಗಿಯಾಗದಂತೆ ಎಚ್ಚರವಹಿಸಬೇಕು. 2023 ರಲ್ಲಿ ಕೆಲಸದಲ್ಲಿ ಬದಲಾವಣೆಯಾಗಬಹುದು. ವರ್ಗಾವಣೆಯಂತಹ ಪರಿಸ್ಥಿತಿ ಎದುರಿಸಬೇಕಾಗುವ ಸಾಧ್ಯತೆ ಇದೆ. ಈ ವರ್ಷ ನಿಮ್ಮ ವೃತ್ತಿಜೀವನ ಅತ್ಯುತ್ತಮವಾಗಿರುತ್ತದೆ. ವರ್ಷದ ಕೊನೆಯ ಕೆಲವು ತಿಂಗಳುಗಳಲ್ಲಿ ಕೆಲಸದಲ್ಲಿ ನೀವು ಹೆಚ್ಚಿನ ಬೆಳವಣಿಗೆ ಕಾಣಬಹುದು.

ಕರ್ಕಾಟಕ: ಶಿಕ್ಷಣ ಜಾತಕ 2023

ಕರ್ಕಾಟಕ: ಶಿಕ್ಷಣ ಜಾತಕ 2023

ಕರ್ಕಾಟಕ ರಾಶಿಯವರ ಶಿಕ್ಷಣ ಜಾತಕದ ಪ್ರಕಾರ, ಕರ್ಕಾಟಕ ರಾಶಿಯವರಿಗೆ 2023ರ ವರ್ಷ ವಿದ್ಯಾರ್ಥಿಗಳಿಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ವರ್ಷದ ಆರಂಭದಲ್ಲಿ ನಿಮ್ಮ ಅಧ್ಯಯನದ ಬಗ್ಗೆ ನೀವು ವಿಶೇಷವಾಗಿ ಉತ್ಸಾಹದಿಂದ ಇರುತ್ತಾರೆ. ನಿಮ್ಮ ಶೈಕ್ಷಣಿಕ ಪ್ರಗತಿಗೆ ನೀವು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಕರ್ಕಾಟಕ ರಾಶಿಯವರು ಅಂತಿಮ ವರ್ಷದ ವಿದ್ಯಾರ್ಥಿಗಳಾಗಿದ್ದರೆ. ನೀವು ಕ್ಯಾಂಪಸ್ ಸಂದರ್ಶನಕ್ಕೆ ಆಯ್ಕೆಯಾಗಬಹುದು . ಹಾಗೂ ಉತ್ತಮ ವೇತನವನ್ನು ಪಡೆಯಬಹುದು. ವರ್ಷದ ಮೊದಲ ಆರು ತಿಂಗಳು ಶಿಕ್ಷಣದಲ್ಲಿ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಈ ವೇಳೆ ನಿಮ್ಮ ಇಷ್ಟದ ವಿಷಯವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಮಾರ್ಚ್‌ನಿಂದ ಜೂನ್ ನಡುವಿನ ಅಂತರದಲ್ಲಿ ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡುವ ಅವಕಾಶ ಪಡೆಯಬಹುದು.

ಕರ್ಕಾಟಕ: ಆರ್ಥಿಕ ಜಾತಕ 2023

ಕರ್ಕಾಟಕ: ಆರ್ಥಿಕ ಜಾತಕ 2023

ಕರ್ಕಾಟಕ ರಾಶಿಯವರ ಆರ್ಥಿಕ ಜಾತಕದ ಪ್ರಕಾರ, 2023ರಲ್ಲಿ ಕರ್ಕಾಟಕ ರಾಶಿಯವರು ಆರ್ಥಿಕ ಏರಿಳಿತಗಳಿದ್ದರೂ ಉತ್ತಮವಾಗಿ ನಿಭಾಯಿಸುತ್ತೀರಿ. ಈ ವರ್ಷ ನಿಮ್ಮ ಆದಾಯ ಹೆಚ್ಚುತ್ತದೆ. ನೀವು ಸಾಧಿಸಬೇಕೆಂದಿರುವ ವಿಷಯದಲ್ಲಿ ಯಶಸ್ವಿಯಾಗುತ್ತೀರಿ. ಈ ವರ್ಷ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. 2023ರಲ್ಲಿ ಮಹತ್ವದ ಹೂಡಿಕೆಗಳನ್ನು ಮಾಡುವಾಗ ಜಾಗರೂಕರಾಗಿರಬೇಕು. ನಷ್ಟ ಸಂಭವಿಸುವ ಸಾಧ್ಯತೆಗಳಿವೆ. ಮೇ ಮತ್ತು ಜುಲೈ ನಡುವೆ ಆರ್ಥಿಕ ಏರಿಳಿತ ಉಂಟಾಗಬಹುದು. ಡಿಸೆಂಬರ್‌ ತಿಂಗಳಿನಲ್ಲಿ ನಿಮ್ಮ ಆದಾಯ ಹೆಚ್ಚುತ್ತದೆ ಹಾಗೂ ಮನೆಯ ಖರೀದಿಸುವ ಸಾಧ್ಯತೆಗಳಿವೆ.

ಕರ್ಕಾಟಕ: ಕುಟುಂಬ ಜಾತಕ 2023

ಕರ್ಕಾಟಕ: ಕುಟುಂಬ ಜಾತಕ 2023

ಕರ್ಕಾಟಕ ರಾಶಿಯವರ ಕುಟುಂಬ ಜಾತಕದ ಪ್ರಕಾರ, 2023ರಲ್ಲಿ ಕರ್ಕಾಟಕ ರಾಶಿಯವರು ಜನವರಿಯಿಂದ ಏಪ್ರಿಲ್‌ವರೆಗೆ ನಿಮ್ಮ ಕುಟುಂಬ ಜೀವನದಲ್ಲಿ ಮನಸ್ತಾಪ ಅನುಭವಿಸುವ ಸಾಧ್ಯತೆಯಿದೆ. ನಿಮ್ಮ ಕುಟುಂಬದಲ್ಲಿ ಮನಸ್ತಾಪ ಉಂಟಾಗಬಹುದು. ವರ್ಷದ ಮೊದಲ ಕೆಲವು ತಿಂಗಳುಗಳಲ್ಲಿ ನೀವು ಸ್ವಲ್ಪ ಪ್ರಮಾಣದ ಮಾನಸಿಕ ಒತ್ತಡವನ್ನು ಎದುರಿಸಬಹುದು. ಮೇ ತಿಂಗಳಲ್ಲಿ ನಿಮ್ಮ ತಂದೆಯ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು ಮತ್ತು ಕುಟುಂಬದ ವಾತಾವರಣವು ಹದಗೆಡಬಹುದು. 2023ರ ಅಕ್ಟೋಬರ್‌ ತಿಂಗಳಿನಲ್ಲಿ ನಿಮ್ಮ ಕುಟುಂಬ ಜೀವನವು ತುಂಬಾ ಉತ್ತಮವಾಗಿರುತ್ತದೆ. ಅಕ್ಟೋಬರ್‌ನಲ್ಲಿ ತಾಯಿಯ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಅನುಕೂಲಕರವಾದ ವಾತಾವರಣ ಇರುತ್ತದೆ.

ಕರ್ಕಾಟಕ: ವಿವಾಹ ಜಾತಕ 2023

ಕರ್ಕಾಟಕ: ವಿವಾಹ ಜಾತಕ 2023

ಕರ್ಕಾಟಕ ರಾಶಿಯವರ ವಿವಾಹ ಜಾತಕದ ಪ್ರಕಾರ, 2023ರಲ್ಲಿ ಕರ್ಕಾಟಕ ರಾಶಿಯವರ ವೈವಾಹಿಕ ಜೀವನ ಕಷ್ಟಕರವಾಗಿರುತ್ತದೆ. ನಿಮ್ಮ ದಾಂಪತ್ಯದಲ್ಲಿ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಮನಸ್ತಾಪ ಉಂಟಾಗಬಹುದು. ಈ ಬಗ್ಗೆ ಸ್ವಲ್ಪ ಹೆಚ್ಚು ಗಮನ ಹರಿಸುವುದು ಅಗತ್ಯವಾಗಿರುತ್ತದೆ. ವರ್ಷದ ಆರಂಭದಲ್ಲಿ ವೈವಾಹಿಕ ಜೀವನ ಕಷ್ಟಕರವಾಗಿದ್ದರೂ, ಅಕ್ಟೋಬರ್ ಕೊನೆಯಲ್ಲಿ ಸಮಸ್ಯೆಗಳು ಕಡಿಮೆಯಾಗುತ್ತದೆ. ಹೀಗಾಗಿ ವರ್ಷದ ಅಂತ್ಯದ ವೇಳೆಗೆ ನಿಮ್ಮ ವೈವಾಹಿಕ ಜೀವನವು ಉತ್ತಮವಾಗಿರುತ್ತದೆ.

ಕರ್ಕಾಟಕ: ವ್ಯವಹಾರ ಜಾತಕ 2023

ಕರ್ಕಾಟಕ: ವ್ಯವಹಾರ ಜಾತಕ 2023

ಕರ್ಕಾಟಕ ರಾಶಿಯವರ ವ್ಯವಹಾರ ಜಾತಕದ ಪ್ರಕಾರ, 2023ರಲ್ಲಿ ಕರ್ಕಾಟಕ ರಾಶಿಯವರ ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವರ್ಷವು ಏರಿಳಿತಗಳಿಂದ ತುಂಬಿರುತ್ತದೆ. ವರ್ಷದ ಆರಂಭದಲ್ಲಿ ಏರಿಳಿತಗಳು ಕಂಡುಬದರೂ, ಬಳಿಕ ನಿಮ್ಮ ವ್ಯವಹಾರ ಉತ್ತಮವಾಗಿ ಬೆಳೆಯುತ್ತದೆ. ಈ ವರ್ಷ ನಿಮ್ಮ ವ್ಯವಹಾರದಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸುವಿರಿ. ವಿಶೇಷವಾಗಿ ಅಕ್ಟೋಬರ್ ಮತ್ತು ಡಿಸೆಂಬರ್‌ನಲ್ಲಿ ನಿಮ್ಮ ಸಮಸ್ಯೆಗಳು ಕಡಿಮೆಯಾಗುತ್ತವೆ. ಡಿಸೆಂಬರ್ ತಿಂಗಳಿನಲ್ಲಿ ಹೊಸ ಜನರನ್ನು ಭೇಟಿ ಮಾಡಲು ನಿಮಗೆ ಅವಕಾಶ ಸಿಗುತ್ತದೆ. ವ್ಯವಾಹಾರ ಸಂಬಂಧ ನೀವು ಪ್ರವಾಸಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಕರ್ಕಾಟಕ: ವಾಹನ ಮತ್ತು ಆಸ್ತಿ ಜಾತಕ 2023

ಕರ್ಕಾಟಕ: ವಾಹನ ಮತ್ತು ಆಸ್ತಿ ಜಾತಕ 2023

ಕರ್ಕಾಟಕ ರಾಶಿಯವರ ವಾಹನ ಮತ್ತು ಆಸ್ತಿ ಜಾತಕದ ಪ್ರಕಾರ, 2023ರಲ್ಲಿ ಕರ್ಕಾಟಕ ರಾಶಿಯವರು ಯಾವುದೇ ರೀತಿಯ ದೊಡ್ಡ ವಾಹನವನ್ನು ಖರೀದಿಸುವ ಯೋಜನೆ ಇದ್ದರೆ ತಪ್ಪಿಸಿ, ಏಕೆಂದರೆ ಅದು ನಿಮಗೆ ಪ್ರಯೋಜನಕಾರಿಯಾಗುವುದಿಲ್ಲ. ಅಕ್ಟೋಬರ್ ಕೊನೆಯ ನಂತರ ನೀವು ಕಾರು ಖರೀದಿಸಲು ಉತ್ತಮ ಅವಕಾಶಗಳು ಇರುತ್ತದೆ. ನವೆಂಬರ್ 30ರಿಂದ ಡಿಸೆಂಬರ್ 25ರವೊಳಗೆ ಕಾರು ಮತ್ತು ಆಸ್ತಿಯನ್ನು ಖರೀದಿಸಲು ನಿಮಗೆ ಉತ್ತಮ ಸಮಯ. ಈ ಸಮಯದಲ್ಲಿ ನೀವು ದೊಡ್ಡ ಪ್ರಮಾಣದಲ್ಲಿ ಆಸ್ತಿಯನ್ನು ಖರೀದಿಸಬಹುದು.

ಕರ್ಕಾಟಕ: ಸಂಪತ್ತು ಮತ್ತು ಲಾಭ ಜಾತಕ 2023

ಕರ್ಕಾಟಕ: ಸಂಪತ್ತು ಮತ್ತು ಲಾಭ ಜಾತಕ 2023

ಕರ್ಕಾಟಕ ರಾಶಿಯವರ ಸಂಪತ್ತು ಮತ್ತು ಲಾಭ ಜಾತಕದ ಪ್ರಕಾರ, 2023ರಲ್ಲಿ ಕರ್ಕಾಟಕ ರಾಶಿಯವರಿಗೆ ಸಂಪತ್ತು ಮತ್ತು ಲಾಭ ಉತ್ತಮವಾಗಿರುತ್ತದೆ. ದೀರ್ಘಾವಧಿಯಲ್ಲಿ ನೀವು ಹೂಡಿಕೆ ಮಾಡಿದ ಹಣವನ್ನು ವಾಪಸ್‌ ಪಡೆಯುತ್ತೀರಿ. ನಿಮ್ಮ ಅದೃಷ್ಟ ಹೆಚ್ಚಾಗಿದ್ದು, ನಿಮಗೆ ಸಂಪತ್ತು ಮತ್ತು ಲಾಭದ ವಿಷಯದಲ್ಲಿ ಯಶಸ್ವಿಯಾಗಲು ಸಹಾಯ ಮಾಡುತ್ತದೆ. ವಿಶೇಷವಾಗಿ ಜನವರಿಯಿಂದ ಏಪ್ರಿಲ್‌ವರೆಗೆ ನೀವು ಹೆಚ್ಚಿನ ಲಾಭ ಪಡೆಯುತ್ತೀರಿ. ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಸಾರ್ವಜನಿಕ ವಲಯದಿಂದ ಲಾಭ ಪಡೆಯಲು ಅವಕಾಶವಿರುತ್ತದೆ. ಸೆಪ್ಟೆಂಬರ್‌ನಲ್ಲಿ ನಿಮ್ಮ ಸ್ವಂತ ಪ್ರಯತ್ನಗಳಿಗಾಗಿ ಆರ್ಥಿಕವಾಗಿ ಉತ್ತಮ ಪ್ರತಿಫಲ ಸಿಗುವ ಸಾಧ್ಯತೆಗಳಿವೆ. ವರ್ಷದ ನಡುವೆ ಏರಿಳಿತಗಳಿದ್ದರೂ, ವರ್ಷದ ಕೊನೆಯಲ್ಲಿ ನೀವು ಗಣನೀಯವಾಗಿ ಹಣವನ್ನು ಗಳಿಸುತ್ತೀರಿ.

ಕರ್ಕಾಟಕ: ಆರೋಗ್ಯ ಜಾತಕ 2023

ಕರ್ಕಾಟಕ: ಆರೋಗ್ಯ ಜಾತಕ 2023

ಕರ್ಕಾಟಕ ರಾಶಿಯವರ ಆರೋಗ್ಯ ಜಾತಕದ ಪ್ರಕಾರ, 2023ರ ವರ್ಷದ ಆರಂಭದಲ್ಲಿ ಕರ್ಕಾಟಕ ರಾಶಿಯವವರ ಆರೋಗ್ಯ ವಿಚಾರದಲ್ಲಿ ಸಮಸ್ಯೆಗಳು ಎದುರಾಗಬಹುದು. ಜನವರಿಯಲ್ಲಿ ನೀವು ದೀರ್ಘಕಾಲೀನ ಆರೋಗ್ಯ ಸಮಸ್ಯೆಗೊಳಗಾಗುವ ಸಾಧ್ಯತೆ ಇದೆ. ಇದನ್ನು ತಡೆಯಲು ನೀವು ನಿರಂತರವಾಗಿ ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ವೈದ್ಯರಿಂದ ಸಲಹೆಗಳ್ನು ಪಡೆಯಬೇಕು. ಯಾವುದೇ ಕಾಯಿಲೆಗಳು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆಯಲು ಪ್ರಾರಂಭಿಸಬೇಕು. ಮೇ ತಿಂಗಳಿನಲ್ಲಿ ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸುವುದು ಮುಖ್ಯವಾಗಿದೆ. ಜೂನ್‌ನಿಂದ ಜುಲೈವರೆಗೆ ನಿಮ್ಮ ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ. ಅಜಾಗರೂಕತೆಯಿಂದ ಆಗಸ್ಟ್‌ ಹಾಗೂ ಸಪ್ಟೆಂಬರ್‌ನಲ್ಲಿ ಸಾಮಾನ್ಯ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುವ ಸಾಧ್ಯತೆಗಳಿವೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಆರೋಗ್ಯ ಸುಧಾರಿಸುವ ಲಕ್ಷಣಗಳು ಕಂಡುಬರುತ್ತದೆ.

ಕರ್ಕಾಟಕ: ಅದೃಷ್ಟ ಜಾತಕ 2023

ಕರ್ಕಾಟಕ: ಅದೃಷ್ಟ ಜಾತಕ 2023

ಕರ್ಕಾಟಕ ರಾಶಿಯವರ ಅದೃಷ್ಟ ಜಾತಕದ ಪ್ರಕಾರ, ಕರ್ಕಾಟಕದ ರಾಶಿಯಲ್ಲಿ ಜನಿಸಿದವರಿಗೆ ಅದೃಷ್ಟ ಸಂಖ್ಯೆಗಳು 2 ಮತ್ತು 6. ಕರ್ಕಾಟಕದ ರಾಶಿಯಲ್ಲಿ ಜನಿಸಿದವರಿಗೆ ಈ ವರ್ಷ ಅದೃಷ್ಟ ಉತ್ತಮವಾಗಿರುತ್ತದೆ. ಇದರಿಂದ ನಿಮಗೆ ಅನೇಕ ಅನುಕೂಲಗಳು ಆಗುತ್ತದೆ. ನಿಮ್ಮ ನಿರ್ಲಕ್ಯದಿಂದ ಕೆಲ ಅಡೆತಡೆಗಳು ಉಂಟಾಗಬಹುದು. ಆದರೆ ನಿಮ್ಮ ಶಿಕ್ಷಣ ಮತ್ತು ಧಾರ್ಮಿಕ ನಂಬಿಕೆಯಿಂದ ನೀವು ಯಾವುದೇ ಕಷ್ಟಕರವಾದ ಪರಿಸ್ಥಿತಿಯನ್ನು ಜಯಿಸಬಹುದು. ಇದಕ್ಕಾಗಿ ನೀವು ಹೆಚ್ಚಿನ ಆತ್ಮವಿಶ್ವಾಸ ಹೊಂದಿರಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+