ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಲಾ ರಾಶಿ ವರ್ಷ ಭವಿಷ್ಯ ಮತ್ತು ಪರಿಹಾರೋಪಾಯ

By ನಾಗನೂರಮಠ ಎಸ್ಎಸ್
|
Google Oneindia Kannada News

ಹೊಸ ವರ್ಷ 2016 ತುಲಾ ರಾಶಿಯವರಿಗೆ ಅರ್ಧ ಸಿಹಿ ಅರ್ಧ ಕಹಿ ಎನ್ನಬಹುದು. ಏಕೆಂದರೆ ಮೊದಲೇ ಬಳಲಿ ಬೆಂಡಾಗಿರುವ ಈ ರಾಶಿಯವರು ಆಗಸ್ಟ್ ವರೆಗೂ ಸುಮ್ಮನಿದ್ದರೆ ಒಳ್ಳೆಯದು. ಯಾಕೆಂದರೆ 32 ವರ್ಷಗಳ ನಂತರ ಗ್ರಹಕೂಟ ಒಂದೇ ತೆರನಾಗಿ ಬಂದಿದೆ. 32 ವರ್ಷಗಳ ಹಿಂದೆ ಇಂದಿರಾ ಗಾಂಧಿ ಹತ್ಯೆಯಾಗಿತ್ತು. ಭೂಪಾಲ್ ಅನಿಲ ದುರಂತ ಸಂಭವಿಸಿತ್ತು. ಇರಾನ್ ಇರಾಕ್ ಯುದ್ಧ ನಡೆದಿತ್ತು.

ಅದೇ ರೀತಿ ಈ ಬಾರಿಯೂ ಹಲವಾರು ದುರ್ಘಟನೆಗಳು ಜರುಗುವ ಸಂಭವವಿರುವುದರಿಂದ, ಅಂದರೆ ಸೆಪ್ಟೆಂಬರ್ ತಿಂಗಳಿನವರೆಗಂತೂ ತುಲಾ ರಾಶಿಯವರು ಇದ್ದುದರಲ್ಲಿಯೇ ಸಂಭಾಳಿಸಿಕೊಂಡು ಹೋಗಬೇಕು.

ತುಲಾ ರಾಶಿಯವರು ಹೆಚ್ಚಾಗಿ ನೀಲಿ, ಹಸಿರು, ಬಿಳಿ ಮತ್ತು ತಿಳಿ ಬಣ್ಣದ ವಸ್ತುಗಳನ್ನು ಮತ್ತು ವಸ್ತ್ರಗಳನ್ನು ಈ ವರ್ಷ ಉಪಯೋಗಿಸಿಕೊಳ್ಳಬೇಕು. ಸಾಡೇಸಾತಿಯ ಕೊನೆಯ ಹಂತದಲ್ಲಿರುವುದರಿಂದ ಹೆಚ್ಚಿನ ಜಾಗೃತೆ ವಹಿಸಬೇಕು. ನೈಋತ್ಯ, ಉತ್ತರ ಮತ್ತು ಪೂರ್ವ ದಿಕ್ಕಿಗೆ ಪ್ರಾಶಸ್ತ್ಯ ಕೊಡಬೇಕು. ಕುಂಭ, ಕನ್ಯಾ, ತುಲಾ, ಮಕರ ಮತ್ತು ಮಿಥುನ ರಾಶಿಯವರರೊಂದಿಗೆ ಹೊಂದಾಣಿಕೆ ಇರಬೇಕು. [ಕನ್ಯಾ ರಾಶಿಯ ವರ್ಷಫಲ ಮತ್ತು ಪರಿಹಾರೋಪಾಯ]

Yearly horoscope and predictions 2016 for Libra zodiac sign

ಮಹಾಲಕ್ಷ್ಮೀಯನ್ನು ಪ್ರತಿ ಶುಕ್ರವಾರ ಮತ್ತು ಮಂಗಳವಾರ ಆರಾಧಿಸುತ್ತಲೇ ಇರಬೇಕು. ಶುಕ್ರವಾರ ಮತ್ತು ಬುಧವಾರ ಮುಖ್ಯವಾದ ಕೆಲಸಗಳನ್ನು ಇಟ್ಟುಕೊಳ್ಳಬೇಕು. ಅನುಕೂಲವಿದ್ದಾಗ ಅವರೇಕಾಳು, ಅವರೇಬೇಳೆ ಜಂಗಮರಿಗೆ ದಾನ ಕೊಡಬೇಕು. ಅತ್ತಿ (ಔದುಂಬರ) ಗಿಡವನ್ನು ಪೂಜಿಸಬೇಕು. ಸಿಂಹ ಮತ್ತು ಕರ್ಕ ರಾಶಿಯವರೊಂದಿಗೆ ವ್ಯವಹಾರ ಹೆಚ್ಚಿನ ಪ್ರಮಾಣದಲ್ಲಿರಬಾರದು.

ಕಾಲಿನ ನೋವಿಗೆ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು. ಆಗಸ್ಟ್ ನಂತರ ಶುಭಸಮಯ ಶುರುವಾಗುವುದರಿಂದ ಅಲ್ಲಿಯವರೆಗೂ ಯಾವುದೇ ಮುಖ್ಯವಾದ ಯೋಜನೆಗಳನ್ನು ಮಾಡುವುದು ಬೇಡ. ಮಾಡಲೇಬೇಕು ಎನ್ನುವಂತಿದ್ದರೆ ಸಾಮೇರನ್ನು ಕೇಳಿ ಮಾಡೋದು ಒಳ್ಳೆಯದು.

ಪರಿಹಾರೋಪಾಯಗಳು : ಶಂಭೋಲಿಂಗನ ಆಲಯದಲ್ಲಿ ಸಾಧ್ಯವಾದರೆ ತುಪ್ಪದಾರತಿ ಬೆಳಗಿ. ಶನೈಶ್ಚರನಿಗೆ ಎಳ್ಳೆಣ್ಣೆ ಅರ್ಪಿಸಿ. ರುದ್ರಾಭಿಷೇಕ ಮಾಡಿಸಲು ಮರೆಯಬೇಡಿ. ಹನುಮನಿಗೆ ಆವಾಗಾವಾಗ ಕುಂಕುಮಾರ್ಚನೆ ಮಾಡಿಸಿದರೊಳ್ಳೆಯದು.

ಮುಂದಿನ ಲೇಖನದಲ್ಲಿ : ವೃಶ್ಚಿಕ ರಾಶಿಯವರ ವರ್ಷಫಲ ಮತ್ತು ಪರಿಹಾರೋಪಾಯಗಳು

English summary
Yearly horoscope 2016 for Libra zodiac sign. Astrologer SS Naganurmath explains what lies ahead of Libra people. These people are still passing through Sade Sati and most difficult part of their life. So, be careful till the end of August.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X