ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Career Horoscope 2023: ಹೊಸ ವರ್ಷದಲ್ಲಿ ನಿಮ್ಮ ವೃತ್ತಿ ಜೀವನ ಹೇಗಿರಲಿದೆ..?

|
Google Oneindia Kannada News

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಉದ್ಯೋಗ ಎನ್ನುವುದು ಮುಖ್ಯವಾಗರುತ್ತದೆ. ನಾವು ಮಾಡುವ ಉದ್ಯೋಗ ನಮ್ಮ ಘನತೆಯ ದ್ಯೋತಕವಾಗಿರುತ್ತದೆ. ಪ್ರತಿಯೊಬ್ಬರಿಗೂ ಉತ್ತಮ ಉದ್ಯೋಗವನ್ನು ಪಡೆಯುವ ಮಹಾತ್ವಾಕಾಂಕ್ಷೆ ಇರುತ್ತದೆ. ಆದರೆ ಗ್ರಹ ಗತಿಗಳ ಚಲನೆಯಿಂದ ನೀವು ಬಯಸಿದ ಕೆಲಸ ಸಿಗದೇ ಇರಬಹುದು. ಕೆಲವರು ಕೆಲಸವೇ ಸಿಗದೇ ನಿರುದ್ಯೋಗಿಗಳಾಗಿರಬಹುದು. ಇನ್ನೂ ಕೆಲವರು ಕೆಲಸದಲ್ಲಿ ನೆಮ್ಮದಿ ಇಲ್ಲದೇ ಒತ್ತಡದಲ್ಲಿರಬಹುದು. ಈ ಎಲ್ಲಾ ಸಮಸ್ಯೆಗಳು ಪ್ರತಿಯೊಬ್ಬರ ಜೀವನದಲ್ಲೂ ಸಾಮಾನ್ಯವಾಗಿರುತ್ತದೆ. ಸಮಸ್ಯೆ ಇದ್ದ ಮೇಲೆ ಪರಿಹಾರ ಕೂಡ ಇದ್ದೇ ಇರುತ್ತದೆ.

ಹಾಗಾದರೆ 2023ರಲ್ಲಿ ಯಾರ್ಯಾರ ಉದ್ಯೋಗ ಜಾತಕ ಹೇಗಿರಲಿದೆ..? ಉದ್ಯೋಗದಲ್ಲಿ ಯಾರಿಗೆ ಬಡ್ತಿ, ಯಾರಿಗೆ ಸವಾಲು, ಯಾರಿಗೆ ಲಾಭ, ಯಾರಿಗೆ ನಷ್ಟ, ಎನ್ನುವ ಕುತೂಹಲ ಎಲ್ಲರಲ್ಲಿರಬಹುದು. ಹಾಗಾದರೆ 2023ರಲ್ಲಿ 12 ರಾಶಿಗಳ ವೃತ್ತಿ ಜೀವನ ಹೇಗಿರಲಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.

ಗುರು ಗ್ರಹ ಜೀವಿಗಳಿಗೂ ಉಗಮ ತಾಣ? ಯುರೋಪಾದಲ್ಲಿ ಭಾರಿ ಪ್ರಮಾಣದ ನೀರು!ಗುರು ಗ್ರಹ ಜೀವಿಗಳಿಗೂ ಉಗಮ ತಾಣ? ಯುರೋಪಾದಲ್ಲಿ ಭಾರಿ ಪ್ರಮಾಣದ ನೀರು!

 ಮೇಷ ರಾಶಿಯವರ ಉದ್ಯೋಗ ಜಾತಕ

ಮೇಷ ರಾಶಿಯವರ ಉದ್ಯೋಗ ಜಾತಕ

2023ರಲ್ಲಿ ಮೇಷ ರಾಶಿಯವರು ಉದ್ಯೋಗದಲ್ಲಿ ಅತ್ಯುತ್ತಮ ವೃತ್ತಿ ಫಲಿತಾಂಶವನ್ನು ಪಡೆಯುತ್ತಾರೆ. ವರ್ಷದ ಆರಂಭದಿಂದ ನಿಮ್ಮ ವೃತ್ತಿಜೀವನವು ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ. 2023ರ ಮೊದಲ ಮೂರು ತಿಂಗಳಿನಲ್ಲಿ ನೀವು ವೃತ್ತಿ ಸಂಬಂಧಿತ ಹೊಂದಿದ್ದ ಎಲ್ಲಾ ಆಂಕಾಂಕ್ಷಿಗಳು ಕಾರ್ಯರೂಪಕ್ಕೆ ಬರುತ್ತದೆ. ಕೆಲಸದಲ್ಲಿ ಇನ್ನು ಮುಂದೆ ನೀವು ಸಮಸ್ಯೆಗಳನ್ನು ಅನುಭವಿಸುವುದಿಲ್ಲ. ನಿಮ್ಮ ಸಹೋದ್ಯೋಗಿಗಳು ಮತ್ತು ಹಿರಿಯ ಸಹೋದ್ಯೋಗಿಗಳು ನಿಮ್ಮನ್ನು ಬೆಂಬಲಿಸುತ್ತಾರೆ.

ಮಾರ್ಚ್ ಮತ್ತು ಆಗಸ್ಟ್ ತಿಂಗಳಿನಲ್ಲಿ ನೀವು ಕಷ್ಟಪಟ್ಟು ಕೆಲಸ ಮಾಡುವುದರಿಂದ ಬಡ್ತಿ ಪಡೆಯುವ ಸಾಧ್ಯತೆ ಇದೆ. ಜೊತೆಗೆ ನಿಮ್ಮ ಆದಾಯ ಕೂಡ ಹೆಚ್ಚುತ್ತದೆ. ಇದರಿಂದ ನಿಮ್ಮ ಬಗ್ಗೆ ನೀವು ಹೆಮ್ಮೆ ಪಡುತ್ತೀರಿ. ಆದರೆ 2023ರಲ್ಲಿ ಪಾಲುದಾರಿಕೆಯಲ್ಲಿ ಏರಿಳಿಗಳನ್ನು ಕಾಣಬಹುದು. ಪಾಲುದಾರರೊಂದಿಗಿನ ನಿಮ್ಮ ಸಂಬಂಧದಲ್ಲಿ ತೊಂದರೆಗಳು ಎದುರಾಗಬಹುದು. ಏಪ್ರಿಲ್ ನಂತರ ನಿಮ್ಮ ವ್ಯಾಪಾರ ಉತ್ತಮವಾಗಲಿದ್ದು, ವರ್ಷದ ಕೊನೆಯ ಮೂರು ತಿಂಗಳಲ್ಲಿ ನಿಮ್ಮ ಪ್ರಯತ್ನಗಳಿಂದ ಯಶಸ್ವಿಯಾಗುತ್ತೀರಿ.

 ವೃಷಭ ರಾಶಿಯವರ ಉದ್ಯೋಗ ಜಾತಕ

ವೃಷಭ ರಾಶಿಯವರ ಉದ್ಯೋಗ ಜಾತಕ

ವೃಷಭ ರಾಶಿಯ ವೃತ್ತಿ ಜಾತಕದ ಪ್ರಕಾರ 2023ರಲ್ಲಿ ಉದ್ಯೋಗದಲ್ಲಿ ಅನೇಕ ಅವಕಾಶಗಳು ಸಿಗುತ್ತದೆ. ವರ್ಷದ ಆರಂಭದಲ್ಲಿ ಜನವರಿ ತಿಂಗಳಲ್ಲಿ ನೀವು ಉದ್ಯೋಗದಲ್ಲಿ ವರ್ಗಾವಣೆಯಾಗಬಹುದು. ಈ ಸಮಯದಲ್ಲಿ ನೀವು ಹೊಸ ಉದ್ಯೋಗವನ್ನು ಪಡೆಯಬಹುದು. ಇದರಿಂದ ನೀವು ವರ್ಷಪೂರ್ತಿ ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸಬಹುದು. ಈ ವರ್ಷದ ಜೂನ್ ಮತ್ತು ನವೆಂಬರ್ ತಿಂಗಳಿನ ನಡುವಿನ ಸಮಯದಲ್ಲಿ ಉದ್ಯೋಗದಲ್ಲಿ ಏರಿಳಿತಗಳು ಉಂಟಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಉದ್ಯೋಗ ಬದಲಾವಣೆ ಸಾಧ್ಯತೆ ಇದೆ. ಕೆಲವರು ಇಲಾಖೆಯ ಬದಲಾವಣೆಯಾಗಬಹುದು.

 ಮಿಥುನ ರಾಶಿಯವರ ಉದ್ಯೋಗ ಜಾತಕ

ಮಿಥುನ ರಾಶಿಯವರ ಉದ್ಯೋಗ ಜಾತಕ

ಮಿಥುನ ರಾಶಿಯವರು ವೃತ್ತಿ ಜೀವನದಲ್ಲಿ 2023ರಲ್ಲಿ ಯಶಸ್ಸನ್ನು ಅನುಭವಿಸುತ್ತಾರೆ. ವರ್ಷದ ಆರಂಭದಲ್ಲಿ ವೃತ್ತಿ ಜೀವನವು ಉತ್ತಮವಾಗಿರುತ್ತದೆ. ಬಳಿಕ ನಿಮ್ಮ ವೃತ್ತಿಜೀವನದಲ್ಲಿ ಏರಿಳಿತಗಳನ್ನು ಅನುಭವಿಸಬಹುದು. ನಿಮ್ಮ ಕೆಲಸದ ವಿಷಯದಲ್ಲಿ ತುಂಬಾ ಗೊಂದಲಕ್ಕೊಳಗಾಗಬಹುದು. ಹೊಸ ಕೆಲಸ ಹುಡುಕಬಹುದು. ಹೊಸ ಸ್ಥಳಕ್ಕೆ ವರ್ಗಾವಣೆಯಾಗಬಹುದು. ಈ ಸಮಯದಲ್ಲಿ ಉದ್ಯೋಗಗಳನ್ನು ಬದಲಾಯಿಸಲು ಬಯಸಿದರೆ ಬದಲಾವಣೆ ಮಾಡಬಹುದು. ಏಪ್ರಿಲ್ 22ರ ನಂತರ ವೃತ್ತಿಜೀವನದಲ್ಲಿ ಯಶಸ್ವಿಯಾಗುತ್ತೀರಿ. ಈ ಸಮಯದಲ್ಲಿ ಉತ್ತಮ ಸ್ಥಾನಮಾನವನ್ನು ಪಡೆಯುತ್ತಿರಿ. ಬಡ್ತಿಯನ್ನು ಸಹ ಪಡೆಯಬಹುದು. ಜೊತೆಗೆ ಕೆಲಸ ಕೂಡ ಹೆಚ್ಚಾಗುತ್ತದೆ. ವರ್ಷದ ಮಧ್ಯ ಮತ್ತು ಅಂತಿಮ ತಿಂಗಳುಗಳಲ್ಲಿ ನಿಮ್ಮ ವೃತ್ತಿಜೀವನವು ಕೆಲವು ಏರಿಳಿತಗಳನ್ನು ಕಾಣಬಹುದು.

 ಕರ್ಕಾಟಕ ರಾಶಿಯವರ ಉದ್ಯೋಗ ಜಾತಕ

ಕರ್ಕಾಟಕ ರಾಶಿಯವರ ಉದ್ಯೋಗ ಜಾತಕ

2023ರಲ್ಲಿ ಕರ್ಕಾಟಕ ರಾಶಿಯವರು ವರ್ಷದ ಆರಂಭದಲ್ಲಿ ವೃತ್ತಿ ಜೀವನದಲ್ಲಿ ಅನುಕೂಲಕರ ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ. ಕೆಲಸ ಮತ್ತು ವ್ಯವಹಾರದ ಜೊತೆಗೆ ಮಾನಸಿಕ ಒತ್ತಡವನ್ನು ಸಹ ನೀವು ನಿರ್ವಹಿಸಬೇಕು. ಉತ್ತಮ ಕ್ಷೇತ್ರದಲ್ಲಿ ಕೆಲಸ ಮಾಡುವ ನಿಮ್ಮ ಮಹತ್ವಾಕಾಂಕ್ಷೆಯು ಹೆಚ್ಚಾಗುತ್ತದೆ ಗುರುಗ್ರಹದ ಕಾರಣದಿಂದಾಗಿ ಅದೃಷ್ಟವು ನಿಮ್ಮ ಕಡೆ ಇರುತ್ತದೆ. ಮೇ ತಿಂಗಳಲ್ಲಿ ವೃತ್ತಿ ವಿಚಾರವಾಗಿ ನಿಮಗೆ ಅಶಾಂತಿ ಉಂಟಾಗಬಹುದು. ಈ ಸಮಯದಲ್ಲಿ ನಿಮ್ಮ ಭಾವನೆಗಳನ್ನು ನೀವು ನಿಯಂತ್ರಿಸಬೇಕು. ಅಕ್ಟೋಬರ್ 30ರ ನಂತರ ನಿಮ್ಮ ಕೆಲಸದ ಕ್ಷೇತ್ರವು ಬದಲಾಗಬಹುದು. ನೀವು ವರ್ಗಾವಣೆಯಾಗಬಹುದು, ಇದು ನಿಮ್ಮ ವೃತ್ತಿಜೀವನದ ಹಿತದೃಷ್ಟಿಯಿಂದ ಪ್ರಯೋಜನವಾಗಿರುತ್ತದೆ. ವರ್ಷದ ಕೊನೆಯ ಕೆಲವು ತಿಂಗಳುಗಳಲ್ಲಿ ನೀವು ಕೆಲಸದಲ್ಲಿ ಹೊಸ ಹಂತಗಳನ್ನು ತಲುಪಿ ಮುನ್ನಡೆ ಸಾಧಿಸುತ್ತೀರಿ.

 ಸಿಂಹ ರಾಶಿಯವರ ಉದ್ಯೋಗ ಜಾತಕ

ಸಿಂಹ ರಾಶಿಯವರ ಉದ್ಯೋಗ ಜಾತಕ

ಸಿಂಹ ರಾಶಿಯವರು ವರ್ಷದ ಆರಂಭದಲ್ಲಿ ವೃತ್ತಿಜೀವನದಲ್ಲಿ ಪ್ರಮುಖ ಸಾಧನೆ ಮಾಡುವ ಅವಕಾಶವನ್ನು ಪಡೆಯುತ್ತೀರಿ. ನೀವು ಈಗಾಗಲೇ ಮಾಡಿದ ಕಠಿಣ ಪರಿಶ್ರಮ ಮತ್ತು ಮುಂದೆ ನೀವು ಮಾಡುವ ಕಠಿಣ ಪರಿಶ್ರಮವು ನಿಮಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಇದರಿಂದ ನೀವು ಜವಾಬ್ದಾರಿಯುತ ಸ್ಥಾನ ಪಡೆಯುತ್ತೀರಿ. ಏಪ್ರಿಲ್ 22ರ ನಂತರ ಉದ್ಯೋಗದಲ್ಲಿ ವರ್ಗಾವಣೆ ಕಾಣಬಹುದು. ತ್ತಿಜೀವನವನ್ನು ಎತ್ತರಕ್ಕೆ ಹೋಗುತ್ತದೆ. ನಿಮ್ಮ ಜ್ಞಾನ ಮತ್ತು ಕೌಶಲ್ಯಗಳ ಆಧಾರದ ಮೇಲೆ ಈ ವರ್ಷ ಸಾಧಿಸಲು ಬಹಳಷ್ಟು ಅದ್ಭುತ ಅವಕಾಶವಿದೆ. ಹೀಗಾಗಿ ನಿಮ್ಮ ವೃತ್ತಿಯ ಯಶಸ್ಸನ್ನು ನೀವು ಭದ್ರಪಡಿಸಿಕೊಳ್ಳಬಹುದು.

 ಕನ್ಯಾ ರಾಶಿಯವರ ಉದ್ಯೋಗ ಜಾತಕ

ಕನ್ಯಾ ರಾಶಿಯವರ ಉದ್ಯೋಗ ಜಾತಕ

ಕನ್ಯಾ ರಾಶಿ ವೃತ್ತಿ ಜಾತಕ 2023 ರ ಪ್ರಕಾರ, ನೀವು ವರ್ಷದ ಆರಂಭದಲ್ಲಿ ಸರಿಯಾದ ವೃತ್ತಿಪರ ಆಯ್ಕೆಯನ್ನು ಮಾಡಲು ಶ್ರಮಿಸಬೇಕು. ಜನವರಿಯಲ್ಲಿ ನಿಮ್ಮ ವೃತ್ತಿಜೀವನವು ಬದಲಾಗುವ ಸಾಧ್ಯತೆಯಿದೆ. ಈ ವರ್ಷ ನಿಮ್ಮ ಕೆಲಸದಲ್ಲಿ ಮುನ್ನಡೆಯಲು ನಿಮಗೆ ಹಲವಾರು ಅವಕಾಶಗಳಿವೆ. ಆದರೆ ಏಪ್ರಿಲ್ 22ರ ನಂತರದ ಸಮಯದಲ್ಲಿ ಸಮಸ್ಯೆಗಳು ಎದುರಾಗಬಹುದು. ಏಪ್ರಿಲ್ ನಂತರ ನಿಮ್ಮ ಕೆಲಸದ ಮಾರ್ಗವು ಇದ್ದಕ್ಕಿದ್ದಂತೆ ಬದಲಾಗಬಹುದು. ಈ ಸಮಯದಲ್ಲಿ ನೀವೇ ಹೊಸ ವ್ಯಾಪಾರ ಆರಂಭಿಸಬಹುದು. ಈ ಯೋಗವು ವಿಶೇಷವಾಗಿ ಮೇ ತಿಂಗಳಲ್ಲಿ ರೂಪುಗೊಳ್ಳುತ್ತವೆ. ಕೆಲವು ಅನಿರೀಕ್ಷಿತ ಸಮಸ್ಯೆಗಳಿಂದ ನೀವು ಜಾಗರೂಕರಾಗಿರಬೇಕು. ಅಕ್ಟೋಬರ್‌ನಿಂದ ಡಿಸೆಂಬರ್ ನಡುವಿನ ಸಮಯವು ವೃತ್ತಿಜೀವನಕ್ಕೆ ಉತ್ತಮವಾಗಿರುತ್ತದೆ.

 ತುಲಾ ರಾಶಿಯವರ ಉದ್ಯೋಗ ಜಾತಕ

ತುಲಾ ರಾಶಿಯವರ ಉದ್ಯೋಗ ಜಾತಕ

ತುಲಾ ರಾಶಿಯ 2023 ರ ವೃತ್ತಿಜೀವನದ ಜಾತಕದ ಪ್ರಕಾರ, ತುಲಾ ರಾಶಿಯಲ್ಲಿ ಜನಿಸಿದವರು ವೃತ್ತಿ ಜೀವನದಲ್ಲಿ ನಿಮ್ಮ ದೌರ್ಬಲ್ಯದ ಬಗ್ಗೆ ತಿಳಿದಿರಬೇಕು. ಅವುಗಳನ್ನು ಸುಧಾರಿಸಲು ಪ್ರಯತ್ನಿಸಬೇಕು. ಹೊಸ ಕೌಶಲ್ಯಗಳನ್ನು ಕಲಿಯುವ ಮತ್ತು ಅಭಿವೃದ್ಧಿಪಡಿಸುವ ಬಗ್ಗೆ ಯೋಚಿಸಬೇಕು. ಇದರಿಂದ ನೀವು ಕೆಲಸದಲ್ಲಿ ಬದಲಾವಣೆ ಕಾಣಬಹುದು.

ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ 2023 ಉತ್ತಮ ಸಮಯವಾಗಿದೆ. ನೀವು ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುವವರಾಗಿದ್ದರೆ, ಈ ಸಮಯದಲ್ಲಿ ವೇತನ ಹೆಚ್ಚಳವಾಗುತ್ತದೆ. ಕೆಲವು ಬದಲಾವಣೆಯಿಂದ ಉತ್ತಮ ಪ್ರಯೋಜನ ಪಡೆಯುತ್ತೀರಿ. ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳು ವೃತ್ತಿ ಜೀವನದಲ್ಲಿ ಏರಿಳಿತಗಳನ್ನು ಹೊಂದಿರಬಹುದು. ನಿಮ್ಮ ಪ್ರಯತ್ನದಿಂದ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ.

 ವೃಶ್ಚಿಕ ರಾಶಿಯವರ ಉದ್ಯೋಗ ಜಾತಕ

ವೃಶ್ಚಿಕ ರಾಶಿಯವರ ಉದ್ಯೋಗ ಜಾತಕ

ವೃಶ್ಚಿಕ ರಾಶಿಯ 2023 ರ ವೃತ್ತಿಜೀವನದ ಜಾತಕದ ಪ್ರಕಾರ, ಈ ವರ್ಷ ವೃಶ್ಚಿಕ ರಾಶಿಯಲ್ಲಿ ಜನಿಸಿದವರು ತಮ್ಮ ಪ್ರಯತ್ನದಿಂದ ವೃತ್ತಿ ಜೀವನದಲ್ಲಿ ಮುಂದೆ ಬರಬೇಕಾಗುತ್ತದೆ. ಶನಿ ಗ್ರಹದ ಚಲನೆಯಿಂದ ನೀವು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಶಿಸ್ತುಬದ್ಧವಾಗಿ ಪರಿಶ್ರಮ ಮಾಡಿದರೆ ಕೆಲಸದಲ್ಲಿ ಯಶಸ್ವಿಯಾಗುತ್ತಿರಿ ಹಾಗೂ ಉದ್ಯೋಗದಲ್ಲಿ ಬಲವಾಗಿ ಬೇರೂರಲು ಸಾಧ್ಯವಾಗುತ್ತದೆ.

ವೃತ್ತಿ ಭವಿಷ್ಯ 2023 ರ ಪ್ರಕಾರ, ಏಪ್ರಿಲ್ ಮತ್ತು ಆಗಸ್ಟ್ ತಿಂಗಳುಗಳು ಹೆಚ್ಚು ಲಾಭದಾಯಕ ತಿಂಗಳುಗಳಾಗಿರುತ್ತದೆ. ಈ ಸಮಯದಲ್ಲಿ ನೀವು ಬಡ್ತಿ ಪಡೆಯಬಹುದು. ಈ ನಡುವೆ ಜೂನ್‌ನಲ್ಲಿ ನೀವು ಹಠಾತ್ ಏರಿಳಿತಗಳನ್ನು ಎದುರಿಸಬಹುದು. ಅಕ್ಟೋಬರ್ ತಿಂಗಳ ಪೂರ್ತಿ, ಕೆಲಸಕ್ಕಾಗಿ ಪ್ರಯಾಣಿಸುವ ಸಂದರ್ಭಗಳು ಎದುರಾಗಬಹುದು. ನೀವು ಕಷ್ಟಪಟ್ಟು ಕೆಲಸ ಮಾಡಿದರೆ, ವೃತ್ತಿ ಜೀವನದಲ್ಲಿ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಯಶಸ್ವಿಯಾಗುತ್ತೀರಿ.

 ಧನು ರಾಶಿಯವರ ಉದ್ಯೋಗ ಜಾತಕ

ಧನು ರಾಶಿಯವರ ಉದ್ಯೋಗ ಜಾತಕ

ಧನು ರಾಶಿಯ 2023 ರ ವೃತ್ತಿಜೀವನದ ಜಾತಕದ ಪ್ರಕಾರ, ಈ ವರ್ಷ ಧನು ರಾಶಿಯಲ್ಲಿ ಜನಿಸಿದವರು ತಮ್ಮ ಕೆಲಸದ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕಾಗುತ್ತದೆ. ವರ್ಷದ ಆರಂಭವು ನಿಮಗೆ ಅನುಕೂಲಕರವಾಗಿರುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಸ್ಥಿರವಾಗಿರುತ್ತೀರಿ. ನಂತರದ ದಿನಗಳಲ್ಲಿ ಉದ್ಯೋಗಗಳನ್ನು ಬದಲಾಯಿಸಲು ಪ್ರಯತ್ನಿಸುತ್ತೀರಿ. ಉದ್ಯೋಗದಲ್ಲಿ ಬದಲಾವಣೆಯು ನಿಮಗೆ ಉತ್ತಮ ಫಲಿತಾಂಶ ನೀಡುತ್ತದೆ. ಆದರೆ ಏಪ್ರಿಲ್‌ನಲ್ಲಿ ಕೆಲವು ಸವಾಲುಗಳು ಎದುರಾಗಬಹುದು. ಹೀಗಾಗಿ ಏಪ್ರಿಲ್ ನಿಂದ ಆಗಸ್ಟ್ ವರೆಗೆ ಯಾವುದೇ ರೀತಿಯ ಕೆಲಸಗಳಿದ್ದರೂ ತಪ್ಪಿಸಬೇಕು. ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳುಗಳು ನಿಮಗೆ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ವೃತ್ತಿಜೀವನದಲ್ಲಿ ಯಶಸ್ಸು ಪಡೆಯುತ್ತೀರಿ. ವೇತನದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.

 ಮಕರ ರಾಶಿಯವರ ಉದ್ಯೋಗ ಜಾತಕ

ಮಕರ ರಾಶಿಯವರ ಉದ್ಯೋಗ ಜಾತಕ

ಮಕರ ವೃತ್ತಿ ಜಾತಕ 2023 ರ ಪ್ರಕಾರ, ಮಕರ ರಾಶಿಯವರು ಈ ವರ್ಷ ತಮ್ಮ ವೃತ್ತಿಜೀವನದಲ್ಲಿ ಜಾಗರೂಕರಾಗಿರಬೇಕಾಗುತ್ತದೆ. ಕೆಲಸದಲ್ಲಿ ನಿಮ್ಮ ಶ್ರಮವಿದ್ದರೂ, ಬೇರೆಯವರಿಗೆ ಅದು ಕಾಣಿಸದೇ ಇರಬಹುದು. ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಪ್ರತಿಫಲ ಸಿಗುವುದಿಲ್ಲ. ಆದ್ದರಿಂದ ನೀವು ನಿಮ್ಮ ಪ್ರಸ್ತುತ ಕೆಲಸದ ಸ್ಥಾನವನ್ನು ತೊರೆಯಬೇಕಾಗಿ ಬರಬಹುದು. ನೀವು ಸ್ವಲ್ಪ ಸಮಯದವರೆಗೆ ಕೆಲಸವಿಲ್ಲದೆ ಕಾಯಬೇಕಾಗಿ ಬರಬಹುದು. ಆದ್ದರಿಂದ ಕಾಳಜಿ ವಹಿಸಿ, ಜಾಗರೂಕರಾಗಿರಿ ಮತ್ತು ನಿಮ್ಮ ಕೆಲಸವನ್ನು ಸುಧಾರಿಸಲು ಶ್ರಮವಹಿಸಿ. ಏಪ್ರಿಲ್‌ನಲ್ಲಿ ಕೆಲಸವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಹೀಗಾಗಿ ನೀವು ಉದ್ಯೋಗಗಳಿಗೆ ಅರ್ಜಿ ಸಲ್ಲಿಸುತ್ತಲೇ ಇರಬೇಕು. ಅಕ್ಟೋಬರ್‌ ನಂತರದ ದಿನಗಳು ನಿಮಗೆ ಉತ್ತಮವಾಗಿರಲಿದೆ.

 ಕುಂಭ ರಾಶಿಯವರ ಉದ್ಯೋಗ ಜಾತಕ

ಕುಂಭ ರಾಶಿಯವರ ಉದ್ಯೋಗ ಜಾತಕ

ಕುಂಭ ವೃತ್ತಿ ಜಾತಕ 2023 ರ ಪ್ರಕಾರ, ಕುಂಭ ರಾಶಿಯವರು ಈ ವರ್ಷ ತಮ್ಮ ವೃತ್ತಿಜೀವನದಲ್ಲಿ ಬಹಳ ಎಚ್ಚರಿಕೆಯಿಂದ ಮುಂದುವರಿಯಬೇಕು. ಏಕೆಂದರೆ ನೀವು ಊಹಿಸಲು ಸಾಧ್ಯವಾಗದ ಅನಿರೀಕ್ಷಿತ ಘಟನೆಗಳು ಸಂಭವಿಸಬಹುದು. ನಿಮ್ಮ ಸಹೋದ್ಯೋಗಿಗಳು ನಿಮಗೆ ತೊಂದರೆ ಕೊಡಬಹುದು. ಅವರು ನಿಮ್ಮ ಯೋಜನೆಗಳನ್ನು ಹಾಳುಮಾಡಬಹುದು. ಹೀಗಾಗಿ ಸವಾಲಿನ ಸ್ಥಿತಿಯಲ್ಲಿ ನೀವು ಕೆಲಸದಲ್ಲಿ ಇರಬೇಕಾಗುತ್ತದೆ.

ವರ್ಷದ ಆರಂಭವು ನಿಮಗೆ ಉತ್ತಮವಾಗಿರುತ್ತದೆ. ಮಾರ್ಚ್ ಮತ್ತು ಏಪ್ರಿಲ್ ನಡುವಿನ ಸಮಯದಲ್ಲಿ ನೀವು ಉದ್ಯೋಗವನ್ನು ಬದಲಾಯಿಸಲು ಬಯಸುತ್ತೀರಿ. ಮೇ ನಿಂದ ಆಗಸ್ಟ್ ವರೆಗೆ ನಿಮ್ಮ ಶತ್ರುಗಳು ಬಲಶಾಲಿಯಾಗಿರುತ್ತಾರೆ. ಹೀಗಾಗಿ ಆ ಸಮಯದಲ್ಲಿ ನಿಮ್ಮ ಕೆಲಸವು ಕಷ್ಟಕರವಾಗಿರುತ್ತದೆ. ಬಳಿಕ ಸೆಪ್ಟೆಂಬರ್‌ನಿಂದ ಕೆಲವು ವಿಷಯಗಳು ಬದಲಾವಣೆಯಾಗುತ್ತೆ. ಇದರಿಂದ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ನಿಮ್ಮ ವೃತ್ತಿಜೀವನವು ಸರಿ ಹೋಗುತ್ತದೆ.

 ಮೀನ ರಾಶಿಯವರ ಉದ್ಯೋಗ ಜಾತಕ

ಮೀನ ರಾಶಿಯವರ ಉದ್ಯೋಗ ಜಾತಕ

ಮೀನ ವೃತ್ತಿ ಜಾತಕ 2023 ರ ಪ್ರಕಾರ, ಮೀನ ರಾಶಿಯವರು, ಈ ವರ್ಷ ಕೆಲಸದಲ್ಲಿ ಯಶಸನ್ನು ಹೊಂದುತ್ತಾರೆ. ಹೊಸ ವರ್ಷ ಉತ್ತಮವಾಗಿರುತ್ತದೆ. ನಿಮ್ಮ ಕೆಲಸಗಳಿಂದ ನೀವು ಗುರುತಿಸಲ್ಪಡುತ್ತೀರಿ. ಜನವರಿ ತಿಂಗಳು ನಿಮಗೆ ಉತ್ತಮವಾಗಿರುತ್ತದೆ. ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಗ್ರಹಗತಿಗಳ ಸಹಾಯ ಸಿಗುತ್ತದೆ. ಈ ಅವಧಿಯು ನಿಮ್ಮ ವೃತ್ತಿಜೀವನಕ್ಕೆ ಅನುಕೂಲಕರವಾಗಿರುತ್ತದೆ. ಬಳಿಕ ಉದ್ಯೋಗದಲ್ಲಿ ನಷ್ಟ ಅಥವಾ ಬದಲಾವಣೆಯನ್ನು ಕಾಣಬಹುದು ಹೀಗಾಗಿ ಮೇನಿಂದ ಜುಲೈ ವರೆಗಿನ ಸಮಯದಲ್ಲಿ ಎಚ್ಚರಿಕೆ ವಹಿಸಬೇಕು. ಸೆಪ್ಟೆಂಬರ್‌ನಿಂದ ಡಿಸೆಂಬರ್ ವರೆಗೆ ಉದ್ಯೋಗದಲ್ಲಿ ನೀವು ವರ್ಗಾವಣೆಯಾಗಬಹುದು. ಹೊಸ ಕೆಲಸ ಹುಡುಕುತ್ತಿದ್ದರೆ ಈ ವರ್ಷದ ಸಮಯ ಉತ್ತಮವಾಗಿದೆ. ಇದರಿಂದ ನೀವು ಉತ್ತಮ ಸ್ಥಾನವನ್ನು ಸಹ ಪಡೆಯಬಹುದು. ಅದು ನಿಮಗೆ ಖ್ಯಾತಿಯನ್ನು ತಂದುಕೊಡುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಭರವಸೆ ಇರಿಸಿ ಶ್ರಮವಹಿಸುವುದರಿಂದ ವಿದೇಶ ಪಯಾಣ ಕೂಡ ಸಾಧ್ಯತೆ ಇದೆ.

English summary
Career Horoscope, career horoscope 2023 in kannada, job horoscope 2023, profession horoscope 2023, 2023 career horoscope, career life according to astrology, Education Astrology in Kannada, 2023 job horoscope in kannada, udyoga rashi bhavishya 2023, udyoga rashi bhavishya, 2023 Career Horoscope, 2023 career horoscope by date of birth, Career Horoscope 2023, 2023 Career Horoscope ,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X