Get Updates
Get notified of breaking news, exclusive insights, and must-see stories!

2023 Makara Rashi Bhavishya : 2023ರಲ್ಲಿ ಮಕರ ರಾಶಿ ಭವಿಷ್ಯ ಹೇಗಿರಲಿದೆ?

2022 ಪೂರ್ಣಗೊಂಡು ಹೊಸ ವರ್ಷದ ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಹೊಸ ವರ್ಷದೊಂದಿಗೆ ಹೊಸ ಹುರುಪಿನ ನಿರೀಕ್ಷೆಯಲ್ಲಿರುವ ಮಕರ ರಾಶಿಯವರಿಗೆ ಮುಂದಿನ ವರ್ಷ ವ್ಯವಹಾರ, ಶಿಕ್ಷಣ ಹಾಗೂ ವೈಯಕ್ತಿಕ ಜೀವನ ಹೇಗಿರಲಿದೆ ಎನ್ನುವ ಕುತೂಹಲವಿರಬಹುದು. ಮಕರ ರಾಶಿಯವರಿಗೆ 2023 ಸಂಬಂಧದ ವಿಚಾರದಲ್ಲಿ ಪ್ರಮುಖವಾಗಿರಲಿದೆ.

ಮಕರ ರಾಶಿಯವರು 2023ರಲ್ಲಿ ತಮ್ಮ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಹಿಸಬೇಕಾಗಿದೆ. ಆರೋಗ್ಯ, ಸಂಬಂಧ, ಕುಟುಂಬ ಸೇರಿದಂತೆ ಮುಂದಿನ ವರ್ಷ ಪ್ರೇಮ ಜೀವನ, ಆರ್ಥಿಕ ಜೀವನ, ವೈಯಕ್ತಿಕ, ವ್ಯಾಪಾರ, ವಿವಾಹ, ಆಸ್ತಿ, ಸಂಪತ್ತು ಜಾತಕ ಹೇಗಿರಲಿದೆ ಎನ್ನುವ ಪ್ರಶ್ನೆ ಕಾಡುತ್ತಿರಬಹುದು. ಹಾಗಾದರೆ ಮುಂದಿನ ವರ್ಷ ಮಕರ ರಾಶಿ ಭವಿಷ್ಯ ಹೇಗಿರಲಿದೆ..? ಎನ್ನುವುದನ್ನು ವಿಸ್ತಾರವಾಗಿ ತಿಳಿಯೋಣ.

ಮಕರ: ಪ್ರೀತಿ ಜಾತಕ 2023

ಮಕರ: ಪ್ರೀತಿ ಜಾತಕ 2023

ಮಕರ ರಾಶಿಯವರ ಪ್ರೀತಿಯ ಜಾತಕದ ಪ್ರಕಾರ, 2023 ಮಕರ ರಾಶಿಯವರು ವರ್ಷದ ಆರಂಭದಲ್ಲಿ ಪ್ರೀತಿಯ ಸಂಬಂಧದ ಬಗ್ಗೆ ಸ್ವಲ್ಪ ಗಮನ ಹರಿಸಬೇಕು. ಏಕೆಂದರೆ ಈ ವೇಳೆ ಆಘಾತಕಾರಿ ಪರಿಸ್ಥಿತಿಯನ್ನು ಎದುರಿಸಬೇಕಾಗಿಬರಬಹುದು. ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿಪಾತ್ರರನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ, ಅವರ ಕೋಪ ಹಾಗೂ ಅಸಮಾಧಾನವನ್ನು ನೀವು ಎದುರಿಸಬೇಕಾಗುತ್ತದೆ. ಇದರಿಂದ ಸಂಬಂಧ ಮುರಿದು ಹೋಗುವ ಸಾಧ್ಯತೆಗಳಿದ್ದು, ಜಾಗರೂಕರಾಗಿರಿ. ಫೆಬ್ರವರಿಯಿಂದ ಮೇ ವರೆಗೆ ನಿಮ್ಮ ಪ್ರೇಮ ಸಂಬಂಧವು ಗಟ್ಟಿಯಾಗಿರುತ್ತದೆ. ನಿಮ್ಮ ಪ್ರೇಮಿಯೊಂದಿಗೆ ನಿಮ್ಮ ಆಪ್ತತೆ ಹೆಚ್ಚಾಗುತ್ತದೆ. ಅವರೊಂದಿಗೆ ಪ್ರಯಾಣ ಮಾಡುವ ಅವಕಾಶವನ್ನು ಪಡೆಯುತ್ತೀರಿ.

ಜುಲೈನಿಂದ ಆಗಸ್ಟ್‌ರೆಗಿನ ನಡುವೆ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ಒತ್ತಡ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಸಂಬಂಧ ಮುರಿಯುವ ಸಾಧ್ಯತೆಗಳಿವೆ. ಅಕ್ಟೋಬರ್ ತಿಂಗಳ ನಡುವೆ ನಿಮ್ಮ ಪ್ರೇಮ ವಿವಾಹದ ಸಾಧ್ಯತೆಯೂ ಇದೆ. ಇನ್ನು ಒಂಟಿಯಾಗಿರುವವರು ಈ ವರ್ಷ ಉತ್ತಮ ಸಂಗಾತಿಯನ್ನು ಪಡೆಯಬಹುದು.

ಮಕರ: ಉದ್ಯೋಗ ಜಾತಕ 2023

ಮಕರ: ಉದ್ಯೋಗ ಜಾತಕ 2023

ಮಕರ ರಾಶಿಯವರ ಉದ್ಯೋಗ ಜಾತಕದ ಪ್ರಕಾರ, 2023 ರಲ್ಲಿ ಮಕರ ರಾಶಿಯವರು, ವೃತ್ತಿಜೀವನದಲ್ಲಿ ಜಾಗರೂಕರಾಗಿರಬೇಕು. ಈಗಿರುವ ಕೆಲಸದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಆದ್ದರಿಂದ ನೀವು ನಿಮ್ಮ ಪ್ರಸ್ತುತ ಕೆಲಸವನ್ನು ತೊರೆಯಬೇಕಾದ ಸ್ಥಿತಿ ಬರಬಹುದು. ಸ್ವಲ್ಪ ಸಮಯದವರೆಗೆ ನಿರುದ್ಯೋಗಿಯಾಗಿ ಕುಳಿತುಕೊಳ್ಳಬೇಕಾಗಬಹುದು ಆದ್ದರಿಂದ ಜಾಗರೂಕರಾಗಿರಿ. ನಿಮ್ಮ ಕೆಲಸವನ್ನು ಬಿಡಬೇಡಿ ಮತ್ತು ನಿಮ್ಮ ಕೆಲಸವನ್ನು ಉತ್ತಮಗೊಳಿಸಲು ನಿಮ್ಮ ಕೈಲಾದಷ್ಟು ಪ್ರಯತ್ನಿಸಿ. ಏಪ್ರಿಲ್‌ನಲ್ಲಿ ನೀವು ನಿಮ್ಮ ಕೆಲಸವನ್ನು ಕಳೆದುಕೊಳ್ಳುವ ಪರಿಸ್ಥಿತಿ ಇರಬಹುದು ಆದರೆ ನೀವು ಇನ್ನೊಂದು ಉದ್ಯೋಗವನ್ನು ಪಡೆಯುತ್ತೀರಿ. ಮೇ ಮತ್ತು ನವೆಂಬರ್‌ ತಿಂಗಳಲ್ಲಿ ನೀವು ಉತ್ತಮ ಸ್ಥಳಕ್ಕೆ ವರ್ಗಾವಣೆಯಾಗಬಹುದು.

ಮಕರ: ಶಿಕ್ಷಣ ಜಾತಕ 2023

ಮಕರ: ಶಿಕ್ಷಣ ಜಾತಕ 2023

ಮಕರ ರಾಶಿಯವರ ಶಿಕ್ಷಣ ಜಾತಕದ ಪ್ರಕಾರ, 2023 ರಲ್ಲಿ ಮಕರ ರಾಶಿಯ ವಿದ್ಯಾರ್ಥಿಗಳಿಗೆ ವರ್ಷದ ಆರಂಭದ ಸಮಯವನ್ನು ಉತ್ತಮವಾಗಿ ಬಳಿಸಿಕೊಳ್ಳಬೇಕಾಗುತ್ತದೆ. ಈ ಸಮಯದಲ್ಲಿ ನಿಮಗೆ ಅಧ್ಯಯನದಲ್ಲಿ ಏಕಾಗ್ರತೆಯ ಕೊರತೆ ಉಂಟಾಗಬಹುದು. ನೀವು ಅಧ್ಯಯನಕ್ಕೆ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುವಲ್ಲಿ ತೊಂದರೆಯನ್ನು ಎದುರಿಸಬೇಕಾಗುತ್ತದೆ.ಆದರೆ ಫೆಬ್ರವರಿಯಿಂದ ಏಪ್ರಿಲ್ ಆಗಸ್ಟ್ ಮತ್ತು ನವೆಂಬರ್ ನಡುವಿನ ಸಮಯವು ತುಂಬಾ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಗಳಿವೆ.

ಮಕರ ರಾಶಿಯವರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎದುರಿಸುತ್ತಿದ್ದರೆ, ಜನವರಿ, ಫೆಬ್ರವರಿ, ಜೂನ್ ಮತ್ತು ಅಕ್ಟೋಬರ್‌ನಲ್ಲಿ 4 ತಿಂಗಳುಗಳು ಯಶಸ್ಸಿಗೆ ಉತ್ತಮ ಅವಕಾಶವನ್ನು ತರುತ್ತವೆ. ಆದ್ದರಿಂದ ನೀವು ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ಇರಬೇಕು. ಉನ್ನತ ವ್ಯಾಸಂಗಕ್ಕಾಗಿ ಯೋಜಿಸುತ್ತಿರುವವರಿಗೆ ವರ್ಷವು ಉತ್ತಮವಾಗಿದೆ.

ಮಕರ: ಆರ್ಥಿಕ ಜಾತಕ 2023

ಮಕರ: ಆರ್ಥಿಕ ಜಾತಕ 2023

ಮಕರ ರಾಶಿಯವರ ಆರ್ಥಿಕ ಜಾತಕದ ಪ್ರಕಾರ, 2023 ರಲ್ಲಿ ಮಕರ ರಾಶಿಯವರು, ಆರ್ಥಿಕವಾಗಿ ಖರ್ಚುಗಳನ್ನು ನಿರ್ವಹಿಸಬೇಕಾಗುತ್ತದೆ. ವರ್ಷದ ಆರಂಭದಲ್ಲಿ ನೀವು ಹಣಕಾಸಿನ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದರೆ, ನೀವು ಯಶಸ್ವಿಯಾಗುತ್ತೀರಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅದು ಪರಿಣಾಮ ಬೀರುತ್ತದೆ. ನಿಮ್ಮ ಕೆಲಸದಲ್ಲಿ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಏರಿಳಿತದ ನಡುವೆ ನೀವು ಅತ್ಯುತ್ತಮ ಯಶಸ್ಸನ್ನು ಪಡೆಯುತ್ತೀರಿ. ಆದರೆ ಈ ವರ್ಷ ಮಕರ ರಾಶಿಯವರು ಆರ್ಥಿಕ ಅಸಮತೋಲನದ ಬಗ್ಗೆ ವಿಶೇಷ ಗಮನ ಹರಿಸುವುದು ಉತ್ತಮ.

ಮಕರ: ಕುಟುಂಬ ಜಾತಕ 2023

ಮಕರ: ಕುಟುಂಬ ಜಾತಕ 2023

ಮಕರ ರಾಶಿಯವರ ಕುಟುಂಬ ಜಾತಕದ ಪ್ರಕಾರ, 2023 ರಲ್ಲಿ ಮಕರ ರಾಶಿಯವರು ಕುಟುಂಬ ಜೀವನದಲ್ಲಿ ಒತ್ತಡವನ್ನು ಅನುಭವಿಸಬಹುದು ಏಕೆಂದರೆ. ವರ್ಷದ ಆರಂಭದಲ್ಲಿ ಕುಟುಂಬದಲ್ಲಿ ಮನಸ್ತಾಪ ಮೂಡಬಹುದು. ಜನವರಿ 17ರ ನಂತರ ಕುಟುಂಬದಲ್ಲಿ ಘರ್ಷಣೆಗಳು ಉಂಟಾಗಬಹು ಆದರೆ ನಿಮ್ಮ ತಿಳುವಳಿಕೆಯಿಂದ ಈ ಸಮಸ್ಯೆಯನ್ನು ಬಗೆಹರಿಸಲು ನಿಮಗೆ ಸಾಧ್ಯವಾಗುತ್ತದೆ. ಏಪ್ರಿಲ್ 22ರ ಬಳಿಕವೂ ನಿಮ್ಮ ಕುಟುಂಬ ಜೀವನದಲ್ಲಿ ಹೆಚ್ಚು ಒತ್ತಡ ಉಂಟಾಗಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಈ ವೇಳೆ ಒಡ ಹುಟ್ಟಿದವರು ನಿಮ್ಮ ಸಹಾಯಕ್ಕೆ ನಿಲ್ಲುತ್ತಾರೆ. ಈ ಸಮಯದಲ್ಲಿ ನೀವು ನಿಮ್ಮ ತಂದೆಯೊಂದಿಗಿನ ನಿಮ್ಮ ಸಂಬಂಧಕ್ಕೆ ಗಮನ ಕೊಡಿ. ಅವರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ.

ಮಕರ: ಮಕ್ಕಳ ಜಾತಕ 2023

ಮಕರ: ಮಕ್ಕಳ ಜಾತಕ 2023

ಮಕರ ರಾಶಿಯವರ ಮಕ್ಕಳ ಜಾತಕದ ಪ್ರಕಾರ, 2023 ರಲ್ಲಿ ಮಕರ ರಾಶಿಯವರ ಮಕ್ಕಳಿಗೆ ವರ್ಷದ ಆರಂಭವು ತುಂಬಾ ಅನುಕೂಲಕರವಾಗಿರುತ್ತದೆ. ಫೆಬ್ರವರಿಯಿಂದ ಏಪ್ರಿಲ್-ಮೇ ವರೆಗಿನ ಪರಿಸ್ಥಿತಿಯು ನಿಮಗೆ ಅನುಕೂಲಕರವಾಗಿರುತ್ತದೆ. ಮಕ್ಕಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ವರ್ಷ ನಿಮ್ಮ ಮಗ ಅಥವಾ ಮಗಳು ತನ್ನ ಅಧ್ಯಯನದಲ್ಲಿ ಅಥವಾ ವಿದೇಶಕ್ಕೆ ತೆರಳುವ ಯೋಜನೆಯಲ್ಲಿ ಯಶಸ್ಸನ್ನು ಪಡೆಯಬಹುದು. ಆದ್ದರಿಂದ ಮಕ್ಕಳ ವಿಚಾರದಲ್ಲಿ ನೀವು ಸಂತೋಷವಾಗಿರುತ್ತೀರಿ. ಆದರೆ ಅವರು ನಿಮ್ಮನ್ನು ಬಿಟ್ಟು ದೂರಹೋಗುವುದರಿಂದ ಸ್ವಲ್ಪ ನೋವು ಇರುತ್ತದೆ. ಅವರ ಅವರ ಯಶಸ್ಸು ನಿಮಗೆ ಹೆಮ್ಮೆ ಪಡುವಂತೆ ಮಾಡುತ್ತದೆ.

ಮಕರ: ವಿವಾಹ ಜಾತಕ 2023

ಮಕರ: ವಿವಾಹ ಜಾತಕ 2023

ಮಕರ ರಾಶಿಯವರ ವಿವಾಹ ಜಾತಕದ ಪ್ರಕಾರ, 2023 ರಲ್ಲಿ ಮಕರ ರಾಶಿಯವರಿಗೆ ವಿವಾಹದಲ್ಲಿ ಅನುಕೂಲಕರವಾಗಿರುತ್ತದೆ. ವರ್ಷದ ಆರಂಭದಲ್ಲಿ ವಿವಾಹಿತರಲ್ಲಿ ಪ್ರೀತಿ ಹೆಚ್ಚಿರುತ್ತದೆ. ಜೀವನ ಮತ್ತು ಪರಸ್ಪರ ಜವಾಬ್ದಾರಿ ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ಈ ವರ್ಷ ನಿಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಸಂಭವಿಸುವ ಸಾಧ್ಯತೆಗಳು ಕಡಿಮೆ ಇರುತ್ತದೆ. ಮತ್ತು ನೀವು ದಾಂಪತ್ಯ ಜೀವನವನ್ನು ಉತ್ತಮವಾಗಿ ಕಳೆಯಬಹುದು. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಕೆಲವು ಶುಭ ಕಾರ್ಯಗಳು ಪೂರ್ಣಗೊಳ್ಳುತ್ತದೆ.

ಈ ವರ್ಷ ಮೇ ಮತ್ತು ಜೂನ್ ಸಮಯದಲ್ಲಿ ವೈವಾಹಿಕ ಜೀವನದಲ್ಲಿ ಜಾಗರೂಕರಾಗಿರಬೇಕು. ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಜಗಳವಾಡುವ ಪರಿಸ್ಥಿತಿ ಉಂಟಾಗಬಹುದು. ಅತ್ತೆಯೊಂದಿಗಿನ ಸಂಬಂಧದಲ್ಲಿ ಬಿರುಕು ಬೀಳುವ ಸಾಧ್ಯತೆಗಳಿವೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ನಿಮ್ಮ ಸಮಸ್ಯೆಗಳು ಕಡಿಮೆಯಾಗುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ.

ಮಕರ: ವ್ಯವಹಾರ ಜಾತಕ 2023

ಮಕರ: ವ್ಯವಹಾರ ಜಾತಕ 2023

ಮಕರ ರಾಶಿಯವರ ವ್ಯವಹಾರ ಜಾತಕದ ಪ್ರಕಾರ, 2023 ರಲ್ಲಿ ಮಕರ ರಾಶಿಯವರು ವ್ಯವಹಾರ ವಿಚಾರದಲ್ಲಿ ಯಶಸ್ಸು ಪಡೆಯಬಹುದು. ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಬಯಸಿದರೆ ಈ ವರ್ಷ ಖಂಡಿತವಾಗಿಯೂ ಉತ್ತಮವಾಗಿರುತ್ತದೆ. ಮೇ ಮತ್ತು ಜುಲೈ ನಡುವೆ ಕೆಲವು ಸಮಸ್ಯೆಗಳಿರುತ್ತವೆ. ಈ ಸಮಯದಲ್ಲಿ ನೀವು ಯಾವುದೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಆ ಕೆಲಸಗಳನ್ನು ಮಂದೂಡಿದರೆ ಉತ್ತಮ. ಏಕೆಂದರೆ ಈ ಸಮಯದಲ್ಲಿ ನೀವು ಮಾಡುವ ಕೆಲಸವು ನಿಮಗೆ ನಷ್ಟ ಉಂಟು ಮಾಡುತ್ತದೆ. ಆದರೆ ವರ್ಷದ ಆರಂಭವು ವ್ಯವಹಾರ ದೃಷ್ಟಿಯಲ್ಲಿ ಉತ್ತಮವಾಗಿರುತ್ತದೆ.

ಜನವರಿ ಮತ್ತು ಗುರುವಿನ ಸಂಕ್ರಮಣದ ನಂತರ ನಿಮ್ಮ ವ್ಯವಹಾರ ಹೊಸ ದಿಕ್ಕಿನಲ್ಲಿ ಸಾಗುತ್ತದೆ. ಈ ವೇಳೆ ನಿಮ್ಮ ವ್ಯವಹಾರವು ಪ್ರಗತಿಯಾಗುತ್ತದೆ. ವಹಾರದಲ್ಲಿ ಕೆಲವು ಹೊಸ ಬದಲಾವಣೆಗಳು ಸಂಭವಿಸಬಹುದು. ಅಕ್ಟೋಬರ್‌ನಿಂದ ಡಿಸೆಂಬರ್ ಮಧ್ಯದಲ್ಲಿ ನಿಮಗೆ ವ್ಯವಹಾರದಲ್ಲಿ ಯಶಸ್ಸು ಸಿಗುವ ಸಾಧ್ಯತೆಗಳು ಹೆಚ್ಚಿದೆ. ವಿದೇಶಿ ಮೂಲಗಳೊಂದಿಗೆ ಕೆಲಸ ಮಾಡುವ ಅವಕಾಶವನ್ನು ಸಹ ನೀವು ಪಡೆಯುತ್ತೀರಿ. ವರ್ಷದ ಕೊನೆಯ ಮೂರು ತಿಂಗಳು ವ್ಯವಹಾರಕ್ಕೆ ಉತ್ತಮವಾಗಿರುತ್ತದೆ.

ಮಕರ: ವಾಹನ ಮತ್ತು ಆಸ್ತಿ ಜಾತಕ 2023

ಮಕರ: ವಾಹನ ಮತ್ತು ಆಸ್ತಿ ಜಾತಕ 2023

ಮಕರ ರಾಶಿಯವರ ವಾಹನ ಮತ್ತು ಆಸ್ತಿ ಜಾತಕದ ಪ್ರಕಾರ, 2023 ರಲ್ಲಿ ಮಕರ ರಾಶಿಯವರು ಈ ವರ್ಷ ನೂತನ ವಾಹನವನ್ನು ಖರೀದಿಸಬಹುದು. ಫೆಬ್ರವರಿಯಿಂದ ಮಾರ್ಚ್ ನಡುವಿನ ಸಮಯವು ನಿಮಗೆ ವಾಹನವನ್ನು ಖರೀದಿಸಲು ಅನುಕೂಲಕರವಾಗಿರುತ್ತದೆ. ಏಪ್ರಿಲ್ ನಿಂದ ಮೇ ತಿಂಗಳಿನಲ್ಲಿ ಅದೇ ಸಾಧ್ಯತೆ ಇರುತ್ತದೆ. ಆದರೆ ನಂತರದ ಸಮಯದಲ್ಲಿ ನೀವು ವಾಹನವನ್ನು ಖರೀದಿಸಲು ಸ್ವಲ್ಪ ಸಮಯ ಕಾಯಬೇಕು. ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ನೀವು ವಾಹನವನ್ನು ಖರೀದಿಸುವುದರಿಂದ ತುಂಬಾ ಪ್ರಯೋಜನಕಾರಿಯಾಗಲಿದೆ. ನಿರ್ಧಿಷ್ಟವಾಗಿ ಹೇಳಬೇಕೆಂದರೆ ಮಕರ ರಾಶಿಯವರಿಗೆ ಕೊನೆಯ 2 ತಿಂಗಳುಗಳು ವಾಹನವನ್ನು ಖರೀದಿಸಲು ಹೆಚ್ಚು ಅನುಕೂಲಕರವಾಗಿರುತ್ತದೆ.

ಮಕರ ರಾಶಿಯವರು 2023 ರಲ್ಲಿ ಆಸ್ತಿ ವಿಚಾರದಲ್ಲೂ ಲಾಭ ಪಡೆಯುತ್ತಾರೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಆಸ್ತಿ ವಿಚಾರದಲ್ಲಿ ಗೊಂದಲಗಳನ್ನು ತಪ್ಪಿಸಿ. ಇದರಿಂದ ವಿವಾದ ಉಂಟಾಗಬಹುದು. ಅಕ್ಟೋಬರ್ ನಂತರ ನವೆಂಬರ್ ಮತ್ತು ಡಿಸೆಂಬರ್ ನಿಮಗೆ ಆಸ್ತಿ ಖರೀದಿಸಲು ಉತ್ತಮ ಸಮಯವಾಗಿರುತ್ತದೆ.

ಮಕರ: ಸಂಪತ್ತು ಮತ್ತು ಲಾಭ ಜಾತಕ 2023

ಮಕರ: ಸಂಪತ್ತು ಮತ್ತು ಲಾಭ ಜಾತಕ 2023

ಮಕರ ರಾಶಿಯವರ ಸಂಪತ್ತು ಮತ್ತು ಲಾಭ ಜಾತಕದ ಪ್ರಕಾರ, 2023 ಮಕರ ರಾಶಿಯವರಿಗೆ, ಹಣ ಮತ್ತು ಲಾಭದ ಸ್ಥಿತಿಯು ಏರಿಳಿತಗಳಿಂದ ಕೂಡಿರುತ್ತದೆ. ನಿಮ್ಮ ಖರ್ಚುಗಳಲ್ಲಿ ಹೆಚ್ಚಾಗಬಹುದು. ಇದು ನಿಮ್ಮ ಹಣಕಾಸಿನ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಈ ವರ್ಷ ನೀವು ಕೆಲವು ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ ಕುಟುಂಬದಲ್ಲಿ ಸಾಮರಸ್ಯ ಇರುವುದಿಲ್ಲ. ಈ ಎಲ್ಲಾ ಕಾರಣಗಳಿಂದ ಪೋಷಕರ ಆರೋಗ್ಯವು ಹದಗೆಡಬಹುದು. ಅವರಿಗಾಗಿ ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ ಈ ವೆಚ್ಚಗಳು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಸ್ವಲ್ಪ ಪರಿಣಾಮ ಬೀರುತ್ತವೆ. ಇದರ ಹೊರತಾಗಿಯೂ ನೀವು ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಲಾಭದ ವಿಚಾರದಲ್ಲಿ ಸಮಯ ಉತ್ತಮವಾಗಿರುತ್ತದೆ. ಮಾರ್ಚ್ ಮತ್ತು ಜೂನ್ ತಿಂಗಳುಗಳಲ್ಲಿ ಸರ್ಕಾರಿ ವಲಯದಿಂದ ಪ್ರಯೋಜನಗಳನ್ನು ಪಡೆಯಬಹುದು. ಅಕ್ಟೋಬರ್ ಮತ್ತು ನವೆಂಬರ್ ಸಹ ಹೆಚ್ಚು ಲಾಭದಾಯವಾಗಿರುತ್ತದೆ.

ಮಕರ : ಆರೋಗ್ಯ ಜಾತಕ 2023

ಮಕರ : ಆರೋಗ್ಯ ಜಾತಕ 2023

ಮಕರ ರಾಶಿಯವರ ಆರೋಗ್ಯ ಜಾತಕದ ಪ್ರಕಾರ, 2023ರಲ್ಲಿ ಮಕರ ರಾಶಿಯವರು, ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಹೃದಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯು ನಿಮಗೆ ತೊಂದರೆ ನೀಡಬಹುದು. ಎದೆಗೆ ಸಂಬಂಧಿಸಿದ ಸಮಸ್ಯೆಗಳಾದ ಎದೆಯ ಬಿಗಿತ, ಎದೆ ಉರಿ, ಶ್ವಾಸಕೋಶದ ಸೋಂಕು ಕಾಣಿಸಿಕೊಳ್ಳಬಹುದು. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಹಾಗಂದ ಮಾತ್ರಕ್ಕೆ ವರ್ಷವಿಡೀ ನೀವು ಅನಾರೋಗ್ಯದಿಂದ ಬಳಲುತ್ತಿದ್ದೀರಿ ಎಂದಲ್ಲ. ಈ ರೀತಿಯ ಸಮಸ್ಯೆಗಳು ಸಂಭವಿಸುವ ಸಾಧ್ಯತೆಯಿದೆ. ಆರೋಗ್ಯ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಆಹಾರ ಕ್ರಮವನ್ನು ಸುಧಾರಿಸಿ, ವ್ಯಾಯಾಮ ಮಾಡಿ. ಏಕೆಂದರೆ ಇದು ನಿಮಗೆ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.

ಮಕರ: ಅದೃಷ್ಟ ಜಾತಕ 2023

ಮಕರ: ಅದೃಷ್ಟ ಜಾತಕ 2023

ಮಕರ ರಾಶಿಯವರ ಅದೃಷ್ಟ ಜಾತಕದ ಪ್ರಕಾರ, 2023ರಲ್ಲಿ ಮಕರ ರಾಶಿಯವರ ಅದೃಷ್ಟ ಸಂಖ್ಯೆಗಳು 4 ಮತ್ತು 8 ಎಂದು ಪರಿಗಣಿಸಲಾಗುತ್ತದೆ. 2023 ಮಕರ ರಾಶಿಯವರಿಗೆ ಫಲಪ್ರದವಾಗಲಿದೆ. ಜೀವನದಲ್ಲಿ ಬರುವ ಸಮಸ್ಯೆಗಳನ್ನು ತೊಡೆದುಹಾಕಲು ನೀವು ಕೆಲವು ವಿಶೇಷ ಪರಿಹಾರಗಳನ್ನು ತೆಗೆದುಕೊಳ್ಳಬೇಕು. ಈ ವರ್ಷ ನಿಮ್ಮ ಹಣಕಾಸಿನ ಏರಿಳಿತದ ಸಂದರ್ಭಗಳು ಇರುತ್ತವೆ. ಆದರೆ ನಿಮ್ಮ ಎಲ್ಲಾ ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ. ಇದರಿಂದ ನೀವು ಸಮಾಧಾನವಾಗಿರುತ್ತೀರಿ. ನಿಮ್ಮ ಕುಟುಂಬದ ವಿಷಯಗಳ ಬಗ್ಗೆ ನೀವು ಹೆಚ್ಚಿನ ಗಮನ ಹರಿಸಬೇಕು. ಏಕೆಂದರೆ ಕೆಲವೊಮ್ಮೆ ಪರಿಸ್ಥಿತಿಗಳು ಹದಗೆಡಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+