2023 Meena Rashi Bhavishya : 2023ರಲ್ಲಿ ಮೀನ ರಾಶಿ ಭವಿಷ್ಯ ಹೇಗಿರಲಿದೆ?
2023 ಹೊಸ ವರ್ಷದ ಆಗಮನಕ್ಕೆ ದಿನಗಣನೆ ಆರಂಭವಾಗಿದ್ದು, ಜನರು ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸುವ ಸಿದ್ಧತೆಯಲ್ಲಿದ್ದಾರೆ. ಹೊಸ ವರ್ಷದ ನಿರೀಕ್ಷೆಯಲ್ಲಿರುವ ಮೀನ ರಾಶಿಯವರಿಗೆ ಮುಂದಿನ ವರ್ಷ ವ್ಯವಹಾರ, ಶಿಕ್ಷಣ ಹಾಗೂ ವೈಯಕ್ತಿಕ ಜೀವನ ಹೇಗಿರಲಿದೆ ಎನ್ನುವ ಕುತೂಹಲವಿರಬಹುದು. ಮೀನ ರಾಶಿಯವರು 2023ರಲ್ಲಿ ವಾಹನ ಖರೀದಿ ವಿಚಾರದಲ್ಲಿ ಎಚ್ಚರವಹಿಸಬೇಕು.
ಆರೋಗ್ಯ, ಸಂಬಂಧ, ಕುಟುಂಬ ಸೇರಿದಂತೆ ಮುಂದಿನ ವರ್ಷ ಪ್ರೇಮ ಜೀವನ, ಆರ್ಥಿಕ ಜೀವನ, ವೈಯಕ್ತಿಕ, ವ್ಯಾಪಾರ, ವಿವಾಹ, ಆಸ್ತಿ, ಸಂಪತ್ತು ಜಾತಕ ಹೇಗಿರಲಿದೆ ಎನ್ನುವ ಪ್ರಶ್ನೆ ಕಾಡುತ್ತಿರಬಹುದು. ಹಾಗಾದರೆ ಮುಂದಿನ ವರ್ಷ ಮೀನ ರಾಶಿ ಭವಿಷ್ಯ ಹೇಗಿರಲಿದೆ..? ಎನ್ನುವುದನ್ನು ವಿಸ್ತಾರವಾಗಿ ತಿಳಿಯೋಣ.

ಮೀನ: ಪ್ರೀತಿ ಜಾತಕ 2023
ಮೀನ ರಾಶಿಯವರ ಪ್ರೀತಿಯ ಜಾತಕದ ಪ್ರಕಾರ, 2023 ಮೀನ ರಾಶಿಯವರು ವರ್ಷದ ಆರಂಭದಲ್ಲಿ ತಮ್ಮ ಪ್ರೇಮ ಸಂಬಂಧಗಳಲ್ಲಿ ಹೊಂದಾಣಿಕೆ ಕಾಣಲಿದ್ದಾರೆ. ನೀವು ಮತ್ತು ನಿಮ್ಮ ಪ್ರೀತಿ ಪಾತ್ರರ ನಡುವಿನ ನಂಬಿಕೆ ಹೆಚ್ಚಾಗುತ್ತದೆ. ಈ ವರ್ಷ ಸಂಬಂಧದಲ್ಲಿ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳಲು ನೀವು ನಿಮ್ಮ ಕೈಲಾದಷ್ಟು ಪ್ರಯತ್ನಿಸುತ್ತೀರಿ. ಈಗಿರುವ ನಿಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡಲು ಹೋಗಲು ಪ್ರಯತ್ನಿಸುತ್ತೀರಿ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಅವರನ್ನೇ ಮದುವೆಯಾಗಲು ಬಯಸಿದರೆ ವರ್ಷದ ಆರಂಭವು ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಪ್ರೇಮ ವಿವಾಹ ಕೂಡ ಸಂಭವಿಸುಬಹುದು.

ಮೀನ: ಉದ್ಯೋಗ ಜಾತಕ 2023
ಮೀನ ರಾಶಿಯವರ ಉದ್ಯೋಗ ಜಾತಕದ ಪ್ರಕಾರ, 2023 ರಲ್ಲಿ ಮೀನ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ವರ್ಷದ ಆರಂಭವು ಉದ್ಯೋಗದಲ್ಲಿ ಅನುಕೂಲಕರವಾಗಿರುತ್ತದೆ. ಸದ ಕ್ಷೇತ್ರದಲ್ಲಿ ನೀವು ಮೆಚ್ಚುಗೆಯನ್ನು ಪಡೆಯುತ್ತೀರಿ. ಉದ್ಯೋಗ ಕ್ಷೇತ್ರದಲ್ಲಿ ಜನವರಿ ತುಂಬಾ ಅನುಕೂಲಕರವಾಗಿರುತ್ತದೆ.
ಮೇನಿಂದ ಜುಲೈ ತಿಂಗಳ ನಡುವೆ ಉದ್ಯೋಗದಲ್ಲಿ ನಷ್ಟ ಅಥವಾ ಉದ್ಯೋಗ ಬದಲಾವಣೆಯ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ನೀವು ಜಾಗರೂಕರಾಗಿರಬೇಕು. ಸೆಪ್ಟೆಂಬರ್‌ನಿಂದ ಡಿಸೆಂಬರ್ ನಡುವಿನ ಸಮಯದಲ್ಲಿ ನೀವು ವರ್ಗಾವಣೆಯಾಗಬಹುದು. ಅಥವಾ ಬೇರೆ ಕೆಲಸವನ್ನು ಪಡೆಯಬಹುದು. ಉದ್ಯೋಗದಲ್ಲಿ ನಿಮಗಿರುವ ವಿಶ್ವಾಸದಿಂದ ನೀವು ವಿದೇಶಕ್ಕೆ ಹೋಗುವ ಸಾಧ್ಯತೆಯೂ ಇರುತ್ತದೆ.

ಮೀನ: ಶಿಕ್ಷಣ ಜಾತಕ 2023
ಮೀನ ರಾಶಿಯವರ ಶಿಕ್ಷಣ ಜಾತಕದ ಪ್ರಕಾರ, 2023 ರಲ್ಲಿ ಮೀನ ರಾಶಿಯ ವಿದ್ಯಾರ್ಥಿಗಳಿಗೆ ಸಮಯ ಉತ್ತಮವಾಗಿರುತ್ತದೆ. ಅಧ್ಯಯನದ ಬಗೆಗಿನ ನಿಮ್ಮ ನಿಮ್ಮ ಏಕಾಗ್ರತೆ ಹೆಚ್ಚುತ್ತದೆ. ಇದರಿಂದ ನೀವು ಒಂದಕ್ಕಿಂತ ಹೆಚ್ಚು ವಿಷಯಗಳಲ್ಲಿ ಪ್ರವೀಣರಾಗುತ್ತೀರಿ. ನೀವು ಶಿಕ್ಷಣದ ಜೊತೆಗೆ ಪ್ರಚಲಿತ ವಿದ್ಯಮಾನಗಳ ಮೇಲೆ ಉತ್ತಮ ಹಿಡಿತವನ್ನು ಹೊಂದಲು ಸಾಧ್ಯವಾಗುತ್ತದೆ. ಏಪ್ರಿಲ್‌ನಿಂದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳವರೆಗೆ ಕುಟುಂಬದ ವಾತಾವರಣವು ಹದಗೆಡುತ್ತದೆ. ಇದು ನಿಮ್ಮ ಶಿಕ್ಷಣದ ಮೇಲೆಯೂ ಪರಿಣಾಮ ಬೀರುತ್ತದೆ. ಆದ್ದರಿಂದ ನೀವು ಈ ಸಮಯದಲ್ಲಿ ವಿಶೇಷವಾಗಿ ಅಧ್ಯಯನದ ಮೇಲೆ ಗಮನ ಹರಿಸಬೇಕು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ವರ್ಷದ ಮೊದಲ ಮೂರು ತಿಂಗಳು ಮತ್ತು ಕೊನೆಯ ಮೂರು ತಿಂಗಳು ಉತ್ತಮ ಫಲಿತಾಂಶ ಸಿಗುತ್ತದೆ. ಉಳಿದ ಸಮಯದಲ್ಲಿ ಅವರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಈ ವರ್ಷ ತುಂಬಾ ಅನುಕೂಲಕರವಾಗಿರುತ್ತದೆ. ವರ್ಷದ ಆರಂಭದಿಂದ ನಿಮ್ಮ ಶಿಕ್ಷಣದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳ ಆಸೆ ಈಡೇರುತ್ತದೆ.

ಮೀನ: ಆರ್ಥಿಕ ಜಾತಕ 2023
ಮೀನ ರಾಶಿಯವರ ಆರ್ಥಿಕ ಜಾತಕದ ಪ್ರಕಾರ, 2023 ರಲ್ಲಿ ಮೀನ ರಾಶಿಯವರು ಹಣಕಾಸಿನ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಮೀನ ರಾಶಿಯವರು ವರ್ಷದ ಆರಂಭದಲ್ಲಿ ನಿಮಗೆ ರ್ಥಿಕ ಸಮತೋಲನವು ತುಂಬಾ ಅನುಕೂಲಕರವಾಗಿರುತ್ತದೆ. ಬಳಿಕ ಪರಿಸ್ಥಿತಿ ಬದಲಾಗುತ್ತದೆ. ನಂತರ ವೆಚ್ಚಗಳು ಹೆಚ್ಚಾಗಬಹುದು. ಈ ವೇಳೆ ನೀವೇ ಹಣಕಾಸಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ಉತ್ತಮ. ಅವಶ್ಯಕ ವೆಚ್ಚಗಳನ್ನಷ್ಟೇ ಮಾಡುವುದು ಉತ್ತಮ. ಏಪ್ರಿಲ್ ಅಂತ್ಯದಿಂದ ಆಗಸ್ಟ್‌ವರೆಗೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಪರಿಸ್ಥಿತಿ ನಿಮ್ಮ ನಿರೀಕ್ಷೆಯಂತೆ ಅನುಕೂಲಕರವಾಗಿರುತ್ತದೆ.

ಮೀನ: ಕುಟುಂಬ ಜಾತಕ 2023
ಮೀನ ರಾಶಿಯವರ ಕುಟುಂಬ ಜಾತಕದ ಪ್ರಕಾರ, 2023 ರಲ್ಲಿ ಮೀನ ರಾಶಿಯವರು ವರ್ಷದ ಆರಂಭವನ್ನು ಕುಟುಂಬ ಜೊತೆಗಿನ ಸಮಯವನ್ನು ಸಂತೋಷದಿಂದ ಆನಂದಿಸುತ್ತಾರೆ. ಬಳಿಕ ಕುಟುಂಬದ ಸದಸ್ಯರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಇದರಿಂದ ಕುಟುಂಬದಲ್ಲಿ ಮನಸ್ತಾಪ ಉಂಟಾಗಬಹುದು. ಏಪ್ರಿಲ್ 22ರ ಬಳಿಕ ಕುಟುಂಬದಲ್ಲಿ ಸಮಸ್ಯೆಗಳನ್ನು ಉಂಟಾಗಬಹುದು. ಕುಟುಂಬ ಸದಸ್ಯರ ನಡುವೆ ಪರಸ್ಪರ ತಿಳುವಳಿಕೆ ಸಮಯ ತೆಗೆದುಕೊಳ್ಳುತ್ತದೆ. ನೀವು ಶಾಂತವಾಗಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಬೇಕು. ಅಕ್ಟೋಬರ್ 30ರ ನಂತರ ಕುಟುಂಬ ಸಮಸ್ಯೆಯಿಂದ ನೀವು ಮುಕ್ತರಾಗುತ್ತೀರಿ.

ಮೀನ: ಮಕ್ಕಳ ಜಾತಕ 2023
ಮೀನ ರಾಶಿಯವರ ಮಕ್ಕಳ ಜಾತಕದ ಪ್ರಕಾರ, 2023 ಮೀನ ರಾಶಿಯವರ ಮಕ್ಕಳಿಗೆ ಅನುಕೂಲಕರವಾಗಿರುತ್ತದೆ. ನಿಮ್ಮ ರಾಶಿಯಲ್ಲಿ ಶನಿ ಮತ್ತು ಶುಕ್ರನ ಸಂಯೋಜಿತ ಪರಿಣಾಮ ನಿಮ್ಮ ಮಗುವಿನ ಬುದ್ಧಿಶಕ್ತಿ ಹೆಚ್ಚುತ್ತದೆ. ಅಧ್ಯಯನದಲ್ಲಿ ಬುದ್ಧಿವಂತರಾಗುತ್ತಾರೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ, ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ಮಗುವಿನ ಯಶಸ್ಸನ್ನು ನೋಡುವ ಮೂಲಕ ಸಂತೋಷವನ್ನು ಪಡೆಯುತ್ತೀರಿ. ಏಪ್ರಿಲ್ 22ರ ನಂತರ ನಿಮ್ಮ ಮಕ್ಕಳ ಬಗ್ಗೆ ಗಮನ ಹರಿಸಬೇಕು. ಮಗುವಿನ ಆರೋಗ್ಯದಲ್ಲಿ ಹಾಗೂ ನಡವಳಿಕೆಯಲ್ಲಿ ಬದಲಾವಣೆಗಳು ಕಂಡುಬರುತ್ತದೆ. ನಿಮ್ಮ ಮಕ್ಕಳು ಉತ್ತಮ ವಿಚಾರದತ್ತ ತೊಡಗಿಸಿಕೊಳ್ಳವ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಮಕ್ಕಳ ಮೇಲಿನ ಕೆಟ್ಟ ಪರಿಸ್ಥಿತಿಗಳು ಸೆಪ್ಟೆಂಬರ್‌ನಿಂದ ಉತ್ತಮಗೊಳ್ಳುತ್ತದೆ. ವರ್ಷಾಂತ್ಯದಲ್ಲಿ ಮಕ್ಕಳ ವಿಚಾರದಲ್ಲಿ ಸಂತೋಷವನ್ನು ಪಡೆಯುತ್ತೀರಿ.

ಮೀನ: ವಿವಾಹ ಜಾತಕ 2023
ಮೀನ ರಾಶಿಯವರ ವಿವಾಹ ಜಾತಕದ ಪ್ರಕಾರ, 2023 ರಲ್ಲಿ ಮೀನ ರಾಶಿಯವರಿಗೆ ವರ್ಷದ ಆರಂಭದಲ್ಲಿ ಫಲಪ್ರದವಾದ ವೈವಾಹಿಕ ಜೀವನದ ಸಾಧ್ಯತೆಯಿದೆ. ಗುರು ಕೃಪೆಯಿಂದ ವೈವಾಹಿಕ ಜೀವನ ಸುಂದರವಾಗಿರುತ್ತದೆ. ನಿಮ್ಮ ಮತ್ತು ನಿಮ್ಮ ಸಂಗಾತಿ ನಡುವೆ ಪರಸ್ಪ ಪ್ರೀತಿ ಮತ್ತು ಉತ್ತಮ ತಿಳುವಳಿಕೆ ಇರುತ್ತದೆ. ಪರಸ್ಪರ ಅರ್ಥಮಾಡಿಕೊಳ್ಳುವ ಇಚ್ಛಾಶಕ್ತಿಯೂ ಹೆಚ್ಚಿರುತ್ತದೆ. ನಿಮ್ಮ ನಡುವಿನ ಸಮಸ್ಯೆಗಳನ್ನು ಯಾವಾಗಲೂ ಬಗೆಹರಿಸಿಕೊಳ್ಳುತ್ತೀರಿ ಇದರಿಂದ ನಿಮ್ಮ ಸಂಬಂಧ ಮತ್ತಷ್ಟು ಬಲಿಷ್ಠವಾಗುತ್ತದೆ.
ಜುಲೈನಿಂದ ಅಕ್ಟೋಬರ್ ತಿಂಗಳ ನಡುವೆ ಕೆಲವು ಸಮಸ್ಯೆಗಳಿವೆ ತಿಳುವಳಿಕೆ ಕೊರತೆಯಿಂದ ಬಿರುಕು ಉಂಟಾಗಬಹುದು. ನೀವು ಅದನ್ನು ಪರಿಗಣಿಸದಿದ್ದರೆ ಅದು ದೊಡ್ಡ ಸಮಸ್ಯೆಯಾಗಿ ಬದಲಾಗಬಹುದು. ಈ ಸಮಯದಲ್ಲಿ ಯಾವುದೇ ವಿವಾದವನ್ನು ತಪ್ಪಿಸಿ. ಅಕ್ಟೋಬರ್ ನಂತರ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಸಂಬಂಧ ಉತ್ತಮಗೊಳ್ಳುತ್ತದೆ. ಈ ಸಮಯದಲ್ಲಿ ಇಬ್ಬರೂ ಪವಿತ್ರ ಸ್ಥಳಕ್ಕೆ ಪ್ರಯಾಣಿಸಬಹುದು ಇದರಿಂದ ಮನಸ್ಸಿಗೆ ಖುಷಿ ಸಿಗುತ್ತದೆ.

ಮೀನ: ವ್ಯವಹಾರ ಜಾತಕ 2023
ಮೀನ ರಾಶಿಯವರ ವ್ಯವಹಾರ ಜಾತಕದ ಪ್ರಕಾರ, 2023 ಮೀನ ರಾಶಿಯವರು ವ್ಯವಹಾರದಲ್ಲಿ ತೊಡಗಿದ್ದರೆ, ಅವರಿಗೆ ದೊಡ್ಡ ಸಾಧನೆ ಮಾಡಲು ಅವಕಾಶವನ್ನು ನೀಡುತ್ತದೆ. ಈ ವರ್ಷ ನಿಮ್ಮ ವ್ಯವಹಾರದಲ್ಲಿ ಯಶಸ್ಸನ್ನು ಸಾಧಿಸಲು ಗ್ರಹಗತಿಗಳು ಸಹಾಯ ಮಾಡುತ್ತದೆ. ನಿಮ್ಮ ವ್ಯವಹಾರವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತದೆ. ಹಿರಿಯರ ಬೆಂಬಲದಿಂದ ನೀವು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗುತ್ತೀರಿ. ಇದು ನಿಮ್ಮ ವ್ಯವಹಾರವನ್ನು ಸಹ ಎತ್ತರಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ. ನೀವು ವಿದೇಶಿ ಸಂಪರ್ಕದಿಂದಲೂ ಸಹ ವ್ಯವಹಾರದಲ್ಲಿ ಪ್ರಗತಿ ಸಾಧಿಸಬಹುದು. ಆದರೆ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ವ್ಯವಹಾರದಲ್ಲಿ ಕೆಲ ಸವಾಲುಗಳನ್ನು ಎದುರಿಸಬೇಕಾಗಿ ಬರಬಹುದು. ಈ ಸಮಯದಲ್ಲಿ ಸರ್ಕಾರಿ ವಲಯಕ್ಕೆ ಸಂಬಂಧಿಸಿದ ಯಾವುದೇ ಹೊಣೆಗಾರಿಕೆ ಇದ್ದರೆ, ಜಾಗರೂಕರಾಗಿರಬೇಕು. ಅಕ್ಟೋಬರ್ ನಂತರದ ಸಮಯವು ಅನುಕೂಲಕರವಾಗಿರುತ್ತದೆ.

ಮೀನ: ವಾಹನ ಮತ್ತು ಆಸ್ತಿ ಜಾತಕ 2023
ಮೀನ ರಾಶಿಯವರ ವಾಹನ ಮತ್ತು ಆಸ್ತಿ ಜಾತಕದ ಪ್ರಕಾರ, 2023 ರಲ್ಲಿ ಮೀನ ರಾಶಿಯವರು ಜನವರಿಯಿಂದ ಮಾರ್ಚ್ ಮಧ್ಯದವರೆಗೆ ಯಾವುದೇ ರೀತಿಯ ವಾಹನವನ್ನು ಖರೀದಿಸುವುದನ್ನು ತಪ್ಪಿಸಬೇಕು. ಏಕೆಂದರೆ ಈ ಸಮಯದಲ್ಲಿ ನೀವು ವಾಹನವನ್ನು ಖರೀದಿಸಿದರೆ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಮೇನಿಂದ ಜುಲೈ ನಡುವಿನ ಸಮಯವು ವಾಹನ ಖರೀದಿಸಲು ಸೂಕ್ತವಾದ ಸಮಯವಾಗಿದೆ. ಈ ಸಮಯ ನಿಮಗೆ ಉತ್ತಮವಾಗಿರುತ್ತದೆ.
ಇನ್ನು ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ನೀವು ವಾಹನವನ್ನು ಖರೀದಿಸಬಹುದು. ಮಾರ್ಚ್ 13ರಿಂದ ಮೇ10ರ ಒಳಗೆ ಮೀನ ರಾಶಿಯವರು ಆಸ್ತಿಯನ್ನು ಖರೀದಿಸುವ ಅವಕಾಶಗಳಿರುತ್ತದೆ. ಈ ಸಮಯದಲ್ಲಿ ನೀವು ಮನೆ ಅಥವಾ ಅಂಗಡಿಯನ್ನು ಖರೀದಿಸಬಹುದು. ಇದರಿಂದ ನೀವು ಬಹಳಷ್ಟು ಅಭಿವೃದ್ಧಿ ಹೊಂದುತ್ತೀರಿ. ಉತ್ತಮ ಆರ್ಥಿಕ ಪ್ರಗತಿಯನ್ನು ಪಡೆಯುತ್ತೀರಿ.

ಮೀನ: ಸಂಪತ್ತು ಮತ್ತು ಲಾಭ ಜಾತಕ 2023
ಮೀನ ರಾಶಿಯವರ ಸಂಪತ್ತು ಮತ್ತು ಲಾಭ ಜಾತಕದ ಪ್ರಕಾರ, 2023 ಮೀನ ರಾಶಿಯವರಿಗೆ, ಹಣ ಮತ್ತು ಲಾಭದ ಪರಿಸ್ಥಿತಿ ಮಧ್ಯಮವಾಗಿರುತ್ತದೆ. ವರ್ಷದ ಆರಂಭದಲ್ಲಿ ಸಂಪತ್ತು ಮತ್ತು ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಬಳಿಕ ಶನಿಯ ಸಂಚಾರದ ನಂತರ ನೀವು ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ವೇಳೆ ಖರ್ಚುಗಳು ಬರುವ ಸಾಧ್ಯತೆ ಇದೆ. ಎಪ್ರಿಲ್‌ನಲ್ಲಿ ಹಣದ ವಿಚಾರದಲ್ಲಿ ಏರಿಳಿತಗಳು ಉಂಟಾಗಬಹುದು.
ಏಪ್ರಿಲ್ ಅಂತ್ಯದಿಂದ ಆಗಸ್ಟ್ ಮಧ್ಯದವರೆಗೆ ಹಣದ ವಿಚಾರದಲ್ಲಿ ಸವಾಲಿನ ಸಮಯವಾಗಿರುತ್ತದೆ. ಈ ಸಮಯದಲ್ಲಿ ಯಾವುದೇ ಹಣ ಹೂಡಿಕೆ ಮಾಡದಂತೆ ಎಚ್ಚರವಹಿಸಿ. ಅಕ್ಟೋಬರ್ 30ರ ನಂತರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆರ್ಥಿಕವಾಗಿ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ವರ್ಷದ ಆರಂಭದಲ್ಲಿ ನೀವು ಸರ್ಕಾರಿ ವಲಯದಿಂದ ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿಯು ವರ್ಷದ ಅಂತ್ಯದ ವೇಳೆಗೆ ಉತ್ತಮವಾಗಿರುತ್ತದೆ.

ಮೀನ : ಆರೋಗ್ಯ ಜಾತಕ 2023
ಮೀನ ರಾಶಿಯವರ ಆರೋಗ್ಯ ಜಾತಕದ ಪ್ರಕಾರ, 2023ರಲ್ಲಿ ಮೀನ ರಾಶಿಯವರು, ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ವರ್ಷದ ಆರಂಭವು ಅನುಕೂಲಕರವಾಗಿರುತ್ತದೆ. ನಿಮ್ಮ ಆಹಾರ ಸೇವನೆ ಹಾಗೂ ಆರೋಗ್ಯ ಹಾನಿಕಾರಕ ಪಾನೀಯಗಳ ಸೇವನೆಯಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ.ಶಿಸ್ತಿನ ವ್ಯಕ್ತಿಯಂತೆ ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಉತ್ತಮ ದಿನಚರಿಯನ್ನು ನೀವು ಅನುಸರಿಸಬೇಕು. ಇದರಿಂದ ಯಾವುದಾದರೂ ಕಾಯಿಲೆ ಇದ್ದರೆ ಹಿಡತಕ್ಕೆ ಬರುತ್ತದೆ.
ಎಪ್ರಿಲ್‌ನಲ್ಲಿ ನಿಮಗೆ ಕಣ್ಣು ನೋವು ಹಲ್ಲುನೋವು, ಬಾಯಿ ಹುಣ್ಣು ಮತ್ತು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ನಿಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಈ ವರ್ಷ ನೀವು ಆರೋಗ್ಯ ಪ್ರಜ್ಞೆಯನ್ನು ಹೊಂದಿರಬೇಕು. ಇಲ್ಲದಿದ್ದರೆ ಅನಾರೋಗ್ಯಕ್ಕೆ ಒಳಗಾಗಬಹುದು. ಈ ವರ್ಷ ನೀವು ಕಾಲುಗಳಲ್ಲಿ, ಗಾಯ, ಉಳುಕು,ಭುಜ ನೋವು, ಕೀಲು ನೋವಿನ ಸಮಸ್ಯೆಯನ್ನು ಎದುರಿಸಬೇಕಾಗಿ ಬರಬಹುದು.

ಮೀನ: ಅದೃಷ್ಟ ಜಾತಕ 2023
ಮೀನ ರಾಶಿಯವರ ಅದೃಷ್ಟ ಜಾತಕದ ಪ್ರಕಾರ, 2023ರಲ್ಲಿ ಮೀನ ರಾಶಿಯವರ ಅದೃಷ್ಟ ಸಂಖ್ಯೆಗಳು 3 ಮತ್ತು 7 ಎಂದು ಪರಿಗಣಿಸಲಾಗುತ್ತದೆ. 2023ರಲ್ಲಿ ನಿಮ್ಮ ಕುಲ ಯೋಗ ಕೂಡ 7 ಆಗಿರುತ್ತದೆ. 2023ರ ಮೀನ ರಾಶಿಯ ಜನರಿಗೆ ವಿಶೇಷವಾಗಿ ಫಲಪ್ರದವಾಗಿದೆ. ಈ ವರ್ಷ ನೀವು ಶ್ರಮವಹಿಸಬೇಕು. ಚಿಕ್ಕ ಪ್ರಯತ್ನದಿಂದ ಈ ವರ್ಷ ನೀವು ಬಹಳಷ್ಟು ಸಾಧಿಸಬಹುದು. ವರ್ಷದಲ್ಲಿ ಸವಾಲುಗಳು ಖಂಡಿತವಾಗಿಯೂ ಬರುತ್ತವೆ ಆದರೆ ಆ ಸವಾಲುಗಳಿಗೆ ಹೆದರದೆ ನಿಮ್ಮ ಉದ್ದೇಶವನ್ನು ಅರಿತುಕೊಂಡರೆ ಈ ವರ್ಷ ನೀವು ಉತ್ತಮ ಸಾಧನೆ ಮಾಡುತ್ತೀರಿ. ದೈಹಿಕವಾಗಿ ಮತ್ತು ಆರ್ಥಿಕವಾಗಿಯೂ ಸಮೃದ್ಧರಾಗುತ್ತೀರಿ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್‌ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications