• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೆಸರಿನ ಮೊದಲ ಅಕ್ಷರದ ಪ್ರಕಾರ ನಿಮ್ಮ ಸ್ವಭಾವ ಏನು?

By ರಮಾಕಾಂತ್
|

ನಿಮ್ಮ ಹೆಸರಿನ ಮೊದಲ ಇಂಗ್ಲಿಷ್ ಅಕ್ಷರ ಯಾವುದು? ಅದು ನಿಮ್ಮ ಗುಣವನ್ನು ಸೂಚಿಸುತ್ತದೆ ಅನ್ನೋದು ನಿಮಗೆ ಗೊತ್ತಿದೆಯಾ? ಗೊತ್ತಿಲ್ಲ ಅನ್ನೋದಾದರೆ ಈ ಲೇಖನವನ್ನು ನೀವು ಓದಲೇಬೇಕು. ಅಂದಹಾಗೆ ಇದು ಇಂಗ್ಲಿಷಿನ ಅಕ್ಷರ ಸೂಚಿಸುವ ಅರ್ಥ. ಇದರ ಹಿಂದೆ ಒಂದು ಸೈಕಾಲಜಿ ಕೂಡ ಇದೆ ಎಂದು ಸಮರ್ಥಿಸಿಕೊಳ್ಳುವವರು ಹಲವರಿದ್ದಾರೆ.

ಅದೇ ರೀತಿ ಹೆಸರಿನ ಮೊದಲ ಅಕ್ಷರದಿಂದ ವ್ಯಕ್ತಿತ್ವ ಗೊತ್ತಾಗುವ ಹಾಗಿದ್ದರೆ.. ಎಂದು ಅನುಮಾನ ಪಡುವವರು ಸಹ ಇದ್ದಾರೆ. ಇರಲಿ ಬಿಡಿ, ಅವರವರ ಭಾವಕ್ಕೆ ಅವರವರ ಭಕುತಿಗೆ ಈ ವಿಚಾರವನ್ನು ಬಿಡೋಣ. ಇಂಗ್ಲಿಷಿನ ಇಪ್ಪತ್ತಾರು ಅಕ್ಷರಗಳ ಪೈಕಿ ಮುಖ್ಯವಾಗಿ ಹೆಸರಿಗೆ ಬಳಕೆ ಆಗುವ ಇಪ್ಪತ್ತೈದು ಅಕ್ಷರಗಳು ಯಾವ ವ್ಯಕ್ತಿತ್ವ ಸೂಚಿಸುತ್ತವೆ ಎಂಬುದನ್ನು ಇಲ್ಲಿ ಕೊಡಲಾಗುತ್ತಿದೆ.

ಜ್ಯೋತಿಷ್ಯ ಟಿಪ್ಸ್: ಯಾವ ವಾರ ಏನು ಮಾಡಿದರೆ ಕೈಗೊಳ್ಳುವ ಕಾರ್ಯ ಯಶಸ್ಸು?

ಸುಮ್ಮನೆ ಒಮ್ಮೆ ಹೋಲಿಕೆ ಮಾಡಿಕೊಂಡು ನೋಡಿ. ನಿಮ್ಮ ಹೆಸರಿನ ಮೊದಲ ಅಕ್ಷರದ ಜತೆಗೆ ಇದರ ಸಾಮ್ಯತೆ ಇದೆಯಾ? ಇಲ್ಲದಿದ್ದರೆ ಕಾಮೆಂಟ್ ಬಾಕ್ಸ್ ನಲ್ಲಿ ಖಂಡಿತಾ ನಿಮ್ಮ ಕಾಮೆಂಟ್ ಹಾಕಿ. ನಿಮ್ಮ ಗೆಳೆಯ-ಗೆಳತಿಯರಿಗೂ ಈ ಲೇಖನದ ಬಗ್ಗೆ ತಿಳಿಸಿ, ಅವರ ಅಭಿಪ್ರಾಯ ಏನು ಎಂಬುದನ್ನು ತಿಳಿಸಿ. ಇನ್ನು ತಡ ಮಾಡುವುದು ಬೇಡ, ಲೇಖನ ಶುರು ಮಾಡೋಣ.

ವಿಪರೀತ ಪ್ರಭಾವಶಾಲಿ ಅಕ್ಷರ

ವಿಪರೀತ ಪ್ರಭಾವಶಾಲಿ ಅಕ್ಷರ

A ಅಕ್ಷರವು ತುಬ ಶಕ್ತಿಶಾಲಿ. ನಿಮ್ಮ ಹೆಸರು ಈ ಅಕ್ಷರದಿಂದ ಆರಂಭ ಆಗುತ್ತಿದೆ ಅಂದರೆ, ನೀವು ಪಟ್ಟು ಬಿಡದ ಆಸಾಮಿ. ಯಾವುದಾದರೂ ತೀರ್ಮಾನ ಮಾಡಿಬಿಟ್ಟರೆ ಅದು ಪೂರೈಸುವವರೆಗೆ ಬಿಡುವವರಲ್ಲ. ಸ್ವಭಾವತಃ ಧೈರ್ಯವಂತರು. ನಿಮ್ಮ ಸಾಮರ್ಥ್ಯದ ಬಗ್ಗೆ ವಿಪರೀತವಾದ ನಂಬಿಕೆ ಇರುತ್ತದೆ. ಯಾವಾಗಲೂ ಒಂದು ಹೊಸ ಸಾಹಸಕ್ಕಾಗಿ ಮನಸು ಹಾತೊರೆಯುತ್ತಿರುತ್ತದೆ. ಅದು ಎಂಥ ಸನ್ನಿವೇಶ ಇದ್ದರೂ ಮುಂಚೂಣಿಯಲ್ಲಿ ನಿಲ್ಲುವುದಕ್ಕೆ ಬಯಸುತ್ತೀರಿ ಹೊರತು ಅವಿತುಕೊಳ್ಳುವ ಜಾಯಮಾನದವರಲ್ಲ.

ಮನಸಿನ ಗುಟ್ಟು ಹೊರಗೆ ಬಿಟ್ಟುಕೊಡುವವರಲ್ಲ

ಮನಸಿನ ಗುಟ್ಟು ಹೊರಗೆ ಬಿಟ್ಟುಕೊಡುವವರಲ್ಲ

ನಿಮ್ಮ ಹೆಸರು B ಅಕ್ಷರದಿಂದ ಆರಂಭ ಆಗುವಂಥದ್ದಾದರೆ ಮನಸಿನೊಳಗಿನ ಮಾತನ್ನು ಸುಲಭಕ್ಕೆ ಹೊರಗೆ ಬಿಟ್ಟುಕೊಡುವವರಲ್ಲ. ಬಹಿರಂಗವಾಗಿ ಭಾವನೆಗಳನ್ನು ಹೊರ ಹಾಕುವವರಲ್ಲ. ಜನರನ್ನು ಹೇಗೆ ನಿಭಾಯಿಸಬೇಕು, ಯಾರಿಗೆ ಎಷ್ಟು ಗೌರವ- ಬೆಲೆ ಎಂಬುದು ಬಹಳ ಚೆನ್ನಾಗಿ ತಿಳಿದುಕೊಂಡಿರುತ್ತೀರಿ. ಆದರೆ ಸದಾ ನಿಮ್ಮ ಬಗ್ಗೆಯೇ ಯೋಚನೆ ಮಾಡುತ್ತೀರಿ ಹಾಗೂ ನಿಮ್ಮ ಲಾಭದ ಕಡೆಗೆ ಕಣ್ಣು ನೆಟ್ಟಿರುತ್ತೀರಿ ಎಂಬ ಆರೋಪ ಎದುರಿಸಬೇಕಾಗುತ್ತದೆ.

ಜನರ ಮಧ್ಯೆ ಬೆರೆಯುವ ಜನಾನುರಾಗಿ

ಜನರ ಮಧ್ಯೆ ಬೆರೆಯುವ ಜನಾನುರಾಗಿ

ಯಾರ ಹೆಸರು C ಅಕ್ಷರದಿಂದ ಶುರು ಆಗುತ್ತದೋ ಇವರು ಜನರ ಜತೆಗೆ ತುಂಬ ಸಲೀಸಾಗಿ ಬೆರೆತುಹೋಗ್ತಾರೆ. ಜನರ ಮಧ್ಯೆಯೇ ಹೆಚ್ಚು ಇರಲು ಬಯಸುತ್ತಾರೆ. ಆದರೆ ಯಾರಾದರೂ ಸಿಟ್ಟು ತರಿಸಿದರೆ, ದ್ವೇಷ ಸಾಧಿಸುವ ಹಾಗೂ ಕೇಡು ಬಗೆಯುವ ಬುದ್ಧಿ ಹೆಚ್ಚಿರುತ್ತದೆ. ಎದುರಿನವರಿಂದ ದೊಡ್ಡ ಮಟ್ಟದ ವಿಶ್ವಾಸವನ್ನು ಎದುರು ನೋಡುವ ಜನ ಇವರು. ಇವರ ಸುಪ್ತಪ್ರಜ್ಞೆ ಸದಾ ಜಾಗೃತವಾಗಿರುತ್ತದೆ. ಅದ್ಭುತವಾದ ವಾಗ್ಮಿಗಳಾಗಿರುತ್ತಾರೆ. ಕೆಲವು ವಿಚಾರಗಳನ್ನು ವಿಪರೀತ ಎನ್ನುವ ತನಕ ತೆಗೆದುಕೊಂಡು ಹೋಗ್ತಾರೆ.

ಹುಟ್ಟಾ ನಾಯಕರು/ನಾಯಕಿಯರು

ಹುಟ್ಟಾ ನಾಯಕರು/ನಾಯಕಿಯರು

ಯಾರ ಹೆಸರು D ಅಕ್ಷರದಿಂದ ಆರಂಭ ಆಗುತ್ತದೋ ಅಂಥವರು ಬಹಳ ಸಮತೋಲನ ಆಲೋಚನೆಯವರು. ಜತೆಗೆ ಸದಾ ಸುರಕ್ಷತೆಗೆ ಒತ್ತು ನೀಡುವವರು ಮತ್ತು ಶ್ರಮಜೀವಿಗಳು. ಇವರಿಗೆ ಎಲ್ಲವೂ ಅಚ್ಚುಕಟ್ಟಾಗಿಯೇ ಇರಬೇಕು. ತಮ್ಮ ಉದ್ದೇಶದ ಬಗ್ಗೆ ಸ್ಪಷ್ಟತೆ ಇರುತ್ತದೆ. ಜೀವನದ ಗುರಿಯ ಬಗ್ಗೆಯೂ ನಿಖರತೆ ಇರುತ್ತದೆ. ಆದ್ದರಿಂದ ಇವರು ಹುಟ್ಟಾ ನಾಯಕರು ಅಥವಾ ನಾಯಕಿಯರು. ಕೆಲವು ಸಲ ತೀರಾ ನಿರಾಶರಾಗಿ ಬಿಡುತ್ತಾರೆ.

ಎಂಥ ಸಮಸ್ಯೆಯನ್ನೂ ಸುಲಭವಾಗಿ ಪರಿಹರಿಸಬಲ್ಲರು

ಎಂಥ ಸಮಸ್ಯೆಯನ್ನೂ ಸುಲಭವಾಗಿ ಪರಿಹರಿಸಬಲ್ಲರು

E ಅಕ್ಷರದಿಂದ ಹೆಸರು ಶುರು ಆಗುವ ವ್ಯಕ್ತಿಗಳು ತುಂಬ ಮೃದು ಸ್ವಭಾವದವರು. ಬಹಳ ಕಷ್ಟಕರವಾದ ಸಮಸ್ಯೆಗಳನ್ನು ಕೂಡ ಸುಲಭವಾಗಿ ಪರಿಹರಿಸಬಲ್ಲರು. ಶೀಘ್ರವಾಗಿ ನಿರ್ಧಾರ ಕೈಗೊಳ್ಳುವಂಥ ಆಲೋಚನೆ ಇರುವಂಥವರು. ಜೀವನದ ಸಣ್ಣ- ಪುಟ್ಟ ಘಟನೆಗಳನ್ನು ಚೆನ್ನಾಗಿ ವಿಶ್ಲೇಷಿಸಿ, ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಆಕರ್ಷಕ ವ್ಯಕ್ತಿತ್ವದ ಇವರು ಇತರರನ್ನು ಮೋಡಿ ಮಾಡುತ್ತಾರೆ. ಹೊಸ ಸ್ನೇಹಿತರು ಸಂಪಾದಿಸುವಲ್ಲಿ ಇವರು ನಿಸ್ಸೀಮರು. ಆದರೆ ಪ್ರೀತಿ-ಪ್ರೇಮದ ವಿಚಾರಕ್ಕೆ ಸಂಬಂಧಿಸಿದಂತೆ ಇವರ ಮೇಲೆ ನಂಬಿಕೆ ಇಡುವುದು ಕಷ್ಟ.

ಇತರರ ಬಗ್ಗೆ ಕಾಳಜಿ ತೋರುವ ವ್ಯಕ್ತಿತ್ವ

ಇತರರ ಬಗ್ಗೆ ಕಾಳಜಿ ತೋರುವ ವ್ಯಕ್ತಿತ್ವ

ಇಂಗ್ಲಿಷಿನ F ಅಕ್ಷರದಿಂದ ಹೆಸರು ಆರಂಭ ಆಗುವಂಥವರು ಮುಖ್ಯವಾಗಿ ಇತರರ ಬಗ್ಗೆ ಕಾಳಜಿ ಮಾಡುವ ಸ್ವಭಾವ ಇರುವಂಥವರು. ಕುಟುಂಬದ ಬಗ್ಗೆ ಹೆಚ್ಚಿನ ಗಮನ ವಹಿಸುವಂಥವರು. ಇವರಿಗೆ ಹುಟ್ಟಿನಿಂದಲೇ ಇನ್ನೊಬ್ಬರ ನೋವನ್ನು ಸಂತೈಸುವ ಅಥವಾ ಸಾಂತ್ವನ ನೀಡುವ ಗುಣ ಬಂದಿರುತ್ತದೆ. ವೈಯಕ್ತಿಕ ಸಂಬಂಧಗಳಿಗೆ ಬಹಳ ಬೆಲೆ ಕೊಡುವ ಇವರು, ಪ್ರೀತಿ-ಪ್ರೇಮ-ಪ್ರಣಯದ ವಿಚಾರದಲ್ಲಿ ಬದ್ಧತೆಯಿಂದ ಇರುತ್ತಾರೆ. ಆದರೆ ಕೆಲ ಸಲ ಬಾಲಿಶವಾಗಿ ನಡೆದುಕೊಳ್ಳುತ್ತಾರೆ. ಜತೆಗೆ ವಿಪರೀತವಾಗಿ ದ್ವೇಷ ಸಾಧಿಸುತ್ತಾರೆ.

ಸತ್ಯಾನ್ವೇಷಣೆಯೇ ಮೂಲ ತುಡಿತ

ಸತ್ಯಾನ್ವೇಷಣೆಯೇ ಮೂಲ ತುಡಿತ

ಇನ್ನು G ಅಕ್ಷರದಿಂದ ಹೆಸರು ಆರಂಭವಾದರೆ ಇವರಲ್ಲಿ ಅನ್ವೇಷಣೆ ಮಾಡುವ ಸ್ವಭಾವ ಹೆಚ್ಚಿರುತ್ತದೆ. ತಮ್ಮ ದಾರಿಯಲ್ಲಿ ಬೇಕಾದ ರೀತಿಯಲ್ಲಿ ಕೆಲಸ ಮಾಡುವಂಥವರಾಗಿರುತ್ತಾರೆ. ಬೇರೆಯವರು ನೀಡುವ ಸಲಹೆಯೋ ಅಥವಾ ಉಪದೇಶವೋ ಇವರಿಗೆ ಬಹಳ ಸಿಟ್ಟು ತರಿಸುತ್ತದೆ. ಅದನ್ನು ಬೇರೆಯವರು ಮಾಡುವ ಹಸ್ತಕ್ಷೇಪ ಅಂತಲೇ ಅಂದುಕೊಳ್ಳುವ ಮಂದಿ ಇವರು. ತಮ್ಮದೇ ರೀತಿಯಲ್ಲಿ ಬದುಕು ನಡೆಸಲು ಇಷ್ಟಪಡುತ್ತಾರೆ. ಬುದ್ಧಿವಂತಿಕೆ, ಶೀಘ್ರ ಆಲೋಚನೆ ಇವರ ಪಾಲಿನ ವರ. ಸದಾ ಸತ್ಯಾನ್ವೇಷಣೆ ಕಡೆಗೆ ಇವರ ತುಡಿತ ಇರುತ್ತದೆ.

ವಾಸ್ತವವಾದಿ, ಮಹತ್ವಾಕಾಂಕ್ಷಿಗಳು

ವಾಸ್ತವವಾದಿ, ಮಹತ್ವಾಕಾಂಕ್ಷಿಗಳು

H ಅಕ್ಷರದಿಂದ ಹೆಸರು ಆರಂಭ ಆಗುವಂಥವರು ಮೂಲತಃ ವಾಸ್ತವವಾದಿಗಳು. ಬಹಳ ಮಹತ್ವಾಕಾಂಕ್ಷಿಗಳು. ಹಣಕಾಸಿನ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ನಿಸ್ಸೀಮರು. ವ್ಯವಹಾರ ಚತುರತೆ ಎಂಬುದು ಇವರಿಗೆ ಹುಟ್ಟಿನಿಂದಲೇ ಬಳುವಳಿಯಾಗಿ ಬಂದಿರುತ್ತದೆ. ಇವರು ಮಹಾನ್ ನಾಯಕರಾಗಬಲ್ಲರು. ಸ್ವಭಾವತಃ ತಾಳ್ಮೆ ಹಾಗೂ ಸೂಕ್ಷ್ಮತೆ ಇರುತ್ತದೆ. ತಮ್ಮ ಗುರಿ ತಲುಪಲು ಬಹಳ ಶ್ರಮ ಹಾಕುತ್ತಾರೆ. ಸಂಬಂಧದ ವಿಚಾರಕ್ಕೆ ಬಂದಾಗ ಬಹಳ ಪೊಸೆಸಿವ್ ಆಗಿರುತ್ತಾರೆ ಮತ್ತು ತಮ್ಮ ಬಗ್ಗೆ ಮಾತ್ರ ಯೋಚನೆ ಮಾಡುವವರಾಗಿರುತ್ತಾರೆ.

ಶುದ್ಧವಾದ ಆಲೋಚನೆ, ಉದ್ದೇಶ

ಶುದ್ಧವಾದ ಆಲೋಚನೆ, ಉದ್ದೇಶ

I ಅಕ್ಷರದಿಂದ ಹೆಸರು ಆರಂಭವಾದರೆ ಇವರು ಆತ್ಮಪೂರ್ವಕವಾಗಿ ಶುದ್ಧವಾದ ಆಲೋಚನೆ ಹಾಗೂ ಉದ್ದೇಶ ಹೊಂದಿರುತ್ತಾರೆ. ನಂಬಿಕೆಗೆ ಅರ್ಹವಾದ ಇವರು, ಆಳವಾದ ಆಲೋಚನೆ ಮಾಡುವಂಥವರು. ಇತರರಿಗೆ ಸಹಾಯ ಮಾಡುವಂಥ ಸ್ವಭಾವ ಇರುತ್ತದೆ. ಆಕರ್ಷಕವಾದ ವ್ಯಕ್ತಿತ್ವ ಹೊಂದಿರುತ್ತಾರೆ. ಆದರೆ ಹಲವು ಸಂದರ್ಭಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಆಲೋಚನೆ ಮಾಡಿ, ತಲೆ ಕೆಡಿಸಿಕೊಳ್ಳುತ್ತಾರೆ. ಇನ್ನು ಎದುರಿನವರ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಕೆಲ ಬಾರಿ ತುಂಬ ಆಕ್ರಮಣಕಾರಿ ಧೋರಣೆ ಪ್ರದರ್ಶಿಸುತ್ತಾರೆ.

ಗುರಿ ಸಾಧನೆ ಕಡೆಗೆ ಲಕ್ಷ್ಯ

ಗುರಿ ಸಾಧನೆ ಕಡೆಗೆ ಲಕ್ಷ್ಯ

J ಅಕ್ಷರದಿಂದ ಹೆಸರು ಆರಂಭವಾಗುವಂಥ ವ್ಯಕ್ತಿಗಳು ಮಹತ್ವಾಕಾಂಕ್ಷಿಗಳು ಹಾಗೂ ತಮ್ಮ ಗುರಿ ಸಾಧನೆ ಬಗ್ಗೆಯೇ ಸದಾ ತುಡಿತ ಇರುವಂಥವರು. ತಮ್ಮ ಜೀವನದಲ್ಲಿ ಏನನ್ನು ಪಡೆಯಬೇಕು ಎಂದು ಇವರು ನಿರ್ಧಾರ ಮಾಡುತ್ತಾರೋ ಅದನ್ನು ಪಡೆದೇ ತೀರುತ್ತಾರೆ. ತಮ್ಮ ಗುರಿಯಿಂದ ಸುಲಭಕ್ಕೆ ವಿಮುಖವಾಗುವ ಪೈಕಿ ಇವರಲ್ಲ. ಇವರನ್ನು ಅರ್ಥ ಮಾಡಿಕೊಳ್ಳುವಂಥ ಬಾಳ ಸಂಗಾತಿ ದೊರೆತಿಲ್ಲ ಅದ್ಭುತವಾದದ್ದನ್ನು ಜೀವನದಲ್ಲಿ ಸಾಧಿಸಿ ತೋರಿಸುತ್ತಾರೆ. ಇನ್ನು ಬದ್ಧತೆ ವಿಚಾರದಲ್ಲೂ ಪಟ್ಟು ಬಿಡದ ಆಸಾಮಿಗಳು.

ರಹಸ್ಯ ಕಾಪಾಡಿಕೊಳ್ಳುವ ನಾಚಿಕೆ ಸ್ವಭಾವದವರು

ರಹಸ್ಯ ಕಾಪಾಡಿಕೊಳ್ಳುವ ನಾಚಿಕೆ ಸ್ವಭಾವದವರು

K ಅಕ್ಷರದಿಂದ ಹೆಸರು ಆರಂಭ ಆಗುವ ವ್ಯಕ್ತಿಗಳು ರಹಸ್ಯಗಳನ್ನು ಕಾಪಾಡಿಕೊಳ್ಳುವಂಥವರು. ನಾಚಿಕೆ ಸ್ವಭಾವ ಇರುತ್ತದೆ. ಆದರೂ ಬಹಳ ಸನ್ನಿವೇಶದಲ್ಲಿ ಇವರೇ ಆಕರ್ಷಣೆಯ ಕೇಂದ್ರ ಬಿಂದು ಆಗುತ್ತಾರೆ. ಜೀವನದಲ್ಲಿ ಸಮತೋಲನ ಹಾಗೂ ಸೌಹಾರ್ದ ಬಯಸುವಂಥವರು. ರಾಜೀ- ಸಂಧಾನ ಮಾಡಿಸುವಲ್ಲಿ ಇವರದು ಎತ್ತಿದ ಕೈ. ಇತರರ ಬಗ್ಗೆ ಕಾಳಜಿ ಹೊಂದಿರುತ್ತಾರೆ. ಸಂಬಂಧಗಳ ವಿಚಾರದಲ್ಲಿ ಆಟ ಆಡುವ ಪೈಕಿ ಇವರಲ್ಲ. ಬಾಳಸಂಗಾತಿಯ ಮಮಕಾರವನ್ನು ನಿರೀಕ್ಷೆ ಮಾಡುವ ಇವರಿಗೆ ಅದು ಸಿಕ್ಕರೆ ಅದ್ಭುತವಾದದ್ದನ್ನು ಸಾಧಿಸುತ್ತಾರೆ.

ಖುಷಿಖುಷಿಯಿಂದ ಇರುವ ವ್ಯಕ್ತಿತ್ವ

ಖುಷಿಖುಷಿಯಿಂದ ಇರುವ ವ್ಯಕ್ತಿತ್ವ

L ಅಕ್ಷರದಿಂದ ಹೆಸರು ಶುರು ಆಗುವಂಥವರು ಜೀವನವನ್ನು ಮತ್ತು ಜನರನ್ನು ನೋಡುವ ಬಗೆಯೇ ಬೇರೆ. ಆ ಕಾರಣಕ್ಕೆ ಇವರು ಬಹಳ ವಿಶಿಷ್ಟ ಎನಿಸಿಕೊಳ್ಳುತ್ತಾರೆ. ತಮ್ಮ ಬಾಳಸಂಗಾತಿ ಇವರ ಪಾಲಿಗೆ ಬಹಳ ಮುಖ್ಯವಾದ ವ್ಯಕ್ತಿ ಆಗಿರುತ್ತಾರೆ. ಇವರಿಗೆ ಅಪಾರವಾದ ಹಾಸ್ಯಪ್ರಜ್ಞೆ ಇರುತ್ತದೆ. ಬಹಳ ಖುಷಿಖುಷಿಯಾಗಿ ಇರುವಂಥ ವ್ಯಕ್ತಿತ್ವ ಇವರದು. ಆದ್ದರಿಂದ ಎಂಥ ಸಂದಿಗ್ಧ ಸನ್ನಿವೇಶದಲ್ಲೂ ಮನಸಿಗೆ ಗಂಭೀರವಾಗಿ ತೆಗೆದುಕೊಳ್ಳದೆ ಸಲೀಸಾಗಿ ತಮ್ಮ ಕೆಲಸ ಮಾಡಿಕೊಂಡು ಹೋಗುತ್ತಾರೆ.

ಮುಂದುವರಿಯುವುದು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು astrology ಸುದ್ದಿಗಳುView All

English summary
The first letters of persons name reveal more information than one might actually know. Name has the power to affect your personality and destiny. In fact, your name holds answers to many questions and it says a lot about your personality traits as well. Here is the first letter of your name reveals about personality.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more