• search

Mನಿಂದ Yಅಕ್ಷರದವರೆಗೆ ನಿಮ್ಮ ಹೆಸರು ಏನನ್ನು ಸೂಚಿಸುತ್ತದೆ?

By ರಮಾಕಾಂತ್
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ನಿಮ್ಮ ಹೆಸರಿನ ಮೊದಲ ಇಂಗ್ಲಿಷ್ ಅಕ್ಷರ ಯಾವುದು? ಅದು ನಿಮ್ಮ ಗುಣವನ್ನು ಸೂಚಿಸುತ್ತದೆ ಅನ್ನೋದು ನಿಮಗೆ ಗೊತ್ತಿದೆಯಾ? ಗೊತ್ತಿಲ್ಲ ಅನ್ನೋದಾದರೆ ಈ ಲೇಖನವನ್ನು ನೀವು ಓದಲೇಬೇಕು. ಅಂದಹಾಗೆ ಇದು ಇಂಗ್ಲಿಷಿನ ಅಕ್ಷರ ಸೂಚಿಸುವ ಅರ್ಥ. ಇದರ ಹಿಂದೆ ಒಂದು ಸೈಕಾಲಜಿ ಕೂಡ ಇದೆ ಎಂದು ಸಮರ್ಥಿಸಿಕೊಳ್ಳುವವರು ಹಲವರಿದ್ದಾರೆ.

    ಅದೇ ರೀತಿ ಹೆಸರಿನ ಮೊದಲ ಅಕ್ಷರದಿಂದ ವ್ಯಕ್ತಿತ್ವ ಗೊತ್ತಾಗುವ ಹಾಗಿದ್ದರೆ.. ಎಂದು ಅನುಮಾನ ಪಡುವವರು ಸಹ ಇದ್ದಾರೆ. ಇರಲಿ ಬಿಡಿ, ಅವರವರ ಭಾವಕ್ಕೆ ಅವರವರ ಭಕುತಿಗೆ ಈ ವಿಚಾರವನ್ನು ಬಿಡೋಣ. ಇಂಗ್ಲಿಷಿನ ಇಪ್ಪತ್ತಾರು ಅಕ್ಷರಗಳ ಪೈಕಿ ಮುಖ್ಯವಾಗಿ ಹೆಸರಿಗೆ ಬಳಕೆ ಆಗುವ ಇಪ್ಪತ್ತೈದು ಅಕ್ಷರಗಳು ಯಾವ ವ್ಯಕ್ತಿತ್ವ ಸೂಚಿಸುತ್ತವೆ ಎಂಬುದನ್ನು ಇಲ್ಲಿ ಕೊಡಲಾಗುತ್ತಿದೆ.

    ಹೆಸರಿನ ಮೊದಲ ಅಕ್ಷರದ ಪ್ರಕಾರ ನಿಮ್ಮ ಸ್ವಭಾವ ಏನು?

    ಸುಮ್ಮನೆ ಒಮ್ಮೆ ಹೋಲಿಕೆ ಮಾಡಿಕೊಂಡು ನೋಡಿ. ನಿಮ್ಮ ಹೆಸರಿನ ಮೊದಲ ಅಕ್ಷರದ ಜತೆಗೆ ಇದರ ಸಾಮ್ಯತೆ ಇದೆಯಾ? ಇಲ್ಲದಿದ್ದರೆ ಕಾಮೆಂಟ್ ಬಾಕ್ಸ್ ನಲ್ಲಿ ಖಂಡಿತಾ ನಿಮ್ಮ ಕಾಮೆಂಟ್ ಹಾಕಿ. ನಿಮ್ಮ ಗೆಳೆಯ-ಗೆಳತಿಯರಿಗೂ ಈ ಲೇಖನದ ಬಗ್ಗೆ ತಿಳಿಸಿ, ಅವರ ಅಭಿಪ್ರಾಯ ಏನು ಎಂಬುದನ್ನು ತಿಳಿಸಿ.

    ಕೆಲಸದ ಬಗ್ಗೆ ವಿಪರೀತ ಪ್ರೀತಿ ಇರುವವರು

    ಕೆಲಸದ ಬಗ್ಗೆ ವಿಪರೀತ ಪ್ರೀತಿ ಇರುವವರು

    ಯಾರ ಹೆಸರಿನ ಮೊದಲ ಅಕ್ಷರ Mನಿಂದ ಶುರು ಆಗುವುದೋ ಅವರು ಬಹಳ ಶ್ರಮಜೀವಿಗಳು ಮತ್ತು ವಿಶ್ವಾಸಕ್ಕೆ ಅರ್ಹರಾದಂಥವರು. ಈ ಹೆಸರಿನವರು ಕೆಲಸದ ಬಗ್ಗೆ ಅಪರಿಮಿತವಾದ ಪ್ರೀತಿ ಇರಿಸಿಕೊಂಡಿರುತ್ತಾರೆ. ತಮ್ಮ ಬದುಕಿನ ಸಲುವಾಗಿ ಇತರರನ್ನು ಗುಣಗಾನ ಮಾಡುವ ಪೈಕಿ ಇವರಲ್ಲ. ಜೀವನದ ಬಗ್ಗೆ ತಮ್ಮದೇ ಆದ ಷರತ್ತು ಹಾಗೂ ನಿಯಮಗಳನ್ನು ಇಟ್ಟುಕೊಂಡಿರುತ್ತಾರೆ. ಒಂದು ಸಲ ಇವರ ತಾಳ್ಮೆ ಪೂರ್ತಿ ಖರ್ಚಾಯಿತೋ ಆಗ ವಿಪರೀತ ಆಕ್ರಮಣಕಾರಿಗಳಾಗುತ್ತಾರೆ. ಆದ್ದರಿಂದ ಇವರ ಬದ್ಧತೆ ಹಾಗೂ ವಿಶ್ವಾಸಾರ್ಹತೆಯನ್ನು ಪರೀಕ್ಷೆ ಮಾಡುವ ಮುನ್ನ ಎಚ್ಚರವಾಗಿರಬೇಕು.

    ಎಲ್ಲದರಲ್ಲೂ ಅಚ್ಚುಕಟ್ಟು ಬಯಸುವ ಪರ್ಫೆಕ್ಷನಿಸ್ಟ್ ಗಳು

    ಎಲ್ಲದರಲ್ಲೂ ಅಚ್ಚುಕಟ್ಟು ಬಯಸುವ ಪರ್ಫೆಕ್ಷನಿಸ್ಟ್ ಗಳು

    ಇನ್ನು ಯಾರ ಹೆಸರು ಇಂಗ್ಲಿಷಿನ N ಅಕ್ಷರದೊಂದಿಗೆ ಆರಂಭ ಆಗುತ್ತದೋ ಇವರು ವಿಪರೀತ ಪರ್ಫೆಕ್ಷನಿಸ್ಟ್ ಗಳು. ಇವರಿಗೆ ಎಲ್ಲವೂ ಅಚ್ಚುಕಟ್ಟಾಗಿರಬೇಕು. ಈ ಹೆಸರಿನವರಿಗೆ ಸುಪ್ತ ಪ್ರಜ್ಞೆ ಚೆನ್ನಾಗಿ ಕೆಲಸ ಮಾಡುತ್ತದೆ. ಮುಂದೆ ಆಗುವ ಘಟನೆ - ಸನ್ನಿವೇಶಗಳು ಸಿನಿಮಾ ರೀತಿಯಲ್ಲಿ ಗೊತ್ತಾಗುವಂಥ ಹಾಗೂ ಎಚ್ಚರಿಸುವಂಥ ಅಂತರ್ಧ್ವನಿ ಇರುತ್ತದೆ. ಇವರು ಒಳ್ಳೆ ಸಂವಹನಕಾರರು ಕೂಡ ಹೌದು. ಎಲ್ಲರೂ ಅನುಸರಿಸುವ ದಾರಿಯಲ್ಲಿ ನಡೆಯುವುದಕ್ಕೆ ಇವರು ಒಪ್ಪುವುದಿಲ್ಲ. ತಮ್ಮದೇ ಮಾರ್ಗವನ್ನು ಅನುಸರಿಸಿ ಯಶಸ್ಸು ಪಡೆಯುತ್ತಾರೆ.

    ಮಹಾನ್ ಪ್ರೇಮಿಗಳು, ವಿಶ್ವಾಸಾರ್ಹರು

    ಮಹಾನ್ ಪ್ರೇಮಿಗಳು, ವಿಶ್ವಾಸಾರ್ಹರು

    O ಅಕ್ಷರದಿಂದ ಹೆಸರು ಆರಂಭ ಆಗುವವರು ಹೊಂದಾಣಿಕೆ ಸ್ವಭಾವದವರು ಮತ್ತು ಮಹಾನ್ ಪ್ರೇಮಿಗಳು. ಜಗತ್ತಿನಲ್ಲೇ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಗಳು ಇವರು. ಇವರಿಗೆ ತಮ್ಮದೇ ಆದ ಕೆಲ ಸಿದ್ಧಾಂತಗಳು ಮತ್ತು ಆದರ್ಶಗಳು ಇರುತ್ತವೆ. ಅವುಗಳನ್ನು ತುಂಬ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಕೂಡ. ಆ ಕಾರಣದಿಂದ ಇವರು ಬಹಳ ಹೆಸರುವಾಸಿಯಾದ ಶಿಕ್ಷಕ ಅಥವಾ ಶಿಕ್ಷಕಿ, ಸಂಶೋಧಕರು ಆಗುತ್ತಾರೆ. ಇತರರನ್ನು ಪ್ರೀತಿಯಿಂದ ಕಾಣುವ ಸ್ವಭಾವ ಇವರನ್ನು ಜನಪ್ರಿಯರನ್ನಾಗಿ ಮಾಡುತ್ತದೆ.

    ಜೀವನದ ಬಗ್ಗೆ ವಿಪರೀತ ಕುತೂಹಲಿಗಳು

    ಜೀವನದ ಬಗ್ಗೆ ವಿಪರೀತ ಕುತೂಹಲಿಗಳು

    P ಅಕ್ಷರದಿಂದ ಹೆಸರು ಆರಂಭ ಆಗುವಂಥ ವ್ಯಕ್ತಿಗಳು ಸಹಜವಾಗಿಯೇ ಜೀವನದ ಬಗ್ಗೆ ಕುತೂಹಲಿಗಳಾಗಿರುತ್ತಾರೆ. ಯಾವುದೇ ವಿಚಾರ ಆಗಿರಲಿ ಮೊದಲ ಸ್ಥಾನದಲ್ಲಿ ತಾವಿರಬೇಕು ಎಂದು ಬಯಸಿ, ಅದಕ್ಕಾಗಿ ಶ್ರಮಿಸುತ್ತಾರೆ. ತಮ್ಮ ಬಗ್ಗೆಯೇ ಒಂದು ಅಸಹನೆ ಇವರಿಗೆ ಸದಾ ಇರುತ್ತದೆ. ಕೆಲ ಬಾರಿ ಇವರ ನಿರ್ಧಾರಗಳನ್ನು ಗಮನಿಸಿದವರು ಸ್ವಾರ್ಥಪರರು ಎಂದು ಹಣೆಪಟ್ಟಿ ಹಚ್ಚುತ್ತಾರೆ. ಸದಾ ಯಾವುದಾದರೂ ಹೊಸತನ್ನು ಕಲಿಯಬೇಕು ಎಂಬ ತುಡಿತ ಹಾಗೂ ಹಾಸ್ಯ ಸ್ವಭಾವ ಇವರ ಸ್ನೇಹ ವಲಯವನ್ನು ವಿಸ್ತರಿಸಲು ಅನುಕೂಲ ಮಾಡಿಕೊಡುತ್ತವೆ.

    ಟ್ರೆಂಡ್ ಅನುಸರಿಸದ ರಹಸ್ಯ ಕಾಪಾಡುವ ವ್ಯಕ್ತಿಗಳು

    ಟ್ರೆಂಡ್ ಅನುಸರಿಸದ ರಹಸ್ಯ ಕಾಪಾಡುವ ವ್ಯಕ್ತಿಗಳು

    Q ಅಕ್ಷರದಿಂದ ಹೆಸರು ಆರಂಭ ಆಗುವವರ ಸುತ್ತ ಒಂದು ರಹಸ್ಯ ಸುತ್ತಿಕೊಂಡೇ ಇರುತ್ತದೆ. ಇವರು ಯಾವಾಗಲೂ ಟ್ರೆಂಡ್ ಅನುಸರಿಸುವವರಲ್ಲ. ಇವರೇ ಒಂದು ಹೊಸ ಮಾರ್ಗ ಹುಟ್ಟು ಹಾಕಿ, ಇತರರು ಅದನ್ನು ಅನುಸರಿಸುವಂತೆ ಮಾಡುತ್ತಾರೆ. ವಿಶ್ವಾಸಿಗಳು ಹಾಗೂ ನಂಬಿಕೆಗೆ ಅರ್ಹವಾದ ಇವರು ಅದ್ಭುತವಾದ ಗೆಳೆಯ/ಗೆಳತಿ, ಸಲಹೆಗಾರರು ಆಗಬಲ್ಲರು. ಒಮ್ಮೆ ಪಟ್ಟು ಹಿಡಿದು, ಗುರಿ ತಲುಪಲು ನಿರ್ಧರಿಸಿದರೆ ಅದೆಂಥ ಸನ್ನಿವೇಶ ಆದರೂ ತಮ್ಮ ಗಮನ ಬೇರೆಡೆಗೆ ಹರಿಸದೆ ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಆದರೆ ಇವರು ಸದಾ ತಮ್ಮ ಬಗ್ಗೆಯೇ, ತಮ್ಮ ಒಳಿತೇ ಆಲೋಚಿಸುತ್ತಾರೆ ಎಂದು ಇತರರು ದೂರುತ್ತಾರೆ.

    ಪ್ರೀತಿಪಾತ್ರರ ಸಲುವಾಗಿ ಎಂಥ ನೆರವಿಗೂ ಇವರು ಸಿದ್ಧ

    ಪ್ರೀತಿಪಾತ್ರರ ಸಲುವಾಗಿ ಎಂಥ ನೆರವಿಗೂ ಇವರು ಸಿದ್ಧ

    R ಅಕ್ಷರದ ಹೆಸರಿನವರು ಜ್ಞಾನವಂತರು. ಸುಪ್ತವಾಗಿ ಸದಾ ಜಾಗೃತರಾಗಿ ಇರುವವರು. ಹುಟ್ಟಿನಿಂದಲೇ ಇತರರನ್ನು ಸಂತೈಸುವ ಗುಣ ಇರುವವರು. ತಮ್ಮ ಪ್ರೀತಿಪಾತ್ರರ ಸಲುವಾಗಿ ಯಾವ ಹಂತದವರೆಗೆ ಹೋಗಿ ಸಹಾಯ ಮಾಡಬಲ್ಲಂಥವರು. ತುಂಬ ಸರಳವಾದ ಸ್ವಭಾವ, ನಡವಳಿಕೆ ಹಾಗೂ ಸದಾ ಶಾಂತಿ- ಸಮಾಧಾನ ಬಯಸುವ ಮನಸ್ತತ್ವದಿಂದ ಇವರ ಸ್ನೇಹವನ್ನು ಎಲ್ಲರೂ ಬಯಸುತ್ತಾರೆ. ಆದರೆ ಇವರು ಶೀಘ್ರ ಕೋಪಿಗಳು. ಒಮ್ಮೆ ಸಿಟ್ಟಾದರೆ ರೌದ್ರಾವತಾರ ತಾಳಿ, ಗಾಬರಿ ಹುಟ್ಟಿಸುತ್ತಾರೆ.

    ಹಣ ಗಳಿಕೆ ಮೊದಲ ಆದ್ಯತೆ

    ಹಣ ಗಳಿಕೆ ಮೊದಲ ಆದ್ಯತೆ

    S ಅಕ್ಷರದ ಹೆಸರಿನವರು ವಿಪರೀತ ವಿಶ್ವಾಸಾರ್ಹರು. ಆದರೆ ಪ್ರೀತಿ- ಪ್ರೇಮದ ವಿಷಯದಲ್ಲಿ, ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಇವರಿಗೆ ಬರುವುದಿಲ್ಲ. ಇವರಲ್ಲಿ ಹುಟ್ಟಿನಿಂದಲೇ ನಾಯಕತ್ವದ ಗುಣಗಳಿರುತ್ತವೆ. ಇವರ ವ್ಯಕ್ತಿತ್ವದಲ್ಲೇ ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿ ಇರುತ್ತದೆ. ಆ ಕಾರಣದಿಂದ ಇವರು ಎಲ್ಲೇ ಹೋದರೂ ಆಕರ್ಷಣೆಯ ಕೇಂದ್ರಬಿಂದು ಆಗುತ್ತಾರೆ. ತಮ್ಮ ಪಾಲಿಗೆ ದೊಡ್ಡ ಮಟ್ಟದ ಗುರಿಯನ್ನು ಇವರೇ ಹಾಕಿಕೊಂಡಿರುತ್ತಾರೆ. ಹಣ ಗಳಿಕೆ, ಹಣ ಗಳಿಕೆ ಎಂಬುದೇ ಸದಾ ತಪನೆ ಆಗಿರುತ್ತದೆ. ಯಾರ ಬಗ್ಗೆಯೇ ಆಗಲಿ ತುಂಬ ಪ್ರಾಮಾಣಿಕವಾದ ಪ್ರೀತಿ- ಕಾಳಜಿ ತೋರುವ ಗುಣ ಇರುತ್ತದೆ.

    ವಾಕ್ ಚಾತುರ್ಯವೇ ಶಕ್ತಿ

    ವಾಕ್ ಚಾತುರ್ಯವೇ ಶಕ್ತಿ

    T ಅಕ್ಷರದವರು ಅದೆಂಥ ಸನ್ನಿವೇಶವಾದರೂ ಅದೆಂಥ ವ್ಯಕ್ತಿಗಳನ್ನಾದರೂ ಮನವೊಲಿಸುವಂಥ ವಾಕ್ ಚಾತುರ್ಯ ಹೊಂದಿರುತ್ತಾರೆ. ತಾವು ಇರುವ ಸ್ಥಳದಲ್ಲಿ ಶಾಂತಿ- ಸಮಾಧಾನ ಇರಲಿ ಎಂದು ಬಯಸುವ ಇವರು ಆ ಸಲುವಾಗಿ ಎಲ್ಲ ಪ್ರಯತ್ನವನ್ನೂ ಮಾಡುತ್ತಾರೆ. ಶ್ರಮಪಡುವುದಕ್ಕೆ ಹಿಂದೆ- ಮುಂದೆ ನೋಡದ ಇವರು, ಅದೃಷ್ಟದ ಬಗ್ಗೆ ಕೂಡ ನಂಬಿಕೆ ಇರುವಂಥವರು. ಇವರಿಗೆ ಎಷ್ಟೇ ವಯಸ್ಸಾದರೂ ಎಂಥದ್ದೇ ಸ್ಥಾನದಲ್ಲಿದ್ದರೂ ಮಗುವಿನ ಅಮಾಯಕತೆಯೊಂದನ್ನು ಉಳಿಸಿಕೊಂಡಿರುತ್ತಾರೆ. ವಸ್ತುಗಳೋ ವಿಷಯವೋ ಒಂದು ಪದ್ಧತಿಯಲ್ಲಿ ಅಥವಾ ನಿಯಮ ಪ್ರಕಾರ ಇಲ್ಲ ಅಂದರೆ ಬಹಳ ಬೇಸರ ಆಗಿಬಿಡ್ತಾರೆ.

    ವಿಲಾಸಿ ಜೀವನ ನಡೆಸುವ ಸಲುವಾಗಿ ಶ್ರಮ ಪಡುವವರು

    ವಿಲಾಸಿ ಜೀವನ ನಡೆಸುವ ಸಲುವಾಗಿ ಶ್ರಮ ಪಡುವವರು

    U ಅಕ್ಷರದವರು ಜೀವನದ ಅತ್ಯುತ್ತಮವಾದದ್ದೆಲ್ಲ ಗಳಿಸಲು ಬಯಸುತ್ತಾರೆ. ವಿಲಾಸಿ ಜೀವನ ನಡೆಸಲು ಬೇಕಾದದ್ದನ್ನು ಪಡೆಯುವ ಸಲುವಾಗಿ ಭಾರೀ ಶ್ರಮ ಹಾಕುತ್ತಾರೆ. ಇವರು ಬುದ್ಧಿ ಹಾಗೂ ಮನಸು ಎರಡು ಅಲುಗಿನ ಕತ್ತಿಯ ರೀತಿಯಲ್ಲಿ ಏಕ ಕಾಲಕ್ಕೆ ಕೆಲಸ ಮಾಡುತ್ತವೆ. ಯಾವ ಸನ್ನಿವೇಶಕ್ಕೆ ಹೇಗೆ ವರ್ತಿಸಬೇಕು ಎಂದು ಆಗಲೇ ನಿರ್ಧರಿಸುವಂಥವರು. ಸದಾ ಹೊಸ ಆಲೋಚನೆ ಕಡೆಗೆ ಇವರ ಮನಸು ತುಡಿಯುತ್ತಿರುತ್ತದೆ. ತಾವು ಯಶಸ್ಸಿನ ಏಣಿ ಏರುವ ಕಾಲದಲ್ಲಿ ಪ್ರೀತಿಪಾತ್ರರನ್ನು ನಿರ್ಲಕ್ಷ್ಯ ಮಾಡುವ ಸಾಧ್ಯತೆ ಇರುತ್ತದೆ.

    ಅಪಾರ ಜ್ಞಾಪಕ ಶಕ್ತಿ ಇರುವ ಪೊಸೆಸಿವ್ ಗಳು

    ಅಪಾರ ಜ್ಞಾಪಕ ಶಕ್ತಿ ಇರುವ ಪೊಸೆಸಿವ್ ಗಳು

    V ಅಕ್ಷರದಿಂದ ಹೆಸರು ಆರಂಭ ಆಗುವಂಥವರು ಬಹಳ ಪ್ರಾಮಾಣಿಕರು. ಇವರ ಜ್ಞಾಪಕ ಶಕ್ತಿ ಅಪಾರವಾಗಿರುತ್ತದೆ. ಯಾವುದೇ ವಿಷಯವನ್ನಾದರೂ ತುಂಬ ದೀರ್ಘ ಕಾಲ ನೆನಪಿನಲ್ಲಿ ಇಟ್ಟುಕೊಂಡಿರುತ್ತಾರೆ. ಸಂಬಂಧದ ವಿಚಾರದಲ್ಲಿ ಇವರು ಬಹಳ ಪೊಸೆಸಿವ್ ಗಳು. ತಾವು ಅಂದುಕೊಂಡ ಕೆಲಸವನ್ನು ಯಾರಿಂದ ಮಾಡಿಸಬೇಕು ಎಂಬುದನ್ನು ಚೆನ್ನಾಗಿ ಬಲ್ಲರು. ತಮಾಷೆಯ ಕಾರಣಕ್ಕಾಗಿ ಇವರೇ ಗಾಸಿಪ್ ಗಳನ್ನು ಹಬ್ಬಿಸಿ ಮಜಾ ತೆಗೆದುಕೊಳ್ಳುತ್ತಾರೆ. ತಮ್ಮ ಕೆಲಸದ ಬಗ್ಗೆ ಬದ್ಧತೆ ಇರುವ ಇವರ ಮೇಲೆ ಉಳಿದವರಿಗೆ ಭಾರೀ ನಂಬಿಕೆ- ವಿಶ್ವಾಸ ಇರುತ್ತದೆ.

    ಎಲ್ಲವೂ ದಿಢೀರ್ ಆಗಲು ಬಯಸುವ ಮಂದಿ

    ಎಲ್ಲವೂ ದಿಢೀರ್ ಆಗಲು ಬಯಸುವ ಮಂದಿ

    ಇಂಗ್ಲಿಷಿನ W ಅಕ್ಷರದಿಂದ ಹೆಸರು ಆರಂಭ ಆಗುವವರು ಸ್ವಲ್ಪ ಆತುರದ ಸ್ವಭಾವದವರು. ಅಂದುಕೊಂಡಿದ್ದು ಛಕಾಛಕ್ ಆಗಿಬಿಡಬೇಕು ಎಂದು ಹಠಕ್ಕೆ ಬೀಳುತ್ತಾರೆ. ಇನ್ನೊಬ್ಬರು ಬೀಸಿದ ಬಲೆಗೆ ತಾನು ಬಿದ್ದಿದ್ದೇನೆ ಎಂದು ಸದಾ ಭಯವೊಂದು ಇವರನ್ನು ಕಾಡುತ್ತಿರುತ್ತದೆ. ಅದರಲ್ಲೂ ಸಂಬಂಧದ ವಿಚಾರದಲ್ಲಿ ಇವರಿಗೆ ಆ ಗಾಬರಿ ಇನ್ನೂ ಹೆಚ್ಚಿರುತ್ತದೆ. ಇವರಿಗೆ ಡೆಡ್ ಲೈನ್ ನಲ್ಲಿ ಕೆಲಸ ಮಾಡಬೇಕು ಎಂಬ ಒತ್ತಡ ಬಿದ್ದರೆ ಆಗುವುದಿಲ್ಲ. ಸಮಾಧಾನ- ಸಾವಧಾನವಾಗಿ ಇರುವಂಥ ವಾತಾವರಣದಲ್ಲೇ ಕೆಲಸ ಮಾಡಲು ಬಯಸುತ್ತಾರೆ.

    ಕಟ್ಟುಪಾಡಿಗೆ ಸಿಕ್ಕಿಬೀಳದವರು

    ಕಟ್ಟುಪಾಡಿಗೆ ಸಿಕ್ಕಿಬೀಳದವರು

    X ಅಕ್ಷರದವರು ಯಾವ ಕಟ್ಟುಪಾಡಿಗೂ ಸಿಕ್ಕಿಬೀಳಲು ಬಯಸದ ವ್ಯಕ್ತಿಗಳು. ದೊಡ್ಡ ಜವಾಬ್ದಾರಿ- ದೊಡ್ಡ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾದ ಸ್ಥಾನಮಾನ ಇವೆಲ್ಲ ಇವರಿಗೆ ಕಷ್ಟ. ಜೀವನದ ಒಂದು ಹಂತದಲ್ಲಿ ವಿಪರೀತ ದುರಾಸೆಗೆ ಬೀಳುವ ಸಾಧ್ಯತೆಗಳಿರುತ್ತವೆ. ಇನ್ನು ಜೀವನದಲ್ಲಿ ಶಿಸ್ತು ಪಾಲಿಸದೆ ಕೆಲವು ಸಮಸ್ಯೆಗಳನ್ನು ತಾವಾಗಿಯೇ ತಂದುಕೊಳ್ಳುತ್ತಾರೆ. ಇವರು ಒಳ್ಳೆ ಶಿಕ್ಷಕರು ಮತ್ತು ಉತ್ತಮ ತರಬೇತುದಾರರು ಆಗಬಲ್ಲರು. ಆದರೆ ಇವರು ಆಸೆಗೆ ಒಂದು ಮಿತಿ ಹಾಕಿಕೊಂಡರೆ ಜೀವನದಲ್ಲಿ ದೊಡ್ಡದನ್ನು ಸಾಧಿಸಬಲ್ಲರು.

    ಸ್ವಾತಂತ್ರ್ಯಪ್ರಿಯರಾದ ಇವರಿಗೆ ಸಾಮಾಜಿಕ ಸ್ಥಾನಮಾನ ಮುಖ್ಯ

    ಸ್ವಾತಂತ್ರ್ಯಪ್ರಿಯರಾದ ಇವರಿಗೆ ಸಾಮಾಜಿಕ ಸ್ಥಾನಮಾನ ಮುಖ್ಯ

    Y ಅಕ್ಷರದಿಂದ ಹೆಸರು ಆರಂಭ ಆಗುವವರು ಸ್ವಾತಂತ್ರ್ಯಪ್ರಿಯರು. ಅದಕ್ಕಾಗಿ ಎಂಥ ಸವಾಲಾದರೂ ಎದುರಿಸಬಲ್ಲರು. ಇವರಿಗೆ ಸಾಮಾಜಿಕ ಸ್ಥಾನ-ಮಾನ ಎಂಬುದು ಬಹಳ ಮುಖ್ಯ. ಇವರಲ್ಲಿ ಬಹುತೇಕರು ಶ್ರೀಮಂತ- ಸ್ಥಿತಿವಂತರಾದ ಬಾಳಸಂಗಾತಿಯನ್ನೇ ಆರಿಸಿಕೊಳ್ಳುತ್ತಾರೆ. ಇವರಿಗೆ ತಮ್ಮದೇ ಆದ ಒಂದು ರಕ್ಷಣಾ ವಲಯ ಇರುತ್ತದೆ. ಅದರೊಳಗೆ ಉಳಿದವರಿಗೆ ಪ್ರವೇಶ ಇರುವುದಿಲ್ಲ. ಇತರರ ನಿರೀಕ್ಷೆಗೆ ತಕ್ಕಂತೆ ಬದುಕುವ ಜಾಯಮಾನ ಇವರದಲ್ಲ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    The first letters of persons name reveal more information than one might actually know. Name has the power to affect your personality and destiny. In fact, your name holds answers to many questions and it says a lot about your personality traits as well. Here is the first letter of your name from M to Y reveals about personality.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more