ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಡನ್ ಗೆದ್ದಾಗ ಗಾಲ್ಫ್ ಆಟ, ಟ್ರಂಪ್ ಮುಂದಿನ ನಡೆ ಏನು ಎತ್ತ?

|
Google Oneindia Kannada News

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ನಾಲ್ಕು ದಿನಗಳ ರೋಚಕ ಕ್ಲೈಮ್ಯಾಕ್ಸ್ ಅಂತ್ಯಗೊಂಡಿದ್ದು, ಡೆಮಾಕ್ರೆಟಿಕ್ ಅಭ್ಯರ್ಥಿ ಜೋಸೆಫ್ ಬೈಡನ್ ಅವರು 46ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವುದು ಖಚಿತವಾಗಿದೆ. ಈ ನಡುವೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಲನ್ನು ಅರಗಿಸಿಕೊಳ್ಳಲಾಗದೆ ಪದೇ ಪದೇ ಟ್ವೀಟ್ ಮಾಡುತ್ತಿದ್ದಾರೆ.

Recommended Video

Joe Biden ಅಧ್ಯಕ್ಷರಾಗುತ್ತಿದ್ದ ಹಾಗೆಯೇ ಭಾರತೀಯರಿಗೆ ಸಂತಸದ ಸುದ್ದಿ | Oneindia Kannada

ಪೆನ್ಸಿಲ್ವೇನಿಯಾದಲ್ಲಿ ಜೋ ಬೈಡನ್ ಗೆಲುವು ಸಾಧಿಸುತ್ತಿದ್ದಂತೆ ಗೆಲುವಿಗೆ ಬೇಕಾದ ಮ್ಯಾಜಿಕ್ ನಂಬರ್ 270 ದಾಟಿ ಮುನ್ನಡೆದರು. ಬೈಡನ್ ಮುಂದಿನ ಅಧ್ಯಕ್ಷ ಎಂದು ಪ್ರಮುಖ ಮಾಧ್ಯಮಗಳು ಘೋಷಿಸತೊಡಗಿದವು. ಈ ಸಂದರ್ಭದಲ್ಲಿ ಟ್ರಂಪ್ ಏನ್ಮಾಡ್ತಾ ಇದ್ರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.

'ಅಮೆರಿಕ ಗ್ರೇಟ್' ಮಾಡಲು ಹೊರಟ ಟ್ರಂಪ್ ಸೋಲಿನಲ್ಲಿ ಈ ಪಾಠಗಳು ಇವೆಯೇ?'ಅಮೆರಿಕ ಗ್ರೇಟ್' ಮಾಡಲು ಹೊರಟ ಟ್ರಂಪ್ ಸೋಲಿನಲ್ಲಿ ಈ ಪಾಠಗಳು ಇವೆಯೇ?

ಅಮೆರಿಕದ ಮಿಕ್ಕೆಲ್ಲ ಅಧ್ಯಕ್ಷರಿಗಿಂತ ಭಿನ್ನ ವ್ಯಕ್ತಿತ್ವ ಹೊಂದಿರುವ ಟ್ರಂಪ್ ಅವರು ಬೈಡನ್ ಗೆಲುವಿನ ಸುದ್ದಿ ಬಿತ್ತರವಾಗುವ ಸಂದರ್ಭದಲ್ಲಿ ಪಶ್ಚಿಮ ವರ್ಜಿನಿಯಾದ ಕ್ಲಬ್ ವೊಂದರಲ್ಲಿ ಗಾಲ್ಫ್ ಆಟದಲ್ಲಿ ಮಗ್ನರಾಗಿದ್ದರು. ನಂತರ ಫೋಟೋಗೆ ಪೋಸ್ ನೀಡುತ್ತಿದ್ದರು.

ದಾನದತ್ತಿ, ಪ್ರವಾಸದಲ್ಲಿ ಹೆಚ್ಚು ಸಮಯ ಕಳೆಯಬಲ್ಲರೇ?

ದಾನದತ್ತಿ, ಪ್ರವಾಸದಲ್ಲಿ ಹೆಚ್ಚು ಸಮಯ ಕಳೆಯಬಲ್ಲರೇ?

ಸಾಮಾನ್ಯವಾಗಿ ಶ್ವೇತಭವನ ತೊರೆದ ಬಳಿಕ ಅಧ್ಯಕ್ಷರು ದಾನದತ್ತಿ ಎನ್ನುತ್ತಾ ಚಾರಿಟಿ ಸಂಸ್ಥೆ ಸ್ಥಾಪಿಸಿ ಅದರಲ್ಲೆ ಮಗ್ನರಾಗುತ್ತಾರೆ. ದೇಶ ವಿದೇಶ ಪ್ರವಾಸ ಮಾಡುತ್ತಾ, ಕುಟುಂಬದೊಡನೆ ಹೆಚ್ಚು ಕಾಲ ಕಳೆಯುತ್ತಾರೆ.

ಆದರೆ, ಟ್ರಂಪ್ ಆ ರೀತಿ ಇರಲು ಸಾಧ್ಯವೇ ಇಲ್ಲ, ತಮ್ಮ ನೆಚ್ಚಿನ ಮೈಕ್ರೊ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಇನ್ನಷ್ಟು ಹರಿತವಾದ ಟ್ವೀಟ್ ಮಾಡಲು ಶುರು ಮಾಡಬಹುದು. ಈಗಾಗಲೆ ಮತ ಎಣಿಕೆಯಲ್ಲಿ ಅಕ್ರಮವಾಗಿದೆ, ನನಗೆ ಲಕ್ಷಾಂತರ ಮತಗಳು ಮಿಸ್ ಆಗಿವೆ ಎಂದು ಟ್ವೀಟ್ ಮಾಡಿ ಗದ್ದಲ ಎಬ್ಬಿಸಿದ್ದಾರೆ.

ಇನ್ನು ರಿಪಬ್ಲಿಕನ್ ಪಕ್ಷದಲ್ಲಿ ಟ್ರಂಪ್ ಸ್ಥಾನಕ್ಕೇನು ಕುತ್ತು ಬರುವುದಿಲ್ಲ. ಪ್ರಭಾವಿಯಾಗಿ ಉಳಿಯಲಿದ್ದಾರೆ. 2024ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಟ್ರಂಪ್ ಮನಸ್ಸು ಮಾಡಬಹುದು.

ಟ್ರಂಪ್ ಟಿವಿ

ಟ್ರಂಪ್ ಟಿವಿ

ಟ್ರಂಪ್ ಬ್ರ್ಯಾಂಡ್ ನೇಮ್ ಇನ್ನೂ ಜೀವಂತ ಇರಿಸಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಟ್ರಂಪ್ ಮಾಡಬಹುದು. ಮಾಧ್ಯಮಗಳ ಜೊತೆ ಟ್ರಂಪ್ ಕಿತ್ತಾಟ ಎಲ್ಲರಿಗೂ ಗೊತ್ತಿರುವ ವಿಷಯ. ಒನ್ ಅಮೆರಿಕ ನ್ಯೂಸ್ ಹಾಗೂ ನ್ಯೂಸ್ ಮ್ಯಾಕ್ಸ್ ಟಿವಿ ಯಂಥ ಸಣ್ಣ ಮಟ್ಟದ ಮಾಧ್ಯಮಗಳನ್ನು ಬಳಸಿಕೊಂಡು ಟ್ರಂಪ್ ಟಿವಿ ವಾಹಿನಿ ಸ್ಥಾಪಿಸಿ ತಮ್ಮ ಮುಂದಿನ ನಡೆ ಬಗ್ಗೆ ಸ್ವ ಪ್ರಚಾರಕ್ಕೆ ಇಳಿಯಬಹುದು.

5 ಲಕ್ಷ ಭಾರತೀಯರಿಗೆ ಶುಭ ಸುದ್ದಿ ನೀಡಲಿರುವ ಜೋ ಬೈಡನ್5 ಲಕ್ಷ ಭಾರತೀಯರಿಗೆ ಶುಭ ಸುದ್ದಿ ನೀಡಲಿರುವ ಜೋ ಬೈಡನ್

ಕಾನೂನು ಹೋರಾಟ

ಕಾನೂನು ಹೋರಾಟ

ಟ್ರಂಪ್ ವಿರುದ್ಧ ಅನೇಕ ಮೊಕದ್ದಮೆಗಳಿದ್ದು, ಪೋರ್ನ್ ಸ್ಟಾರ್ ಜತೆ ವ್ಯವಹಾರ, ಅಕ್ರಮ ಹಣ ವಹಿವಾಟು ಇದರಲ್ಲಿ ಸೇರಿವೆ. ಟ್ರಂಪ್ ಕೂಡಾ ಚುನಾವಣೆಗೆ ಸಂಬಂಧಿಸಿದಂತೆ ತಕರಾರು ಅರ್ಜಿಗಳನ್ನು ಹಾಕುತ್ತಿದ್ದಾರೆ. ಬೈಡನ್ ಹೊರ ತರುವ ಕಾನೂನುಗಳ ವಿರುದ್ಧ ಟ್ರಂಪ್ ತಿರುಗೇಟು ನೀಡಲು ಆರಂಭಿಸಬಹುದು. ಸರ್ಕಾರ ಏನಾದರೂ ಟ್ರಂಪ್ ವಿರುದ್ಧ ಬಲವಾಗಿ ಕಾನೂನು ಸಮರ ಆರಂಭಿಸಿದರೆ, ಟ್ರಂಪ್ ವಿಶ್ರಾಂತಿ ಜೀವನ ಕೋರ್ಟ್ ಕಟ್ಲೆಗಳಲ್ಲೇ ಮುಕ್ತಾಯವಾಗಲಿದೆ.

ವಿರೋಧಿಗಳ ವಿರುದ್ಧ ಸಮರ ಸಾರಲಿರುವ ಟ್ರಂಪ್

ವಿರೋಧಿಗಳ ವಿರುದ್ಧ ಸಮರ ಸಾರಲಿರುವ ಟ್ರಂಪ್

ತಮಗೆ ನಂಬಿಕೆ ದ್ರೋಹ ಮಾಡಿದ್ದರೆ ಎನ್ನುವವರ ಪಟ್ಟಿ ತಯಾರಿಸಿರುವ ಟ್ರಂಪ್ ಅವರ ವಿರುದ್ಧ ಸಮರ ಸಾರಬಹುದು. ಈ ಪಟ್ಟಿಯಲ್ಲಿ ಎಫ್ ಬಿಐ ನಿರ್ದೇಶಕ ಕ್ರಿಸ್ಟೋಫರ್ ಎ ವ್ರೇ, ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ಸಿಐಎ ನಿರ್ದೇಶಕ ಜಿನಾ ಹಾಸ್ಪೆಲ್, ಡಾ ಅಂಥೋಣಿ ಫೌಸಿ ಅವರ ವಿರುದ್ಧ ಎಲ್ಲಾ ರೀತಿಯಲ್ಲಿ ಸೇಡ ತೀರಿಸಿಕೊಳ್ಳಬಹುದು.

ಸೆನೆಟರ್, ಉಪಾಧ್ಯಕ್ಷ, POTUS ಬೈಡನ್ ಜತೆ ಒಬಾಮಾ ಗೆಳೆತನಸೆನೆಟರ್, ಉಪಾಧ್ಯಕ್ಷ, POTUS ಬೈಡನ್ ಜತೆ ಒಬಾಮಾ ಗೆಳೆತನ

English summary
US President Donald Trump was playing golf and posing for pictures at the Trump National Golf Club in Virginia when rival Joe Biden declared winner of the 2020 US elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X