ಇರಾನ್ ವಿರುದ್ಧ ಗುಡುಗಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇನ್ನಷ್ಟು ದಾಳಿ ಎಚ್ಚರಿಕೆ | Operation Roaring Lion
ಅಮೆರಿಕ
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಇರಾನ್ ವಿರುದ್ಧ ಗುಡುಗಿದ್ದಾರೆ. ಮತ್ತೆ, ಮತ್ತೆ ದೊಡ್ಡ ಮಟ್ಟದಲ್ಲಿ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಮಾಡುತ್ತಿರುವ ಇರಾನ್ ಸೇನೆ ಹಾಗೂ ಇರಾನ್ ನಾಯಕರಿಗೆ ಈಗ ಡೊನಾಲ್ಡ್ ಟ್ರಂಪ್ ಅವರು ವಾರ್ನಿಂಗ್ ಕೊಟ್ಟಿದ್ದಾರೆ. ಇದೇ ರೀತಿ ಮತ್ತೆ ತಿಕ್ಕಾಟ ಮುಂದುವರಿದರೆ ಅಮೆರಿಕ ಸೇನೆ ದೊಡ್ಡ ಮಟ್ಟದಲ್ಲಿ ದಾಳಿ ಮಾಡುವ ಬಗ್ಗೆ ಮತ್ತು ಪರಿಸ್ಥಿತಿ ಇನ್ನಷ್ಟು ಕಠಿಣವಾಗಿಸುವ ಬಗ್ಗೆ ಕೂಡ ಟ್ರಂಪ್ ಅವರು ಎಚ್ಚರಿಸಿದ್ದಾರೆ. ಇರಾನ್ ಹಾಗೂ ಅಮೆರಿಕ ನಡುವೆ ಇನ್ನೇನು ಸಂಧಾನ ನಡೆಯಬಹುದು ಎಂಬ ನಿರೀಕ್ಷೆ ಮೂಡಿರುವ ಸಮಯದಲ್ಲೇ ಮತ್ತೆ ಬಡಿದಾಟ ಜೋರಾಗುವ ಮುನ್ಸೂಚನೆ ಈ ಮೂಲಕ ಸಿಕ್ಕಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಇರಾನ್
ಹಾಗೂ ಅಮೆರಿಕ ನಡುವೆ ಯುದ್ಧ ನಡೆಯುವಾಗ ಅರಬ್ ದೇಶಗಳ ಪರಿಸ್ಥಿತಿ ಬಿಗಡಾಯಿಸಿದೆ. ಅಮೆರಿಕ & ಇಸ್ರೇಲ್ ತಮ್ಮ ಮೇಲೆ ದಾಳಿ ಮಾಡಿವೆ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಇರಾನ್, ಮಧ್ಯಪ್ರಾಚ್ಯ ಭಾಗದಿಂದ ಕಚ್ಚಾತೈಲ ಸರಬರಾಜು ಮಾಡಲು ಅಡ್ಡಿ ಮಾಡುತ್ತಿದೆ. ಪೆಟ್ರೋಲ್ & ಡೀಸೆಲ್ ಸೇರಿದಂತೆ ಗ್ಯಾಸ್ ಸಿಲಿಂಡರ್ ಬೆಲೆಯೂ ಯುದ್ಧ ಪರಿಣಾಮ ಈಗ ಮುಗಿಲು ಮುಟ್ಟಿದೆ. ಹೀಗಿದ್ದಾಗ ಸಾಧ್ಯವಾದಷ್ಟು ಬೇಗ ಯುದ್ಧ ನಿಲ್ಲಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಆದರೆ ಈಗ ಮತ್ತೆ ತಿಕ್ಕಾಟವು ಜೋರಾಗಿ ದಾಳಿ ಹೆಚ್ಚಾಗುವ ಭೀತಿ ಆವರಿಸಿದೆ. id='are-slot-2' class='oiad oi-axt oiadv'>












Click it and Unblock the Notifications