ಖಮೇನಿ ಪುತ್ರ ಮತ್ತು ಇರಾನ್ ದೇಶದ ನೂತನ ಸರ್ವಾಧಿಕಾರಿಗಾಗಿ ಇಸ್ರೇಲ್ ತೀವ್ರ ಶೋಧ | Operation Roaring Lion
ಇಸ್ರೇಲ್
ಮತ್ತು ಅಮೆರಿಕ ಒಗ್ಗಟ್ಟಿನಿಂದ ಇರಾನ್ ವಿರುದ್ಧ ಹೋರಾಡುತ್ತಿದ್ದರೂ ಯುದ್ಧದಲ್ಲಿ ದೊಡ್ಡ ಗೆಲುವು ಸಿಗುತ್ತಿಲ್ಲ. ಇರಾನ್ ತನ್ನ ಬಳಿ ಇರುವ ಹೊಸ ಹೊಸ ಕ್ಷಿಪಣಿಗಳನ್ನು ಪ್ರಯೋಗ ಮಾಡುತ್ತಾ ಒಂದು ಕಡೆ ಅರಬ್ ದೇಶಗಳನ್ನು ಭಯಪಡಿಸುತ್ತಿದೆ, ಇದೇ ಸಮಯದಲ್ಲಿ ಇನ್ನೊಂದು ಕಡೆ ಇಸ್ರೇಲ್ ದೇಶದ ಮೇಲೆ ಕೂಡ ಭಾರಿ ದೊಡ್ಡ ಪ್ರಮಾಣದ ದಾಳಿ ಆಗುತ್ತಿದೆ. ಹೀಗೆ ಇಬ್ಬರೂ ತಿಕ್ಕಾಟ ನಡೆಸುವ ಸಮಯದಲ್ಲಿ ಜಾಗತಿಕವಾಗಿ ನೂರಾರು ದೇಶಗಳ ಆರ್ಥಿಕ ಪರಿಸ್ಥಿತಿ ಕೆಟ್ಟು ಹೋಗುತ್ತಿದೆ. ಅಮೆರಿಕದ ಪರಿಸ್ಥಿತಿ ಈಗ ಯಾರಿಗೂ ಬೇಡ ಎಂಬಂತೆ ಆಗಿದ್ದು, ಇನ್ನಷ್ಟು ದಿನಗಳ ಕಾಲ ಈ ಯುದ್ಧ ಹೀಗೆಯೇ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಕೈಜಾರಲಿದೆ. ಇಂತಹ ಸಮಯದಲ್ಲೇ ಖಮೇನಿ ಪುತ್ರ & ಇರಾನ್ ದೇಶದ ನೂತನ ಸರ್ವಾಧಿಕಾರಿಗಾಗಿ ಇಸ್ರೇಲ್ ತೀವ್ರ ಶೋಧ ಆರಂಭಿಸಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಇರಾನ್
ಮೇಲೆ ಈಗ ಸಂಪೂರ್ಣವಾಗಿ ನಿಯಂತ್ರಣ ಸಾಧಿಸಲು ಇರುವುದು ಒಂದೇ ಮಾರ್ಗ, ಅದು ಏನೆಂದರೆ ಈಗಿನ ವಾತಾವರಣ ತಣ್ಣಗಾಗಿಸಿ ಯುದ್ಧ ಗೆಲ್ಲಲು ಇರಾನ್ ಸರ್ವಾಧಿಕಾರಿ ಜೀವ ತೆಗೆಯಬೇಕು. ಅದರಲ್ಲೂ ಖಮೇನಿ ರೀತಿಯಲ್ಲೇ ಖಮೇನಿ ಮಗನಿಗೂ ಒಂದು ಗತಿ ಕಾಣಿಸುತ್ತೇವೆ ಎಂದು ಅಮೆರಿಕ & ಇಸ್ರೇಲ್ ಈಗಾಗಲೇ ಬಹಿರಂಗವಾಗಿ ಚಾಲೆಂಜ್ ಹಾಕಿವೆ. ಆದರೂ ಇರಾನ್ ನೂತನ ಸರ್ವಾಧಿಕಾರಿ ಎಲ್ಲಿ? ಎಂಬ ನಿಖರ ಸುಳಿವು ಯಾರಿಗೂ ಸಿಗುತ್ತಿಲ್ಲ. ಹೀಗೆ ಇದ್ದಾಗಲೇ ದಿಢೀರ್ ಅಂತಾ ಇಸ್ರೇಲ್ ಸೇನೆ ಬೇರೆಯದ್ದೇ ತಂತ್ರ ಪ್ರಯೋಗಿಸಲು ಮುಂದಾಗಿದೆ. ಮೊದಲಿಗೆ ಖಮೇನಿ ಮಗ ಎಲ್ಲಿ ಇರುವುದು? ಎಂಬ ವಿಚಾರದ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡು ಹುಡುಕುತ್ತಿದೆ. ಖಮೇನಿ ಮಗ ಹಾಗೂ ಇರಾನ್ ದೇಶದ ಹಾಲಿ ಸರ್ವಾಧಿಕಾರಿ ಮೊಜ್ತಬಾ ಖಮೇನಿ ಹತ್ಯೆ ಮಾಡಿದರೆ ತಮ್ಮ ಕಾರ್ಯ ಸುಲಭ ಎಂಬುದು ಈಗ ಇಸ್ರೇಲ್ ಲೆಕ್ಕಾಚಾರ. id='are-slot-2' class='oiad oi-axt oiadv'>












Click it and Unblock the Notifications