ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯ್ಯಯ್ಯೋ.. ಚುನಾವಣೆಯಲ್ಲಿ ಮೋಸ ಮಾಡಲು ಸ್ಕೆಚ್ ಹಾಕಿದ್ರಾ ಟ್ರಂಪ್..?

|
Google Oneindia Kannada News

ಅಬ್ಬಬ್ಬಾ.. ಅಮೆರಿಕದ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದ ಈ ಟ್ರಂಪ್ ಮಹಾಶಯನ ವಿರುದ್ಧ ಕೇಳಿಬರುತ್ತಿರುವ ಆರೋಪಗಳು ಒಂದೆರಡಲ್ಲ. ಅತ್ತ ಅಧಿಕಾರದಲ್ಲಿ ಇದ್ದಾಗಲೂ ಒಂದಲ್ಲ ಒಂದು ವಿಚಾರಕ್ಕೆ ಕಾಂಟ್ರವರ್ಸಿಗಳನ್ನ ಕ್ರಿಯೇಟ್ ಮಾಡಿಕೊಳ್ಳುತ್ತಿದ್ದ ಡೊನಾಲ್ಡ್ ಟ್ರಂಪ್, ಇದೀಗ ಅಧಿಕಾರದಿಂದ ಕೆಳಗಿಳಿದ ಬಳಿಕವೂ ಟ್ರೆಂಡ್‌ನ ಹುಟ್ಟುಹಾಕುತ್ತಿದ್ದಾರೆ. ಎಲ್ಲಿ ನೋಡಿದರೂ ಟ್ರಂಪ್ ಹೆಸರೇ ರಾರಾಜಿಸುತ್ತಿದೆ. ಆದರೆ ಇದು ಒಳ್ಳೆಯ ವಿಚಾರಕ್ಕೆ ಖಂಡಿತಾ ಅಲ್ಲ. ಮಾಡಬಾರದ್ದನ್ನು ಮಾಡಿ ಟ್ರಂಪ್ ಈಗ ಮತ್ತೆ ತಗ್ಲಾಕ್ಕೊಂಡಿದ್ದಾರೆ.

ಅಂದಹಾಗೆ, ಈ ಟ್ರಂಪ್ ಸೋಲು ಒಪ್ಪಿಕೊಳ್ಳಲು ಸಿದ್ಧರಿಲ್ಲದೆ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. 2020ರ ನವೆಂಬರ್‌ನಲ್ಲಿ ನಡೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮೋಸ ನಡೆದಿದೆ ಅಂತಾ ಸುಳ್ಳು ಹೇಳುವಂತೆ ಟ್ರಂಪ್ ಅಧಿಕಾರಿಗಳಿಗೆ ಒತ್ತಡ ಹಾಕಿದ್ದರು ಎಂಬುದು ಇದೀಗ ಬಯಲಾಗಿದೆ.

'ಸಂಸತ್ ಬಳಿ ಪ್ರತಿಭಟನೆ ಅಲ್ಲ, ಭೀಕರ ಯುದ್ಧ ನಡೆಸಲು ಬಂದಿದ್ದರು..!''ಸಂಸತ್ ಬಳಿ ಪ್ರತಿಭಟನೆ ಅಲ್ಲ, ಭೀಕರ ಯುದ್ಧ ನಡೆಸಲು ಬಂದಿದ್ದರು..!'

ಈ ಸಂಬಂಧ ಸೂಕ್ತ ಸಾಕ್ಷ್ಯಾಧಾರಗಳು ಕೂಡ ಲಭ್ಯವಾಗಿವೆ. ಟ್ರಂಪ್ ಆಡಳಿತದ ಅಟಾರ್ನಿ ಜನರಲ್ ಸೇರಿದಂತೆ ಹಿರಿಯ ಅಧಿಕಾರಿಗಳ ಮೇಲೆ ಟ್ರಂಪ್ ಒತ್ತಡ ಹೇರಿದ್ದರು ಎಂಬುದಕ್ಕೆ ಪುರಾವೆ ಕೂಡ ಸಿಕ್ಕಿದೆ. ಮತ್ತೊಂದ್ಕಡೆ ಟ್ರಂಪ್ ಏನು ಹೇಳಿದ್ದರು ಅನ್ನೋದನ್ನ ಕೇಳಿ ಸ್ವತಃ ತನಿಖಾಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.

‘ನೀನು ಹೇಳು, ನಾನು ನೋಡ್ಕೋತಿನಿ’

‘ನೀನು ಹೇಳು, ನಾನು ನೋಡ್ಕೋತಿನಿ’

2020ರ ಡಿಸೆಂಬರ್ ತಿಂಗಳ ಹೊತ್ತಿಗೆ ಟ್ರಂಪ್ ಅಧ್ಯಕ್ಷ ಪಟ್ಟ ಉಳಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ಹೋಗ್ತೀನಿ ಅನ್ನೋದನ್ನ ತೋರಿಸಿದ್ದರು. ಇದೇ ಸಂದರ್ಭದಲ್ಲಿ ಅಧಿಕಾರಿಗಳನ್ನ ಹೆದರಿಸುವ ಕೆಲಸ ನಡೆದಿತ್ತು. ಅಟಾರ್ನಿ ಜನರಲ್‌ಗೂ ಈ ವಿಚಾರದಲ್ಲಿ ಒತ್ತಡ ಹಾಕಲಾಗಿತ್ತು ಎನ್ನಲಾಗಿದೆ. 'ನೀನು ಚುನಾವಣೆಯಲ್ಲಿ ಮೊಸ ನಡೆದಿದೆ ಅಂತಾ ಸುಳ್ಳು ಹೇಳು ಸಾಕು, ಮಿಕ್ಕಿದ್ದನ್ನೆಲ್ಲಾ ನಾನು ಹಾಗೂ ರಿಪಬ್ಲಿಕನ್ಸ್ ನೋಡಿಕೊಳ್ತಾರೆ' ಅಂತಾ ಹೇಳಿದ್ದರಂತೆ ಟ್ರಂಪ್. ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಕ್ಕೆ ಇದೀಗ ಪಕ್ಕಾ ಸಾಕ್ಷ್ಯಾ ಸಿಕ್ಕಿಬಿಟ್ಟಿದೆ. ಈ ಮೂಲಕ ಟ್ರಂಪ್ ತಲೆಗೆ ಹೊಸ ಆರೋಪ ಸುತ್ತಿಕೊಂಡಿದೆ.

ಬಿಸಿ ಮುಟ್ಟಿಸುತ್ತಾ ಸಂಸತ್ ಸಮಿತಿ..?

ಬಿಸಿ ಮುಟ್ಟಿಸುತ್ತಾ ಸಂಸತ್ ಸಮಿತಿ..?

ಈಗಾಗಲೇ ಸಂಸತ್ ಸಮಿತಿ ರಚನೆ ಮಾಡಿ, 2021ರ ಜನವರಿ 6ರ ಗಲಭೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಹೊತ್ತಲ್ಲೇ ಟ್ರಂಪ್ ಮಾಡಿರುವ ಮೋಸದ ಕೆಲಸಕ್ಕೆ ಸಾಕ್ಷ್ಯ ಸಿಕ್ಕಿದೆ. 2021ರ ಜನವರಿ 6ರಂದು ಅಮೆರಿಕದಲ್ಲಿ ಸಂಸತ್ ಭವನದ ಮೇಲೆ ದಾಳಿ ನಡೆದಿತ್ತು. ಈ ಗಲಾಟೆಯಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದರು. ಇಡೀ ಅಮೆರಿಕದ ಇತಿಹಾಸದಲ್ಲೇ ಈ ಘಟನೆ ಕರಾಳ ಅಧ್ಯಾಯವಾಗಿತ್ತು. ಹೀಗಾಗಿ ನೂತನ ಅಧ್ಯಕ್ಷ ಬೈಡನ್ ತಂಡ ರಣತಂತ್ರ ರೂಪಿಸಿ ಸಂಸತ್ ಸಮಿತಿ ನೇತೃತ್ವದಲ್ಲಿ ಜನವರಿ 6ರ ಘಟನೆಯ ತನಿಖೆ ನಡೆಸುತ್ತಿದೆ. ಆದ್ರೆ ಟ್ರಂಪ್ ತಾವಾಗಿಯೇ ಬಂದು ಲಾಕ್ ಆಗಿದ್ದಾರೆ.

ಬರೀ ಸುಳ್ಳು, ಹಸಿ ಹಸಿ ಸುಳ್ಳು..! 2024ರ ಚುನಾವಣೆಗೆ ನಿಲ್ಲುವೆ ಎಂದ ಟ್ರಂಪ್..!ಬರೀ ಸುಳ್ಳು, ಹಸಿ ಹಸಿ ಸುಳ್ಳು..! 2024ರ ಚುನಾವಣೆಗೆ ನಿಲ್ಲುವೆ ಎಂದ ಟ್ರಂಪ್..!

ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಕ್ಯಾಪಿಟಲ್ ಹಿಲ್ ಕೇವಲ ಕಟ್ಟಡವಲ್ಲ. ಅದು ಅಮೆರಿಕ ಹಾಗೂ ಅಮೆರಿಕನ್ನರ ಪಾಲಿಗೆ ಗರ್ಭಗುಡಿ ಇದ್ದಂತೆ. ಇಂತಹ ಪವಿತ್ರ ಸ್ಥಳದ ಮೇಲೆ ಟ್ರಂಪ್ & ಗ್ಯಾಂಗ್ ಅಟ್ಯಾಕ್ ಮಾಡಿತ್ತು. ಕ್ಯಾಪಿಟಲ್ ಹಿಲ್ ಗಲಭೆಗೆ ಮುನ್ನ ಟ್ರಂಪ್ ನಡೆಸಿದ ಪ್ರಚೋದನಾಕಾರಿ ಭಾಷಣ, ಬೆಂಬಲಿಗರನ್ನು ಒಳಗೆ ನುಗ್ಗುವಂತೆ ಪ್ರೇರಿಪಿಸಿತ್ತು. ಆದರೆ ಹೀಗೆ ಸಂಸತ್ ಕಟ್ಟಡದ ಒಳಗೆ ನುಗ್ಗಿದ ಟ್ರಂಪ್ ಬೆಂಬಲಿಗರು ಕೈಯಲ್ಲಿ ದೊಣ್ಣೆ, ಗನ್ ಸೇರಿದಂತೆ ಮಾರಕಾಸ್ತ್ರಗಳನ್ನ ಹಿಡಿದಿದ್ದರು. ಮಾತ್ರವಲ್ಲ ಸಂಸತ್ ಸದಸ್ಯರು ಕೂರುವ ಜಾಗದಲ್ಲಿ ಕೂತು ಸಿಗರೇಟ್ ಸೇದಿದ್ದಾರೆ, ಸಿಗಾರ್ ಹೊಡೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಅಸಹ್ಯಕರವಾಗಿ ವರ್ತಿಸಿ, ಅವರೆಷ್ಟು ಸೈಕೋಗಳು ಎಂಬುದನ್ನ ಸಾಬೀತು ಮಾಡಿದ್ದಾರೆ. ಅದರಲ್ಲೂ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕಚೇರಿ ಮೊದಲ ಟಾರ್ಗೆಟ್ ಆಗಿತ್ತು.

 ಹಂತ ಹಂತದಲ್ಲೂ ಹೋರಾಟ..!

ಹಂತ ಹಂತದಲ್ಲೂ ಹೋರಾಟ..!

ಪ್ರತಿ ಹಂತದಲ್ಲೂ ಟ್ರಂಪ್ ವಿರುದ್ಧ ಗಟ್ಟಿ ಧ್ವನಿ ಎತ್ತಿದ ಗಟ್ಟಿಗಿತ್ತಿ ಪೆಲೋಸಿ. ಇದೀಗ ಟ್ರಂಪ್ ವಿರುದ್ಧದ ವಾಗ್ದಂಡನೆ ನಿರ್ಣಯಕ್ಕೆ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವು ತಿಂಗಳ ಹಿಂದೆ ಕೂಡ ಅಮೆರಿಕದ ಹೌಸ್ ಆಫ್ ಕಾಂಗ್ರೆಸ್‌ನಲ್ಲಿ ಟ್ರಂಪ್ ವಿರುದ್ಧ ವಾಗ್ದಂಡನೆ ನಡೆದು, ಅದಕ್ಕೆ ಅನುಮೋದನೆ ಸಿಕ್ಕಿತ್ತು. ಆಗಲೂ ಪೆಲೋಸಿ ಪಾತ್ರ ಮಹತ್ವದ್ದಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ಅಷ್ಟು ಪ್ರಭಾವಶಾಲಿ ಮಹಿಳೆ ನ್ಯಾನ್ಸಿ ಪೆಲೋಸಿ. ಹೀಗೆ ಪೆಲೋಸಿ ಹವಾ ಹೇಗಿದೆ ಎಂದರೆ, ಖುದ್ದು ರಿಪಬ್ಲಿಕನ್ ಸದಸ್ಯರು ಕೂಡ ಪೆಲೋಸಿ ಮಾತಿಗೆ ಚಪ್ಪಾಳೆ ತಟ್ಟುತ್ತಾರೆ.

ಹಲವು ಬಾರಿ ದಾಳಿ ನಡೆದಿದೆ

ಹಲವು ಬಾರಿ ದಾಳಿ ನಡೆದಿದೆ

1814ರ ನಂತರ 1835ರಲ್ಲಿಯೂ ಕ್ಯಾಪಿಟಲ್ ಹಿಲ್ ಮೇಲೆ ಅಟ್ಯಾಕ್ ಆಗಿತ್ತು. ಅಂದಿನ ಅಧ್ಯಕ್ಷ ಆ್ಯಂಡ್ರೊ ಜಾಕ್ಸನ್ ಹತ್ಯೆ ಮಾಡಲು ಸಂಚು ಹೂಡಿದ್ದ ಸಂದರ್ಭದಲ್ಲಿ ಕಟ್ಟಡದ ಮೇಲೆ ದಾಳಿ ನಡೆದಿತ್ತು. ನಂತರ 1856, 1915, 1954, 1971, 1983 ಮತ್ತು 1998ರಲ್ಲಿ ಕ್ಯಾಪಿಟಲ್ ಹಿಲ್ ಮೇಲೆ ದಾಳಿ ನಡೆದಿದೆ. ಆದರೆ ಇದೀಗ ಟ್ರಂಪ್ ಬೆಂಬಲಿಗರು ನಡೆಸಿರುವ ದಾಳಿ ಅಮೆರಿಕದ ಮಾನ ಹರಾಜು ಹಾಕಿದೆ. ಹಾಗೇ ಈ ದಾಳಿ ಅಮೆರಿಕ ಇತಿಹಾಸದ ಪುಟ ಸೇರಿದೆ.

English summary
Another evidence found against American ex-president Trump’s false allegations against 2020 election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X