ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನನ್ನು ಹತ್ಯೆ ಮಾಡಿದರೂ ಕಾಶ್ಮೀರ ಭಾರತದ ಭಾಗವಾಗಿಯೇ ಇರಲಿದೆ: ಫಾರೂಖ್ ಅಬ್ದುಲ್ಲಾ

|
Google Oneindia Kannada News

ಶ್ರೀನಗರ, ಅಕ್ಟೋಬರ್ 14: ನನ್ನನ್ನು ಹತ್ಯೆ ಮಾಡಿದರೂ ಕೂಡ ಕಾಶ್ಮೀರವು ಭಾರತದ ಭಾಗವೇ ಆಗಿರಲಿದೆ ಎಂದು ನ್ಯಾಷನಲ್ ಕಾನ್ಪರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ.

ಎಂದಿಗೂ ಕಾಶ್ಮೀರ ಪಾಕಿಸ್ತಾನದ ಪಾಲಾಗುವುದಿಲ್ಲ ಎಂದಿದ್ದಾರೆ. ಅಕ್ಟೋಬರ್ 7 ರಂದು ಇಲ್ಲಿನ ಗುರುದ್ವಾರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಈದ್ಗಾದಲ್ಲಿರುವ ಸರ್ಕಾರಿ ಶಾಲೆಯ ಪ್ರಾಂಶುಪಾಲ ಸುಪಿಂದರ್ ಕೌರ್ ಅವರ ಸಂತಾಪ ಸಭೆಯಲ್ಲಿ ಮಾತನಾಡಿದ ಅಬ್ದುಲ್ಲಾ, ಕಾಶ್ಮೀರದ ಜನರು ಧೈರ್ಯದಿಂದ ಇರಬೇಕು ಮತ್ತು ಒಗ್ಗಟ್ಟಾಗಿ ಕೊಲೆಗಾರರ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.

"ಭದ್ರತೆ ಕೊಡ್ತೀವಿ, ಊರು ಬಿಡಬೇಡಿ": ಬೆದರಿದ ನೌಕರರಿಗೆ ಕಾಶ್ಮೀರ ಸರ್ಕಾರದ ಭರವಸೆ

ಕೌರ್ ಹತ್ಯೆಗೆ ದುಃಖ ವ್ಯಕ್ತಪಡಿಸಿದ ಅವರು 1990ರಲ್ಲಿ ಭಯದಿಂದ ಎಲ್ಲರ ಕಣಿವೆ ರಾಜ್ಯವನ್ನು ತೊರೆದರು ಆದರೆ ಸಿಖ್ ಸಮುದಾಯ ಮಾತ್ರ ಕಾಶ್ಮೀರ ತೊರೆಯಲಿಲ್ಲ, ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ, ಏನೇ ಬಂದರು ನಾವು ನಿಮ್ಮ ಜೊತೆಗಿರುತ್ತೇವೆ ಎಂದು ವಿಶ್ವಾಸ ಮಾತುಗಳನ್ನಾಡಿದ್ದಾರೆ.

Farooq Abdullah Says Kashmir Will Remain Part Of India Even If I am Killed

ನಾವು ಈ ಮೃಗಗಳ ವಿರುದ್ಧ ಹೋರಾಡಬೇಕು, ಏನೇ ಬಂದರೂ ನಾವು ಭಾರತದ ಭಾಗವಾಗಿರಬೇಕು, ಅವರು ನನ್ನನ್ನು ಶೂಟ್ ಮಾಡಿ ಕೊಂದರೂ ಈ ನಿರ್ಧಾರ ಬದಲಾಗಬಾರದು ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

2 ದಿನಗಳಲ್ಲಿ ಮೂವರು ಅಲ್ಪಸಂಖ್ಯಾತರನ್ನು ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಮಾಯಕರ ಹತ್ಯೆ ಖಂಡಿಸಿ ಭಾರೀ ಸಂಖ್ಯೆಯಲ್ಲಿ ಜನರು ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದ್ದಾರೆ.

ಈ ನಡುವೆ ವಿವಿಧ ರಾಜಕೀಯ ಪಕ್ಷಗಳು ಕೂಡಾ ಹತ್ಯೆಯನ್ನು ಖಂಡಿಸಿವೆ. ಜೊತೆಗೆ ರಾಜ್ಯದ ವಿಷಯದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಏಕಪಕ್ಷೀಯ ಕ್ರಮಗಳಿಂದಲೇ ಈ ಹತ್ಯೆ ನಡೆದಿದೆ ಎಂದು ಗುಪ್ಕರ್‌ ಕೂಟದ ನಾಯಕರು ದೂರಿದ್ದಾರೆ. ಜೊತೆಗೆ 1990ರ ದಶಕದಲ್ಲಿ ಕಾಡಿದ್ದ ಹಿಂಸಾಚಾರ ಮತ್ತೆ ಕಾಣಿಸಿಕೊಳ್ಳಲು ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಉಗ್ರ ಉಪಟಳ ಮತ್ತೆ ಹೆಚ್ಚಾಗಿದ್ದು ಗುರುವಾರ ಇಬ್ಬರು ಶಿಕ್ಷಕರನ್ನು ಗುಂಡಿಟ್ಟು ಕೊಂದ ನಂತರ ಕಾಶ್ಮೀರದ ಜನರು ಉಗ್ರರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ದಶಕಗಳ ಹಿಂದೆ ಕಾಶ್ಮೀರಿ ಪಂಡಿತರ ಮೇಲೆ ಉಗ್ರರು ನಡೆಸುತ್ತಿದ್ದ ಹಿಂಸಾಚಾರ ಮತ್ತೆ ಆರಂಭವಾಗಿದ್ದು ಕಳೆದ 5 ದಿನಗಳಲ್ಲಿ 7 ಜನರನ್ನು ಉಗ್ರರು ಬಲಿ ಪಡೆದಿದ್ದಾರೆ.

ಕಾಶ್ಮೀರಿ ಪಂಡಿತರಿಗೆ ಸಮುದಾಯಕ್ಕೆ ಸೇರಿದ ಅಲ್ಪಸಂಖ್ಯಾತರ ಮೇಲೆ ಉಗ್ರರು ಸತತವಾಗಿ ದಾಳಿ ನಡೆಸುತ್ತಿದ್ದಾರೆ. ಇದರಿಂದ ಕ್ರೋಧಗೊಂಡಿರುವ ಕಾಶ್ಮೀರದ ಜನರು ಬೀದಿಗಿಳಿದು ಉಗ್ರರ ಅಟ್ಟಹಾಸವನ್ನು ಖಂಡಿಸಿದ್ದಾರೆ. ಜೊತೆಗೆ ಕಾಶ್ಮೀರ ಭಾಗದಲ್ಲಿ ಸರ್ಕಾರಿ ಉದ್ಯೋಗದಲ್ಲಿ ಹಲವು ಕಾಶ್ಮೀರಿ ಪಂಡಿತರು ಜೀವಭಯದಿಂದಾಗಿ ಮರಳಿ ಜಮ್ಮುವಿನತ್ತ ತೆರಳಲು ಆರಂಭಿಸಿದ್ಧಾರೆ.

ಈ ನಡುವೆ ಗುರುವಾರ ನಡೆದ ದಾಳಿಯಲ್ಲಿ ಹತ್ಯೆಯಾಗಿದ್ದ ಬಿಹಾರದ ಶಿಕ್ಷಕರ ಮೃತ ಶರೀರವನ್ನು ಊರಿಗೆ ಕೊಂಡೊಯ್ಯಲಾಗದೇ ಶ್ರೀನಗರದಲ್ಲೇ ಅಂತ್ಯಸಂಸ್ಕಾರ ಮಾಡಲಾಗಿದೆ.

ಉಗ್ರರಿಂದ ಶಿಕ್ಷಕರ ಹತ್ಯೆ: ಎರಡು ದಿನಗಳ ಹಿಂದಷ್ಟೇ ಶ್ರೀನಗರದ ಈದ್ಗಾ ಸಂಗಮ್ ಪ್ರದೇಶದ ಶಾಲೆಯಲ್ಲಿ ಭಯೋತ್ಪಾದಕರು ಈ ಹತ್ಯಾಕಾಂಡವನ್ನು ನಡೆಸಿದ್ದರು. ಭಯೋತ್ಪಾದಕರು ಮಹಿಳಾ ಪ್ರಾಂಶುಪಾಲೆ ಸುಪಿಂದರ್ ಕೌರ್ ಮತ್ತು ದೀಪಕ್ ಚಂದ್ ಎಂಬ ಮತ್ತೊಬ್ಬ ಶಿಕ್ಷಕನ ತಲೆಗೆ ಗುಂಡು ಹಾರಿಸಿ ಈ ಹತ್ಯೆ ನಡೆಸಿದ್ದರು.

ಕೋಮು ಸೌಹಾರ್ದತೆಗೆ ಭಂಗ ತರುವ ಪ್ರಯತ್ನ: ಸಾಮಾನ್ಯ ನಾಗರಿಕರನ್ನು ಕೊಲ್ಲುವ ಮೂಲಕ ಭಯೋತ್ಪಾದಕರು ಕಾಶ್ಮೀರದ ಹಳೆಯ ಹಾಗೂ ಸಾಂಪ್ರದಾಯಿಕ ಕೋಮು ಸೌಹಾರ್ದತೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.

ಘಟನೆಗಳ ಬಗ್ಗೆ ಕೆಲವು ಮಹತ್ವದ ಸುಳಿವು ಸಿಕ್ಕಿದೆ ಎಂದು ಡಿಜಿಪಿ ಹೇಳಿದ್ದಾರೆ. ಶೀಘ್ರದಲ್ಲೇ ಹಂತಕರನ್ನು ಹಿಡಿಯಲಾಗುವುದು. ಸುದ್ದಿ ಸಂಸ್ಥೆ KNO ಪ್ರಕಾರ, ಸರ್ಕಾರಿ ಬಾಲಕರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತನಿಖೆಯ ಸಮಯದಲ್ಲಿ, ಮುಗ್ಧ ನಾಗರಿಕರ ಹತ್ಯೆಯು ಭಯೋತ್ಪಾದಕರ ಹತಾಶೆ ಮತ್ತು ಅನಾಗರಿಕತೆಯನ್ನು ತೋರಿಸುತ್ತದೆ ಎಂದು ಡಿಜಿಪಿ ಹೇಳಿದ್ದಾರೆ. ಇದು ಕಾಶ್ಮೀರದ ಸ್ಥಳೀಯ ಮುಸ್ಲಿಮರ ಮಾನಹಾನಿ ಮಾಡುವ ಸಂಚು ಎಂದೂ ಆರೋಪಿಸಿದ್ದಾರೆ.

English summary
Kashmir will never become Pakistan as we are part of India and will remain so even if I am killed , National Conference president Farooq Abdullah said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X