• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾದಿಂದ ನನ್ನ ಹೆಂಡತಿಗೆ ಮುತ್ತು ಕೊಡಲೂ ಆಗಿಲ್ಲ; ಫಾರೂಖ್ ಅಬ್ದುಲ್ಲಾ

|

ಶ್ರೀನಗರ, ಜನವರಿ 18: "ಕೊರೊನಾ ವೈರಸ್ ಏನೆಲ್ಲಾ ಮಾಡಿದೆ, ಈ ಸೋಂಕಿನಿಂದಾಗಿ ನನ್ನ ಹೆಂಡತಿಗೆ ಮುತ್ತು ಕೊಡಲೂ ಸಾಧ್ಯವಾಗಿಲ್ಲ" ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ನೀಡಿರುವ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗುರ್ಜರ್ ದೇಶ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಸೂದ್ ಅಹ್ಮದ್ ಚೌಧರಿ ಅವರ ಜೀವನಚರಿತ್ರೆಯ ಪುಸ್ತಕವನ್ನು ಭಾನುವಾರ ಫಾರೂಖ್ ಅಬ್ದುಲ್ಲಾ ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭ ಮೂವತ್ತೈದು ನಿಮಿಷಗಳ ಕಾಲ ಭಾಷಣ ಮಾಡಿದ ಅವರು, ಕೊರೊನಾ ವೈರಸ್ ಪರಿಣಾಮಗಳ ಕುರಿತೂ ಮಾತನಾಡುತ್ತಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈ ಹೇಳಿಕೆ ನೀಡಿ ಕಾರ್ಯಕ್ರಮದಲ್ಲಿ ಸೇರಿದ್ದ ಜನರನ್ನು ನಗಿಸಿದ್ದಾರೆ. ಮುಂದೆ ಓದಿ...

ಕಾಶ್ಮೀರಿಗಳಿಗೆ ತಾವು ಭಾರತೀಯರು ಎನಿಸುತ್ತಿಲ್ಲ: ಫಾರೂಖ್ ಅಬ್ದುಲ್ಲಾಕಾಶ್ಮೀರಿಗಳಿಗೆ ತಾವು ಭಾರತೀಯರು ಎನಿಸುತ್ತಿಲ್ಲ: ಫಾರೂಖ್ ಅಬ್ದುಲ್ಲಾ

"ಅಪ್ಪಿಕೊಳ್ಳಲೂ ಭಯಪಡುವಂತೆ ಮಾಡಿದೆ"

"ಕೊರೊನಾ ಸೋಂಕಿನಿಂದಾಗಿ ಹಸ್ತಲಾಘನ ಮಾಡಲು ಹಾಗೂ ಅಪ್ಪಿಕೊಳ್ಳಲೂ ಭಯಪಡುವಂತೆ ಆಗಿಬಿಟ್ಟಿದೆ. ಏನೇ ಮಾಡಬೇಕಾದರೂ ಮೂರು ಬಾರಿ ಯೋಚಿಸುವಂತೆ ಆಗಿದೆ. ಕೊರೊನಾ ಎಲ್ಲವನ್ನೂ ಬದಲಿಸಿದೆ. ಯಾರಿಗೆ ಗೊತ್ತು, ಯಾವಾಗ ಎಲ್ಲಿ ಯಾರಿಗೆ ಏನಾಗುತ್ತದೆ ಎಂದು" ಎಂದಿದ್ದಾರೆ.

"ಹೆಂಡತಿಗೆ ಮುತ್ತು ಕೊಡಲೂ ಸಾಧ್ಯವಾಗಿಲ್ಲ"

"ಕೊರೊನಾ ಸೋಂಕಿನ ಕುರಿತು ಅನುಭವಗಳನ್ನು ಹಂಚಿಕೊಳ್ಳುವ ಸಂದರ್ಭ "ಕೊರೊನಾ ಭಯದಿಂದಾಗಿ ನನ್ನ ಹೆಂಡತಗೆ ಮುತ್ತು ಕೊಡಲೂ ಸಾಧ್ಯವಾಗಿಲ್ಲ. ನನ್ನ ಹೃದಯ ಬಯಸಿದರೂ ಅಪ್ಪಿಕೊಳ್ಳುವ ಮಾತೇ ಇಲ್ಲ" ಎಂದೂ ಹೇಳಿದ್ದಾರೆ.

 ವೈರಲ್ ಆದ ಫಾರೂಖ್ ಹೇಳಿಕೆ

ವೈರಲ್ ಆದ ಫಾರೂಖ್ ಹೇಳಿಕೆ

ತಾನು ಕಾರ್ಯಕ್ರಮವೊಂದರಲ್ಲಿ ಮಾಸ್ಕ್‌ ಧರಿಸದ ಫೋಟೊ ಕಂಡು ಮನೆಗೆ ಬಂದಾಕ್ಷಣ ನನ್ನ ಮಗಳು ನನ್ನನ್ನು ತರಾಟೆಗೆ ತೆಗೆದುಕೊಂಡಳು. ಆದ್ದರಿಂದ ಈಗ ಹುಷಾರಾಗಿದ್ದೇನೆ ಎಂದು ಹೇಳಿದ್ದಾರೆ. ಫಾರೂಖ್ ಅಬ್ದುಲ್ಲಾ ಅವರು ಹೇಳಿಕೆ ನೀಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 ಕೊರೊನಾ ಲಸಿಕೆ ಬಗ್ಗೆ ಹಾರೈಕೆ

ಕೊರೊನಾ ಲಸಿಕೆ ಬಗ್ಗೆ ಹಾರೈಕೆ

ಈಗ ದೇಶದಲ್ಲಿ ಕೊರೊನಾ ಲಸಿಕೆಗಳು ಅಭಿವೃದ್ಧಿಗೊಂಡಿವೆ. ಲಸಿಕಾ ಅಭಿಯಾನವೂ ನಡೆಯುತ್ತಿದೆ. ಈ ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಕೇಳಿಕೊಳ್ಳುತ್ತೇನೆ. ಆಗಲಾದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರಬಹುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

English summary
National Conference president Farooq Abdullah said he had not kissed his wife since the outbreak of the coronavirus pandemic,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X