• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭದ್ರಾವತಿಯ 1299 ಮಂದಿಗೆ ಕೊರೊನಾ ಪರೀಕ್ಷೆ: ಇಬ್ಬರಿಗೆ ಪಾಸಿಟಿವ್

|

ಭದ್ರಾವತಿ, ಜೂನ್ 16: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ 1299 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಇಬ್ಬರಿಗೆ ಮಾತ್ರ ಪಾಸಿಟಿವ್ ವರದಿ ಬಂದಿದ್ದು, ಆತಂಕವನ್ನು ಕೊಂಚ ಕಡಿಮೆ ಮಾಡಿದೆ.

ಕಳೆದ ತಿಂಗಳಿನಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಬೇರೆ ರಾಜ್ಯಗಳಿಂದ ಬರುತ್ತಿರುವವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಸಿಟಿವ್ ವರದಿಯಾಗುತ್ತಿದೆ. ಕೊರೊನಾ ತಡೆಗೆ ಬೇಕಾದ ಎಲ್ಲ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ.

ಕರ್ನಾಟಕದಲ್ಲಿ ಕೊರೊನಾ ವೈರಸ್‌ಗೆ ಮೊದಲ ಪೊಲೀಸ್ ಸಾವು

ಲಾಕ್‌ಡೌನ್ ಸಡಿಲಿಕೆಯಿಂದ ಬಸ್‌ ಸಂಚಾರ ಶುರುವಾಗಿದ್ದು, ಕೊರೊನಾ ಕೇಸ್‌ಗಳ ಸಂಖ್ಯೆಯಲ್ಲಿಯೂ ಏರಿಕೆ ಕಾಣುತ್ತಿದೆ. ವೈರಸ್‌ ಹಬ್ಬುವಿಕೆ ಪ್ರಮಾಣ ಜಾಸ್ತಿಯಾಗುತ್ತಿದೆ. ಈ ಹಿನ್ನಲೆಯಲ್ಲಿ ಭದ್ರಾವತಿಯಲ್ಲಿ ಬೇರೆ ಬೇರೆ ರಾಜ್ಯಗಳಿಂದ ಹಾಗೂ ಜಿಲ್ಲೆಗಳಿಂದ ಬಂದವರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ.

ರೋಗಿಯ ಸಂಪರ್ಕ ಹೊಂದಿದವರಿಗೆ ಮತ್ತು ರೋಗ ಲಕ್ಷಣಗಳು ಕಂಡು ಬಂದವರಿಗು ಗಂಟಲು ದ್ರವ ಮತ್ತು ರಕ್ತ ಮಾದರಿ ಸಂಗ್ರಹ ಮಾಡಲಾಗಿದೆ. ಒಟ್ಟು 1299 ಜನರಿಗೆ ಪರೀಕ್ಷೆ ನಡೆದಿದ್ದು, ಇಬ್ಬರಿಗೆ ಪಾಸಿಟಿವ್ ಇರುವುದು ತಿಳಿದು ಬಂದಿದೆ. ಈ ಪೈಕಿ 1286 ಜನರಿಗೆ ಕೊರೊನಾ ನೆಗೆಟಿವ್ ವರದಿ ಬಂದಿದೆ. ಆದರೆ, ಇನ್ನೂ 11 ಜನರ ವರದಿ ಬರಬೇಕಿದೆ.

ನಿನ್ನೆಯವರೆಗೆ ಕರ್ನಾಟಕದಲ್ಲಿ 88 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. 7213 ಒಟ್ಟು ಸೋಂಕಿತರ ಸಂಖ್ಯೆಯಾಗಿದೆ. 2987 ಸಕ್ರೀಯ ಪ್ರಕರಣಗಳಿವೆ. 4135 ಜನರು ಗುಣಮುಖರಾಗಿದ್ದಾರೆ.

English summary
Two people tested positive for coronavirus among 1299 tests in Bhadravathi, Shivamogga. 1286 people tested negative.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X