ವಿಡಿಯೋ : ಆರೋಗ್ಯ ಸುಧಾರಿಸಿದೆ ಎಂದ ಕಾಗೋಡು ತಿಮ್ಮಪ್ಪ

Posted By:
Subscribe to Oneindia Kannada

ಶಿವಮೊಗ್ಗ, ಆಗಸ್ಟ್ 15 : ಕಂದಾಯ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಭಾಷಣ ಮಾಡುವಾಗ ಸಚಿವರು ಕುಸಿದು ಬಿದ್ದಿದ್ದಾರೆ.

ಸೋಮವಾರ 70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಿವಮೊಗ್ಗದ ಡಿಆರ್‌ಎ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಕಾಗೋಡು ತಿಮ್ಮಪ್ಪ (83) ಅವರು ಧ್ವಜಾರೋಹಣ ಮಾಡಿದರು. ನಂತರ ಭಾಷಣ ಮಾಡುವಾಗ ಅವರು ಕುಸಿದು ಬಿದ್ದಿದ್ದು, ನಗರದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದೆ.[ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ, ಇಲ್ಲಿದೆ ಪಟ್ಟಿ]

ಧ್ವಜಾರೋಹಣದ ಬಳಿಕ ಸಚಿವರು 15 ನಿಮಿಷ ಭಾಷಣ ಮಾಡಿದ್ದರು. ಆಗ ತಲೆ ಸುತ್ತು ಬಂದಂತಾಗಿ ಅವರು ಕುಸಿದುಬಿದ್ದರು. ತಕ್ಷಣ ಅವರ ಭದ್ರತಾ ಸಿಬ್ಬಂದಿಗಳನ್ನು ಅವರನ್ನು ಮೇಲೆತ್ತಿ ಆಸ್ಪತ್ರೆಗೆ ದಾಖಲು ಮಾಡಿದರು.[ಸಂಪುಟ ವಿಸ್ತರಣೆ : ಯಾರಿಗೆ, ಯಾವ ಖಾತೆ?]

ಇಂದು ಮುಂಜಾನೆಯಿಂದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಸಚಿವರು ವಿಶ್ರಾಂತಿ ತೆಗೆದುಕೊಂಡಿರಲಿಲ್ಲ. ಆದ್ದರಿಂದ, ಸುಸ್ತಾಗಿ ಕುಸಿದು ಬಿದ್ದಿರಬಹುದು ಎಂದು ವೈದ್ಯರು ಹೇಳಿದ್ದಾರೆ.

kagodu timmappa

ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದ ಶಾಸಕರಾದ ಕಾಗೋಡು ತಿಮ್ಮಪ್ಪ ಅವರು ಸ್ಪೀಕರ್ ಆಗಿದ್ದರು. ಕೆಲವು ದಿನಗಳ ಹಿಂದೆ ಸಚಿವ ಸಂಪುಟ ವಿಸ್ತರಣೆ ಮಾಡುವ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾಗೋಡು ತಿಮ್ಮಪ್ಪ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದು, ಕಂದಾಯ ಖಾತೆಯ ಹೊಣೆ ನೀಡಿದ್ದಾರೆ. ಅವರನ್ನು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿಯೂ ನೇಮಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Revenue and Shivamogga district in-charge minister Kagodu Thimmappa (83) hospitalized on Monday, August 15, 2015.
Please Wait while comments are loading...