• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಕಪಾಲ ಬೆಟ್ಟದಲ್ಲಿ ಕಲ್ಲಡ್ಕ ಪ್ರಭಾಕರ್ ಬೇಕಾದರೆ ಕೃಷ್ಣನ ಪ್ರತಿಮೆ ನಿರ್ಮಿಸಲಿ'

|

ರಾಮನಗರ, ಜನವರಿ 23: ಕಲ್ಲಡ್ಕ ಪ್ರಭಾಕರ್ ಭಟ್ ಅವರು ಕಪಾಲ ಬೆಟ್ಟದಲ್ಲಿ ಬೇಕಾದರೆ ಕೃಷ್ಣನ ಪ್ರತಿಮೆ ನಿರ್ಮಿಸಲಿ ಎಂದು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಹೇಳಿದ್ದಾರೆ.

ಪ್ರತಿಯೊಬ್ಬರೂ ತಮ್ಮ ತಮ್ಮ ಧಾರ್ಮಿಕ ನಾಯಕರ ಪ್ರತಿಮೆ ನಿರ್ಮಿಸಲು ಹಕ್ಕಿದೆ. ಕಲ್ಲಡ್ಕದಲ್ಲಿ ಅವರು ಪ್ರತಿಮೆ ನಿರ್ಮಿಸಿದರೆ ನಾವು ನೆರವು ನೀಡುತ್ತೇವೆ ಎಂದರು.

ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಸರ್ಕಾರ‌ ಕಾನೂನಾತ್ಮಾಕವಾಗಿಯೇ ಗೋಮಾಳ ಭೂಮಿ ಮಂಜೂರು ಮಾಡಿದೆ.10 ಎಕರೆ ಭೂಮಿಯನ್ನು 2018 ರ ಫೆಬ್ರವರಿ 2 ರಂದು ಸರ್ಕಾರ ಮಂಜೂರು ಮಾಡಲಾಗಿದೆ.

ಕಪಾಲ ಬೆಟ್ಟಕ್ಕೆ ಬಿಜೆಪಿ ನಿಯೋಗ ಭೇಟಿ

ಧಾರ್ಮಿಕ‌ ಮತ್ತು ಸಾಮಾಜಿಕ ಚಟುವಟಿಕೆ ನಡೆಸಲು ಭೂಮಿ ಮಂಜೂರು ಮಾಡಲಾಗಿತ್ತು. ನ್ಯಾಯವಾಗಿ ಮಂಜೂರಾದ ಭೂಮಿ ವಾಪಸ್ ಪಡೆಯಲು ಮುಂದಾಗಿರುವುದು ಸರಿಯಲ್ಲ ಎಂದರು.

ಸತ್ಯ ಶೋಧನಾ ಸಮಿತಿ ವರದಿ ಸಿದ್ಧ

ಸತ್ಯ ಶೋಧನಾ ಸಮಿತಿ ವರದಿ ಸಿದ್ಧ

ಇತ್ತೀಚೆಗೆ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿತ್ತು, ಸತ್ಯ ಶೋಧನಾ ಸಮಿತಿ ಪ್ರಕರಣ ಸಂಬಂಧ ವರದಿ ಸಿದ್ಧಪಡಿಸಿದೆ ಎಂದು

ವಾಸ್ತವ ಸ್ಥಿತಿ ಅರಿಯಲು ಕ್ರಿಸ್ಚಿಯನ್ ಸಮುದಾಯದ ಮುಖಂಡರ ಸತ್ಯ ಶೋಧನಾ ಸಮಿತಿ ರಚಿಸಲಾಗಿತ್ತು,ಈ ವರದಿಯನ್ನು ಸಿಎಂ ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆರ್ ಅಶೋಕ್ ಗೆ ಸಲ್ಲಿಸ್ತೇವೆ.ಕಪಾಲ ಬೆಟ್ಟದಲ್ಲಿ 10 ಎಕರೆ ಭೂಮಿ ಸರ್ಕಾರದಿಂದ ಮಂಜೂರಾಗಿತ್ತು.ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಅಧಿಕೃತವಾಗಿ ಮಂಜೂರು ಮಾಡಲಾಗಿತ್ತು.ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಭೂಮಿ ಮಂಜೂರು ಮಾಡಲಾಗಿದೆ ಎಂದರು.

1670ರಿಂದಲೇ ಕಪಾಲ ಬೆಟ್ಟದಲ್ಲಿ ಕ್ರೈಸ್ತರು ವಾಸಿಸುತ್ತಿದ್ದರು

1670ರಿಂದಲೇ ಕಪಾಲ ಬೆಟ್ಟದಲ್ಲಿ ಕ್ರೈಸ್ತರು ವಾಸಿಸುತ್ತಿದ್ದರು

1670 ರಿಂದಲೇ ಕಪಾಲ ಬೆಟ್ಟದಲ್ಲಿ ಕ್ರೈಸ್ತರು ವಾಸ ಮಾಡಲಾರಂಭಿಸಿದ್ದಾರೆ,ಆ ಭಾಗದ ಕ್ರೈಸ್ತರು ರೇಷ್ಮೆ ಬೆಳೆಯುತ್ತಿದ್ದರು,ಬೇರೆ ಸಮುದಾಯಗಳ ಜೊತೆಗೆ ಕ್ರೈಸ್ತರ ಉತ್ತಮ ಸಂಬಂಧ, ಒಡನಾಟ ಇತ್ತು, ಕಪಾಲ ಬೆಟ್ಟ ಅಂತ ಹೆಸರು ಬರಲು ಕಾರಣ ಇದೆ,ಕಳವಾಯಿ ಬೆಟ್ಟದಲ್ಲಿ ಏಸುಕ್ರಿಸ್ತನನ್ನು ಶಿಲುಬೆಗೇರಿಸಲಾಗಿತ್ತು.ಹಾಗಾಗಿ ಆ ಪ್ರದೇಶಕ್ಕೆ ಕಪಾಲ ಬೆಟ್ಟ ಅಂತ ಕರೆಯಲಾಗುತ್ತಿದೆ.ಇದುವರೆಗೆ ಅಲ್ಲಿ ಯಾವುದೇ ವ್ಯಾಜ್ಯ, ಸಮಸ್ಯೆ ಇರಲಿಲ್ಲ.1661 ರಲ್ಲಿ ಹಾರೋಬೆಲೆಯಲ್ಲಿ ಪ್ರಥಮ ಚರ್ಚ್ ನಿರ್ಮಿಸಲಾಗಿದೆ.

160ರಲ್ಲಿ ಕ್ರೈಸ್ತ ಕುಟುಂಬಗಳು ವಾಸವಾಗಿದ್ದವು

160ರಲ್ಲಿ ಕ್ರೈಸ್ತ ಕುಟುಂಬಗಳು ವಾಸವಾಗಿದ್ದವು

ಆಗಲೇ 160 ಕ್ರೈಸ್ತ ಕುಟುಂಬಗಳು ಅಲ್ಲಿ ವಾಸವಾಗಿದ್ವು,ಸತ್ಯ ಶೋಧನಾ ಸಮಿತಿಯ ವರದಿಯಲ್ಲಿ ಹಲವು ಅಂಶಗಳಿವೆ,ಕಾವೇರಿ‌ ನೀರಿನ ಸಂಗ್ರಹಕ್ಕೆ ಅಲ್ಲಿ ದೊಡ್ಡ ಟ್ಯಾಂಕ್ ಕಟ್ಟಲಾಗಿದೆ.ಆ ಟ್ಯಾಂಕ್ ನಿರ್ಮಾಣಕ್ಕೆ ಅಗತ್ಯ ಪರಿಕರ, ಸಾಮಾಗ್ರಿ ತೆಗೆದುಕೊಂಡು ಹೋಗಲು ಅದರ ಗುತ್ತಿಗೆದಾರ ನಿರ್ಮಿಸಿದ ರಸ್ತೆ ಅದು.ಏಸು ಪ್ರತಿಮೆಗಾಗಿ ನಿರ್ಮಿಸಿದ ರಸ್ತೆಯಲ್ಲ.

ಅಧಿಕೃತ ವಿದ್ಯುತ್ ಸಂಪರ್ಕ

ಅಧಿಕೃತ ವಿದ್ಯುತ್ ಸಂಪರ್ಕ

ರಸ್ತೆಯನ್ನು ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್ ನಿರ್ಮಿಸಿಲ್ಲ,ಇನ್ನು ವಿದ್ಯುತ್ ಸಂಪರ್ಕವನ್ನೂ ಅಧಿಕೃತವಾಗಿಯೇ ಪಡೆದುಕೊಳ್ಳಲಾಗಿದೆ,ವಿದ್ಯುತ್ ಸಂಪರ್ಕ ಅನಧಿಕೃತ ಅಲ್ಲ.ರಾಜಕೀಯ ದುರುದ್ದೇಶಕ್ಕಾಗಿ ಪ್ರಕರಣಕ್ಕೆ ವಿವಾದ ಬಳಿಯಲಾಗಿದೆ.ಗೋಮಾಳ ಭೂಮಿಯನ್ನು ಹಿಂದೂ, ಮುಸ್ಲಿಂ, ಕ್ರೈಸ್ತ ಇತರೇ ಸಮುದಾಯಗಳಿಗೆ ಸರ್ಕಾರ ಮೊದಲಿಂದಲೂ ಮಂಜೂರು ಮಾಡುತ್ತಾ ಬಂದಿದೆ.

ಹಾಗೆಯೇ ಕಪಾಲ ಬೆಟ್ಟದಲ್ಲಿ ಕ್ರೈಸ್ತರಿಗೂ ಭೂಮಿ ಮಂಜೂರು ಮಾಡಲಾಗಿದೆ, ವಿಷಬೀಜ ಬಿತ್ತುವ ಪ್ರಯತ್ನಗಳು ನಡೆದಿವೆ.ಸ್ಥಳೀಯ ಶಾಸಕರಾಗಿ ಕ್ರೈಸ್ತರಿಗೆ ಡಿಕೆಶಿ ಸಹಾಯ ಮಾಡಿದ್ದು ತಪ್ಪಲ್ಲ.

English summary
If Kalladka Prabhakar Bhat Will Build Lord Krishna Statue We Will Help him Says Ivan D'Souza.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X