ರೇಣುಕಾ ಚೌಧರಿ ಅವರ ನಗು ನೋಡಿ 'ರಾಮಾಯಣ' ನೆನಪಿಸಿಕೊಂಡ ಮೋದಿ!

Recommended Video

      ರೇಣುಕಾ ಚೌದರಿಯವರ ನಗು ನೋಡಿ ರಾಮಾಯಣಕ್ಕೆ ಹೋಲಿಸಿದ ಮೋದಿ | Oneindia Kannada

      ನವದೆಹಲಿ, ಫೆಬ್ರವರಿ 08: "ರೇಣುಕಾ ಚೌಧರಿ ಅವರ ನಗುವನ್ನು ನೋಡಿ ನನಗೆ ರಾಮಾಯಣ ಧಾರಾವಾಹಿ ನೆನಪಾಯಿತು" ಎನ್ನುವ ಮೂಲಕ ವಿಪಕ್ಷಗಳ ಕೆಂಗಣ್ಣಿಗೆ ಪ್ರಧಾನಿ ನರೇಂದ್ರ ಮೋದಿ ಗುರಿಯಾದರು.

      '1998 ರಲ್ಲಿ, ಅಂದಿನ ಗೃಹಸಚಿವರಾಗಿದ್ದ ಎಲ್ ಕೆ ಅಡ್ವಾನಿ ಅವರು ಸಾರ್ವಜನಿಕ ಗುರುತಿನ ಚೀಟಿಯ(ಆಧಾರ್) ಪರಿಕಲ್ಪನೆ ನೀಡಿದ್ದರು' ಎಂದು ಮೋದಿ ತಮ್ಮ ರಾಜ್ಯಸಭಾ ಭಾಷಣದಲ್ಲಿ ಹೇಳುತ್ತಿದ್ದಂತೆಯೇ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಜೋರಾಗಿ ನಗುವುದಕ್ಕೆ ಆರಂಭಿಸಿದರು.

      ಇದರಿಂದ ಕಸಿವಿಸಿಗೊಂಡಸಭಾಪತಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, 'ರೇಣುಕಾ ಚೌಧರಿಯವರಿಗೆ ಏನಾದರೂ ಸಮಸ್ಯೆಯಿದ್ದರೆ ವೈದ್ಯರ ಬಳಿ ಹೋಗಬಹುದು' ಎಂದು ಕುಟುಕಿದರು. ನಾಯ್ಡು ಅವರನ್ನು ಮಧ್ಯದಲ್ಲೇ ತಡೆದ ಪ್ರಧಾನಿ ಮೋದಿ, 'ಸಭಾಪತಿಯವರೇ, ರೇಣುಕಾ ಚೌಧರಿ ಅವರಿಗೆ ಏನನ್ನೂ ಹೇಳಬೇಡಿ. ರಾಮಾಯಣ ಧಾರಾವಾಹಿ ನೋಡುತ್ತಿದ್ದ ಕಾಲದ ನಂತರ ಮೊದಲ ಬಾರಿಗೆ ಇಂಥ ನಗುವನ್ನು ನೋಡುವ ಸೌಭಾಗ್ಯ ಒದಗಿದೆ' ಎಂದು ಟಾಂಗ್ ನೀಡಿದರು.

      Renuka Chowdury's laughter reminds me Ramayana serial: Narendra Modi

      ಚೌಧರಿ ಅವರು ನಗುತ್ತಿದ್ದಂತೆಯೇ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಏನನ್ನೋ ಹೇಳಲು ಎದ್ದುನಿಂತರಾದರೂ ಗದ್ದಲದಿಂದಾಗಿ ಅವರ ಮಾತು ಯಾರಿಗೂ ಕೇಳಲಿಲ್ಲ!

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+