ಸಬ್‌ಮೆರಿನ್ ಗೌಪ್ಯ ಮಾಹಿತಿ ಸೋರಿಕೆ: ನೌಕಾ ಕಮಾಂಡರ್ ಸೇರಿ 6 ಮಂದಿ ವಿರುದ್ಧ ಚಾರ್ಜ್‌ಶೀಟ್
ನವದೆಹಲಿ, ನವೆಂಬರ್ 02: ಸಬ್‌ಮೆರಿನ್ ಗೌಪ್ಯ ಮಾಹಿತಿಯನ್ನು ಅನಧಿಕೃತ ವ್ಯಕ್ತಿಗಳಿಗೆ ಹಸ್ತಾಂತರಿಸಿದ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ ಆರು ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.
ಭಾರತದ ಕಿಲೋ ಕ್ಲಾಸ್ ಜಲಾಂತರ್ಗಾಮಿ ನೌಕೆ ಬಗ್ಗೆ ಗೌಪ್ಯ ಮಾಹಿತಿಯನ್ನು ನೀಡಿದ ಆರೋಪದ ಮೇಲೆ ಆರು ಜನರ ವಿರುದ್ಧ ಕೇಂದ್ರೀಯ ತನಿಖಾ ದಳ ಆರೋಪ ಪಟ್ಟಿ ಸಲ್ಲಿಸಿದೆ. ಸಬ್ ಮೇರಿನ್ ಕುರಿತಾದ ಕೆಲವು ರಹಸ್ಯ ಮಾಹಿತಿಗಳನ್ನು ಇವರು ಅನಧಿಕೃತ ವ್ಯಕ್ತಿಗಳಿಗೆ ರವಾನಿಸಿದ್ದರು. ಈ ಆರೋಪದ ಮೇಲೆ ಇಬ್ಬರು ಕಮಾಂಡರ್‌ಗಳು ಮತ್ತು ಇಬ್ಬರು ನಿವೃತ್ತ ಭಾರತೀಯ ನೌಕಾಪಡೆ ಅಧಿಕಾರಿಗಳು ಸೇರಿದಂತೆ ಆರು ಜನರ ವಿರುದ್ಧ ಚಾರ್ಜ್ ಶೀಟ್ ಹಾಕಲಾಗಿದೆ.
ಈ ಆರು ಜನರ ವಿರುದ್ಧ ಆರು ಜನರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಪೈಕಿ ಇಬ್ಬರು ನೌಕಾಪಡೆಯ ಹಾಲಿ ಕಮಾಂಡರ್‌ಗಳು ಮತ್ತು ಇಬ್ಬರು ನೌಕಾಪಡೆಯ ನಿವೃತ್ತ ಅಧಿಕಾರಿಗಳು. ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಪರಿಚ್ಛೇದಗಳ ಅನ್ವಯ ಇವರ ಮೇಲೆ ಆರೋಪ ಹೊರಿಸಲಾಗಿದೆ.
ಭಾರತದ ಕಿಲೋ ಕ್ಲಾಸ್ ಜಲಾಂತರ್ಗಾಮಿ ನೌಕೆಗಳ ಎಂಆರ್‌ಎಲ್‌ಸಿ ಕಾರ್ಯಕ್ರಮದ ಗೌಪ್ಯ ವಾಣಿಜ್ಯ ಮಾಹಿತಿಯನ್ನು ಅನಧಿಕೃತವಾಗಿ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಈ ಪ್ರಕರಣ ನೌಕಾಪಡೆಯ ನಿವೃತ್ತ ಅಧಿಕಾರಿಗಳಾದ ರಣದೀಪ್ ಸಿಂಗ್ ಮತ್ತು ಎಸ್ ಜೆ ಸಿಂಗ್ ಅವರನ್ನು ಸೆಪ್ಟೆಂಬರ್ 3ರಂದು ಸಿಬಿಐ ಬಂಧಿಸಿದ ಬಳಿಕ ಬೆಳಕಿಗೆ ಬಂದಿದೆ.
ಪ್ರಲೋಭನೆಗೆ ಒಳಗಾಗಿದ್ದ ಇವರು ಜಲಾಂತರ್ಗಾಮಿಯ ಮೀಡಿಯಂ ರಿಫಿಟ್ ಲೈಫ್ ಸರ್ಟಿಫಿಕೇಶನ್ (MRLC)) ಮಾಹಿತಿಯನ್ನು ಅನಧಿಕೃತ ವ್ಯಕ್ತಿಗಳಿಗೆ ಹಸ್ತಾಂತರಿಸಿದ್ದರು ಎಂದು ಸಿಬಿಐ ಹೇಳಿದೆ. ಸೆಪ್ಟೆಂಬರ್ 3ರಂದು ಸಿಬಿಐ ನೌಕಾಪಡೆಯ ನಿವೃತ್ತ ಅಧಿಕಾರಿಗಳಾದ ರಣದೀಪ್ ಸಿಂಗ್ ಮತ್ತು ಎಸ್.ಜೆ.ಸಿಂಗ್ ಅವರನ್ನು ಸಿಬಿಐ ಬಂಧಿಸಿದ ನಂತರ ಪ್ರಕರಣ ಬೆಳಕಿಗೆ ಬಂತು. ಕಮೋಡರ್ (ನಿವೃತ್ತ) ರಣದೀಪ್ ಸಿಂಗ್ ಅವರಿಗೆ ಸೇರಿದ್ದ ಸ್ಥಳದಲ್ಲಿ ನಡೆಸಿದ ತಪಾಸಣೆಗಳಲ್ಲಿ 2 ಕೋಟಿ ರೂ. ನಗದು ಪತ್ತೆಯಾಗಿತ್ತು.
ನಿವೃತ್ತರಾದ ಕಮಾಂಡರ್ ಎಸ್‌ಜೆ ಸಿಂಗ್ ಅವರು ಭಾರತೀಯ ನೌಕಾಪಡೆಯ ಯೋಜನೆಗಳಲ್ಲಿ ಆಸಕ್ತಿ ಹೊಂದಿರುವ ಕೊರಿಯಾದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ರಿಯರ್ ಅಡ್ಮಿರಲ್ ಸೇರಿದಂತೆ ಕನಿಷ್ಠ 12ಕ್ಕೂ ಹೆಚ್ಚು ಮಂದಿಯನ್ನು ಪ್ರಶ್ನಿಸಲಾಗಿದೆ.
ಬಂಧಿತ ಆರೋಪಿಗಳಿಗೆ ಜಾಮೀನು ಸಿಗದಂತೆ ತಡೆಯಲು ಸಿಬಿಐ ಇಂದು ಆರೋಪಪಟ್ಟಿ ಸಲ್ಲಿಸಲು ನಿರ್ಧರಿಸಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇಂದು ಆರೋಪ ಪಟ್ಟಿ ಸಲ್ಲಿಸದಿದ್ದರೆ ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗುವ ಸಾಧ್ಯತೆಯಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಆರೋಪಪಟ್ಟಿ ಸಲ್ಲಿಸಬೇಕಾಯಿತು ಎಂದು ಸಿಬಿಐ ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ಜಾಲತಾಣ ವರದಿ ಮಾಡಿದೆ. ಈ ಪ್ರಕರಣವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದಾಗಿರುವ ಕಾರಣ ಸಿಬಿಐನ ಉನ್ನತ ಅಧಿಕಾರಿಗಳು ಪ್ರಕರಣವನ್ನು ನಿರ್ವಹಿಸುತ್ತಿದ್ದಾರೆ. ಎಫ್‌ಐಆರ್ ಸೇರಿ ಪ್ರಕರಣದ ವಿವರಗಳನ್ನು ಗೌಪ್ಯವಾಗಿಯೇ ಇರಿಸಲಾಗಿದೆ.
ಪ್ರಕರಣವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದು, ಸಿಬಿಐ ಸೆಪ್ಟೆಂಬರ್ 2 ರಂದು ದಾಖಲಿಸಿದ ಎಫ್‌ಐಆರ್ ಅನ್ನು ಸಹ ಬಹಿರಂಗಗೊಳಿಸಿಲ್ಲ. ಈ ಸಂಬಂಧ ಸಿಬಿಐನಲ್ಲಿ ಉನ್ನತ ಮಟ್ಟದಲ್ಲಿ ತನಿಖೆ ನಡೆಸುತ್ತಿದೆ.
ನೌಕಾಪಡೆಯ ಪಶ್ಚಿಮ ಕಮಾಂಡ್ನ ಮುಖ್ಯ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದ ಕಮಾಂಡರ್ ಅಜಿತ್ ಕುಮಾರ್ ಪಾಂಡೆ ಅವರನ್ನು ತನಿಖೆಯ ವೇಳೆ ಪತ್ತೆಯಾದ ಮಾಹಿತಿ ಆಧರಿಸಿ ಸಿಬಿಐ ಬಂಧಿಸಿತ್ತು. ಪಾಂಡೆ ಅವರ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ಕಮಾಂಡರ್ ಪಾಂಡೆ ಅವರನ್ನೂ ಸಿಬಿಐ ಬಂಧಿಸಿತು.
ನೌಕಾಪಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರಿಬ್ಬರೂ ಕಿಲೊ ಕ್ಲಾಸ್ ಸಬ್ಮರೀನ್ ಕುರಿತ ಮಾಹಿತಿಯನ್ನು ನೌಕಾಪಡೆಯ ನಿವೃತ್ತ ಅಧಿಕಾರಿಗಳಿಗೆ ನೀಡುತ್ತಿದ್ದರು. ವಿದೇಶಿ ಕಂಪನಿಗಳಿಗೆ ಕೆಲಸ ಮಾಡುತ್ತಿದ್ದ ಅವರು, ಈ ಮಾಹಿತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದರು.
ಇದೇ ವರ್ಷ ನೌಕಾಪಡೆಯಿಂದ ನಿವೃತ್ತರಾದ ಕಮಾಂಡರ್ ಎಸ್.ಜೆ.ಸಿಂಗ್ ಭಾರತೀಯ ನೌಕಾಪಡೆಗೆ ಸಂಬಂಧಿಸಿದ ವಿವಿಧ ಯೋಜನೆಗಳಲ್ಲಿ ಸಹಭಾಗಿಯಾಗಿರುವ ಕೊರಿಯಾದ ಕಂಪನಿಗಾಗಿ ಕೆಲಸ ಮಾಡುತ್ತಿದ್ದಾರೆ. ರೇರ್ ಅಡ್ಮಿರಲ್ರಂಥ ಉನ್ನತ ಹಂತದ ಅಧಿಕಾರಿಗಳಿಂದ ಹಿಡಿದು, ಸುಮಾರು 12 ಮಂದಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿದ ಸಿಬಿಐ ಪ್ರಶ್ನಿಸಿತ್ತು.












Click it and Unblock the Notifications