MS Dhoni: ಟೀಂ ಇಂಡಿಯಾ ಫೈನಲ್ ಪ್ರವೇಶದ ಹಿಂದಿದೆ ನಂಬರ್ '7' ಲಿಂಕ್: ಇಲ್ಲಿದೆ ಅಚ್ಚರಿ ಸಂಖ್ಯಾಶಾಸ್ತ್ರ
MS Dhoni Jersey Number Trend: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಟಿ20 ವಿಶ್ವಕಪ್ 2026ರ ಸೆಮಿಫೈನಲ್ ಪಂದ್ಯದಲ್ಲಿ, ಭಾರತವು ಇಂಗ್ಲೆಂಡ್ ತಂಡವನ್ನು 7 ರನ್‌ಗಳ ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿತು. ಈ ಪಂದ್ಯ ನೋಡಲು ಕ್ರಿಕೆಟ್ ದಿಗ್ಗಜರು, ಸಿನಿ ತಾರೆಯಾರು, ರಾಯಕೀಯ ನಾಯಕರು ಹಾಗೂ ಉದ್ಯಮಿಗಳ ದಂಡೇ ಆಗಮಿಸಿತ್ತು. ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಕೂಡ ಕೂಡ ಬಂದಿದ್ದು, ಅವರ ಜೆರ್ಸಿ ನಂಬರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಭಾರತವು 7 ರನ್‌ಗಳಿಂದ ಜಯಗಳಿಸಿದ ಬೆನ್ನಲ್ಲೇ, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ 'ತಲಾ ಫಾರ್ ಎ ರೀಸನ್' ಎಂದು ಬರೆದುಕೊಂಡು ಗಮನ ಸೆಳೆದಿದ್ದಾರೆ. ಧೋನಿ ಅವರ ಜೆರ್ಸಿ ಸಂಖ್ಯೆ 7 ಆಗಿದ್ದು, ಭಾರತ ಗೆದ್ದ ಅಂತರವೂ 7 ರನ್ ಆಗಿದ್ದರಿಂದ, ಅಭಿಮಾನಿಗಳು ಈ ರೀತಿಯಾಗಿ ಧೋನಿಯವರ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

'ತಲಾ' ಪದದ ಅರ್ಥವೇನು?
ಧೋನಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಪ್ರೀತಿಯಿಂದ 'ತಲಾ' (ತಮಿಳು ಭಾಷೆಯಲ್ಲಿ 'ನಾಯಕ' ಅಥವಾ 'ಮುಖ್ಯಸ್ಥ') ಎಂದು ಕರೆಯುತ್ತಾರೆ. ಇದೀಗ ಈ ಹೆಸರು ಕೇವಲ ತಮಿಳುನಾಡಿಗೆ ಸೀಮಿತವಾಗದೆ, ದೇಶಾದ್ಯಂತ ಇರುವ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಮನದಲ್ಲೂ ಅಚ್ಚಳಿಯದೆ ಉಳಿದಿದೆ.
ಸಾಮಾಜಿಕ ಜಾಲತಾಣದಲ್ಲಿ ನಂಬರ್ 7 ಕ್ರೇಜ್
ಧೋನಿ ಅವರ ಜೆರ್ಸಿ ಸಂಖ್ಯೆ 7 ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕ್ರಿಕೆಟ್ ಅಥವಾ ಎಲ್ಲಿಯೇ 7 ಸಂಖ್ಯೆ ಕಂಡುಬಂದರೂ, ಅದನ್ನು ಧೋನಿಯ ಜೆರ್ಸಿಯೊಂದಿಗೆ ಹೋಲಿಕೆ ಮಾಡಿ 'ತಲಾ ಫಾರ್ ಎ ರೀಸನ್' ಎಂದು ಕರೆಯುತ್ತಾರೆ. ಅಚ್ಚರಿ ಅಂದ್ರೆ ಗುರುವಾರ ನಡೆದ ಪಂದ್ಯಕ್ಕೆ ಈ ಸಂಖ್ಯೆ ಎಲ್ಲಾ ದೃಷ್ಟಿಯಿಂದಲೂ ಹೋಲಿಕೆ ಆಗುತ್ತಿದೆ. ಹೇಗೆ ಅಂತೀರಾ? ಇಲ್ಲಿದೆ ನೋಡಿ ಉತ್ತರ.
ಭಾರತ-ಇಂಗ್ಲೆಂಡ್ ಪಂದ್ಯದಲ್ಲಿ ನಂಬರ್ 7 ಮ್ಯಾಜಿಕ್
* India win by 7 runs
* Tilak scored 21 in 7 balls
* Sanju Samason hit 7 sixes
* Bethel hit 7 sixes
* India 7 wickets
* Brook scored 7 runs
* England lost 7 wickets
* Totally MS Dhoni jersey No: 7
India win by 7 runs!
— Nikhil 🏏 (@CricCrazyNIKS) March 5, 2026
Tilak scored 21 in 7 balls!
Sanju hit 7 sixes!
Bethel hit 7 sixes!
India lost 7 wickets!
Brook scored 7 runs!
England lost 7 wickets!
MS Dhoni in the stadium! Thala for a reason!#t20wordcup pic.twitter.com/FV0PBxvdu6
ಕಾಮನಬಿಲ್ಲಿನ ಬಣ್ಣಗಳು, ಮದುವೆಯ ಏಳು ಸಪ್ತಪದಿಗಳು, ವಾರಕ್ಕೆ ಏಳು ದಿನಗಳು ಹೀಗೆ ಯಾವುದನ್ನಾದರೂ 7 ಸಂಖ್ಯೆಗೆ ಸಂಬಂಧಿಸಿದಂತೆ ತಮಾಷೆಯಾಗಿ ಅಥವಾ ಭಕ್ತಿಯಿಂದ ಧೋನಿಯವರ ಅದೃಷ್ಟದ ಸಂಖ್ಯೆಯೊಂದಿಗೆ ಹೋಲಿಕೆ ಮಾಡಿ ಮೀಮ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಟ್ರೆಂಡ್ ಆಗಿಬಿಟ್ಟಿದೆ.
ಎಂ.ಎಸ್.ಧೋನಿ ಹೇಳಿದ್ದೇನು?
ಈ ಟ್ರೆಂಡ್ ಬಗ್ಗೆ ಎಂ.ಎಸ್.ಧೋನಿ ಪ್ರತಿಕ್ರಿಯಿಸಿ, "ನನಗೆ ಈ ಮೀಮ್‌ಗಳ ಬಗ್ಗೆ ತಿಳಿದಿದೆ, ಆದರೆ ಅವುಗಳ ಹಿಂದಿನ ನಿಖರ ಕಾರಣವೇನು ಎಂದು ತಿಳಿದಿಲ್ಲ. ಇದು ಹಾಸ್ಯಕ್ಕಾಗಿ ಅಥವಾ ತಮಾಷೆಗಾಗಿ ಇರಬಹುದು. ಆದರೆ ನನ್ನ ಅಭಿಮಾನಿಗಳು ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಿರುವುದು ನನಗೆ ಸಂತೋಷದ ವಿಷಯ," ಎಂದು ಅವರು ಹೇಳಿದರು.
ಅಭಿಮಾನಿಗಳು ಮಾತ್ರವಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳು ಹಾಗೂ ಗೂಗಲ್ ಇಂಡಿಯಾದ ಅಧಿಕೃತ ಖಾತೆಯಲ್ಲೂ 'ತಲಾ ಫಾರ್ ಎ ರೀಸನ್' ಎಂಬ ಹಾಸ್ಯಮಯ ಟ್ರೆಂಡ್ ಆಗಿದೆ. ಸೆಮಿಫೈನಲ್‌ನಲ್ಲಿ ಜೇಕಬ್ ಬೆಥೆಲ್ 105 ರನ್‌ಗನ್ನು ಸಿಡಿಸಿದರು. ಆದರೂ, ಭಾರತ ತಂಡವು ಇಂಗ್ಲೆಂಡ್ ವಿರುದ್ಧ 7 ರನ್‌ಗಳ ಅಂತರದಿಂದ ಜಯ ಸಾಧಿಸಿತು. ಹ್ಯಾರಿ ಬ್ರೂಕ್ ನಾಯಕತ್ವದ ಇಂಗ್ಲೆಂಡ್ ತಂಡವು ಚೇಸ್ ಮಾಡುವ ಹಂತಕ್ಕೆ ತಲುಪಿದ್ದರೂ, ಅಂತಿಮವಾಗಿ ಗೆಲುವು ಭಾರತಕ್ಕೇ ಸಿಕ್ಕಿತು.
ಸಂಜು ಸ್ಯಾಮ್ಸನ್ ಸಿಡಿಸಿದ 89 ರನ್‌ಗಳ ನೆರವಿನಿಂದ ಭಾರತವು 7 ವಿಕೆಟ್ ನಷ್ಟಕ್ಕೆ 253 ರನ್‌ಗಳ ಮೊತ್ತವನ್ನು ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಜೇಕಬ್ ಬೆಥೆಲ್ ಅವರ ಅದ್ಭುತ ಆಟದ ನಡುವೆಯೂ 7 ವಿಕೆಟ್‌ಗೆ 246 ರನ್‌ಗಳಷ್ಟೇ ಕಲೆಹಾಕಿ ಸೋಲನುಭವಿಸಿತು. ಫಿಲ್ ಸಾಲ್ಟ್ 5, ಹ್ಯಾರಿ ಬ್ರೂಕ್ 7, ಜೋಸ್ ಬಟ್ಲರ್ 25 ರನ್ ಗಳಿಸಿ ಬೇಗನೇ ವಿಕೆಟ್ ಒಪ್ಪಿಸಿದರು. ಈ ಮೂಲಕ ಇಂಗ್ಲೆಂಡ್ 64 ರನ್‌ಗೆ 3 ವಿಕೆಟ್ ಕಳೆದುಕೊಂಡಿತು.
ಆದರೆ, ಜೇಕಬ್ ಬೆಥೆಲ್ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿ ಕೇವಲ 48 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 8 ಬೌಂಡರಿಗಳೊಂದಿಗೆ 105 ರನ್‌ಗನ್ನು ಕಲೆಹಾಕಿ ಮಿಂಚಿದರು. ಇವರು ಅಂತಿಮ ಓವರ್‌ನಲ್ಲಿ ರನ್ ಔಟ್ ಆಗುತ್ತಿದ್ದಂತೆಯೇ ಭಾರತದ ಸಂಭ್ರಮಾಚರಣೆ ಮಾಡಿತು. ಕೊನೆಗೂ ಇಂಗ್ಲೆಂಡ್ ತಂಡವನ್ನು ಮಣಿಸಿ ಟೀಂ ಇಂಡಿಯಾ ಫೈನಲಗ್ ಪ್ರವೇಶ ಮಾಡಿತು.
ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ತವರಿನ ನೆಲದಲ್ಲೇ ಟಿ20 ವಿಶ್ವಕಪ್ ಗೆಲ್ಲುವ ಮೊದಲ ತಂಡವಾಗುವ ಗುರಿಯೊಂದಿಗೆ ಭಾರತ ಕಣಕ್ಕಿಳಿಯಲಿದೆ. ಇನ್ನೂ ಫೈನಲ್‌ಗಾಗಿ ಅಹಮದಾಬಾದ್‌ಗೆ ಹೋಗುತ್ತಿರುವುದು ಅಸಾಧಾರಣ ಅನುಭವ. ನಮ್ಮ ತಂಡದ ಆಟಗಾರರಿಗೆ ಇದು ತುಂಬಾ ವಿಶೇಷ ಕ್ಷಣ, ಎಂದು ಹೇಳಿದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಸೋತ ಇಂಗ್ಲೆಂಡ್ ತಂಡಕ್ಕೂ ಗೌರವ ಸಲ್ಲಿಸಿದರು.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್












Click it and Unblock the Notifications