ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಡಿಕೊಳ್ಳೋರ್ ಎದುರು ಎಡವಿ ಬಿದ್ದಂಗಾಯ್ತು ಕಾಂಗ್ರೆಸ್ ಕತೆ!

|
Google Oneindia Kannada News

ನವದೆಹಲಿ, ಫೆಬ್ರವರಿ 02: ಹಣೆಬರಹ ಚೆನ್ನಾಗಿಲ್ಲ ಅಂದ್ರೆ ಹಾಕಿದ ಸ್ಟೇಟಸ್ ಎಲ್ಲಾ ಟ್ರೋಲ್ ಆಗೋ ಕಾಲ ಇದು! ಅಂತಾದ್ದರಲ್ಲಿ ರಾಜಕೀಯ ಪಕ್ಷಗಳಿಗೆ ಟ್ರೋಲ್ ಮಾಡೋ ಅವಕಾಶ ಸಿಕ್ಕರೆ ಕೇಳಬೇಕೆ?

ಪ್ರಜಾತಂತ್ರದಲ್ಲಿ ಮೋದಿಯ ಬಜೆಟ್ ತಂತ್ರ ಪರಿಣಾಮ ಬೀರುತ್ತಾ?ಪ್ರಜಾತಂತ್ರದಲ್ಲಿ ಮೋದಿಯ ಬಜೆಟ್ ತಂತ್ರ ಪರಿಣಾಮ ಬೀರುತ್ತಾ?

ಶುಕ್ರವಾರ ಎನ್ ಡಿ ಎ ಸರ್ಕಾರ ಅನ್ನದಾತನನ್ನು ಪ್ರಮುಖ ಆದ್ಯತೆಯನ್ನಾಗಿ ಪರಿಗಣಿಸಿ 'ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ' ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿಯಲ್ಲಿ ಸಣ್ಣ ರೈತರ ಖಾತೆಗೆ ನೇರವಾಗಿ 6 ಸಾವಿರ ರೂಪಾಯಿ ವರ್ಗಾವಣೆ ಮಾಡಲು ಉದ್ದೇಶಿಸಲಾಗಿದೆ. ಇದರಿಂದ 12 ಕೋಟಿ ರೈತರಿಗೆ ಅನುಕೂಲವಾಗಲಿದೆ. ಇದಕ್ಕಾಗಿ 753 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹಂಗಾಮಿ ಹಣಕಾಸು ಸಚಿವ ಪಿಯೂಶ್ ಗೋಯಲ್ ಘೋಷಿಸುತ್ತಿದ್ದಂತೆಯೇ ಇತ್ತ ಕಾಂಗ್ರೆಸ್ ಟ್ರೋಲ್ ಆರಂಭಿಸಿತ್ತು.

ತಿಂಗಳಿಗೆ 6 ಸಾವಿರ ರೂ. ಎಂಬುದು ಬಿಜೆಪಿ ನೀಡಿದ ಆಶ್ವಾಸನೆ. ಆದತೆ ವಾಸ್ತವ ಎಂದರೆ 500 ರೂ. ಮಾತ್ರ ಎಂದು ಚಿತ್ರ ಸಮೇತ ವಿವರಿಸಲು ಹೋದ ಕಾಂಗ್ರೆಸ್ per year ಎಂದು ಬರೆಯುವ ಬದಲು per month ಎಂದು ಬರೆದು ಟ್ರೋಲ್ ಹೈಕ್ಳಿಗೆ ತಾನೇ ಕಾಲು ಕೊಟ್ಟು ಕಾಲೆಳೆಸಿಕೊಂಡಿದೆ!

17 ರೂ. ನೀಡಿ ರೈತರಿಗೆ ಅಪಮಾನ ಮಾಡಿದ್ದಾರೆ ಮೋದಿ: ರಾಹುಲ್ ಕಿಡಿ 17 ರೂ. ನೀಡಿ ರೈತರಿಗೆ ಅಪಮಾನ ಮಾಡಿದ್ದಾರೆ ಮೋದಿ: ರಾಹುಲ್ ಕಿಡಿ

ಬಿಜೆಪಿ ಕೇಳಬೇಕೇ? ಅದನ್ನೇ ಇಟ್ಟುಕೊಂಡು ಅಧ್ಯಕ್ಷ ರಾಹುಲ್ ಗಾಂಧಿಯವರನ್ನೂ, ಕಾಂಗ್ರೆಸ್ ಅನ್ನು ಚೆನ್ನಾಗಿ ಟ್ರೋಲ್ ಮಾಡುತ್ತಿದೆ. ಕರ್ನಾಟಕ ಬಿಜೆಪಿ ಐಟಿ ಸೆಲ್ ನ ಈ ಟ್ವೀಟ್ ಗೆ ಪ್ರಶಂಸೆಯ ಸುರಿಮಳೆ ಬರುತ್ತಿದೆ.

ರಾಹುಲ್ ಗಾಂಧಿ ಮಾಡಿದ್ದು!

ಬಹುಶಃ ಈ ಇನ್ಫೋಗ್ರಾಫಿಕ್ ಮಾಡಿದ್ದು ರಾಹುಲ್ ಗಾಂಧಿ ಅವರೇ ಇರಬೇಕು.
ನೀವು ಹೇಳಿದ್ದು ಸತ್ಯ.
ನಾವು ಕೊಟ್ಟ ಮಾತು ವರ್ಷಕ್ಕೆ 6000 ರೂ.
ವಾಸ್ತವದಲ್ಲಿ 500 ರೂ ತಿಂಗಳಿಗೆ
ಗಣಿತದ ಪ್ರಕಾರ ಹೋದರೆ: 500x12=6000 ರೂಪಾಯಿಯೇ ಆಗುತ್ತದೆಯಲ್ಲವೇ? ರಾಹುಲ್ ಪಕ್ಷದ ಇಂಟಲಿಜೆನ್ಸ್ ಕೋಶನ್ '0'. ಇವರೆಲ್ಲ ದೇಶದ ದುರಂತ ಎಂದು ಬಿಜೆಪಿ ಟ್ವೀಟ್ ಮಾಡಿ ಅಪಹಾಸ್ಯ ಮಾಡಿದೆ.

'ಪ್ರಿಯಾಂಕಾರನ್ನು ಅಜ್ಜಿಗೆ ಹೋಲಿಸಿದರೆ, ರಾಹುಲ್ ರನ್ನು ತಾತನಿಗೆ ಹೋಲಿಸಬೇಕು'!'ಪ್ರಿಯಾಂಕಾರನ್ನು ಅಜ್ಜಿಗೆ ಹೋಲಿಸಿದರೆ, ರಾಹುಲ್ ರನ್ನು ತಾತನಿಗೆ ಹೋಲಿಸಬೇಕು'!

ಅಯ್ಯೋ ಪಾಪ!

ಅಯ್ಯೋ ಪಾಪ! ನೀವು(ಬಿಜೆಪಿ) ರಾಹುಲ್ ಗಾಂಧಿ ಅಳುವಂತೆ ಮಾಡುತ್ತಿದ್ದೀರಿ. ಬಿಜೆಪಿ ಕರ್ನಾಟಕ ಐಟಿ ಸೆಲ್ ಅನ್ನು ಹಿಂದಿಕ್ಕುವುದಕ್ಕೆ ಯಾರಿಗೂ ಸಾಧ್ಯವಿಲ್ಲ. ಈ ಟ್ವೀಟ್ ಒಳ್ಳೇ ಮನರಂಜನೆ ಎನ್ನಿಸಿದೆ ಎಂದು ಹರ್ಷಿತಾ ಎಂ ವರದರಾಜ್ ಟ್ವೀಟ್ ಮಾಡಿದ್ದಾರೆ.

ಅವರು ಒಂದು ದಿನ ಪಿಎಂ ಆಗ್ತಾರೆ!

ಅವರು(ರಾಹುಲ್ ಗಾಂಧಿ) ಒಂದು ದಿನ 'PM' ಆಗಿಯೇ ಆಗುತ್ತಾರೆ.

ತಡೀರಿ... 'PM' ಅಂದ್ರೇ Poor in Maths ಎಂದು. ಅವರು ಈಗಲೇ ಅದಾಗಿದ್ದಾರೆ! ಎಂದು ಮನು ಎಂಬುವವರು ಕಾಲೆಳೆದಿದ್ದಾರೆ.

ಗಣಿತ ಕಲಿಸುತ್ತೀನಿ ಬನ್ನಿ!

"ನಾನು ಮಕ್ಕಳಿಗೆ ಟ್ಯೂಶನ್ ತೆಗೆದುಕೊಳ್ಳುತ್ತೇವೆ. ನೀವು(ರಾಹುಲ್ ಗಾಂಧಿ) ಸಹ ಸೋಮವಾರದಿಂದ ಬನ್ನಿ. ಚುನಾವಣೆ ಮುಗಿಯುವ ಹೊತ್ತಿಗೆ ಇವಿಎಂ ಯಂತ್ರ ಲೆಕ್ಕ ಮಾಡುವಷ್ಟು ಗಣಿತ ಕಲಿಯಬಹುದು" ಎಂದು ಬಟರ್ ಫ್ಲೈ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

English summary
BJP Karnataka mocks Congress and Rahul Gandhi for their mathematical tweet on BJP's Kisan Samman nidhi scheme in which government will give 6000 rs per a year to the farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X