'ಪ್ರಿಯಾಂಕಾರನ್ನು ಅಜ್ಜಿಗೆ ಹೋಲಿಸಿದರೆ, ರಾಹುಲ್ ರನ್ನು ತಾತನಿಗೆ ಹೋಲಿಸಬೇಕು'!
Recommended Video

ನವದೆಹಲಿ, ಫೆಬ್ರವರಿ 1: ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಅಜ್ಜಿಗೆ ಹೋಲಿಸಿದರೆ ರಾಹುಲ್ ಗಾಂಧಿಯನ್ನು ಅಜ್ಜನಿಗೆ ಹೋಲಿಸಬೇಕು ಎಂದು ಬಿಜೆಪಿ ಮುಖಂಡ ಲೋಕೇಂದ್ರ ಪರಾಶರ್ ವ್ಯಂಗ್ಯವಾಡಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ನೋಡಲು ಇಂದಿರಾ ಗಾಂಧಿ ಅವರ ರೀತಿ ಇರುವುದಲ್ಲದೇ ಅವರಿಗಿದ್ದ ರಾಜಕೀಯ ವರ್ಚಸ್ಸು ಪ್ರಿಯಾಂಕ ಅವರಲ್ಲಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಪ್ರಿಯಾಂಕಾರನ್ನು ಅವರ ಅಜ್ಜಿಗೆ ಹೋಲಿಸಿದರೆ ರಾಹುಲ್ ಗಾಂಧಿಯನ್ನು ಅವರ ತಾತನಿಗೆ ಯಾಕೆ ಹೋಲಿಕೆ ಮಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪ್ರಿಯಾಂಕಾ ಗಾಂಧಿಗೆ ಈಗ 47 ವರ್ಷ, ಕಳೆದ ವಾರವಷ್ಟೇ ಎಐಸಿಸಿಯ ಪೂರ್ವ ಉತ್ತರ ಪ್ರದೇಶದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರವನ್ನೂ ಒಳಗೊಂಡಂತೆ ಕ್ಯಾಂಪೈನ್ ಮಾಡಲಿದ್ದಾರೆ. ಪಶ್ಚಿಮ ಭಾಗಕ್ಕೆ ಕಾಂಗ್ರೆಸ್ ಮುಖಂಡ ಜ್ಯೋತಿರಾಧಿತ್ಯ ಸಿಂಧಿಯಾ ಮುಖ್ಯರಾಗಿರುತ್ತಾರೆ.
ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದ ಪ್ರಿಯಾಂಕಾ ಗಾಂಧಿ ಮತ್ತೆ ರಾಜಕೀಯ ಜೀವನಕ್ಕೆ ಧುಮುಕಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದು ರಾಯಬರೇಲಿ, ಅಮೇಥಿ ಮತ್ತು ಗೋರಖ್‍ಪುರ ಸೇರಿದಂತೆ ಪ್ರತಿಷ್ಠಿತ ಕ್ಷೇತ್ರಗಳು ಒಳಗೊಂಡಿರುವ ಪೂರ್ವ ಉತ್ತರಪ್ರದೇಶದ ಜವಾಬ್ದಾರಿಯನ್ನು ಹೈಕಮಾಂಡ್ ವಹಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಿಂದ ಏಕಾಂಗಿಯಾಗಿ ಸ್ಪರ್ಧಿಸಲು ಮುಂದಾಗಿರುವ ಕಾಂಗ್ರೆಸ್, ಈ ಮೂಲಕ ಪೂರ್ವ ಉತ್ತರಪ್ರದೇಶ ಹಿಡಿತ ಹೊಂದಿರುವ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಟಾಂಗ್ ಕೊಡಲು ಮೆಗಾ ಪ್ಲಾನ್ ಮಾಡಿದೆ.
ಪ್ರಿಯಾಂಕಾ ಗಾಂಧಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಹಿನ್ನೆಲೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿದ್ದು ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ. ಈ ಮೂಲಕ ಏಕಾಂಗಿಯಾಗಿ ಸ್ವರ್ಧಿಸಲು ಚಿಂತಿಸಿರುವ ಕಾಂಗ್ರೆಸ್ ಪ್ರಿಯಾಂಕಾ ಶಕ್ತಿಯಾಗಿ ನಿಲ್ಲಲಿದ್ದಾರೆ.












Click it and Unblock the Notifications