17 ರೂ. ನೀಡಿ ರೈತರಿಗೆ ಅಪಮಾನ ಮಾಡಿದ್ದಾರೆ ಮೋದಿ: ರಾಹುಲ್ ಕಿಡಿ
ನವದೆಹಲಿ, ಜನವರಿ 01: ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ, ರೈತರಿಗೆ ವರ್ಷಕ್ಕೆ 6000 ರೂಪಾಯಿ ಹಣ ನೀಡುವ ಬಗ್ಗೆ ಮಾಡಿರುವ ಘೋಷಣೆಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರವಾಗಿ ವಿರೋಧಿಸಿದ್ದು, ಇದು ರೈತರಿಗೆ ಮಾಡುತ್ತಿರುವ ಅಪಮಾನ ಎಂದು ಹರಿಹಾಯ್ದಿದ್ದಾರೆ.
ಎಐಸಿಸಿ ಕಚೇರಿಯಲ್ಲಿ ಮಧ್ಯಂತರ ಬಜೆಟ್ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, 15 ಉದ್ಯಮಪತಿಗಳ 3.5 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡುವ ಸರ್ಕಾರ ರೈತರಿಗೆ ದಿನಕ್ಕೆ ಕೇವಲ 17 ರೂಪಾಯಿ ನೀಡಲು ಹೊರಟಿದೆ ಎಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಲೋಕಸಭೆ ಚುನಾವಣೆಯು ರೈತರ ಸಮಸ್ಯೆಗಳ ಬಗ್ಗೆ, ಮೋದಿ ಸರ್ಕಾರ ಮಾಡಿದ ಸಾಂಸ್ಥಿಕ ರಾಜಕೀಯದ ಬಗ್ಗೆ, ಹೆಚ್ಚಿದ ಕೋಮುಗಲಭೆಗಳ ಬಗ್ಗೆ, ಉದ್ಯೋಗದ ವಿಷಯವಾಗಿ ಚುನಾವಣೆ ನಡೆಯಲಿದೆ ಎಂದು ರಾಹುಲ್ ಹೇಳಿದರು.

ಇನ್ನು ಕೆಲವೇ ತಿಂಗಳುಗಳಲ್ಲಿ ಮೋದಿ ಅವರ ಅಂಧ ರಾಜಕೀಯ, ಆಡಳಿತದ ಮೇಲೆ ಸರ್ಜಿಕಲ್ ಸ್ಟ್ರೈಕ್ ಆಗಲಿದೆ ಎಂದ ರಾಹುಲ್ ಅವರು, ಮೋದಿ ಅವರು ಈಗಾಗಲೇ ಉದ್ಯೋಗ, ಆರ್ಥಿಕತೆ, ಬಡವರ ಜೀವನಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಹಾಳುಮಾಡಿದ್ದಾರೆ ಎಂದರು.












Click it and Unblock the Notifications