ಪ್ರೀತಿಯಿಂದ ಸಾಕಿದ ಶ್ವಾನ ಗ್ರಾಹಕರ ತಟ್ಟೆಯಲ್ಲಿ ಊಟವಾಗಿ ದಾರುಣ ಅಂತ್ಯ, ಚೀನಾದಲ್ಲೊಂದು ಮನಕಲುಕುವ ಕಥೆ

ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಕೇವಲ ಮನುಷ್ಯರನ್ನು ಮಾತ್ರವಲ್ಲ, ಸಾಕುಪ್ರಾಣಿಗಳನ್ನೂ ಸೆಲೆಬ್ರಿಟಿಗಳನ್ನಾಗಿ ಮಾಡುತ್ತಿವೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಹಲವು ಪ್ರಾಣಿಗಳು ಇಂಟರ್ನೆಟ್‌ನಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿವೆ. ಆದರೆ ಚೀನಾದಲ್ಲಿ ಅಂತಹ ಜನಪ್ರಿಯ ಶ್ವಾನವೊಂದು ದಾರುಣ ಅಂತ್ಯ ಕಂಡಿರುವ ಘಟನೆ ಎಲ್ಲರ ಮನಕಲಕಿದೆ.

ಚೀನಾದಲ್ಲಿಯೂ ಇದೇ ರೀತಿಯಾಗಿ ಜನಪ್ರಿಯತೆ ಪಡೆದಿದ್ದ ಶ್ವಾನವೊಂದು ದುರಂತ ಅಂತ್ಯ ಕಂಡಿರುವ ಘಟನೆ ಬೆಳಕಿಗೆ ಬಂದಿದೆ. 'ಚೂಟಾವ್ ಟ್ರಾವೆಲ್' ಎಂಬ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಖ್ಯಾತಿ ಪಡೆದಿದ್ದ 'ಚೂಟಾವ್' ಹೆಸರಿನ ಈ ಶ್ವಾನ ಬಾರ್ಡರ್ ಕೋಲಿ ತಳಿಗೆ ಸೇರಿದ್ದು, ಸುಮಾರು 15 ಲಕ್ಷ ಫಾಲೋವರ್‌ಗಳನ್ನು ಹೊಂದಿತ್ತು.

Pet Dog

ವರದಿಗಳ ಪ್ರಕಾರ, ಕೆಲ ದಿನಗಳ ಹಿಂದೆ ಇಬ್ಬರು ದುಷ್ಕರ್ಮಿಗಳು ಚೂಟಾವ್‌ ಅನ್ನು ಅಪಹರಿಸಿದ್ದರು. ಬಳಿಕ ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಶ್ವಾನದ ಮಾಲೀಕರು ಮೇ 26ರಂದು ಅಪಹರಣಕಾರರ ಸುಳಿವು ಪತ್ತೆಹಚ್ಚಿದ್ದರು. ತಮ್ಮ ಪ್ರೀತಿಯ ಸಾಕುಪ್ರಾಣಿಯನ್ನು ಮರಳಿ ಪಡೆಯಲು ಸುಮಾರು 1.5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿಯೂ ಕೊಡ ಘೋಷಿಸಿದ್ದರು.

ದುರದೃಷ್ಟವಶಾತ್, ಅಪಹರಣಕಾರರು ಚೂಟಾವ್‌ ಅನ್ನು ಸಾಮಾನ್ಯ ಬೀದಿನಾಯಿ ಎಂದು ಭಾವಿಸಿ ಕೇವಲ 2,500 ರೂಪಾಯಿಗೆ ಸ್ಥಳೀಯ ರೆಸ್ಟೋರೆಂಟ್‌ಗೆ ಮಾರಾಟ ಮಾಡಿದ್ದರು. ಈ ವಿಷಯ ಮಾಲೀಕರಿಗೆ ತಿಳಿಯುವಷ್ಟರಲ್ಲಿ ಶ್ವಾನವನ್ನು ಆಹಾರಕ್ಕಾಗಿ ಬಳಸಲಾಗಿತ್ತು ಎಂದು ವರದಿಯಾಗಿದೆ.

ಮಸಾಲೆ ದೋಸೆ ತಿನ್ನೋಕೆ ದಿನವೂ ಬರ್ತಾನೆ ಈ ವಿಐಪಿ ಗ್ರಾಹಕ; ಹೋಟೆಲ್‌ ಮಾಲೀಕ-ಗೂಳಿಯ ಸ್ನೇಹಕ್ಕೆ ನೆಟ್ಟಿಗರು ಫಿದಾ
ಮಸಾಲೆ ದೋಸೆ ತಿನ್ನೋಕೆ ದಿನವೂ ಬರ್ತಾನೆ ಈ ವಿಐಪಿ ಗ್ರಾಹಕ; ಹೋಟೆಲ್‌ ಮಾಲೀಕ-ಗೂಳಿಯ ಸ್ನೇಹಕ್ಕೆ ನೆಟ್ಟಿಗರು ಫಿದಾ

ಘಟನೆಯಿಂದ ಮನನೊಂದ ಚೂಟಾವ್‌ನ ಮಾಲೀಕ ಸಾಮಾಜಿಕ ಜಾಲತಾಣದಲ್ಲಿ ಲೈವ್‌ ಬಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಸಾಕುಪ್ರಾಣಿಯ ನೆನಪುಗಳನ್ನು ಸ್ಮರಿಸುತ್ತಾ ಕಣ್ಣೀರಿಟ್ಟ ಅವರು, ಚೂಟಾವ್‌ನನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಪ್ರಾಣಿ ಪ್ರಿಯರಲ್ಲಿ ಆಕ್ರೋಶ ಮತ್ತು ದುಃಖ ಮೂಡಿಸಿದೆ.

ಘಟನೆಯ ಬಳಿಕ ಚೂಟಾವ್‌ನ ಹಳೆಯ ವಿಡಿಯೋಗಳು ಮತ್ತು ಫೋಟೋಗಳು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ಶ್ವಾನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದು, "ರೆಸ್ಟ್ ಇನ್ ಪೀಸ್ ಚೂಟಾವ್" ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಲವರು ಈ ಘಟನೆಯನ್ನು ಹೃದಯವಿದ್ರಾವಕ ಎಂದು ಬಣ್ಣಿಸಿದ್ದು, ಸಾಕುಪ್ರಾಣಿಗಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾಯಿ ಜೊತೆ ಪುಟ್ಟ ಬಾಲಕಿಯ ಕ್ಯೂಟ್ ಮಾತುಕತೆ: ನೆಟ್ಟಿಗರ ಮನಗೆದ್ದ Viral Video
ನಾಯಿ ಜೊತೆ ಪುಟ್ಟ ಬಾಲಕಿಯ ಕ್ಯೂಟ್ ಮಾತುಕತೆ: ನೆಟ್ಟಿಗರ ಮನಗೆದ್ದ Viral Video

ಇದೇ ವೇಳೆ, ಈ ಪ್ರಕರಣದ ಕುರಿತು ಸ್ಥಳೀಯ ಅಧಿಕಾರಿಗಳು ತನಿಖೆ ಆರಂಭಿಸಿರುವುದಾಗಿ ವರದಿಯಾಗಿದೆ. ಅಪಹರಣ ಮತ್ತು ಅಕ್ರಮವಾಗಿ ಪ್ರಾಣಿಗಳನ್ನು ಮಾರಾಟ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಮಂದಿಯ ಪ್ರೀತಿಯನ್ನು ಗಳಿಸಿದ್ದ ಚೂಟಾವ್‌ನ ದಾರುಣ ಅಂತ್ಯ, ಸಾಕುಪ್ರಾಣಿಗಳನ್ನು ಕುಟುಂಬದ ಸದಸ್ಯರಂತೆ ಪ್ರೀತಿಸುವ ಅನೇಕರ ಕಣ್ಣಲ್ಲಿ ನೀರು ತರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+