Toxic: ಟಾಕ್ಸಿಕ್ ಬಗ್ಗೆ ಅಪ್‌ಡೇಟ್ ಕೇಳ್ತಿದ್ದವರಿಗೆ ಚಿತ್ರತಂಡ ಕೊಟ್ಟೇ ಬಿಡ್ತು ನೋಡಿ ಸರ್‌ಪ್ರೈಸ್
ಕೆಜಿಎಫ್ ಸರಣಿಯ ಅಭೂತಪೂರ್ವ ಯಶಸ್ಸಿನ ಬಳಿಕ ಗ್ಲೋಬಲ್ ಸ್ಟಾರ್ ಆಗಿ ಮಿಂಚುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಪ್ಯಾನ್-ಇಂಡಿಯಾ ಸಿನಿಮಾ 'ಟಾಕ್ಸಿಕ್' (Toxic) ಅಂಗಳದಿಂದ ಕೊನೆಗೂ ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಚಿತ್ರದ ಬೆನ್ನೆಲುಬಾಗಿ ನಿಂತಿರುವ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ (KVN Productions), ಹೊಸ ಶೈಲಿಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಹೊಸ ವಿಡಿಯೋ ಹಂಚಿಕೊಂಡಿದ್ದು, ಈಗ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.
ಸ್ಯಾಂಡಲ್‌ವುಡ್‌ನ ಇತಿಹಾಸದಲ್ಲೇ ಅತ್ಯಂತ ನಿರೀಕ್ಷೆ ಮೂಡಿಸಿರುವ, ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಜನ್ಮದಿನಕ್ಕೆ ಚಿತ್ರತಂಡ ವಿಶೇಷವಾಗಿ ಶುಭ ಕೋರಿದೆ. ಈ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಕಟ್ಟಿಕೊಡುತ್ತಿರುವ ಗೀತು ಅವರ ಹುಟ್ಟುಹಬ್ಬದ ಅಂಗವಾಗಿ, ಕೆವಿಎನ್ ಸ್ಪೆಷಲ್ ವಿಡಿಯೋ ಮೂಲಕ ಶುಭ ಹಾರೈಸಿದೆ. ಈ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದ್ದು, ಈ ವಿಡಿಯೋದಲ್ಲಿ ಚಿತ್ರದ ಅದ್ಧೂರಿ ಮೇಕಿಂಗ್ ಬಗ್ಗೆ ಹಿಂಟ್ ಕೊಡಲಾಗಿದೆ.

ಮಾತಿಗಿಂತ ಮೌನವೇ ಹೆಚ್ಚು
ಗೀತು ಮೋಹನ್‌ದಾಸ್ ಅವರ ಶ್ರಮ ಮತ್ತು ಕಲ್ಪನಾ ಶಕ್ತಿಯನ್ನು ಕೊಂಡಾಡುತ್ತಾ, "ತೆರೆಯ ಮೇಲಿನ ಪ್ರತಿ ವಿಭಿನ್ನ ದೃಶ್ಯದ ಹಿಂದೆಯೂ, ಮಾತುಗಳಿಗಿಂತಲೂ ಹೆಚ್ಚು ಮೌನವೇ ಕಥೆ ಹೇಳುವಂತೆ ಮಾಡುವ ಅದ್ಭುತ ಕಲೆಯ ಹಿಂದೆಯೂ ಆಕೆ ಇದ್ದಾರೆ" ಎಂದು ಕೆವಿಎನ್ ಬರೆದುಕೊಂಡಿದೆ. ಈ ಸಾಲುಗಳ ಮೂಲಕ 'ಟಾಕ್ಸಿಕ್' ಸಿನಿಮಾ ಕೇವಲ ಆಕ್ಷನ್ ಮಾತ್ರವಲ್ಲದೆ, ಅತ್ಯಂತ ಬಲಿಷ್ಠವಾದ ಭಾವನಾತ್ಮಕ ಮತ್ತು ಕಲಾತ್ಮಕ ಹಿನ್ನೆಲೆಯನ್ನು ಹೊಂದಿರಲಿದೆ ಎಂಬುದನ್ನು ಚಿತ್ರತಂಡ ಸುಳಿವು ನೀಡಿದೆ.
Behind every shot that hit different, every silence that said more than dialogue ever could, there she was!❤️🔥
— KVN Productions (@KvnProductions) June 8, 2026
Happy birthday, Geetu Mohandas ✨️#Toxic#ToxicTheMovie@TheNameIsYash#Nayanthara @advani_kiara@humasqureshi @rukminitweets #TaraSutaria #GeetuMohandas… pic.twitter.com/KSmU4fwR5C
ಯಶ್ ಕರಿಯರ್‌ನಲ್ಲೇ ವಿಭಿನ್ನ ಸಿನಿಮಾ 'ಟಾಕ್ಸಿಕ್'
ರಾಷ್ಟ್ರಪ್ರಶಸ್ತಿ ವಿಜೇತರಾಗಿರುವ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಈ ಹಿಂದೆ 'ಲಯರ್ಸ್ ಡೈಸ್' ಮತ್ತು 'ಮೂತೋನ್' ನಂತಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಈಗ ಮೊದಲ ಬಾರಿಗೆ ಯಶ್ ಅವರಂತಹ ಮಾಸ್ ಹೀರೊ ಜೊತೆ ಕೈಜೋಡಿಸಿದ್ದು, ಕಮರ್ಷಿಯಲ್ ಚೌಕಟ್ಟಿನಲ್ಲೇ ಒಂದು ಅದ್ಭುತ ಸಿನಿಮ್ಯಾಟಿಕ್ ಅನುಭವ ನೀಡಲು ಸಜ್ಜಾಗಿದ್ದಾರೆ. ಚಿತ್ರತಂಡ ಹಂಚಿಕೊಂಡಿರುವ ಈ ಜನ್ಮದಿನದ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಯಶ್ ಅಭಿಮಾನಿಗಳು ನಿರ್ದೇಶಕಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
'ಟಾಕ್ಸಿಕ್' ಸಿನಿಮಾದ ಮೇಕಿಂಗ್ ಶೈಲಿ ಹೇಗಿರಲಿದೆ ಎಂಬುದನ್ನು ಚಿತ್ರತಂಡ ಕೊನೆಗೂ ಒಂದು ವಿಶೇಷ ವಿಡಿಯೋ ಮೂಲಕ ಜಗತ್ತಿಗೆ ತೋರಿಸಿದೆ. ಈ ಪ್ರತ್ಯೇಕ ವಿಡಿಯೋದಲ್ಲಿ ಚಿತ್ರದ ಅತಿ ದೊಡ್ಡ ಹೈಲೈಟ್ ಆಗಿದ್ದ ಆ ಸ್ಮಶಾನದ ಸೆಟ್ ಹಾಗೂ ಅದರ ಮೇಕಿಂಗ್ ದೃಶ್ಯಗಳನ್ನು ಅನಾವರಣಗೊಳಿಸಲಾಗಿದೆ. ಈ ಹಿಂದೆ ಚಿತ್ರದ ಟೈಟಲ್ ಟೀಸರ್‌ನಲ್ಲಿ ಕುತೂಹಲ ಮೂಡಿಸಿದ್ದ ಆ ಭೀಕರ ಸ್ಮಶಾನದ ಸೀನ್ ಅನ್ನು ತೆರೆಯ ಹಿಂದೆ ಎಷ್ಟು ಅದ್ಧೂರಿಯಾಗಿ ಮತ್ತು ಕಲಾತ್ಮಕವಾಗಿ ಸೃಷ್ಟಿಸಲಾಗಿದೆ ಎಂಬುದು ಈ ವಿಡಿಯೋದಲ್ಲಿ ರಿವೀಲ್ ಆಗಿದೆ.
ಈ ವಿಡಿಯೋದುದ್ದಕ್ಕೂ ಕೇವಲ ಯಶ್ ಅಷ್ಟೇ ಅಲ್ಲದೆ, ಇಡೀ ಚಿತ್ರತಂಡದ ಶ್ರಮ ಎದ್ದು ಕಾಣುತ್ತಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಶೂಟಿಂಗ್ ಸ್ಪಾಟ್‌ನಲ್ಲಿ ಪ್ರತಿಯೊಂದು ದೃಶ್ಯಕ್ಕಾಗಿ ಪಡುತ್ತಿರುವ ಕಷ್ಟ, ಅವರ ಕಲ್ಪನಾ ಶಕ್ತಿ ಮತ್ತು ಹಾರ್ಡ್‌ವರ್ಕ್ ಈ ವಿಡಿಯೋದ ಪ್ರಮುಖ ಆಕರ್ಷಣೆಯಾಗಿದೆ. ಸೆಟ್‌ನಲ್ಲಿ ಇಡೀ ಚಿತ್ರತಂಡದೊಂದಿಗೆ ಗೀತು ಹೊಂದಿರುವ ಬಾಂಡಿಂಗ್ ತೋರಿಸಲಾಗಿದೆ.
ಪದೇ ಪದೇ ಮುಂದೂಡಲ್ಪಡುತ್ತಿರುವ ರಿಲೀಸ್ ಡೇಟ್
ಒಂದೆಡೆ ಮೇಕಿಂಗ್ ವಿಡಿಯೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದರೆ, ಇನ್ನೊಂದೆಡೆ ಚಿತ್ರದ ಬಿಡುಗಡೆ ದಿನಾಂಕದ ವಿಚಾರ ಮಾತ್ರ ಯಶ್ ಅಭಿಮಾನಿಗಳಿಗೆ ತೀವ್ರ ನಿರಾಸೆ ತಂದಿದೆ. ಜಾಗತಿಕ ಮಟ್ಟದ ಗುಣಮಟ್ಟ ಹಾಗೂ ಗ್ರಾಫಿಕ್ಸ್ ಕೆಲಸಗಳಿಗೆ ಹೆಚ್ಚಿನ ಸಮಯ ಬೇಕಾಗಿರುವುದರಿಂದಲೇ ಚಿತ್ರದ ಬಿಡುಗಡೆ ವಿಳಂಬವಾಗುತ್ತಿದೆ ಎನ್ನಲಾಗುತ್ತಿದ್ದರೂ, ಪದೇ ಪದೇ ಡೇಟ್ ಬದಲಾಗುತ್ತಿರುವುದು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವಂತಾಗಿದೆ.













Click it and Unblock the Notifications