Lok Sabha Election 2024: ಕಾಂಗ್ರೆಸ್ ಗೆಲ್ಲುವ ಸ್ಥಾನಗಳೆಷ್ಟು? ಗುಪ್ತಚರ ಇಲಾಖೆ ಕೊಟ್ಟ ಅಂಕಿ ಅಂಶಗಳು ಇಲ್ಲಿವೆ
ಬೆಂಗಳೂರು, ಏಪ್ರಿಲ್ 08: ಕಳೆದ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಗೆ ಈ ಬಾರಿಯ ಲೋಕಸಭಾ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಗೆಲ್ಲುವ ಅಭ್ಯರ್ಥಿಗಳನ್ನ ಕಣಕ್ಕಿಳಿಸಿರುವ ಕಾಂಗ್ರೆಸ್ 28 ಕ್ಷೇತ್ರಗಳ ಫೈಕಿ 20 ಕ್ಷೇತ್ರಗಳನ್ನ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿದೆ.
ಹೌದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್, ಈ ಬಾರಿ 20 ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಹಲವು ತಂತ್ರಗಾರಿಕೆಯನ್ನ ನಡೆಸಿದೆ. ಇತ್ತ ಕೆಲವು ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಹಲವು ಸಮೀಕ್ಷೆಗಳನ್ನ ರಾಜ್ಯ ಕಾಂಗ್ರೆಸ್ ನಡೆಸಿದೆ. ರಾಜ್ಯದಲ್ಲಿ ಒಂದು ಸುತ್ತಿನ ಗುಪ್ತಚರ ವರದಿ ತರಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿಯನ್ನ ನೋಡಿ ಸಂತೋಷ ವ್ಯಕ್ತಪಡಿದ್ದಾರೆ.

ಒಂದು ತಿಂಗಳ ಹಿಂದೆ ನಡೆಸಿದ ಗುಪ್ತಚರ ಸರ್ವೆಯಲ್ಲೇ ಪಡೆದ ರಿಸಲ್ಟ್ ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಘಾತ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಪಂಚ ಗ್ಯಾರಂಟಿಗಳನ್ನ ಘೋಷಿಸಿರುವ ಕಾಂಗ್ರೆಸ್ ಪರ ರಾಜ್ಯದ ಜನತೆ ಹಲವು ವ್ಯಕ್ತಪಡಿಸಿದ್ದಾರೆ ಎಂದು ವರದಿ ಹೇಳಿದ್ದು, ಲೋಕಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಮಾಡುವ ಮುನ್ನ ಮತದಾರರ ಒಲವಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಗುಪ್ತಚರ ವರದಿಯ ಬಗ್ಗೆ ಕಲೆ ಹಾಕಿದ್ದಾರೆ.
ಇನ್ನೂ ಕಾಂಗ್ರೆಸ್ ಹೈಕಮಾಂಡ್ 20 ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಟಾಸ್ಕ್ ಕೊಟ್ಟ ಹಿನ್ನೆಲೆಯಲ್ಲಿ ಸರ್ವೇ ಮೊರೆ ಹೋದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಭ್ಯರ್ಥಿ ಆಯ್ಕೆಗೂ ಮೊದಲು ಒಂದು ಸರ್ವೇ ಮಾಡಿಸಿದ್ದರು. ಮೊದಲ ಸರ್ವೆಯಲ್ಲಿ ಎರಡಂಕಿ ಸ್ಥಾನಗಳನ್ನ ದಾಟುವುದು ಅನುಮಾನ ಎಂದು ಸರ್ವೆ ವರದಿ ಹೇಳಿದ್ದು, ಈ ವರದಿಯಿಂದಾಗಿ ಕರ್ನಾಟಕ ಕಾಂಗ್ರೆಸ್ ಆಘಾತಗೊಂಡಿತ್ತು. 28 ಲೋಕಸಭಾ ಕ್ಷೇತ್ರ ಚುನಾವಣಾ ಕಾವು ಏರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಆಲರ್ಟ್ ಆಗಿದ್ದು, ಅಭ್ಯರ್ಥಿ ಆಯ್ಕೆ ಮುಗಿದ ಬಳಿಕ ಇನ್ನೊಂದು ಸರ್ವೆ ಮಾಡಿಸಿದ್ದು, ಇದೀಗ ಸರ್ವೆಯ ರಿಪೋರ್ಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಸೇರಿದೆ ಎಂದು ತಿಳಿದು ಬಂದಿದೆ.
ಹಿಂದಿನ ಸರ್ವೆಯಿಂದ ಶಾಕ್ ಗೆ ಒಳಗಾಗಿದ್ದ ಕಾಂಗ್ರೆಸ್, ಕಳೆದ ಒಂದು ತಿಂಗಳಲ್ಲಿ ಕಾಂಗ್ರೆಸ್ ಸ್ಥಾನಮಾನ ರಾಜ್ಯದಲ್ಲಿ ಚೇತರಿಕೆ ಕಂಡಿದೆ ಎಂದು ರಿಪೋರ್ಟ್ ಮೂಲಕ ತಿಳಿದು ಬಂದಿದೆ. ಇನ್ನೂ ಸರ್ವೆಯಲ್ಲಿ ಕಾಂಗ್ರೆಸ್ ಸ್ಥಾನ ಎರಡಂಕಿ ದಾಟಲಿದೆ ಎಂದು ಆಂತರಿಕ ವರದಿ ತಿಳಿಸಿದೆ. ಕ್ಷೇತ್ರದಲ್ಲಿ ಏನು ಚರ್ಚೆ ಆಗುತ್ತಿದೆ, ಅಭ್ಯರ್ಥಿಗಳ ಪರವಾಗಿ ಕ್ಷೇತ್ರದ ಜನರ ಒಲವು ಹೇಹಿದೆ. ಸರ್ಕಾರದ ಗ್ಯಾರೆಂಟಿಗಳ ಬಗ್ಗೆ ಜನ ಅಭಿಪ್ರಾಯ ಏನು, ರಾಜ್ಯದಲ್ಲಿ ಮೋದಿ ಅಲೆ ಇದೆಯಾ ಎಂಬ ಪ್ರಶ್ನೆಗಳನ್ನ ಮುಂದಿಟ್ಟು ಸರ್ವೆಯನ್ನ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇನ್ನೂ ಪತ್ರಿ ಕ್ಷೇತ್ರದ ಮತದಾರರ ನಾಡಿಮಿಡಿತದ ಬಗ್ಗೆ ಕುರಿತು ಸರ್ವೆಯನ್ನ ನಡೆಸಿದ್ದು, ಈ ಸಮೀಕ್ಷೆಯಿಂದ ಕಾಂಗ್ರೆಸ್ ನಾಯಕರಿಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ರಾಜ್ಯದಲ್ಲಿ ಇನ್ನೂ ಮೋದಿ ಅಲೆ ಇದ್ದರೂ ಸಹ ರಾಜ್ಯದ ವಿವಿಧ ಕ್ಷೇತ್ರದಲ್ಲಿ ಹಾಲಿ ಸಂಸದರ ವಿರುದ್ಧ ವಿರೋಧಿ ಅಲೆ ಇದೆ ಎಂದು ಕೇಳಿ ಬಂದಿದ್ದು, ಇನ್ನೂ ಕೆಲವು ಕ್ಷೇತ್ರದಲ್ಲಿ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸಿರುವುದು, ಬಿಜೆಪಿಯ ಅಂತರಿಕ ಕಚ್ಚಾಟವೇ ಕಾಂಗ್ರೆಸ್‌ಗೆ ಲಾಭ ತಂದುಕೊಡಲಿದೆ. ಇನ್ನೂ ಈ ವರದಿಯಲ್ಲಿ ಕಾಂಗ್ರೆಸ್ 11-13 ಸ್ಥಾನ ಗೆಲ್ಲುತ್ತದೆ ಎಂದು ವರದಿಯಲ್ಲಿ ತಿಳಿದು ಬಂದಿದೆ.
ಕಾಂಗ್ರೆಸ್ ಗೆಲ್ಲಬಹುದಾದ ಕ್ಷೇತ್ರಗಳು ಇಲ್ಲಿವೆ
* ಬೆಂಗಳೂರು ಗ್ರಾಮಾಂತರ
* ಕೋಲಾರ
* ಚಿಕ್ಕಬಳ್ಳಾಪುರ
* ಚಾಮರಾಜನಗರ
* ಉಡುಪಿ ಚಿಕ್ಕಮಗಳೂರು
* ತುಮಕೂರು
* ಚಿತ್ರದುರ್ಗ
* ರಾಯಚೂರು
* ಬೀದರ್
ಚಿಕ್ಕೋಡಿ
* ದಾವಣಗೆರೆ
* ಹಾವೇರಿ ( 50-50 ಚಾನ್ಸ್)
* ಹಾಸನ ( 50-50 ಚಾನ್ಸ್ )












Click it and Unblock the Notifications