ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಲ್ಫಿ ತೆಗೆದುಕೊಳ್ಳುವಾಗ ಹೃದಯಾಘಾತವಾಗಿ ಪ್ರಾಣಬಿಟ್ಟ!

By Vanitha
|
Google Oneindia Kannada News

ಆಗ್ರಾ, ಸೆಪ್ಟೆಂಬರ್, 22 : ದಿನಗಳೆದಂತೆ ಸೆಲ್ಫೀ ಗೀಳು ಜನರ ಮನದಲ್ಲಿ ಬಹಳ ಗಾಢವಾಗಿಯೇ ಬೇರೂರುತ್ತಿದೆ. ಇದು ಕೆಲವೊಮ್ಮೆ ಪ್ರಾಣಕ್ಕೆ ಸಂಚಕಾರ ತರುವ ಕ್ರಿಯೆ ಎಂದು ಗೊತ್ತಿದ್ದರೂ ಜನರು ಇದರ ಮೋಹದಿಂದ ಹೊರಬರಲು ಇಚ್ಛಿಸುತ್ತಿಲ್ಲ. ನೀವು ಸೆಲ್ಫೀ ಪ್ರಿಯರೇ ಆಗಿದ್ದಲ್ಲಿ ನೀವು ಈ ಸುದ್ಧಿಯನ್ನು ಓದಲೇಬೇಕು.

ಹೌದು..ಪ್ರವಾಸದ ನಿಮಿತ್ತ ಬಂದಿದ್ದ 66 ವರ್ಷದ ಜಪಾನ್ ಪ್ರವಾಸಿಗನೊಬ್ಬ ತಾಜ್ ಮಹಲ್ ವೀಕ್ಷಣೆಯಲ್ಲಿ ತೊಡಗಿದ್ದನು. ಆ ಸಂದರ್ಭದಲ್ಲಿ ಈತ ತಾಜ್ ಮಹಲ್ ನ ಮುಖ್ಯ ದ್ವಾರದ ಬಳಿ ಸೆಲ್ಫೀ ತೆಗೆದುಕೊಳ್ಳುವ ಅವಧಿಯಲ್ಲಿ ಹೃದಯಾಘಾತವಾಗಿದ್ದು, ಆತ ಮೃತಪಟ್ಟಿದ್ದಾನೆ.[ಸೆಲ್ಫಿ ಮೋಹ ಒಂದು ಮಾನಸಿಕ ಕಾಯಿಲೆ - ಮನಶ್ಶಾಸ್ತ್ರಜ್ಞರು]

Agra: Japanese tourist dies while taking selfie at Taj Mahal

ತಾಜ್ ಮಹಲ್ ನ ಸೌಂದರ್ಯ ನೋಡಿದ ಪ್ರವಾಸಿಗನೊಬ್ಬ ಸೆಲ್ಫೀ ತೆಗೆದುಕೊಳ್ಳುತ್ತಿರುವಾಗ ಎದೆನೋವು ಕಾಣಿಸಿಕೊಂಡಿದೆ. ಆ ನೋವನ್ನು ತಾಳಲಾರದೆ ಆತ ತಕ್ಷಣ ಮಹಲ್‌ನ ಮೆಟ್ಟಿಲಿನಿಂದ ಉರುಳಿ ಬಿದ್ದಿದ್ದಾನೆ. ಆತನನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವ ಸಂದರ್ಭದಲ್ಲಿಯೇ ಆತ ಮೃತಪಟ್ಟಿದ್ದಾನೆ. ಬಳಿಕ ಈತನ ದೇಹವನ್ನು ನಾನಾ ಪರೀಕ್ಷೆಗೆ ಒಳಪಡಿಸಿದ ವೈದ್ಯರು ಈತ ಹೃದಯಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಸೆಲ್ಫೀ ಪ್ರಾಣಕ್ಕೆ ಕುತ್ತು ತಂದಿತ್ತರೂ, ಮಾನಸಿಕ ಖಿನ್ನತೆಯ ಪ್ರತಿರೂಪ ಎಂದು ಹಣೆಪಟ್ಟಿ ಹೊತ್ತರೂ ಇತ್ತೀಚಿನ ದಿನಗಳಲ್ಲಿ ಇದೊಂದು ಕಲೆಯಾಗಿ, ಶಿಕ್ಷಣವಾಗಿ ಕಂಡು ಬರುತ್ತಿದೆ ಎಂಬುದನ್ನು ಯಾರು ಮರೆಯುವಂತಿಲ್ಲ.

English summary
A trip to Taj Mahal turned fatal for a 66-year-old Japanese tourist who suffered a cardiac arrest while taking a selfie at the tourist spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X