• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಟ ದರ್ಶನ್ ರ ಮೈಸೂರು ಮನೆ ಹೆಸರು - 'ಮುತ್ತುರಾಜ್ - ಪಾರ್ವತಮ್ಮ'

By ಯಶಸ್ವಿನಿ ಎಂ.ಕೆ
|

ಮೈಸೂರು, ಜೂನ್ 1: ನಟ ಸಾರ್ವಭೌಮ ಎಂದು ಬಿರುದಾಂಕಿತರಾದ ರಾಜ್ ಕುಮಾರ್ ಕುಟುಂಬದ್ದು ಸಹ ನಟರಿಗಾಗಿ ಬಾಗುವ ಮನಸ್ಸು. ಅವರ ಮನೆಗೆ ಯಾರೇ ಬರಲಿ ಅದು ಸಹಾಯಾರ್ಥಕ್ಕಾಗಿರಲಿ ಅಥವಾ ಭೇಟಿಯಾಗಿರಲಿ ಎಲ್ಲರನ್ನು ವಿನಯದಿಂದಲೇ ನಡೆಸಿಕೊಳ್ಳುತ್ತಿದ್ದ ಮನೆಯ ಯಜಮಾನಿ ಪಾರ್ವತಮ್ಮರದ್ದು ದೊಡ್ಡ ಔದಾರ್ಯತೆ. ಅದಕ್ಕೆ ಈ ಉದಾಹರಣೆಯೇ ಸಾಕ್ಷಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ರಮೈಸೂರಿನ ಹಳೆಯ ನಿವಾಸದ ಹೆಸರು ಮುಪಾ ಕೃಪಾ, ಮುಪಾ ನಿಲಯ. ಮು ಅಂದ್ರೆ ಮುತ್ತುರಾಜ, ಪಾ ಅಂದರೆ ಪಾರ್ವತಮ್ಮ. ಇದು ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿದೆ. ಇದನ್ನು ಪಾರ್ವತಮ್ಮ ರಾಜ್ ಕುಮಾರ್ ಕಟ್ಟಿಸಿಕೊಟ್ಟಿದ್ದರು.[ಸಾಲಿಗ್ರಾಮದ ಪಾರ್ವತಿ ಕನ್ನಡ ಚಿತ್ರರಂಗದ ಅಮ್ಮನಾಗಿ...]

ಆರ್ಥಿಕ ನೆರವು ನೀಡಿದ್ದ ಪಾರ್ವತಮ್ಮ

ಡಾ.ರಾಜ್ ಜೊತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದ ತೂಗುದೀಪ ಶ್ರೀನಿವಾಸ ಅವರು ಮೈಸೂರಲ್ಲಿ ‌ಮನೆ ಕಟ್ಟಿಕೊಳ್ಳುವ ಆಸೆ ಹೊಂದಿದ್ದರು. ಆದರೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಅವರಿಗೆ ಅದು ಸಾಧ್ಯವಾಗಿರಲಿಲ್ಲ. ಆದರೆ, ಅದನ್ನ ಸಾಕಾರಗೊಳಿಸಿದವರು ಪಾರ್ವತಮ್ಮ ರಾಜ್ ಕುಮಾರ್.

ನಟ ತೂಗುದೀಪ ಶ್ರೀನಿವಾಸ ಅವರ‌ ಮನೆ ಇದಾಗಿದ್ದು, ಸಂಕಷ್ಟದಲ್ಲಿದ್ದ ತೂಗುದೀಪ ಕುಟುಂಬಕ್ಕೆ ಪಾರ್ವತಮ್ಮ ನೆರವಾಗಿದ್ದಲ್ಲದೇ, ಮನೆ ಕಟ್ಟಿಸಿಕೊಟ್ಟಿದ್ದರು. ಅವರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಮನೆಗೆ ಮುಪಾ ಎಂದು ತೂಗುದೀಪ್ ಶ್ರೀನಿವಾಸರ ಅವರ ಪತ್ನಿ ಮೀನಾ ತೂಗುದೀಪ್ ನಾಮಕರಣ ಮಾಡಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Parvathamma Rajkumar, wife of legendary Kannaada actor Dr Rajkumar, had given financial help to senior Kannada actor Toogudeep shreenivas to build home in Mysuru. So Shreenivas's wife keep their name to the home. Mutturaj-Parvatamma in short Mupa kripa is the name of the home in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more