ಅಕ್ಟೋಬರ್ 7ರಿಂದ ತೆರೆಯಲಿದೆ ಶಿರಡಿ ಸಾಯಿಬಾಬಾ, ಶನಿ ದೇಗುಲ
ಮುಂಬೈ, ಅಕ್ಟೋಬರ್ 06: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ, ಅಹ್ಮದ್ ನಗರ ಜಿಲ್ಲಾಡಳಿತ ಮಂಗಳವಾರ ಹೊಸ ಅನ್‌ಲಾಕ್ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಪ್ರಸಿದ್ಧ ಶಿರಡಿ ಸಾಯಿಬಾಬಾ ದೇಗುಲ ಹಾಗೂ ಶನಿ ಶಿಂಗ್ನಾಪುರ ದೇಗುಲಗಳನ್ನು ತೆರೆಯಲು ಅವಕಾಶ ನೀಡಿದೆ.
ಹೊಸ ಮಾರ್ಗಸೂಚಿಗಳನ್ನು ಅಹಮದ್ ನಗರ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಬಿ ಭೋಸಲೆ ಮಂಗಳವಾರ ಹೊರಡಿಸಿದ್ದು, ಅಕ್ಟೋಬರ್ 7ರಿಂದ ದೇಗುಲಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.
ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಒಂದು ದಿನದಲ್ಲಿ ಕೇವಲ 15000 ಭಕ್ತರಿಗೆ ಅವಕಾಶ ನೀಡಲಾಗುವುದು. ಶನಿ ಶಿಂಗ್ನಾಪುರ ದೇವಸ್ಥಾನದಲ್ಲಿ 20 ಸಾವಿರ ಭಕ್ತರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

ದೇಗುಲಗಳಿಗೆ ಮಾರ್ಗಸೂಚಿಗಳು ಇಂತಿವೆ...
1. ದೇವಾಲಯ ಆಡಳಿತ ಭಕ್ತರಿಗೆ 5 ಸಾವಿರ ಪಾಸ್‌ಗಳನ್ನು ನೀಡಬಹುದು. 5 ಸಾವಿರ ಆನ್‌ಲೈನ್, 5 ಸಾವಿರ ಆಫ್‌ಲೈನ್ ಪಾಸ್‌ಗಳನ್ನು ಭಕ್ತರಿಗೆ ವಿತರಿಸಲು ಅನುಮತಿ ಇದೆ.
2. ಶಿರಡಿ ದೇಗುಲದಲ್ಲಿ ಪ್ರತಿ ಗಂಟೆಗೆ 1150 ಭಕ್ತರ ಪ್ರವೇಶಕ್ಕೆ ಅನುಮತಿ ಇದೆ.
3. ದೇಗುಲದಲ್ಲಿ ಆರತಿ ಸಮಯದಲ್ಲಿ ಕೇವಲ 90 ಭಕ್ತರಿಗೆ ಅವಕಾಶ ನೀಡಬಹುದು.
4. ಭಕ್ತರು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರ ಪಾಲಿಸಬೇಕು
5. 2ರ ದ್ವಾರದಿಂದ ಪ್ರವೇಶ ಹಾಗೂ 4, 5ನೇ ದ್ವಾರದಿಂದ ಹೊರಗೆ ಹೋಗಲು ಭಕ್ತರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ದೇಗುಲ ಆಡಳಿತ ಮಂಡಳಿ ತಿಳಿಸಿದೆ.
6. ರಾಜ್ಯದಲ್ಲಿ ಎಲ್ಲಾ ದೇಗುಲಗಳನ್ನು ತೆರೆಯಲು ಅನುಮತಿ ನೀಡಲಾಗಿಲ್ಲ.
7. ದೇಗುಲದ ಧ್ಯಾನಮಂದಿರ ಹಾಗೂ ಪಾರಾಯಣ ಕಕ್ಷೆಯನ್ನು ತೆರೆಯಲು ಅವಕಾಶ ನೀಡಲಾಗಿಲ್ಲ.
8. ಗರ್ಭಿಣಿಯರು, ಹತ್ತು ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟವರಿಗೆ ದೇಗುಲ ಪ್ರವೇಶಕ್ಕೆ ಅನುಮತಿ ನೀಡಲಾಗಿಲ್ಲ.
ಸೋಮವಾರ ರಾಜ್ಯದಲ್ಲಿ 2026 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಫೆಬ್ರವರಿ 2ರ ನಂತರ ದಾಖಲಾದ ಅತಿ ಕಡಿಮೆ ಪ್ರಕರಣ ಇದಾಗಿದೆ. 26 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಒಟ್ಟಾರೆ ಪ್ರಕರಣಗಳ ಸಂಖ್ಯೆ 65,62,514 ಆಗಿದೆ. ಇದುವರೆಗೂ ಸೋಂಕಿನಿಂದ ರಾಜ್ಯದಲ್ಲಿ 139233 ಆಗಿದೆ.
ರಾಜ್ಯದಲ್ಲಿ ಇದುವರೆಗೂ 63,86,059 ಮಂದಿ ಗುಣಮುಖರಾಗಿದ್ದಾರೆ. ಸದ್ಯಕ್ಕೆ ರಾಜ್ಯದಲ್ಲಿ 33637 ಸಕ್ರಿಯ ಪ್ರಕರಣಗಳಿವೆ. ಮುಂಬೈನಲ್ಲಿ ಅಧಿಕ ಪ್ರಕರಣಗಳು ದಾಖಲಾಗಿದ್ದು, 657 ಮಂದಿಗೆ ಸೋಂಕು ತಗುಲಿದೆ.
ಮಹಾರಾಷ್ಟ್ರದ ಎಂಟು ಪ್ರದೇಶಗಳಲ್ಲಿ ಮುಂಬೈನಲ್ಲಿ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಪುಣೆಯಲ್ಲಿ 650 ಪ್ರಕರಣಗಳು ದಾಖಲಾಗಿವೆ. ನಾಸಿಕ್‌ನಲ್ಲಿ 414, ಕೊಲ್ಲಾಪುರದಲ್ಲಿ 192, ಲಾತೂರ್‌ನಲ್ಲಿ 58, ಔರಂಗಾಬಾದ್‌ನಲ್ಲಿ 42, ಅಕೋಲಾದಲ್ಲಿ 8 ಹಾಗೂ ನಾಗಪುರದಲ್ಲಿ ಐದು ಪ್ರಕರಣಗಳಿವೆ.
ನವರಾತ್ರಿಗೆ ರಾಜ್ಯದ ಧಾರ್ಮಿಕ ಕೇಂದ್ರಗಳನ್ನು ತೆರೆಯುವುದಾಗಿ ರಾಜ್ಯ ಸರ್ಕಾರ ಕಳೆದ ತಿಂಗಳು ಮಾಹಿತಿ ನೀಡಿತ್ತು. ನವರಾತ್ರಿಯ ಮೊದಲ ದಿನದಂದು ಧಾರ್ಮಿಕ ಕೇಂದ್ರಗಳನ್ನು ಕೊರೊನಾ ನಿಯಮಗಳ ಪಾಲನೆಯೊಂದಿಗೆ ತೆರೆಯುವುದಾಗಿ ತಿಳಿಸಿತ್ತು.
ಇದೇ ಏಪ್ರಿಲ್ ತಿಂಗಳಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿರುವ ಶಿರಡಿ ಸಾಯಿಬಾಬಾ ದೇವಸ್ಥಾನವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಪ್ರಸಾದಾಲಯ, ಭಕ್ತರ ನಿವಾಸವನ್ನು ಕೂಡ ಮುಚ್ಚಲಾಗಿದೆ. ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಭಾಗಶಃ ಲಾಕ್‌ಡೌನ್ ವಿಧಿಸಿತ್ತು.
ಇದೀಗ ಕೊರೊನಾ ಪ್ರಕರಣಗಳು ತಗ್ಗಿರುವ ಕಾರಣ ಮತ್ತೆ ಧಾರ್ಮಿಕ ಕೇಂದ್ರಗಳನ್ನು ತೆರೆಯಲಾಗುತ್ತಿದೆ.
ದೇಶದಲ್ಲಿ ಕೂಡ ಕೊರೊನಾ ಪ್ರಕರಣಗಳ ಸಂಖ್ಯೆ ಕೆಲವು ದಿನಗಳಿಂದ ತಗ್ಗಿದೆ. ಮಂಗಳವಾರ 18,346 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, ಕೇರಳ ರಾಜ್ಯವೊಂದರಲ್ಲೇ 8,850 ಹೊಸ ಪ್ರಕರಣ ದಾಖಲಾಗಿದೆ. ಭಾರತದ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 2,52,902. ದೇಶದ ಗುಣಮುಖ ಪ್ರಮಾಣ ಶೇ 97.93 ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications