ಮನೆಯಲ್ಲಿ ಹಲ್ಲಿಯ ಮೊಟ್ಟೆಗಳು ಕಂಡರೆ ಆತಂಕ ಬೇಡ: ಗುರುತಿಸುವುದು ಮತ್ತು ವಿಲೇವಾರಿ ಮಾಡುವ ಸುಲಭ ವಿಧಾನಗಳು
ಭಾರತೀಯ ಮನೆಗಳಲ್ಲಿ ಗೋಡೆಯ ಮೇಲೆ ಹಲ್ಲಿಗಳು ಓಡಾಡುವುದು ಹೊಸ ವಿಷಯವೇನಲ್ಲ, ಅದರಲ್ಲೊ ಬೇಸಿಗೆ ಮತ್ತು ಮಳೆಗಾಲದ ಸಮಯದಲ್ಲಿ ಇವುಗಳ ಹಾವಳಿ ಹೆಚ್ಚು. ಹಲ್ಲಿಗಳು ನಿರುಪದ್ರವಿಗಳಾದರೂ ಅವು ನಿಮ್ಮ ಮನೆಯನ್ನು ಸಂತಾನೋತ್ಪತ್ತಿಯ ಕೇಂದ್ರವನ್ನಾಗಿ ಮಾಡಿಕೊಳ್ಳವ ಸಾಧ್ಯತೆ ಹೆಚ್ಚಾಗಿರುತ್ತದೆ ಮತ್ತು ಇದರಿಂದ ಕಿರಿಕಿರಿ ಉಂಟಾಗುತ್ತದೆ. ಬಾಗಿಲಿನ ಹಿಂದೆ, ಅಟ್ಟದ ಮೇಲೆ, ಕಪಾಟಿನ ಹಿಂದೆ ಅಥವಾ ಪೋಟೋ ಪ್ರೇಮಗಳ ಹಿಂದೆ ಹಲ್ಲಿಯು ಮೊಟ್ಟೆಗಳನ್ನು ಇಡುವ ಸಾಧ್ಯತೆ ಹೆಚ್ಚು.
ಈ ರೀತಿ ಹಲ್ಲಿಯ ಮೊಟ್ಟೆಗಳು ಕಂಡಾಗ ಏನು ಮಾಡಬೇಕು ಮತ್ತು ಅದನ್ನ ಸುರಕ್ಷಿತವಾಗಿ ಮನೆಯಿಂದ ತೆಗೆಯುವುದು ಹೇಗೆ? ಇಲ್ಲಿದೆ ಅದರ ಸಂಪೂರ್ಣ ಮಾಹಿತಿ.
ಹಲ್ಲಿಯ ಮೊಟ್ಟೆಗಳನ್ನು ಹೇಗೆ ಕಾಣಿಸುತ್ತವೆ ಮತ್ತು ಅದನ್ನ ಗುರುತಿಸುವುದು ಹೇಗೆ?
ಬಣ್ಣ ಮತ್ತು ಗಾತ್ರ: ಹಲ್ಲಿಯ ಮೊಟ್ಟೆಗಳನ್ನು ಗುರುತಿಸುವುದು ಸುಲಭ, ಇವು ಸಾಮಾನ್ಯವಾಗಿ ಗಾತ್ರದಲ್ಲಿ ಚಿಕ್ಕದಾಗಿರುತ್ತದೆ ಬಣ್ಣದಲ್ಲಿ ಬಿಳಿ ಅಥವಾ ಮಂದ ಬಿಳಿಯಾಗಿರುತ್ತದೆ.
ಆಕಾರದಲ್ಲಿ: ಆಕಾರದಲ್ಲಿ ಪಕ್ಷಿಗಳ ಮೊಟ್ಟೆಯಂತೆ ಕಾಣುತ್ತದೆ ಆದರೆ ಇದು ಗಟ್ಟಿಯಾಗಿರುವ ಚಿಪ್ಪನ್ನು ಹೊಂದಿರುವುದಿಲ್ಲಾ ಬದಲಾಗಿ ರಬ್ಬರ್ ನಂತೆ ಸ್ವಲ್ಪ ಮೃದುವಾಗಿರುತ್ತದೆ.
ಜೋಡಿ: ಹಲ್ಲಿಗಳು ಸಾಮಾನ್ಯವಾಗಿ ಒಂದುಬಾರಿಗೆ ಎರಡು ಮೊಟ್ಟೆಗಳನ್ನು ಇಡುತ್ತವೆ. ಇವು ಗೋಡೆಯ ಬಿರುಕಿನಲ್ಲಿ, ಮೂಲೆಯಲ್ಲಿ, ಅಥವಾ ಬಾಗಿಲಿನ ಸಣ್ಣ ಸಂದುಗಳಲ್ಲಿ ಇವುಗಳು ಗಮನಿಸಬಹುದಾಗಿದೆ.

ಹಲ್ಲಿಯ ಫೆವರೆಟ್ ಜಾಗಗಳು?
* ಹಲ್ಲಿಗಳು ಮೊಟ್ಟೆ ಇಡಲು ಕತ್ತಲೆ ಹಾಗು ಬೆಚ್ಚನೆಯ ಜಾಗಗಳನ್ನು ಆಯ್ಕೆ ಮಾಡಿಕೊಳ್ಳತ್ತವೆ.
* ಗೋಡೆಗಳಲ್ಲಿರುವ ಸಣ್ಣ ಬಿರುಕಳು ಮತ್ತು ಮೂಲೆಗಳು.
* ಕಪಾಟುಗಳು, ಶೂ ರಾಕ್ ಗಳು ಮತ್ತು ಫೊಟೋ ಪ್ರೇಮಗಳ ಹಿಂಭಾಗ
* ಅಡುಗೆಮನೆಯ ಸಿಂಕ್ ಅಡಿಭಾಗ ಅಥವಾ ಪ್ರಿಜ್ ಗಳ ಹಿಂಭಾಗದ ಬೆಚ್ಚನೆಯ ಪ್ರದೇಶ.
ಮೋಟ್ಟೆಗಳು ವಿಷಕಾರಿಯೇ?
ಜನರಲ್ಲಿ ಮನಸಲ್ಲಿರುವ ದೊಡ್ಡ ಪ್ರಶ್ನೆ ಎಂದರೆ ಹಲ್ಲಿಯ ಮೊಟ್ಟೆಗಳು ವಿಷಕಾರಿಯೇ ಎಂಬುದು. ಹಲ್ಲಿಯ ಮೋಟ್ಟೆಗಳು ನೇರವಾಗಿ ವಿಷಕಾರಿಯಲ್ಲ. ಆದರೆ ಹಲ್ಲಿಗಳು ಸಾಲ್ಮೊನೆಲ್ಲಾನಂತಹ ಬ್ಯಾಕ್ಟೇರಿಯಾಗಳನ್ನು ಹೊತ್ತು ತಿರುಗುತ್ತಿರುತ್ತದೆ ಇದು ಸೊಂಕಿಗು ಕಾರಣವಾಗಬಹುದು. ಆದ್ದರಿಂದ ಯಾವುದೇ ಕಾರಣಕ್ಕೂ ಮೊಟ್ಟೆಗಳನ್ನು ಬರಿಗೈಯಿ೦ದ ಮುಟ್ಟಬಾರದು.
ಸುರಕ್ಷಿತವಾಗಿ ಮನೆಯಿಂದ ತೆಗೆದುಹಾಕುವ ವಿಧಾನ
ಹಲ್ಲಿಯ ಮೊಟ್ಟೆಗಳು ತುಂಬಾ ನಾಜೂಕಾಗಿರುವುದರಿಂದ ಕಾಗದ, ಕಾರ್ಡಬೋರ್ಡ್ ಬಳಸಿ ಬಹಳ ಎಚ್ಚರಿಕೆಯಿಂದ ಮೇಲಕ್ಕೆತ್ತುಬೇಕು. ಅವುಗಳನ್ನು ತಿರುಗಿಸದೆ ಅಥವಾ ಜೂರಾಗಿ ಒತ್ತದೆ ಮುಚ್ಚಿದ ಚೀಲದಲ್ಲಿ ಇಟ್ಟು ಮನೆಯ ಹೊರಗಡೆಯ ಕಸದ ಬುಟ್ಟಿಗೆ ಹಾಕಬೇಕಾಗುತ್ತದೆ. ಅಥವಾ ಮನೆಯಿಂದ ದೂರದ ಜಾಗಕ್ಕೆ ತೆಗೆದುಕೊಂಡಹೊಗಿ ಹಾಕಬೇಕು. ನಂತರದಲ್ಲಿ ಆ ಜಾಗವನ್ನು ಶುಚಿಗೊಳಿಸುಸಬೇಕು.
ಕ್ಯಾನ್ಸರ್ ಆರೈಕೆ ಮತ್ತು ಕೇಳಿಸದ ದನಿಗಳು: ಸಂಶೋಧನೆಯ ಪ್ರಮುಖ ಏಳು ಅಂಶಗಳು
ಮನೆಯೊಳಗೆ ಹಲ್ಲಿಗಳು ಬರದಂತೆ ತಡೆಯುವುದು ಹೇಗೆ?
ಬಿರುಕುಗಳನ್ನು ಮುಚ್ಚಿ: ಗೋಡೆಯಲ್ಲಿರುವ ಸಣ್ಣ ರಂಧ್ರ ಅಥವಾ ಬಿರುಕುಗಳನ್ನು ಸಿಮೆಂಟ್, ಲ್ಯಾಂಬಿ, ಅಥವಾ ಎಂ-ಸೀಲ್ ಬಳಸಿ ಮುಚ್ಚಿ.
ಮನೆಯ ಶುಚಿತ್ವವೇ ಮದ್ದು: ಅಡುಗೆಮನೆ ಮತ್ತು ಸ್ನಾನಗೃಹಗಳಲ್ಲಿ ನೀರು ನಿಲ್ಲದಂತೆ ಒಣಗಿಸಿಡಿ. ಕೀಟಗಳ ಕಡಿಮೆ ಇದ್ದರೆ ಹಲ್ಲಿಗಳು ಬರುವುದಿಲ್ಲ.
ನೈಸರ್ಗಿಕ ವಿಕರ್ಷಕ: ಈರುಳ್ಳಿ ಚೂರುಗಳು ಅಥವಾ ಬೆಳ್ಳುಳ್ಳಿ ಎಸಳುಗಳನ್ನು ಹಲ್ಲಿ ಬರುವ ಜಾಗದಲ್ಲಿ ಇಡುವುದರಿಂದ ಅವುಗಳ ವಾಸನೆಗೆ ಹಲ್ಲಿಗಳು ದೂರ ಓಡುತ್ತವೆ.
ಗಮನಿಸಿ: ಹಲ್ಲಿಗಳ ಕಾಟ ವಿಪರೀತವಾಗಿದ್ದರೆ ವೃತ್ತಿಪರ ಕೀಟ ನಿಯಂತ್ರಣ (Pest Control) ತಂಡದ ಸಹಾಯ ಪಡೆದು ಕೀಟ ನಿಯಂತ್ರಣ ಮಾಡಿಸುವುದು ಒಳ್ಳೆಯದು.












Click it and Unblock the Notifications