Get Updates
Get notified of breaking news, exclusive insights, and must-see stories!

Gold Rate Today: ಆಭರಣ ಪ್ರಿಯರ ಗಮನಕ್ಕೆ: ಬೆಂಗಳೂರಿನಲ್ಲಿ ಇಂದು ಚಿನ್ನ-ಬೆಳ್ಳಿ ದರ ಹೇಗಿದೆ? ಇಲ್ಲಿದೆ ಮಾಹಿತಿ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಸೃಷ್ಟಿಯಾಗಿರುವ ಭೀಕರ ಯುದ್ಧದ ವಾತಾವರಣ ಮತ್ತು ಜಾಗತಿಕ ಮಾರುಕಟ್ಟೆಯ ಅಸ್ಥಿರತೆಯ ನಡುವೆಯೂ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಸ್ಥಿರವಾಗಿದೆ. ಫೆಬ್ರವರಿ 28 ರಂದು ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿದ್ದ ಚಿನ್ನದ ದರವು ಇಂದು ಯಾವುದೇ ಬದಲಾವಣೆ ಕಾಣದೆ ಗ್ರಾಹಕರಲ್ಲಿ ಕುತೂಹಲ ಮೂಡಿಸಿದೆ. ಯುದ್ಧದ ಉದ್ವಿಗ್ನತೆಯಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದತ್ತ ಮುಖ ಮಾಡುತ್ತಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ

ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ. ಕಳೆದ ದಿನದ ದರವೇ ಇಂದೂ ಕೂಡ ಮುಂದುವರಿದಿದ್ದು, ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ದರದಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದು ಸಮಾಧಾನಕರ ಸಂಗತಿಯಾಗಿದೆ. ಇಂದಿನ ಚಿನ್ನ ಹಾಗೂ ಬೆಳ್ಳಿ ದರ ವಿವರ ಇಲ್ಲಿದೆ. ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹16,871, 22 ಕ್ಯಾರೆಟ್ ಚಿನ್ನಕ್ಕೆ ₹15,465 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹12,653 ಇದೆ.

Gold And Silver Price

24 ಕ್ಯಾರೆಟ್‌ ಚಿನ್ನದ ದರ ನೋಡುವುದಾದರೆ ಶುದ್ಧ ಚಿನ್ನದ ಬೆಲೆಯು ಇಂದು ಬೆಂಗಳೂರಿನಲ್ಲಿ ಸ್ಥಿರವಾಗಿದೆ. 1 ಗ್ರಾಂಗೆ ₹16,871, 8 ಗ್ರಾಂಗೆ ₹1,34,968, 10 ಗ್ರಾಂಗೆ ₹1,68,710, 100 ಗ್ರಾಂಗೆ ₹16,87,100 ಇದೆ. ಇನ್ನು ಸಾಮಾನ್ಯವಾಗಿ ಆಭರಣ ತಯಾರಿಕೆಯಲ್ಲಿ ಬಳಸಲಾಗುವ 22 ಕ್ಯಾರೆಟ್‌ ಚಿನ್ನದ ದರವು 1 ಗ್ರಾಂಗೆ ₹15,465, 8 ಗ್ರಾಂಗೆ ₹1,23,720, 10 ಗ್ರಾಂಗೆ ₹1,54,650, 100 ಗ್ರಾಂಗೆ ₹15,46,500 ಇದೆ. ಅಗ್ಗದ ಬೆಲೆಯ 18 ಕ್ಯಾರೆಟ್ ಚಿನ್ನದ ದರಗಳನ್ನು ನೋಡುವುದಾದರೆ 1 ಗ್ರಾಂಗೆ ₹12,653, 10 ಗ್ರಾಂಗೆ ₹1,26,530, 100 ಗ್ರಾಂಗೆ ₹12,65,300 ಆಗಿದೆ.

ಕಳೆದ 10 ದಿನಗಳ ಚಿನ್ನದ ದರದ ಟ್ರೆಂಡ್ (1 ಗ್ರಾಂಗೆ)

ದಿನಾಂಕ : 24K ಚಿನ್ನ (₹); 22K ಚಿನ್ನ (₹)

ಮಾರ್ಚ್‌ 1, 16,871 ; 15,465

ಫೆಬ್ರವರಿ 28, 16,871 ; 15,465

ಫೆಬ್ರವರಿ 27, 16,157 ; 14,810

ಫೆಬ್ರವರಿ 26, 16,102 ; 14,760

ಫೆಬ್ರವರಿ 25, 16,189 ; 14,840

ಫೆಬ್ರವರಿ 24, 16,178 ; 14,830

ಫೆಬ್ರವರಿ 23, 16,135 ; 14,790

ಫೆಬ್ರವರಿ 22, 15,928 ; 14,600

ಫೆಬ್ರವರಿ 21, 15,928 ; 14,600

ಫೆಬ್ರವರಿ 20, 15,737 ; 14,425

ಬೆಳ್ಳಿ-ಪ್ಲಾಟಿನಂ ದರ ಎಷ್ಟಿದೆ?

ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹295 ಮತ್ತು ಪ್ರತಿ ಕಿಲೋಗ್ರಾಂಗೆ ₹2,95,000 ಆಗಿದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹6,913 ಮತ್ತು 10 ಗ್ರಾಂಗೆ ₹69,130 ​​ಆಗಿದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ವಹಿವಾಟು ಭಾರತದ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯ ಅತಿದೊಡ್ಡ ಆಧಾರವಾಗಿರುತ್ತದೆ. ಆರ್ಥಿಕ ತಜ್ಞರ ಪ್ರಕಾರ, ಚಿನ್ನದ ಬೆಲೆ ಏರಿಕೆಗೆ ಕೇವಲ ಯುದ್ಧವೊಂದೇ ಕಾರಣವಾಗುವುದಿಲ್ಲ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಆಮದು ಮಾಡಿಕೊಳ್ಳುವ ಚಿನ್ನದ ಬೆಲೆಯನ್ನು ಹೆಚ್ಚಿಸುತ್ತಿದೆ. ಜಾಗತಿಕ ಷೇರು ಮಾರುಕಟ್ಟೆಗಳು ಯುದ್ಧದ ಕಾರಣದಿಂದ ಕುಸಿಯುತ್ತಿವೆ. ಹೀಗಾಗಿ ದೊಡ್ಡ ಹೂಡಿಕೆದಾರರು ತಮ್ಮ ಹಣವನ್ನು ಚಿನ್ನದ ಮೇಲೆ ತೊಡಗಿಸುತ್ತಿದ್ದಾರೆ, ಇದು ಬೇಡಿಕೆಯನ್ನು ಹೆಚ್ಚಿಸಿದೆ.

ಭೌತಿಕವಾಗಿ ಚಿನ್ನ ಖರೀದಿಸಿ ಲಾಕರ್‌ನಲ್ಲಿ ಇಡುವ ಬದಲಿಗೆ, 'ಗೋಲ್ಡ್ ಇಟಿಎಫ್' ಅಥವಾ 'ಸೊವರನ್ ಗೋಲ್ಡ್ ಬಾಂಡ್' (SGB) ಮೇಲೆ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತ ಮತ್ತು ಲಾಭದಾಯಕ. ಬೆಲೆ ಏರಿಕೆಯಾಗಿರುವ ಈ ಸಮಯದಲ್ಲಿ ಹಳೇ ಚಿನ್ನವನ್ನು ಮಾರಿ ಲಾಭ ಮಾಡಿಕೊಳ್ಳುವವರ ಸಂಖ್ಯೆಯೂ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ.

ಗಮನಿಸಿ: ಮೇಲೆ ನೀಡಿರುವ ದರಗಳು ಮಾರುಕಟ್ಟೆಯ ಮೂಲ ಬೆಲೆಗಳಾಗಿದ್ದು, ಇವುಗಳಿಗೆ ಜಿಎಸ್‌ಟಿ ಮತ್ತು ಮೇಕಿಂಗ್ ಚಾರ್ಜ್‌ಗಳು (ತಯಾರಿಕಾ ವೆಚ್ಚ) ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತವೆ. ಆಭರಣ ಖರೀದಿಸುವ ಮುನ್ನ ನಿಮ್ಮ ಸಮೀಪದ ಜ್ಯುವೆಲ್ಲರಿ ಮಳಿಗೆಯಲ್ಲಿ ಅಂತಿಮ ದರವನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+