ಮಂಗಳೂರಲ್ಲಿ ಕೆಎಂಎಫ್ ಮೊಸರಿನಲ್ಲಿ ಕೊಳೆತ ಕಾಗದ ಪತ್ತೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮಾರ್ಚ್ 21 : ಮಂಗಳೂರು ನಗರದಲ್ಲಿ ಕೆಎಂಎಫ್ ಮೊಸರಿನ ಪ್ಯಾಕೆಟ್‌ನಲ್ಲಿ ಕೊಳೆತ ಕಾಗದ ಪತ್ತೆಯಾಗಿದೆ. ಈ ಮೊಸರು ಸೇವಿಸಿದ ಗರ್ಭಿಣಿ ಸೇರಿದಂತೆ 3 ಮಂದಿ ಅಸ್ವಸ್ಥಗೊಂಡಿದ್ದಾರೆ.

ಮಂಗಳೂರಿನ ಕುದ್ರೋಳಿ ನಿವಾಸಿ ವಸಂತ ಹಾಗೂ ಶೀಲಾ ದಂಪತಿ ಶನಿವಾರ ಮನೆಯ ಪಕ್ಕದ ಅಂಗಡಿಯಿಂದ ಮೊಸರನ್ನು ತಂದಿದ್ದರು. ಮಧ್ಯಾಹ್ನ ಊಟಕ್ಕೆ ಅದನ್ನು ಬಳಸಿದ್ದರು. ಉಳಿದ ಮೊಸರನ್ನು ಪಕ್ಕದ ಮನೆಯಲ್ಲಿದ್ದ ನಿಶ್ಮಿತಾ ಅವರಿಗೂ ನೀಡಿದ್ದರು. [ಅಪಾರ್ಟ್ ಮೆಂಟ್ ಗಳಲ್ಲಿ ನಂದಿನಿ ಬೂತ್ ಆರಂಭ]

kmf

ಊಟ ಮಾಡಿದ ಸ್ವಲ್ಪ ಸಮಯಕ್ಕೆ ಎಲ್ಲರೂ ಅಸ್ವಸ್ಥಗೊಂಡಿದ್ದಾರೆ. ಮನೆ ಮದ್ದನ್ನು ಸೇವಿಸಿ ಸುಧಾರಿಸಿಕೊಂಡಿದ್ದಾರೆ. ರಾತ್ರಿ ಫ್ರಿಜ್‍ನಲ್ಲಿ ಇಟ್ಟಿದ್ದ ಮೊಸರನ್ನು ನೋಡಿದಾಗ ಅದರಿಂದ ಕೆಟ್ಟವಾಸನೆ ಬಂದಿದೆ. ಪ್ಯಾಕೆಟ್ ಪರಿಶೀಲನೆ ನಡೆಸಿದಾಗ ಅದರಲ್ಲಿ, ಕೊಳೆತ ಕಾಗದದ ತುಂಡುಗಳು ಪತ್ತೆಯಾಗಿವೆ. [ಹಾಲಿನ ದರ 4 ರೂ ಏರಿಕೆ, ಎಲ್ಲಿ ದರ ಎಷ್ಟಿದೆ?]

ಕೆಎಂಎಫ್ ಅಧಿಕಾರಿಗಳಿಗೆ ದೂರು : ಸರ್ಕಾರದ ಅಧೀನದಲ್ಲಿರುವ ಕೆಎಂಎಫ್‍ನಲ್ಲಿ ಶುದ್ಧವಾದ ಹಾಲು, ಮೊಸರು ಸಿಗುತ್ತದೆಂದು ಕೆಎಂಎಫ್ ಉತ್ಪನ್ನಗಳನ್ನು ಖರೀದಿಸಿದರೆ ಅದರಲ್ಲೂ ಈ ರೀತಿಯಾದ ಕಲಬೆರಕೆ ವಸ್ತುಗಳು ಪತ್ತೆಯಾಗುತ್ತಿದೆ ಎಂದು ವಸಂತ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. [ಮೊಸರಿನ ದರ 2 ರೂ. ಏರಿಕೆ ಮಾಡಿದ ಕೆಎಂಎಫ್]

ಘಟನೆಯ ಕುರಿತು ಕೆಎಂಎಫ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮೊಸರನ್ನು ಪರಿಶೀಲಿಸಿ ಜನರ ಯಾವುದೇ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡದೇ ಅಲ್ಲಿಂದ ತೆರಳಿದ್ದಾರೆ. ಮೊಸರು ಸೇವಿಸಿ ಅಸ್ವಸ್ಥಗೊಂಡ ಮೂವರು ಚೇತರಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
3 fall ill after they consumed Karnataka Milk Federation (KMF) curd bought from a local vendor at Kudroli, Mangaluru on Saturday, March 19, 2016.
Please Wait while comments are loading...