ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್-ಕಾಂಗ್ರೆಸ್ ದೋಸ್ತಿಗಳಿಂದ ಅಮಿತ್‌ ಶಾ ಹೇಳಿಕೆಯನ್ನ ತಿರುಚುವ ಹುನ್ನಾರ: ಬಿಜೆಪಿ ಆರೋಪ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಜನವರಿ, 03: ನಂದಿನಿ ಉತ್ಪನ್ನಗಳನ್ನು ವಿಶ್ವದರ್ಜೆಗೆ ಏರಿಸಲು ಗುಜರಾತಿನ ಅಮುಲ್ ಡೇರಿಯ ತಾಂತ್ರಿಕತೆ, ಆಡಳಿತಾತ್ಮಕ, ಮಾರುಕಟ್ಟೆ ವಿಸ್ತರಣೆಗೆ ಮಾರ್ಗದರ್ಶನ ಮತ್ತು ಸಹಕಾರ ಕೊಡಿಸುವುದಾಗಿ ಅಮಿತ್‌ ಶಾ ಹೇಳಿದ್ದರು. ಆದರೆ ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಹೇಳಿಕೆಯನ್ನು ಜೆಡಿಎಸ್-ಕಾಂಗ್ರೆಸ್ ದೋಸ್ತಿಗಳು ತಿರುಚುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಕಾಂಗ್ರೆಸ್‌, ಜೆಡಿಎಸ್‌ ವಿರುದ್ಧ ಆಕ್ರೋಶ

ಇತ್ತೀಚೆಗೆ ಮಂಡ್ಯದಲ್ಲಿ ಮೆಗಾ ಡೇರಿ ಉದ್ಘಾಟನಾ ಸಮಾರಂಭದಲ್ಲಿ ಅಮಿತ್‌ ಶಾ ಅವರು ಹಾಲು ಒಕ್ಕೂಟದ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದರು. ಅಲ್ಲದೆ, ಕೆಎಂಎಫ್‌ಗೆ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯಿಂದ ಸಿಗಬಹುದಾದ ಎಲ್ಲ ಸೌಲಭ್ಯಗಳು ಹಾಗೂ ಕೇಂದ್ರ ಸರ್ಕಾರದ ಸಹಕಾರ ಇಲಾಖೆಯಿಂದ ದೊರೆಯಬಹುದಾದ ಅಗತ್ಯ ನೆರವನ್ನೂ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಇಂತಹ ಹೊಸ ಚಿಂತನೆಯ ವಿಚಾರವನ್ನು ಬಿಟ್ಟು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಜನರಲ್ಲಿ ಇಲ್ಲಸಲ್ಲದ ಗೊಂದಲ ಸೃಷ್ಠಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಟೀಕಿಸಿದ್ದಾರೆ.

ಹಳೇ ಮೈಸೂರು ಭಾಗದ ಮೇಲೆ ಬಿಜೆಪಿ ವರಿಷ್ಠರ ಕಣ್ಣು: ಚುನಾವಣೆಗೆ ಹೊಸತಂತ್ರಹಳೇ ಮೈಸೂರು ಭಾಗದ ಮೇಲೆ ಬಿಜೆಪಿ ವರಿಷ್ಠರ ಕಣ್ಣು: ಚುನಾವಣೆಗೆ ಹೊಸತಂತ್ರ

JDS, Congress leaders are distorting Amit Shah statement: BJP Allegation

ಕಾಂಗ್ರೆಸ್‌, JDSನವರು ಸುಳ್ಳು ಹೇಳುತ್ತಿದ್ದಾರೆ

ಕೆಎಂಎಫ್‌ಗೆ ಕೇಂದ್ರ ಸರ್ಕಾರ ಸಹಕಾರ ಇಲಾಖೆಯಿಂದ ದೊರೆಯಬಹುದಾದ ನೆರವು ಮತ್ತು ಹಾಲು ಒಕ್ಕೂಟಗಳಿಗೆ ಗುಜರಾತ್‌ನ ಅಮುಲ್ ಡೇರಿಯಿಂದ ತಾಂತ್ರಿಕ, ಆಡಳಿತಾತ್ಮಕ, ಮಾರುಕಟ್ಟೆ ತಂತ್ರಗಳ ವಿನಿಮಯದ ಕುರಿತು ಮಾಹಿತಿ ನೀಡಿದ್ದರು. ಆದರೆ ಇದನ್ನು ಗಣನೆಗೆ ತೆಗೆದುಕೊಳ್ಳದೆ ಕುಮಾರಸ್ವಾಮಿ ಅವರು ಕಾರ್ಪೊರೇಟ್ ಕುಳಗಳ ಕಣ್ಣು ಬಿದ್ದಿದೆ. ಮುಂದಿನ ದಿನಗಳಲ್ಲಿ ಇದನ್ನೂ ಕೇಂದ್ರ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ ಎಂದು ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

JDS, Congress leaders are distorting Amit Shah statement: BJP Allegation

ಕಳೆದ ವಿಧಾನ ಸಭಾಚುನಾವಣೆಗೂ ಮುನ್ನ ಇಸ್ರೇಲ್ ದೇಶಕ್ಕೆ ಭೇಟಿ ನೀಡಿದ್ದ ಕುಮಾರಸ್ವಾಮಿ ಅವರು ಅಲ್ಲಿನ ಕೃಷಿ ತಾಂತ್ರಿಕತೆಯನ್ನು ಇಲ್ಲಿಯೂ ಅಳವಡಿಸುವುದಾಗಿ ಬಡಾಯಿ ಕೊಚ್ಚಿಕೊಂಡಿದ್ದರು. ಎಲ್ಲೆಲ್ಲಿ ಇದನ್ನು ಅಳವಡಿಸಿದ್ದಾರೆ ಎಂಬುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ರಾಜ್ಯ ಸರ್ಕಾರದ ಸ್ವಾಧೀನದಲ್ಲಿರುವ ಸ್ವಾಯತ್ತ ಸಂಸ್ಥೆಗಳನ್ನು ಶಿಫಾರಸ್ಸಿಲ್ಲದೆ ತೆಗೆದುಕೊಳ್ಳಲಾಗದು ಎಂಬುದನ್ನು ಸ್ವತಃ ಕಾನೂನು ತಿಳಿದಿರುವ ಸಿದ್ದರಾಮಯ್ಯ ಅವರು ತಿಳಿದುಕೊಳ್ಳಬೇಕು. ಸಾಮಾನ್ಯ ತಿಳುವಳಿಕೆ ಇಲ್ಲದವರಂತೆ ಮಾತನಾಡುವುದು ಕಾನೂನು ಓದಿರುವ ಸಿದ್ದರಾಮಯ್ಯನವರಿಗೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಿಡಿಕಾರಿದರು.

English summary
BJP Allegation against JDS, Congress leaders in Mandya, JDS, Congress leaders are distorting Amit Shah statement, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X