ವೈರಲ್ ವಿಡಿಯೋ: ಬಿಜೆಪಿ ಸಂಸದೆ ಹೇಮಾಮಾಲಿನಿ ನೃತ್ಯ

ಮಥುರಾ, ಆಗಸ್ಟ್ 03: ಬಿಜೆಪಿ ಸಂಸದೆ, ಖ್ಯಾತ ನಟಿ ಹೇಮಾಮಾಲಿನಿ ಅವರಿಗೆ ಈಗ 70 ವರ್ಷ ವಯಸ್ಸು ಆದರೆ ಈಗಲೂ ಅವರು ಯುವಕರನ್ನೂ ನಾಚಿಸುವಂತೆ ನರ್ತಿಸುತ್ತಾರೆ.

ಹೇಮಾಮಾಲಿನಿ ಅವರು ತಮ್ಮ ರಾಜಕೀಯದಿಂದ ಬಿಡುವು ಮಾಡಿಕೊಂಡು ನಿನ್ನೆ ಸಂಜೆ ದೇವಸ್ಥಾನದ ಕಾರ್ಯಕ್ರಮವೊಂದರಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಹೇಮಾಮಾಲಿನಿ ಅವರ ಭರತನಾಟ್ಯಕ್ಕೆ ಕಲಾರಸಿಕರು ಮನಸೋತಿದ್ದಾರೆ.

ಮಥುರಾದ ಶ್ರೀ ರಾಧಾರಮಣ ದೇವಸ್ಥಾನದಲ್ಲಿ ಆಯೋಜಿಸಿದ್ದ 'ಜುಲ್ಹಾನ ಉತ್ಸವ' ಕಾರ್ಯಕ್ರಮದಲ್ಲಿ ಸಂಸದೆ ಹೇಮಾಮಾಲಿನಿ ಅವರು ನೃತ್ಯ ರೂಪಕ ಪ್ರದರ್ಶಿಸಿದರು.

Hemamalini perforemed Bharathanatyam in Mathura

ಹೇಮಾಮಾಲಿನಿ ಅವರ ನೃತ್ಯದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ಪ್ರಶಂಸೆಗೆ ಪಾತ್ರವಾಗಿದೆ. ನೃತ್ಯ ಮಾಡಿದ ಹೇಮಾಮಾಲಿನಿ ಅವರಿಗೆ ದೇವಸ್ಥಾನದ ಕಡೆಯಿಂದ ಒಂದು ಕೊಳಲು ಮತ್ತು ಸೀರೆಯನ್ನು ನೀಡಿ ಗೌರವಿಸಿದ್ದಾರೆ.

ಕಾರ್ಯಕ್ರಮದ ನಂತರ ಮಾತನಾಡಿದ ಹೇಮಾಮಾಲಿನಿ ಅವರು, 'ಶ್ರೀಕೃಷ್ಣನ ಮುಂದೆ ನೃತ್ಯ ಮಾಡಲು ಅವಕಾಶ ದೊರೆತದ್ದು ಬಹಳ ಹೆಮ್ಮೆ ಎನಿಸಿದೆ. ನನ್ನ ಇಂದಿನ ಪ್ರದರ್ಶನದಲ್ಲಿ ಕೃಷ್ಣನನ್ನು ಭೇಟಿಯಾಗುವ ರಾಧೆಯ ಭಾವಗಳನ್ನು ಪ್ರಕಟಿಸಿದೆ, ಎರಡನೇಯ ಭಾಗದಲ್ಲಿ ಮೀರಾಳ ಭಾವಗಳನ್ನು ಪ್ರಕಟಿಸಿದೆ' ಎಂದು ಹೇಳಿದ್ದಾರೆ.

ಹೇಮಾಮಾಲಿನಿ ಅವರು ಬಿಜೆಪಿ ಸಂಸದೆ ಸಹ ಆಗಿದ್ದು, ಈ ಬಾರಿ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು ಆದರೆ ಅದು ವಿಫಲವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+