Get Updates
Get notified of breaking news, exclusive insights, and must-see stories!

Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್‌ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್

Sanju Samson: ಟಿ20 ವಿಶ್ವಕಪ್‌ 2026ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ 'ಸರಣಿ ಶ್ರೇಷ್ಠ' ಪ್ರಶಸ್ತಿ ಪಡೆದ ಬಳಿಕ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್, ತಮ್ಮ ಈ ಯಶಸ್ಸಿಗೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪಾತ್ರ ವಿಶೇಷವಾಗಿದೆ ಎಂದು ಸ್ಮರಿಸಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಜು ಸ್ಯಾಮ್ಸನ್, ತಮ್ಮ ಬ್ಯಾಟಿಂಗ್ ತಂತ್ರಗಾರಿಕೆ ಹಾಗೂ ಉತ್ತಮ ಪ್ರದರ್ಶನ ತೋರಲು ಸಚಿನ್ ತೆಂಡೂಲ್ಕರ್ ಅವರ ಸಲಹೆಗಳು ನಿರ್ಣಾಯಕವಾಗಿದ್ದವು ಎಂದು ತಿಳಿಸಿದ್ದಾರೆ. "ಕಠಿಣ ಪರಿಸ್ಥಿತಿಗಳಲ್ಲಿ ಆಡುವಾಗ ಮಾನಸಿಕವಾಗಿ ಹೇಗೆ ಬಲವಾಗಿರಬೇಕು ಮತ್ತು ಆಟದ ಮೇಲೆ ಹೇಗೆ ಹಿಡಿತ ಸಾಧಿಸಬೇಕು ಎಂಬ ವಿಷಯಗಳಲ್ಲಿ ಸಚಿನ್ ಅವರ ಕಿವಿಮಾತುಗಳು ನೆರವಾದವು. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ," ಎಂದು ಹೇಳಿಕೊಂಡಿದ್ದಾರೆ.

Sanju Samson Thanks Sachin Tendulkar After Winning Player of the Series in T20 World Cup 2026

ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತವು ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದು ಇತಿಹಾಸ ನಿರ್ಮಿಸಿದೆ. ಈ ಮಹತ್ವದ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನವು ತಂಡಕ್ಕೆ ಆಧಾರಸ್ತಂಭವಾಗಿತ್ತು. ಗೆಲುವಿನ ಸಂಭ್ರಮದ ನಡುವೆಯೂ, ತಮಗೆ ಬೆನ್ನೆಲುಬಾಗಿ ನಿಂತು ಮಾರ್ಗದರ್ಶನ ನೀಡಿದ ದಿಗ್ಗಜ ಆಟಗಾರನನ್ನು ಸಾರ್ವಜನಿಕವಾಗಿ ನೆನೆದಿರುವುದು ಕ್ರೀಡಾಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದೆ.

'ಆತ್ಮವಿಶ್ವಾಸ ತುಂಬಿದ ಕ್ರಿಕೆಟ್‌ ದೇವರು'

"ನ್ಯೂಝಿಲೆಂಡ್ ವಿರುದ್ಧದ ಸರಣಿಯ ವೈಫಲ್ಯದ ನಂತರ ಆತ್ಮವಿಶ್ವಾಸ ಕಳೆದುಕೊಂಡಿದ್ದ ನಾನು ಸಚಿನ್ ತೆಂಡೂಲ್ಕರ್ ಅವರಿಗೆ ಕರೆ ಮಾಡಿದ್ದೆ. ಈ ವೇಳೆ ಅವರು ನನಗೆ ಧೈರ್ಯ ತುಂಬಿದ್ದರು. ಸಚಿನ್ ಅವರು ಪಂದ್ಯದ ಮೇಲಿನ ಹಿಡಿತ ಮತ್ತು ಮಾನಸಿಕ ಸ್ಪಷ್ಟತೆಯ ಬಗ್ಗೆ ನನ್ನೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದರು. ಅಲ್ಲದೆ, ಫೈನಲ್ ಪಂದ್ಯದ ಹಿಂದಿನ ರಾತ್ರಿ ಸಹ ಸಚಿನ್ ಅವರಿಗೆ ಕರೆ ಮಾಡಿದ್ದೆ. ಈ ವೇಳೆಯೂ ಅವರು ನನಗೆ ಆತ್ಮವಿಶ್ವಾಸ ತುಂಬಿದ್ದರು ಎಂದು ಹೇಳಿದರು.

ತೆಂಡೂಲ್ಕರ್ ಜೊತೆ ನಿರಂತರ ಸಂಪರ್ಕ

"ಹೀಗೆ ಕಳೆದ ಎರಡು ತಿಂಗಳುಗಳಿಂದ ನಾನು ಸಚಿನ್ ಸರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಅದರಲ್ಲೂಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ತಂಡದಿಂದ ಹೊರಗುಳಿದಾಗ, ಅವರು ನನಗೆ ಮಾನಸಿಕವಾಗಿ ಕುಗ್ಗದಂತೆ ಮತ್ತು ಧೃಢ ಮನಸ್ಥಿತಿ ಬೆಳೆಸಿಕೊಳ್ಳಲು ಮಾರ್ಗದರ್ಶನ ನೀಡಿದರು. ಅವರಂತಹ ದಂತಕಥೆಯಿಂದ ಮಾರ್ಗದರ್ಶನ ಪಡೆಯುವುದು ನನಗೆ ಸಿಕ್ಕ ದೊಡ್ಡ ಭಾಗ್ಯ. ಅವರು ನನಗೆ ಪಂದ್ಯದ ಮೇಲಿನ ಹಿಡಿತ ಮತ್ತು ತಯಾರಿಯ ಬಗ್ಗೆ ಸ್ಪಷ್ಟತೆ ನೀಡಿದರು. ಅಲ್ಲದೆ ನ್ಯೂಝಿಲೆಂಡ್ ವಿರುದ್ಧದ ಸರಣಿಯ ವೈಫಲ್ಯದ ಬಳಿಕ ನಾನು ಮಾನಸಿಕವಾಗಿ ಕುಗ್ಗಿದ್ದಾಗ ಸಚಿನ್ ಅವರ ಮಾತುಗಳು ನನ್ನಲ್ಲಿ ಮತ್ತೆ ನಂಬಿಕೆ ಮೂಡಿಸಿದವು," ಎಂದು ಬಾವುಕರಾಗಿ ಹೇಳಿದರು.

ಇನ್ನೂ ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಈ ಸಾಧನೆಯು ತಮಗೆ ಒಂದು ಸುಂದರ ಕನಸಿನಂತೆ ಭಾಸವಾಗುತ್ತಿದೆ. 2024ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಗಲಿಲ್ಲ ಎಂಬ ನೋವು ಇತ್ತು. ಆದರೆ ಅಂದಿನಿಂದಲೇ ಇಂತಹ ಅದ್ಭುತ ಸಾಧನೆ ಮಾಡುವ ಕನಸನ್ನು ಕಾಣುತ್ತಿದ್ದೆ. ಅದು ಇದೀಗ ನೆರವೇರಿತು ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+