ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಹನಗಳಲ್ಲಿ ಜಿಪಿಎಸ್, ಪ್ಯಾನಿಕ್ ಬಟನ್ ಕಡ್ಡಾಯ: ಒಂದು ವರ್ಷ ಅವಕಾಶ

|
Google Oneindia Kannada News

ಬೆಂಗಳೂರು, ಏಪ್ರಿಲ್ 25: ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ಪ್ಯಾಸೆಂಜರ್ ವಾಹನಗಳಲ್ಲಿ ಟ್ರ್ಯಾಕಿಂಗ್ ಯುನಿಟ್ ಮತ್ತು ಪ್ಯಾನಿಕ್ ಬಟನ್ ಕಡ್ಡಾಯ ಆದೇಶವನ್ನು 2019ರ ಏಪ್ರಿಲ್ 1ರವರೆಗೆ ಮುಂದೂಡಿದೆ.
ಈ ನಿರ್ಧಾರದಿಂದ ಪ್ಯಾಸೆಂಜರ್ ಟ್ಯಾಕ್ಸಿ ಮಾಲೀಕರು, ರಾಜ್ಯ ರಸ್ತೆ ಸಾರಿಗೆ ನಿಗಮಗಳು ನಿರಾಳವಾಗಿದೆ.

ನಿರ್ಭಯಾ ಪ್ರಕರಣ ನಂತರ ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ 23ಸೀಟಿಗಿಂತ ಅಧಿಕವಿರುವ ಬಸ್ ಗಳಲ್ಲಿ ಸಿಸಿ ಕ್ಯಾಮರಾ ಕಡ್ಡಾಯ ಆದೇಶವನ್ನು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಮೊಟ್ಟ ಮೊದಲು ಮಾಡಿತ್ತು.

ವಾಹನಗಳಿಗೆ ಜಿಪಿಎಸ್ ಕಡ್ಡಾಯ: ಸಾರಿಗೆ ಇಲಾಖೆ ನಿರಾಸಕ್ತಿ ವಾಹನಗಳಿಗೆ ಜಿಪಿಎಸ್ ಕಡ್ಡಾಯ: ಸಾರಿಗೆ ಇಲಾಖೆ ನಿರಾಸಕ್ತಿ

ಇದಾದ ನಂತರ 2016-17ರಲ್ಲಿ ಪ್ಯಾಸೆಂಜರ್ ವಾಹನಗಳ ಮೇಲೆ ನಿಗಾ ಇಡಲು ಸಿಸಿ ಕ್ಯಾಮರಾ ಜತೆಗೆ 2018 ಏ.1ರಿಂದ ವಿಟಿಯು ಮತ್ತು ಪ್ಯಾನಿಕ್ ಬಟನ್ ಕಡ್ಡಾಯ ಆದೇಶವನ್ನು ಸಚಿವಾಲಯ ಮಾಡಿತ್ತು.

One year relief for GPS to transport vehicles

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈ ಆದೇಶ ಸೂಕ್ತವಾಗಿ ಅನುಷ್ಠಾನವಾಗದ ಹಿನ್ನೆಲೆಯಲ್ಲಿ ಯೋಜನೆಯನ್ನು 1 ವರ್ಷಗಳ ಕಾಲ ಮುಂದೂಡಲಾಗಿದೆ ಎನ್ನಲಾಗಿದೆ. ವಿಟಿಯು ಮತ್ತು ಪ್ಯಾನಿಕ್ ಅಳವಡಿಕೆಯಾಗಿರುವ ವಾಹನಗಳ ಮೇಲೆ ನಿಗಾ ಇಡಲು ಬೇಕಾದಂತಹ ಕಂಟ್ರೋಲ್ ರೂಂ ಸ್ಥಾಪಿಸುವಲ್ಲಿ ರಾಜ್ಯದ ಸಾರಿಗೆ ಇಲಾಖೆ ವಿಫಲವಾಗಿದೆ.

ಹೀಗಾಗಿ ವಿಟಿಯು, ಪ್ಯಾನಿಕ್ ಬಟನ್ ಅಳವಡಿಸಿಯೂ ಯಾವ ಪ್ರಯೋಜನವೂ ಇಲ್ಲ. ಕಂಟ್ರೋಲ್ ರೂಂ ಸ್ಥಾಪನೆಯಾದರೆ ವಾಹನ ಎಲ್ಲಿ ಸಂಚರಿಸುತ್ತಿದೆ. ರಹದಾರಿ ನಿಯಮ ಉಲ್ಲಂಘಿಸುತ್ತಿರುವ ವಾಹನ ಯಾವುದು. ಯಾವ ವಾಹನದಲ್ಲಿ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ ಎನ್ನುವ ಕ್ಷಣಕ್ಷಣದ ಮಾಹಿತಿ ಪೊಲೀಸರಿಗೆ ಲಭ್ಯವಾಗಲಿದೆ.

English summary
Ministry of road transport and highways has extended deadline to April 2019 for installation of GPS to transport vehicle. Earlier it was set deadline as May 1, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X