ಬೆಂಗಳೂರು: ಉಕ್ಕಿನ ಸೇತುವೆ ನಿರ್ಮಾಣಕ್ಕೆ ತಾತ್ಕಾಲಿಕ ತಡೆ!

Written By: Ramesh
Subscribe to Oneindia Kannada

ಬೆಂಗಳೂರು, ಅಕ್ಟೋಬರ್.28: ವಿವಾದಿತ ಬೆಂಗಳೂರು: ಉಕ್ಕಿನ ಸೇತುವೆ ನಿರ್ಮಾಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 4 ವಾರಗಳ ತಾತ್ಕಾಲಿಕ ತಡೆ ನೀಡಿದೆ. ಇದರಿಂದ, ನವೆಂಬರ್ 1ರಿಂದ ಯೋಜನೆ ಆರಂಭಿಸಲು ಉದ್ದೇಶಿಸಿದ್ದ ಬಿಡಿಎಗೆ ಹಿನ್ನಡೆಯಾಗಿದೆ.

ಸ್ಟೀಲ್ ಫ್ಲೈ ಓವರ್ ನಿರ್ಮಾಣವಾದರೆ 800ಕ್ಕೂ ಹೆಚ್ಚು ಮರಗಳು ನಾಶವಾಗುತ್ತದೆ. ಇದರಿಂದ ವಾತಾವರಣದ ಉಷ್ಣತೆ ಮತ್ತು ಶಬ್ಧ ಮಾಲಿನ್ಯ ಜಾಸ್ತಿ ಆಗುತ್ತದೆ. ಹೀಗಾಗಿ ಈ ಯೋಜನೆಗೆ ತಡೆಯಾಜ್ಞೆ ನೀಡಬೇಕೆಂದು ಬೆಂಗಳೂರಿನ ಸಿಟಿಜನ್ ಫೋರಂ ದೂರು ಸಲ್ಲಿಸಿತ್ತು. ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ತಮಿಳುನಾಡಿನ ಚೆನ್ನೈನಲ್ಲಿರುವ ಹಸಿರು ನ್ಯಾಯಮಂಡಳಿ ಕಾಮಗಾರಿಗೆ ತಾತಾಲ್ಕಿಕ ಬ್ರೇಕ್ ಹಾಕಿದೆ. [ಉಕ್ಕಿನ ಮೇಲ್ಸೇತುವೆಗೆ ಪರಿಸರ ಪ್ರಾಧಿಕಾರದಿಂದ ಗ್ರೀನ್ ಸಿಗ್ನಲ್!]

NGT stays construction of steel flyover at Bengaluru

ಸ್ಟೀಲ್ ಫ್ಲೈ ಓವರ್ ಬೇಡವೆಂದು ನಗರದಲ್ಲಿ ಹಲವು ಪ್ರತಿಭಟನೆಗಳು, ಚಳವಳಿಗಳು, ಚರ್ಚೆಗಳು ನಡೆದಿದ್ದವು. ಆದರೆ ಇದ್ಯಾವುದಕ್ಕೆ ಕಿವಿಗೊಡದ ಸರ್ಕಾರ ಇದನ್ನು ಮಾಡಿಯೇ ತೀರುತ್ತೇವೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ. ಹಾಗೂ ಸಿಎಂ ಸಿದ್ದರಾಮಯ್ಯ ಹೇಳಿದ್ದರು. [ಉಕ್ಕಿನ ಸೇತುವೆ ವಿರುದ್ಧ ನಾಗರಿಕರ ಉಗ್ರ ಹೋರಾಟ]

ಆದರೆ, ಈಗ ಹಸಿರು ನ್ಯಾಯಮಂಡಳಿ ನೀಡಿರುವತಾತ್ಕಾಲಿಕ ತಡೆಯಿಂದಾಗಿ ಉಕ್ಕಿನ ಸೇತುವೆ ಬೇಡ ಎನ್ನುವರಿಗೆ ತಾತ್ಕಾಲಿಕ ಜಯ ಸಿಕ್ಕಿದಂತಾಗಿದೆ. [ಉಕ್ಕಿನ ಸೇತುವೆ ನಿರ್ಮಿಸಿದರೆ ಆಗಸದಲ್ಲಿ ನಕ್ಷತ್ರ ಕಾಣಿಸಲ್ಲ :ಪ್ರೊ ರಾವ್]

ಯೋಜನೆಗಾಗಿ 800 ಮರಗಳನ್ನು ಕಡಿಯಲು ಬಿಡಿಎ ನಿರ್ಧರಿಸಿತ್ತು. ಇದರಿಂದ ಬೆಂಗಳೂರು ನಾಗರೀಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದವು. ಭಾರೀ ವಿರೋಧದ ನಡುವೆಯೂ ಬಿಡಿಎ ಸ್ಟೀಲ್ ಫ್ಲೈ ಓವರ್ ಕಾಮಗಾರಿಗೆ ಗ್ರೀನ್ ಸಿಗ್ನಲ್ ನೀಡಿತ್ತು. ಯೋಜನೆಯ ಕಾಮಗಾರಿ ನಡೆಸುವುದಕ್ಕೆ ಎಲ್​ಅಂಡ್ ಟಿ ಕಂಪನಿಗೆ ಒಪ್ಪಿಗೆ ಪತ್ರ ನೀಡಲಾಗಿದೆ.

ಕಳೆದ ಎರಡು ದಿನಗಳ ಹಿಂದೆ ಪತ್ರ ನೀಡಿದ್ದ ಬಿಡಿಎ ಟೆಂಡರ್ ಮೊತ್ತ 1791 ಕೋಟಿ ರೂಪಾಯಿಗೆ ಒಪ್ಪಿಗೆ ಸೂಚಿಸಿತ್ತು. ಪತ್ರ ನೀಡಿದ ದಿನದಿಂದಲೇ ಯೋಜನೆ ಅವಧಿ ಶುರುವಾಗುತ್ತೆ ಕೆಲಸ ನಿರ್ವಹಿಸಿ ಎಂದು ಸೂಚಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The National Green Tribunal today stayeeed the construction of the steel flyover in Bengaluru for four weeks. While staying the construction, the Southern Bench of the NGT also issued notices to the Bengaluru Development Authority and Karnataka State Pollution Control Board.
Please Wait while comments are loading...