ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಗಿದ ವಿಶ್ವಾಸ ಮತ, ಬಿರುಸುಗೊಂಡ ಸಂಪುಟ ರಚನೆ ಕಸರತ್ತು

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 25: ಕರ್ನಾಟಕ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಗೆದ್ದಿದ್ದಾರೆ. ಇದೀಗ ಸರಕಾರ ಭದ್ರವಾಗುತ್ತಿದ್ದಂತೆ ಬಹು ನಿರೀಕ್ಷಿತ ಸಂಪುಟ ರಚನೆ ಕಸರತ್ತು ಬಿರುಸು ಪಡೆದುಕೊಂಡಿದೆ.

ಸಂಪುಟ ರಚನೆ ಸಂಬಂಧ ಇಂದು ಸಿಎಂ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಮತ್ತು ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಬೆಂಗಳೂರಿನಲ್ಲಿ ಸಭೆ ನಡೆಸಿದರು.

Kumaraswamy, Parameshwara to meet Rahul Gandhi to discuss cabinet expansion

ನಾಳೆ ನವದೆಹಲಿಗೆ ಕುಮಾರಸ್ವಾಮಿ ಮತ್ತು ಪರಮೇಶ್ವರ್ ತೆರಳಲಿದ್ದು ಪ್ರಮುಖವಾಗಿ ಸಂಪುಟ ರಚನೆ ಸಂಬಂಧ ಚರ್ಚೆ ಮುಗಿಸಿಕೊಂಡ ವಾಪಸಾಗಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಉಭಯ ನಾಯಕರ ಭೇಟಿ ನಿಗದಿಯಾಗಿದ್ದು ಸಂಪುಟ ರಚನೆ ಕಸರತ್ತು ಮುಗಿಸುವ ಸಾಧ್ಯತೆ ಇದೆ.

ಇದೇ ವೇಳೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ನೂತನ ಸಿಎಂ ಕುಮಾರಸ್ವಾಮಿ ಸಮಯ ಕೇಳಿದ್ದಾರೆ. ಪ್ರಧಾನಿಯನ್ನೂ ಸಿಎಂ ಭೇಟಿಯಾಗುವ ಸಾಧ್ಯತೆ ಇದೆ.

English summary
A meeting was held over cabinet expansion after floor test, CM HD Kumaraswamy, Dy CM Dr G Parameshwar, Siddaramaiah, KC Venugopal and HD Revanna were present in the meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X