ಮೇ.12ಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ
ಬೆಂಗಳೂರು, ಮೇ.9: 2014-15ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಮೇ.12ರಂದು ಪ್ರಕಟಗೊಳ್ಳಲಿದೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ. ಮೇ 13ರಂದು ರಾಜ್ಯದ ಎಲ್ಲ ಪ್ರೌಢಶಾಲೆಗಳಲ್ಲೂ ಫಲಿತಾಂಶ ಪ್ರಕಟಿಸಲಾಗುತ್ತದೆ.
ಮೇ 10ರಂದು ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣಾ ನೀತಿಸಂಹಿತೆ ಜಾರಿಯಾಗುವುದರಿಂದ, ಪ್ರಸಕ್ತ ವರ್ಷದ ಫಲಿತಾಂಶವನ್ನು ಶಿಕ್ಷಣ ಸಚಿವರು ಪ್ರಕಟಿಸುವುದಿಲ್ಲ, ಬದಲಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಕಟಿಸಲಿದ್ದಾರೆ ಎಂದು ಪರೀಕ್ಷಾ ಮಂಡಳಿ ನಿರ್ದೇಶಕಿ ಯಶೋದಾ ಬೋಪಣ್ಣ ಹೇಳಿದರು. [ಎಸ್ಎಸ್ಎಲ್ಸಿ 2015 ಪರೀಕ್ಷಾ ಫಲಿತಾಂಶ ಪ್ರಕಟ]
ಎಸ್ಎಸ್ಎಲ್ ಸಿ ಪರೀಕ್ಷೆಗಳು ಮಾ.30ರಿಂದ ಆರಂಭಗೊಂಡು ಏ.13ರ ವರೆಗೆ ನಡೆದಿತ್ತು. ಎಂದಿನಂತೆ ಒನ್ಇಂಡಿಯಾ ಕನ್ನಡ ಮತ್ತು ಕರಿಯರ್ ಇಂಡಿಯಾ ವೆಬ್ ತಾಣಗಳಲ್ಲಿ ಫಲಿತಾಂಶ ಅಂಕಪಟ್ಟಿಗಳ ಸಮೇತ ಪ್ರಕಟವಾಗಲಿದೆ. [ಎಸೆಸ್ಸೆಲ್ಸಿಯಲ್ಲಿ 'ಕ್ಲಾಸ್' ಬದಲಿಗೆ 'ಗ್ರೇಡ್']
ಕೆಎಸ್ಇಇಬಿ ವೆಬ್ ಸೈಟ್ (ಕ್ಲಿಕ್ ಮಾಡಿ) ನಲ್ಲಿ ಮೊದಲಿಗೆ ಫಲಿತಾಂಶ ಪ್ರಕಟಗೊಳ್ಳಲಿದೆ. [ಜಿಲ್ಲಾವಾರು ಫಲಿತಾಂಶ: ಉಡುಪಿ ಫಸ್ಟ್, ಗದಗ ಲಾಸ್ಟ್ ]
* http://kseeb.kar.nic.in ಅಥವಾ http://karresults.nic.in/ ವೆಬ್ ಸೈಟ್ ಗೆ ಭೇಟಿ ಕೊಡಿ.
* ನೋಂದಾಣಿ ಸಂಖ್ಯೆ ನಮೂದಿಸಿ.
* ಸೆಕ್ಯುರಿಟಿ ಕೋಡ್ ಹಾಕಿ
* Submit ಬಟನ್ ಒತ್ತಿ.
* ಫಲಿತಾಂಶವನ್ನು ಪಡೆದು ಪ್ರಿಂಟ್ ಔಟ್ ತೆಗೆದುಕೊಳ್ಳಿ. [ಎಸ್‌ಎಸ್ಎಲ್‌ಸಿ ಫಲಿತಾಂಶದ ಮುಖ್ಯಾಂಶಗಳು]
ರಾಜ್ಯಾದ್ಯಂತ ಸುಮಾರು 8.56 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಊರ್ವದ ಪೊಂಪಾಯಿ ಶಾಲೆಯ 18 ವಿದ್ಯಾರ್ಥಿಗಳು ತುಳು ಭಾಷೆಯಲ್ಲಿ ಪರೀಕ್ಷೆ(ಏ.10) ತೆಗೆದುಕೊಂಡಿರುವುದು ಈ ಬಾರಿಯ ವಿಶೇಷ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಒನ್ ಇಂಡಿಯಾ ಕಡೆಯಿಂದ ಬೆಸ್ಟ್ ಆಫ್ ಲಕ್. ಎಸ್ಸೆಸೆಲ್ಸಿ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ