ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2015ರ ಎಸ್‌ಎಸ್ಎಲ್‌ಸಿ ಫಲಿತಾಂಶದ ಮುಖ್ಯಾಂಶಗಳು

|
Google Oneindia Kannada News

ಬೆಂಗಳೂರು, ಮೇ 12 : 2015ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದೆ. ಈ ಬಾರಿ ಶೇಕಡ 81.82ರಷ್ಟು ಫಲಿತಾಂಶ ಬಂದಿದ್ದು, ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. [ಫಲಿತಾಂಶ, ಅಂಕಪಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿ]

ಮಂಗಳವಾರ ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮದ್ ಮೊಹಸಿನ್ ಫಲಿತಾಂಶವನ್ನು ಪ್ರಕಟಿಸಿದರು. ಉಡುಪಿ ಪ್ರಥಮ ಸ್ಥಾನಗಳಿಸಿದ್ದರೆ, ಚಿಕ್ಕೋಡಿ ದ್ವಿತೀಯ ಸ್ಥಾನ ಗಳಿಸಿದೆ. ಗದಗ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. [ಫಲಿತಾಂಶ, ಅಂಕಪಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿ]

SSLC exam results 2015

ಈ ಬಾರಿ ಶೇಕಡ 81.82ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.86.23 ರಷ್ಟು ಬಾಲಕಿಯರು ಮತ್ತು ಶೇ. 77.85 ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. 36 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಆದರೆ, ಯಾವುದೇ ಸರ್ಕಾರಿ ಶಾಲೆಯಲ್ಲಿಯೂ ಶೂನ್ಯ ಫಲಿತಾಂಶ ಬಂದಿಲ್ಲ. 40 ವರ್ಷಕ್ಕೆ ಮೀರಿದ 360 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 7 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. [SSLC ಫಲಿತಾಂಶ ಪ್ರಕಟ]

ಫಲಿತಾಂಶ ಹೇಗಿದೆ? : 2011ರಲ್ಲಿ 73.90, 2012ರಲ್ಲಿ 76.13, 2013ರಲ್ಲಿ 77.47, 2014ರಲ್ಲಿ 81.20 ಫಲಿತಾಂಶ ಬಂದಿತ್ತು. ಈ ವರ್ಷ ಅಂದರೆ 2015ರಲ್ಲಿ 81.82ರಷ್ಟು ಫಲಿತಾಂಶ ಬಂದಿದ್ದು ಕಳೆದ ಐದು ವರ್ಷಗಳಿಂದ ಫಲಿತಾಂಶ ಏರಿಕೆಯಾಗುತ್ತಲೇ ಇದೆ. [ಫಲಿತಾಂಶ : ಯಾವ ಜಿಲ್ಲೆಗೆ ಯಾವ ಸ್ಥಾನ]

ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ : ಗ್ರಾಮೀಣ ಭಾಗದ 444, 771 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 384, 096 ಅಭ್ಯರ್ಥಿಗಳು ಉತ್ತೀರ್ಣಗೊಂಡಿದ್ದು 86.48ರಷ್ಟು ಫಲಿತಾಂಶ ಬಂದಿದೆ. ನಗರ ಪ್ರದೇಶದ 343, 671 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 284, 884 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು 82.86ರಷ್ಟು ಫಲಿತಾಂಶ ಬಂದಿದೆ.

ಶೂನ್ಯ ಫಲಿತಾಂಶದ ವಿವರ : ಬೆಳಗಾವಿ 1, ಬೆಂಗಳೂರು ಉತ್ತರ 4, ಬೆಂಗಳೂರು ದಕ್ಷಿಣ 3, ಬೀದರ್‌ 6, ಚಿಕ್ಕಬಳ್ಳಾಪುರ 1, ಚಿಕ್ಕೋಡಿ 1, ಧಾರವಾಡ 3, ಗದಗ 1, ಕಲಬುರಗಿ 10, ಕೊಪ್ಪಳ 1, ರಾಯಚೂರು 1, ತುಮಕೂರು 1, ವಿಜಯಪುರದ 3 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಇವುಗಳಲ್ಲಿ ಯಾವುದೇ ಸರ್ಕಾರಿ ಶಾಲೆಗಳು ಸೇರಿಲ್ಲ.

360ರಲ್ಲಿ 7 ವಿದ್ಯಾರ್ಥಿಗಳು ಉತ್ತೀರ್ಣ : 40 ವರ್ಷ ಮೇಲ್ಪಟ್ಟ 7 ವಿದ್ಯಾರ್ಥಿಗಳು ಈ ಬಾರಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 239 ಪುರುಷ ಅಭ್ಯರ್ಥಿಗಳ ಪೈಕಿ ಇಬ್ಬರು ಮತ್ತು 121 ಮಹಿಳಾ ಅಭ್ಯರ್ಥಿಗಳ ಪೈಕಿ ಐವರು ಉತ್ತೀರ್ಣಗೊಂಡಿದ್ದಾರೆ.

English summary
Karnataka Secondary education Examination Board (KSEEB) announced SSLC examination 2015 results on Tuesday, May 12. Here goes couple of highlights.Karnataka Secondary education Examination Board (KSEEB) announced SSLC examination 2015 results on Tuesday, May 12. Here goes couple of highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X