ಎಸ್ಎಸ್ಎಲ್ಸಿ 2015 ಪರೀಕ್ಷಾ ಫಲಿತಾಂಶ ಪ್ರಕಟ

ಬೆಂಗಳೂರು, ಮೇ.12: 2014-15ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಮೇ.12ರಂದು ಪ್ರಕಟಗೊಂಡಿದೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವೆಬ್ ಸೈಟ್ ನಲ್ಲಿ ಫಲಿತಾಂಶ ಮಂಗಳವಾರವೇ ಲಭ್ಯವಿದ್ದು, ಮೇ 13ರಂದು ರಾಜ್ಯದ ಎಲ್ಲ ಪ್ರೌಢಶಾಲೆಗಳಲ್ಲೂ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಪರೀಕ್ಷಾ ಮಂಡಳಿ ನಿರ್ದೇಶಕಿ ಯಶೋದಾ ಬೋಪಣ್ಣ ಹೇಳಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಎಸ್ಎಸ್ಎಲ್‌ಸಿ ಬೋರ್ಡ್ ನಲ್ಲಿ ಮಂಗಳವಾರ ಮಧ್ಯಾಹ್ನ 2.30 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್ ಮೋಯಿಸೀನ್ ಫಲಿತಾಂಶವನ್ನು ಪ್ರಕಟಿಸಿದರು. [ಗಣಿತ ಪತ್ರಿಕೆಗೆ 4 ಗ್ರೇಸ್‌ ಅಂಕ]

ಈ ವರ್ಷ ಒಟ್ಟಾರೆ ಶೇ 81.82 ಫಲಿತಾಂಶ ಬಂದಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ.86.23 ರಷ್ಟು ಬಾಲಕಿಯರು ಉತ್ತೀರ್ಣರಾದರೆ, ಶೇ. 77.85 ಬಾಲಕರು ಉತ್ತೀರ್ಣರಾಗಿದ್ದಾರೆ ಎಂದರು.[ಜಿಲ್ಲಾವಾರು ಫಲಿತಾಂಶ: ಉಡುಪಿ ಫಸ್ಟ್, ಗದಗ ಲಾಸ್ಟ್ ]

Karnataka SSLC Board Exam Results 2015 online

ಎಸ್ಎಸ್ಎಲ್ ಸಿ ಪರೀಕ್ಷೆಗಳು ಮಾ.30ರಿಂದ ಆರಂಭಗೊಂಡು ಏ.13ರ ವರೆಗೆ ನಡೆದಿತ್ತು. ಎಂದಿನಂತೆ ಒನ್ಇಂಡಿಯಾ ಕನ್ನಡ ಮತ್ತು ಕರಿಯರ್ ಇಂಡಿಯಾ ವೆಬ್ ತಾಣಗಳಲ್ಲಿ ಫಲಿತಾಂಶ ಅಂಕಪಟ್ಟಿಗಳ ಸಮೇತ ಪ್ರಕಟವಾಗಲಿದೆ. [ಎಸೆಸ್ಸೆಲ್ಸಿಯಲ್ಲಿ 'ಕ್ಲಾಸ್' ಬದಲಿಗೆ 'ಗ್ರೇಡ್']

ರಾಜ್ಯಾದ್ಯಂತ ಸುಮಾರು 8.56 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಊರ್ವದ ಪೊಂಪಾಯಿ ಶಾಲೆಯ 18 ವಿದ್ಯಾರ್ಥಿಗಳು ತುಳು ಭಾಷೆಯಲ್ಲಿ ಪರೀಕ್ಷೆ (ಏ.10) ತೆಗೆದುಕೊಂಡಿರುವುದು ಈ ಬಾರಿಯ ವಿಶೇಷ.

Karnataka SSLC Board Exam Results 2015 online

2015ನೇ ಫಲಿತಾಂಶದಲ್ಲಿ ಉಡುಪಿ ಪ್ರಥಮ ಸ್ಥಾನ ಪಡೆದಿದ್ದರೆ, ಚಿಕ್ಕೋಡಿ ಎರಡನೇ ಸ್ಥಾನ ಪಡೆದಿದೆ. ಉತ್ತರ ಕನ್ನಡ ಜಿಲ್ಲೆ ಮೂರನೇ ಸ್ಥಾನ ಗಳಿಸಿದೆ. ಗದಗ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ. [ಎಸ್‌ಎಸ್ಎಲ್‌ಸಿ ಫಲಿತಾಂಶದ ಮುಖ್ಯಾಂಶಗಳು]

36 ಶಾಲೆಗಳಲ್ಲಿ ಈ ಬಾರಿ ಶೂನ್ಯ ಫಲಿತಾಂಶ ಬಂದಿದೆ. ಯಾವುದೇ ಸರ್ಕಾರಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿಲ್ಲ. [ಹೊಸ ಪರೀಕ್ಷಾ ಪದ್ದತಿ ವರದಿಯಲ್ಲೇನಿದೆ?]

ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಒನ್ ಇಂಡಿಯಾ ಕಡೆಯಿಂದ ಬೆಸ್ಟ್ ಆಫ್ ಲಕ್. ಎಸ್ಸೆಸೆಲ್ಸಿ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+