ಎಸ್‌ಎಸ್‌ಎಲ್‌ಸಿ ಹೊಸ ಪರೀಕ್ಷಾ ಪದ್ದತಿ ವರದಿಯಲ್ಲೇನಿದೆ?
ಬೆಂಗಳೂರು, ಜೂ.13: 2014-15 ಸಾಲಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವಿಧಾನ ಮತ್ತು ಪ್ರಶ್ನೆ ಪತ್ರಿಕೆ ಸ್ವರೂಪದಲ್ಲಿ ಬದಲಾವಣೆ ತರಲು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಮುಂದಾಗಿದ್ದು, ಈ ಸಂಬಂಧ ಪರಿಷ್ಕೃತ ಪರೀಕ್ಷಾ ಪದ್ದತಿಯ ಕರಡು ಪ್ರತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಎಂಇಎಸ್ ಶಿಕ್ಷಕರ ಕಾಲೇಜಿನ ಪ್ರಾಂಶುಪಾಲ ಡಾ. ಗಣೇಶ ಭಟ್ಟ ಅಧ್ಯಕ್ಷತೆಯಲ್ಲಿ 9 ಸದಸ್ಯರ ಉಪ ಸಮಿತಿ ಪರಿಷ್ಕೃತ ಪರೀಕ್ಷಾ ಪದ್ದತಿಯನ್ನು ಸಿದ್ದಪಡಿಸಿ ವರದಿ ತಯಾರಿಸಿದೆ. ಸಮಗ್ರ ಮತ್ತು ನಿರಂತರ ಮೌಲ್ಯಮಾಪನ(Continuous and Comprehensive Evaluation) ಎಸ್‌ಎಸ್‌ಎಲ್‌ಸಿಯಲ್ಲಿ ಅಳವಡಿಸುವ ಕುರಿತು ಸಮಿತಿ ಶಿಫಾರಸು ಸಲ್ಲಿಸಿದ ವರದಿಯನ್ನು ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಇದೀಗ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಹಾಲಿ ಇರುವಂತೆ 625 ಅಂಕಗಳಿಗೆ ವಾರ್ಷಿಕ ಪರೀಕ್ಷೆ ನಡೆಸಲಾಗುತ್ತದೆ. ಪ್ರತಿ ವಿಷಯದ ಶೇ.80 ರಷ್ಟು ಅಂಕಗಳಿಗೆ ಲಿಖಿತ ಪರೀಕ್ಷೆ ಇರಲಿದ್ದು, ಉಳಿದ ಶೇ.20 ಅಂಕಗಳಿಗೆ ಆಂತರಿಕ ಪರೀಕ್ಷೆ ಇರಲಿದೆ.
ಸಿಸಿಇಯಲ್ಲಿ ಪ್ರಥಮ ಭಾಷೆಗೆ 125 ಅಂಕಗಳನ್ನು ನಿಗದಿ ಪಡಿಸಿದ್ದು 25 ಅಂಕಗಳನ್ನು ಅಂತರಿಕ ಪರೀಕ್ಷೆ ಮಾಡಿ ನೀಡಲಾಗುತ್ತದೆ. ದ್ವಿತೀಯ ಭಾಷೆ, ತೃತೀಯ ಭಾಷೆ, ವಿಜ್ಞಾನ, ಸಮಾಜ, ಗಣಿತಗಳಿಗೆ 100 ಅಂಕ ನಿಗದಿಯಾಗಿದ್ದು ವಿದ್ಯಾರ್ಥಿಗಳು 80 ಅಂಕಗಳಿಗೆ ಲಿಖಿತ ಉತ್ತರ ಬರೆದರೆ 20 ಅಂಕಗಳನ್ನು ಆಂತರಿಕ ಪರೀಕ್ಷೆ ಮಾಡಿ ನೀಡಲಾಗುತ್ತದೆ.

ವಿದ್ಯಾರ್ಥಿ ತೇರ್ಗಡೆಯಾಗಲು 80 ಅಂಕಗಳಿಗೆ ಕನಿಷ್ಠ 28 ಅಂಕಗಳನ್ನು ಪಡೆಯಬೇಕು. ಹೀಗಾಗಿ ಲಿಖಿತ ಪರೀಕ್ಷೆಯಲ್ಲಿ 500 ಅಂಕಗಳಿಗೆ 175 ಅಂಕಗಳನ್ನು ಪಡೆದರೆ ವಿದ್ಯಾರ್ಥಿ ಪಾಸು ಎಂದು ಗುರುತಿಸಲಾಗುತ್ತದೆ. ಲಿಖಿತ ಪರೀಕ್ಷೆ ಅಂಕ ಮತ್ತು ಅಂತರಿಕ ಪರೀಕ್ಷೆಯ ಅಂಕವನ್ನು ಆಧರಿಸಿ ವಿದ್ಯಾರ್ಥಿಗೆ ಗ್ರೇಡ್ ನೀಡಲಾಗುತ್ತದೆ.[ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಕನ್ನಡಿಗರು]
ಗ್ರೇಡ್ ಹೇಗೆ ನೀಡಲಾಗುತ್ತದೆ ?
100 ಅಂಕ ಮತ್ತು 125 ಅಂಕಗಳಿಗೆ ಈ ಕೆಳಕಂಡಂತೆ ಗ್ರೇಡ್ ನೀಡಲಾಗುತ್ತದೆ. ಆವರಣದ ಒಳಗಡೆ ಇರುವುದು 125 ಅಂಕಗಳ ಗ್ರೇಡ್. 90-100 (112-125) ಅಂಕಗಳಿಗೆ 'ಎ+' ಗ್ರೇಡ್, 80-89 (100-111) ಅಂಕಗಳಿಗೆ 'ಎ' ಗ್ರೇಡ್, 70-79 (87-99) ಅಂಕಗಳಿಗೆ 'ಬಿ+' ಗ್ರೇಡ್, 60-69(75-86) ಅಂಕಗಳಿಗೆ ' ಬಿ' ಗ್ರೇಡ್, 50-59(62-74) ಅಂಕಗಳಿಗೆ 'ಸಿ+' ಗ್ರೇಡ್, 30-49(38-61) ಅಂಕಗಳಿಗೆ 'ಸಿ' ಗ್ರೇಡ್ ನೀಡಲಾಗುತ್ತದೆ.
562- 625 ಅಂಕಗಳಿಗೆ 'ಎ+' ಗ್ರೇಡ್, 500-561 ಅಂಕಗಳಿಗೆ 'ಎ' ಗ್ರೇಡ್, 437-499 ಅಂಕಗಳಿಗೆ 'ಬಿ+' ಗ್ರೇಡ್, 375-436 ಅಂಕಗಳಿಗೆ ' ಬಿ' ಗ್ರೇಡ್, 312-374 ಅಂಕಗಳಿಗೆ 'ಸಿ+' ಗ್ರೇಡ್, 219-311 ಅಂಕಗಳಿಗೆ 'ಸಿ' ಗ್ರೇಡ್ ನೀಡಲಾಗುತ್ತದೆ.
ಹೊಸ ವಿಧಾನದ ಬಗ್ಗೆ ಶಿಕ್ಷಕರಿಗೆ ಜುಲೈ ತಿಂಗಳ ಒಳಗಡೆ ತರಬೇತಿ ನೀಡಬೇಕು ಎಂದು ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಆದರೂ ಈ ಸಮಿತಿಯ ವರದಿಯೇ ಅಂತಿಮವಲ್ಲ. ಶಿಕ್ಷಣ ತಜ್ಞರ, ಸಾರ್ವಜನಿಕರ ಅಭಿಪ್ರಾಯವನ್ನು ಕ್ರೋಢಿಕರಿಸಿ ಪ್ರೌಢ ಶಿಕ್ಷಣ ಮಂಡಳಿ ಅಂತಿಮವಾಗಿ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ.
ಪರಿಷ್ಕೃತ ಪರೀಕ್ಷಾ ಪದ್ದತಿ ವರದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: www.kseeb.kar.nic.in
ಹೊಸ ಪಠ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳು, ಶಿಕ್ಷಕರು ಶಿಕ್ಷಣ ತಜ್ಞರು ಸಲಹೆ ಸೂಚನೆಯನ್ನು ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ.
ನಿರ್ದೇಶಕರು
ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ,
6 ನೇ ಅಡ್ಡ ರಸ್ತೆ, ಮಲ್ಲೇಶ್ವರಂ,
ಬೆಂಗಳೂರು - 560003.
ಇ - ಮೇಲ್ : [email protected]
-
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications