ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಕನ್ನಡಿಗರು
ಬೆಂಗಳೂರು, ಜೂ. 13 : ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶ ಪ್ರಕಟಗೊಂಡಿದ್ದು, ಕರ್ನಾಟಕದ ರಾಜ್ಯದ 40ಕ್ಕೂ ಹೆಚ್ಚು ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. 2013ರ ಅಕ್ಟೋಬರ್ ಪರೀಕ್ಷೆ ನಡೆದಿದ್ದು, ಮೇ ಕೊನೆಯ ವಾರದಿಂದ ಜೂ.5ರವರೆಗೆ ಸಂದರ್ಶನ ನಡೆದಿತ್ತು. ರಾಜಸ್ಥಾನದ ಗೌರವ್ ಅಗರವಾಲ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ದೇಶಾದ್ಯಂತ 1,122 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಕರ್ನಾಟಕದಿಂದ ಧಾರವಾಡದ ಗುರುದತ್ತ ಹೆಗಡೆ 25ನೇ ರ‌್ಯಾಂಕ್ ಪಡೆದಿದ್ದರೆ, ವಿಜಾಪುರ ತಾಲೂಕು ಗುಣಕಿ ಗ್ರಾಮದ ಕೃಷಿ ಕುಟುಂಬದ ರವೀಂದ್ರ ಈರಣ್ಣ ಹತ್ತಳ್ಳಿ 364ನೇ ರ‌್ಯಾಂಕ್ ಪಡೆದಿದ್ದಾರೆ. ಉತ್ತರ ಕನ್ನಡ ಜಿ.ಪಂ ಸಿಇಒ ಅವರ ಪತ್ನಿ ದಿವ್ಯಪ್ರಭ, ಶಿವಮೊಗ್ಗದಲ್ಲಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿರುವವರ ಪುತ್ರ ಜಿ.ಎಂ. ವಿನಯ್ ಸೇರಿದಂತೆ ಹಲವರು ಉತ್ತೀರ್ಣರಾಗಿದ್ದಾರೆ.

ಗುರುದತ್ತ ಹೆಗಡೆ : ಯುಪಿಎಸ್ ಸಿ ಪರೀಕ್ಷೆಯಲ್ಲಿ 25ನೇ ರ‌್ಯಾಂಕ್ ಪಡೆದಿರುವ ಧಾರವಾಡದ ಗುರುದತ್ತ ಹೆಗಡೆ ಅವರು ನಾರಾಯಣ ಹೆಗಡೆ ಹಾಗೂ ಶಶಿಕಲಾ ದಂಪತಿಯ ಪುತ್ರ. 5ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಈರಿದ ಇವರು 6ನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದಾರೆ. ಮೂಲತಃ ಶಿರಸಿಯವರಾದ ನಾರಾಯಣ ಹೆಗಡೆ ಸದ್ಯ ಧಾರವಾಡದಲ್ಲಿ ನೆಲೆಸಿ ವ್ಯಾಪಾರ ಮಾಡುತ್ತಿದ್ದಾರೆ. ಗುರುದತ್ತ ಅವರ ತಾಯಿ ಶಶಿಕಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುರುದತ್ತ ಅವರು ಐಎಎಸ್ ಪರೀಕ್ಷೆಗಾಗಿ ದೆಹಲಿಯ ಶ್ರೀರಾಮ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆದಿದ್ದರು.
ದಿವ್ಯಪ್ರಭ : ಯುಪಿಎಸ್ ಸಿ ಪರೀಕ್ಷೆಯಲ್ಲಿ 82ನೇ ರ‌್ಯಾಂಕ್ ಪಡೆದಿರುವ ದಿವ್ಯಪ್ರಭ ಅವರು, ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ರಾಮಪ್ರಸಾದ್ ಮನೋಹರ ಅವರ ಪತ್ನಿ. ಸದ್ಯ ಪತಿಯೊಂದಿಗೆ ಕಾರವಾರದಲ್ಲಿ ನೆಲೆಸಿರುವ ದಿವ್ಯಪ್ರಭ ಮೂಲತಃ ತಮಿಳುನಾಡಿನ ಮಧುರೈನವರು. ಬಿಎಸ್‌ಸಿ ಕೃಷಿ ವಿಷಯದಲ್ಲಿ ಚಿನ್ನದ ಪದಕ ಪಡೆದಿದ್ದು, ವಿಭಾಗೀಯ ಅರಣ್ಯ ಸಂರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. [ಐಎಎಸ್ ಪರೀಕ್ಷೆ ಕನ್ನಡದಲ್ಲೇ ಬರೆಯಲು ಬಿಡಿ]
ಲಕ್ಷ್ಮಣ ನಿಂಬರಗಿ : ಹುಬ್ಬಳ್ಳಿಯ ವಿದ್ಯಾನಗರದ ಪ್ರಭಾತ್ ಕಾಲೊನಿ ನಿವಾಸಿ ಲಕ್ಷ್ಮಣ ನಿಂಬರಗಿ ಯುಪಿಎಸ್ ಸಿ ಪರೀಕ್ಷೆಯಲ್ಲಿ 104ನೇ ರ‌್ಯಾಂಕ್ ಪಡೆದಿದ್ದಾರೆ. ಕನ್ನಡ ಮಾಧ್ಯಮದಲ್ಲೇ ಪರೀಕ್ಷೆ ಬರೆದಿರುವುದು ಇವರ ಸಾಧನೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡದಲ್ಲಿ ಉಪ ನೋಂದಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು, ದಿಲ್ಲಿಯ ವಾದಿರಾಮ್ ಆ್ಯಂಡ್ ರವಿ ಕೋಚಿಂಗ್ ಸೆಂಟರ್ ನಲ್ಲಿ ಎರಡು ವರ್ಷ ತರಬೇತಿ ಪಡೆದಿದ್ದರು.
ಬಿ.ಎಂ. ಲಕ್ಷ್ಮೀಪ್ರಸಾದ್ : ಯುಪಿಎಸ್ ಸಿ ಪರೀಕ್ಷೆಯಲ್ಲಿ 151ನೇ ರ‌್ಯಾಂಕ್ ಡೆದಿರುವ ಬಿ.ಎಂ.ಲಕ್ಷ್ಮೀ ಪ್ರಸಾದ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಕಸ್ತೂರಿನಗರದ ನಿವಾಸಿಯಾಗಿರುವ ಇವರು ಎಚ್‌ಪಿ ಕಂಪನಿಯಲ್ಲಿ 2009ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ತಂದೆ ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರಾಗಿದ್ದಾರೆ.
ರವೀಂದ್ರ ಈರಣ್ಣ ಹತ್ತಳ್ಳಿ : ವಿಜಾಪುರ ತಾಲೂಕಿನ ಗುಣಕಿ ಎಂಬ ಕುಗ್ರಾಮದ ಯುವಕ ರವೀಂದ್ರ ಈರಣ್ಣ ಹತ್ತಳ್ಳಿ ಯುಪಿಎಸ್ ಸಿ ಪರೀಕ್ಷೆಯಲ್ಲಿ 364ನೇ ರ‌್ಯಾಂಕ್ ಡೆದಿದ್ದಾರೆ. ಮೊದಲ ಪ್ರಯತ್ನದಲ್ಲಿ ಕೇವಲ 4 ಅಂಕಗಳಿಂದ ಸಂದರ್ಶನ ಕೈ ತಪ್ಪಿತ್ತು. ಎರಡನೇ ಪ್ರಯತ್ನದಲ್ಲಿ ಉತ್ತಿರ್ಣರಾಗಿದ್ದಾರೆ. ರವೀಂದ್ರ ಅವರ ತಂದೆ ವಿಜಾಪುರದ ಬಿಎಲ್‌ಡಿಇ ಪಾಲಿಟೆಕ್ನಿಕ್ ಕಾಲೇಜ್‌ನಲ್ಲಿ ಗುಮಾಸ್ತ. ತಾಯಿ ಗೃಹಿಣಿ.
ಜಿ.ಎಂ.ವಿನಯ್ : ಯುಪಿಎಸ್ ಸಿ ಪರೀಕ್ಷೆಯಲ್ಲಿ 459ನೇ ರ‌್ಯಾಂಕ್ ಪಡೆದಿರುವ ವಿನಯ್ ಅಪ್ಪಟ ಮಲೆನಾಡಿನ ಪ್ರತಿಭೆ. ತಂದೆ ಪಂಚಾಯತ್ ರಾಜ್ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಶಿವಮೊಗ್ಗದಲ್ಲಿಯೇ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ಶಿಕ್ಷಣ ಪಡೆದಿದ್ದಾರೆ. ಮೊದಲ ಬಾರಿಗೆ ಒಂದು ಸಾರಿ ಪರೀಕ್ಷೆ ಬರೆದು ವಿಫಲರಾಗಿದ್ದರು, ಎರಡನೇ ಬಾರಿ 459ನೇ ರ‌್ಯಾಂಕ್ ಗಳಿಸಿದ್ದಾರೆ.
ಡಾ. ರಾಘವೇಂದ್ರ ಪಿ. ರಾಯ್ಕರ್ : ಯುಪಿಎಸ್ ಸಿ ಪರೀಕ್ಷೆಯಲ್ಲಿ 769ನೇ ರ‌್ಯಾಂಕ್ ಪಡೆದಿರುವ ರಾಘವೇಂದ್ರ ಅವರು ಬಿಬಿಎಂಪಿಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡು ಬಾರಿ ಪರೀಕ್ಷೆ ಬರೆದಿದ್ದ ಇವರು ಮೂರನೇ ಬಾರಿ ಉತ್ತೀರ್ಣರಾಗಿದ್ದಾರೆ. ರಾಘವೇಂದ್ರ ಪಿ.ರಾಯ್ಕರ್ ಹುಟ್ಟಿ, ಬೆಳೆದದ್ದೆಲ್ಲಾ ಭದ್ರಾವತಿಯಲ್ಲಿ. ಪ್ರೌಢಶಾಲೆಯವರೆಗೂ ಅಲ್ಲಿನ ವಿಶ್ವೇಶ್ವರಯ್ಯ ಶಾಲೆಯಲ್ಲೇ ವ್ಯಾಸಂಗ ಮಾಡಿದ್ದಾರೆ.
ದ್ಯಾಮಪ್ಪ ಐರಣಿ : ಯುಪಿಎಸ್ ಸಿ 833ನೇ ರ‌್ಯಾಂಕ್ ಪಡೆದಿರುವ ದ್ಯಾಮಪ್ಪ ಐರಣಿ ಅವರ ತಂದೆ ಕುರಿಗಾಹಿ. ಚಿಕ್ಕಂದಿನಲ್ಲಿ ದ್ಯಾಮಪ್ಪ ಆಗಾಗ ತಂದೆಯ ಜತೆ ಕುರಿ ಕಾಯಲು ಸಹ ಹೋಗುತ್ತಿದ್ದರು. ಬೆಂಗಳೂರು ಆರ್.ವಿ.ಕಾಲೇಜಿನಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ.
ಉಮೇಶ್ ಎನ್.ರಾಠೋಡ್ : ಯುಪಿಎಸ್ ಸಿ ಪರೀಕ್ಷೆಯಲ್ಲಿ 939ನೇ ರ‌್ಯಾಂಕ್ ಡೆದಿರುವ ಉಮೇಶ್ ಹಗಲಿಡಿ ಅಂಚೆ ಕಚೇರಿಯಲ್ಲಿ ಪತ್ರಗಳನ್ನು ಪ್ರತ್ಯೇಕಿಸುವ ಕೆಲಸ, ರಾತ್ರಿಯಿಡಿ ಪರೀಕ್ಷೆಗಾಗಿ ಅಭ್ಯಾಸ ಮಾಡುತ್ತಿದ್ದರು. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಇವರು ಪೊಲಿಟಿಕಲ್ ಸೈನ್ಸ್‌ನಲ್ಲಿ ಎಂಎ ಪದವಿ ಪಡೆದಿದ್ದಾರೆ. ಬೆಂಗಳೂರಿನ ಜೆಎಸ್‌ಎಸ್ ಸ್ಪರ್ಧಾತ್ಮಕ ಪರೀಕ್ಷೆ ಕೇಂದ್ರದಲ್ಲಿ ಐಎಎಸ್‌ಗಾಗಿ ಎರಡು ವರ್ಷ ತರಬೇತಿ ಪಡೆದಿದ್ದಾರೆ.
-
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ












Click it and Unblock the Notifications