2015ರಿಂದ ಎಸೆಸ್ಸೆಲ್ಸಿಯಲ್ಲಿ 'ಕ್ಲಾಸ್' ಬದಲಿಗೆ 'ಗ್ರೇಡ್'
ಬೆಂಗಳೂರು, ಜ.2: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಇನ್ಮುಂದೆ ಫಸ್ಟ್, ಸೆಕೆಂಡು, ಥರ್ಡ್ ಕ್ಲಾಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇಡೀ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ಪರೀಕ್ಷಾ ಮಂಡಳಿ(ಕೆಎಸ್ ಇಇಬಿ) ಬದಲಾಯಿಸಲು ನಿರ್ಧರಿಸಿದೆ. ಕ್ಲಾಸ್ ಬದಲಿಗೆ ಗ್ರೇಡಿಂಗ್ ವ್ಯವಸ್ಥೆ ಇನ್ಮುಂದೆ ಜಾರಿಯಲ್ಲಿರುತ್ತದೆ.
2015ರಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರಥಮ ದರ್ಜೆ ಬದಲಿಗೆ ಶ್ರೇಣಿಗಳನ್ನು ನೀಡಲಾಗುತ್ತದೆ. ಮಾರ್ಚ್ 30 ರಿಂದ ಏಪ್ರಿಲ್ 13, 2015ರ ತನಕ ಪರೀಕ್ಷೆಗಳು ನಡೆಯಲಿದೆ. [ಎಸ್‌ಎಸ್ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ]
ಇನ್ಮುಂದೆ A+, A, B+, B, C+ ಹಾಗೂ C ಎಂದು ಸಿಬಿಎಸ್ ಸಿ ಹಾಗೂ ಐಸಿಎಸ್ ಇ ಮಾದರಿಯಲ್ಲೇ ಶ್ರೇಣಿಗಳನ್ನು ನೀಡಲಾಗುತ್ತದೆ. ಈಗಾಗಲೇ ಕರ್ನಾಟಕದಲ್ಲಿ ಶ್ರೇಯಾಂಕ(rank) ಪದ್ಧತಿ ರದ್ದಾಗಿದೆ. ಹೊಸ ಗ್ರೇಡಿಂಗ್ ಪದ್ಧತಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಮತ್ತೊಂದು ವ್ಯವಸ್ಥೆ: ಪರೀಕ್ಷಾ ಕ್ರಮದ ಪರಿಷ್ಕರಣೆಗೆ ಬೆಂಗಳೂರಿನ ಎಂ.ಇ.ಎಸ್ ಶಿಕ್ಷಕರ ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್ ಭಟ್ ನೇತೃತ್ವದ ತಜ್ಞರ ಉಪಸಮಿತಿಯನ್ನು ಸರ್ಕಾರ ರಚಿಸಿತ್ತು.

10 ಜನರನ್ನೊಳಗೊಂಡ ಈ ಸಮಿತಿ ಎಸ್.ಎಸ್.ಎಲ್.ಸಿಯ ಆರು ವಿಷಯಗಳಿಗೆ ಇರುವ 625 ಅಂಕಗಳಲ್ಲಿ ಶೇ.80ರಷ್ಟು ಅಂಕಗಳಿಗೆ ಮಾತ್ರ ಲಿಖಿತ ಪರೀಕ್ಷೆ ನಡೆಸಿ ಉಳಿದ ಶೇ.20 ಅಂಕಗಳಿಗೆ ಇಂಟರ್ನಲ್ ನಡೆಸುವಂತೆ ಶಿಫಾರಸು ಮಾಡಿತ್ತು. ಹೀಗಾಗಿ, 2015ನೇ ಸಾಲಿನಿಂದ ಎಸ್.ಎಸ್.ಎಲ್.ಸಿಗೆ 80 ಅಂಕಗಳ ಪರೀಕ್ಷೆ ನಡೆಯಲಿದ್ದು, ಇನ್ನುಳಿದ 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ(ಇಂಟರ್ನಲ್) ನಡೆಯಲಿದೆ. [ಹೊಸ ಪರೀಕ್ಷಾ ಪದ್ದತಿ ವರದಿಯಲ್ಲೇನಿದೆ?]
ಗ್ರೇಡ್ ಹೇಗೆ ನೀಡಲಾಗುತ್ತದೆ ?
100 ಅಂಕ ಮತ್ತು 125 ಅಂಕಗಳಿಗೆ ಈ ಕೆಳಕಂಡಂತೆ ಗ್ರೇಡ್ ನೀಡಲಾಗುತ್ತದೆ. ಆವರಣದ ಒಳಗಡೆ ಇರುವುದು 125 ಅಂಕಗಳ ಗ್ರೇಡ್. 90-100 (112-125) ಅಂಕಗಳಿಗೆ 'ಎ+' ಗ್ರೇಡ್, 80-89 (100-111) ಅಂಕಗಳಿಗೆ 'ಎ' ಗ್ರೇಡ್, 70-79 (87-99) ಅಂಕಗಳಿಗೆ 'ಬಿ+' ಗ್ರೇಡ್, 60-69(75-86) ಅಂಕಗಳಿಗೆ ' ಬಿ' ಗ್ರೇಡ್, 50-59(62-74) ಅಂಕಗಳಿಗೆ 'ಸಿ+' ಗ್ರೇಡ್, 30-49(38-61) ಅಂಕಗಳಿಗೆ 'ಸಿ' ಗ್ರೇಡ್ ನೀಡಲಾಗುತ್ತದೆ.
562- 625 ಅಂಕಗಳಿಗೆ 'ಎ+' ಗ್ರೇಡ್, 500-561 ಅಂಕಗಳಿಗೆ 'ಎ' ಗ್ರೇಡ್, 437-499 ಅಂಕಗಳಿಗೆ 'ಬಿ+' ಗ್ರೇಡ್, 375-436 ಅಂಕಗಳಿಗೆ ' ಬಿ' ಗ್ರೇಡ್, 312-374 ಅಂಕಗಳಿಗೆ 'ಸಿ+' ಗ್ರೇಡ್, 219-311 ಅಂಕಗಳಿಗೆ 'ಸಿ' ಗ್ರೇಡ್ ನೀಡಲಾಗುತ್ತದೆ.
-
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications