ಪೊಲೀಸರ ಪ್ರತಿಭಟನೆ : ಶಶಿಧರ್ ವೇಣುಗೋಪಾಲ್ ಬಂಧನ

Posted By:
Subscribe to Oneindia Kannada

ಬೆಂಗಳೂರು, ಜೂನ್ 02 : ಪೊಲೀಸರು ರಜೆ ಹಾಕಿ ಜೂನ್ 4ರಂದು ಪ್ರತಿಭಟನೆ ನಡೆಸುವಂತೆ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘ ಕರೆ ನೀಡಿದೆ. ಮಧ್ಯರಾತ್ರಿ ನಡೆದ ಬೆಳವಣಿಗೆಯಲ್ಲಿ ಮಹಾ ಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಅವರನ್ನು ಬಂಧಿಸಲಾಗಿದೆ. ಸದ್ಯ, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಬೆಂಗಳೂರಿನ ಯಲಹಂಕ ನ್ಯೂಟೌನ್ ಆರ್‌ಟಿಓ ಕಚೇರಿ ಹಿಂಭಾಗದಲ್ಲಿರುವ ಶಶಿಧರ್ ಅವರ ಮನೆಗೆ ಮಧ್ಯರಾತ್ರಿ ಆಗಮಿಸಿದ 30ಕ್ಕೂ ಹೆಚ್ಚು ಪೊಲೀಸರು ಶಶಿಧರ್ ವೇಣುಗೋಪಾಲ್ ಅವರನ್ನು ಬಂಧಿಸಿ, ಕರೆದುಕೊಂಡು ಹೋಗಿದ್ದಾರೆ. [ಪೊಲೀಸರ ಪ್ರತಿಭಟನೆ, 31 ಬೇಡಿಕೆಗಳು]

shashidhar venugopal

ಶಶಿಧರ್ ಪತ್ನಿ ಪೂರ್ಣಿಮಾ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಶಶಿಧರ್ ಅವರ ಪುತ್ರ ಈ ಕುರಿತು ಫೇಸ್‌ಬುಕ್‌ ಪುಟದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಬಂಧನದ ಬಳಿಕ ಮಧ್ಯರಾತ್ರಿ 1.15ರ ಸುಮಾರಿಗೆ ಪುನಃ ಆಗಮಿಸಿದ ಪೊಲೀಸರು ಪ್ರತಿಭಟನೆಯ ಕರಪತ್ರ, ಮನೆಯಲ್ಲಿದ್ದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. [ಪ್ರತಿಭಟನೆ : ಪೊಲೀಸರಿಂದ ಬಲವಂತದ ಮುಚ್ಚಳಿಕೆ]

ನ್ಯಾಯಾಂಗ ಬಂಧನ : ಶಶಿಧರ್ ವೇಣುಗೋಪಾಲ್ ಅವರನ್ನು ಬಂಧಿಸಿರುವುದನ್ನು ಪೊಲೀಸರು ಖಚಿತ ಪಡಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಅವರು, ಸರ್ಕಾರದ ವಿರುದ್ಧ ಸಮರ, ಒಳಸಂಚು ರೂಪಿಸಿದ ಆರೋಪದಡಿ ಬಂಧಿಸಲಾಗಿದೆ. ನ್ಯಾಯಾಧೀಶರ ಮುಂದೆ ಅವರನ್ನು ಹಾಜರುಪಡಿಸಿದ್ದು, ಜೂನ್ 16ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ' ಎಂದು ಹೇಳಿದರು. [ಮರೆಯಲಾದಿತೇ ಪೊಲೀಸಪ್ಪನವರ ಜೊತೆಗಿನ ನನ್ನ ಒಡನಾಟ?]

ಕಾಂಪೌಂಡ್ ಹಾರಿ ಬಂದರು : ಶಶಿಧರ್ ಅವರನ್ನು ಬಂಧಿಸಲು ಬಂದ ಪೊಲೀಸರು ಕಾಂಪೌಂಡ್ ಹಾರಿ ಅವರ ಮನೆ ಪ್ರವೇಶಿಸಿದರು. ಗೇಟ್ ಬೀಗ ಹಾಕಿದ್ದರಿಂದ 30ಕ್ಕೂ ಹೆಚ್ಚು ಪೊಲೀಸರು ಕಾಂಪೌಂಡ್ ಹಾರಿ ಒಳ ಬಂದರು. ಈ ಸಮಯದಲ್ಲಿ ಜೋರಾಗಿ ನಾಯಿ ಬೊಗಳಿದ್ದನ್ನು ಕೇಳಿದ ಶಶಿಧರ್ ಮನೆಯಿಂದ ಹೊರಬಂದರು.

'ನಾನು ಪೊಲೀಸರ ಜೊತೆ ಹೋಗುತ್ತೇನೆ, ವಕೀಲರಿಗೆ ಈ ಕುರಿತು ಮಾಹಿತಿ ನೀಡಿ' ಎಂದು ಹೇಳಿದ ಶಶಿಧರ್ ಪೊಲೀಸರ ಜೊತೆ ಹೋದರು. ನಂತರ ಬಂದ ಪೊಲೀಸರು ಮನೆಯಲ್ಲಿದ್ದ ಕರಪತ್ರ, ಕಂಪ್ಯೂಟರ್‌ ಅನ್ನು ತೆಗೆದುಕೊಂಡು ಹೋದರು' ಎಂದು ಶಶಿಧರ್ ಪತ್ನಿ ಪೂರ್ಣಿಮಾ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Akhila Karnataka Police Mahasabha president Shashidhar Venugopal arrested on Thursday, around 12.30 am at Yelahanka New Town Bengaluru. Mahasabha called policemen to abstain from duty by applying leave on June 4, 2016.
Please Wait while comments are loading...