ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈದಾನ ಅಕ್ರಮದಲ್ಲಿ ಬಿಜೆಪಿ ನಾಯಕರು ಶಾಮೀಲು

By Srinath
|
Google Oneindia Kannada News

hubli-gymkhana-grounds-bjp-leaders-illegal-construction-sr-hiremath
ಹುಬ್ಬಳ್ಳಿ, ಅ.16: ಹುಬ್ಬಳ್ಳಿಯ ಜಿಮಖಾನಾ ಮೈದಾನದಲ್ಲಿ ಕ್ಲಬ್ ಭವನವೊಂದು ನಿರ್ಮಾಣವಾಗಿದೆ. ಇದು ಅಕ್ರಮವಾಗಿದ್ದು, ಬಿಜೆಪಿಯ ಪ್ರಭಾವಿ ನಾಯಕರ ಸಂಬಂಧಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಇದಕ್ಕೆ ಆ ನಾಯಕರೂ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಸಮಾಜ ಪರಿವರ್ತನ ಸಮುದಾಯದ ಮುಖಂಡ ಎಸ್ಆರ್ ಹಿರೇಮಠ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಸಂಸದ ಅನಂತ ಕುಮಾರ್ ಅವರ ವಿರುದ್ಧ ನೇರ ಆರೋಪ ಮಾಡಿದ್ದಾರೆ.

ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರು ಕಳೆದ ತಿಂಗಳು ಇದೇ ಆರೋಪವನ್ನು ಮುಂದಿಟ್ಟುಕೊಂಡು ಹುಬ್ಬಳಿಯಲ್ಲಿ ಸತ್ಯಾಗ್ರಹ ನಡೆಸಿದ್ದರು ಎಂಬುದು ಗಮನಾರ್ಹ.

ಹುಬ್ಬಳ್ಳಿಯ ಜಿಮಖಾನಾ ಮೈದಾನವು (Karnataka Gymkhana Association) ಸರಕಾರಕ್ಕೆ ಸೇರಿರುವ ಜಾಗ. 1914ರಲ್ಲಿ ಅಂದಿನ ಮುಂಬೈ ಸರಕಾರ ಸಾರ್ವಜನಿಕ ಕ್ರೀಡಾ ಚಟುವಟಿಕೆಗಳಿಗಾಗಿ ಇದನ್ನು ಮಂಜೂರು ಮಾಡಿತ್ತು. ಅದು ಸುಮಾರು 80 ಕೋಟಿ ರೂ. ಮೌಲ್ಯದ್ದಾಗಿದೆ. ಆ ಜಾಗದಲ್ಲಿ ಈ ತ್ರಿಮೂರ್ತಿಗಳ ಹತ್ತಿರದ ಸಂಬಂಧಿಗಳು ಅಕ್ರಮವಾಗಿ ಕ್ಲಬ್ ಕಟ್ಟಡ ನಿರ್ಮಿಸಿಕೊಂಡಿದ್ದಾರೆ ಎಂದು ಎಸ್ಆರ್ ಹಿರೇಮಠ ಆರೋಪಿಸಿದ್ದಾರೆ.

ಆದರೆ 2009ರಿಂದೀಚೆಗೆ ಈ ಆಟದ ಮೈದಾನವನ್ನು ಕೆಲ ಪ್ರಭಾವಿ ರಾಜಕಾರಿಗಳು ಸ್ವಾರ್ಥಕ್ಕಾಗಿ ಸಂಪೂರ್ಣವಾಗಿ ತಮ್ಮ ಸುಪರ್ದಿಗೆ ತೆಗೆದುಕೊಂಡು ರಿಕ್ರಿಯೇಶನ್ ಕ್ಲಬ್ ನಿರ್ಮಿಸಿಕೊಂಡು ಅನುಭವಿಸುತ್ತಿದ್ದಾರೆ. ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. ಈ ಅಕ್ರಮಕ್ಕೆ ಜಿಲ್ಲಾಧಿಕಾರಿಗಳು (ದರ್ಪಣ್ ಜೈನ್) ಕುಮ್ಮಕ್ಕು ನೀಡಿದ್ದಾರೆ.

ಆದರೆ ಇದು ಸರಕಾರಿ ಜಾಗ ಅಲ್ಲವೇ? ಹೀಗೆ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ನನ್ನ ಬಳಿ ದಾಖಲೆಗಳು ಇವೆ ಎಂದು ದಾಖಲೆಗಳನ್ನು ಮಾಧ್ಯಮಗಳಿಗೆ ತೋರಿಸಿದ ಹಿರೇಮಠ ಅವರು ಈ ಅಕ್ರಮವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಅಕ್ರಮದಲ್ಲಿ ಯಾರೆಲ್ಲಾ ಭಾಗಿ?:
1. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅವರ ಸೋದರ ಗೋವಿಂದ ಜೋಶಿ,
2. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸೋದರ ಪ್ರದೀಪ ಶೆಟ್ಟರ್,
3. ಸಂಸದ ಅನಂತ ಕುಮಾರ್ ಅವರ ಸೋದರ ಎಚ್ ಎನ್ ನಂದಕುಮಾರ್ ಮತ್ತು ಇನ್ನೂ ಕೆಲ ಪ್ರಭಾವಿ ವ್ಯಕ್ತಿಗಳು.

English summary
Hubli Gymkhana grounds house illegal construction by BJP leaders says social activist SR Hiremath. The controvercial premises (of 7.14 acres land) of Karnataka Gymkhana Association, which recently barred public entry to the institution, was given by the then Bombay government in 1914. The gymkhana’s president is ex cm Jagadish Shettar and its vice-president is BJP state unit president Prahlad Joshi, and his brother Govind Joshi is the treasurer. Other office-bearers include Shettar’s close asociate Ramesh Shetty, BJP leader Anantkumar’s brother HN Nandkumar and many businessmen close to the BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X