ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟೀಷರ ಕಾಲದ ಕಾನೂನು‌ಗಳನ್ನು ಈಗ ಮತ್ತೆ ಜಾರಿಗೆ ತರುತ್ತಿದ್ದಾರೆ!

|
Google Oneindia Kannada News

ಬೆಂಗಳೂರು, ಡಿ. 08: ರೈತರಿಗೆ ಮಾರಕವಾದ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂಡರು ವಿಧಾನಸೌಧ ಆವರಣದಲ್ಲಿನ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಡಾ.ಜಿ. ಪರಮೇಶ್ವರ, ಎಸ್.ಆರ್. ಪಾಟೀಲ್, ಬಿ.ಕೆ. ಹರಿಪ್ರಸಾದ್, ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ ಸೇರಿದಂತೆ ಕಾಂಗ್ರೆಸ್ ನಾಯಕರು, ಶಾಸಕರು ಭಾಗವಹಿಸಿದ್ದರು.

ರೈತರಿಂದ ಭಾರತ್ ಬಂದ್ ಕರೆ; 5 ಅಂಶಗಳನ್ನು ತಿಳಿಯಿರಿ ರೈತರಿಂದ ಭಾರತ್ ಬಂದ್ ಕರೆ; 5 ಅಂಶಗಳನ್ನು ತಿಳಿಯಿರಿ

ರೈತರು ಕರೆ ನೀಡಿರುವ ಭಾರತ್‌ ಬಂದ್‌ಗೆ ಸಂಪೂರ್ಣ ಬೆಂಬಲ ಕೊಡುವುದಾಗಿ ಕಾಂಗ್ರೆಸ್ ನಿನ್ನೆಯೆ ಪ್ರಕಟಿಸಿತ್ತು. ಇಂದು ವಿಧಾನಸೌಧದ ಆವರಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಸಾಂಕೇತಿಕ ಧರಣಿನ ಸತ್ಯಾಗ್ರಹ ನಡೆಸಿದ ಬಳಿಕ ಕಪ್ಪುಪಟ್ಟಿ ಧರಿಸಿ ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್ ನಾಯಕರು, ಶಾಸಕರು ಭಾಗವಹಿಸಿದರು.

ಪಟ್ಟು ಪಟ್ಟಿ ಧರಿಸಿ ಕಲಾಪದಲ್ಲಿ ಭಾಗಿ

ಪಟ್ಟು ಪಟ್ಟಿ ಧರಿಸಿ ಕಲಾಪದಲ್ಲಿ ಭಾಗಿ

ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ ಬಳಿಕ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ನಾವು ಈಗಾಗಲೇ ವಿರೋಧಿಸಿದ್ದೇವೆ. ಈಗ ತಂದಿರುವ ಕಾನೂನುಗಳು ರೈತ ವಿರೋಧಿಯಾಗಿವೆ. ಯಾರು ಬೇಕಾದರೂ ಭೂಮಿ ಕೊಳ್ಳಬಹುದು. ಈ ಕಾನೂನು ಕೇವಲ ಅದಾನಿ, ಅಂಬಾನಿಯಂತವರಿಗೆ ಮಾತ್ರ ಉಪಯೋಗವಾಗುತ್ತದೆ.


ಕಪ್ಪು ಪಟ್ಟಿ ಧರಸಿ ಪ್ರತಿಭಟನೆ ಮಾಡಿದ್ದೇವೆ. ವಿಧಾನಸಭೆ ಕಲಾಪದಲ್ಲಿಯೂ ಸದನದಲ್ಲೂ ಕಪ್ಪು ಪಟ್ಟಿ ಧರಸಿ ಭಾಗವಹಿಸುತ್ತೇವೆ. ಕಾಂಗ್ರೆಸ್ ಪಕ್ಷ ರೈತರ ಪರವಾಗಿ ಇದೆ, ಮುಂದೆಯೂ ಇರಲಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಪಂಜಾಬ್, ಹರ್ಯಾಣದಲ್ಲಿ ಪ್ರತಿಭಟನೆ

ಪಂಜಾಬ್, ಹರ್ಯಾಣದಲ್ಲಿ ಪ್ರತಿಭಟನೆ

ಪಂಜಾಬ್, ಹರ್ಯಾಣ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರವ ಸರ್ಕಾರ ಅದಾನಿ, ಕಾರ್ಪೋರೇಟ್ ಕಫಮನಿಗಳ ಪರವಾಗಿದೆ. ರೈತರು, ಕೃಷಿ‌ ಕ್ಷೇತ್ರವನ್ನು ನಾಶ ಮಾಡಲು ಕೇಂದ್ರ ಬಿಜೆಪಿ ಸರ್ಕಾರ ಹೊರಟಿದೆ. ಈಗ ರೈತರ ಹೋರಾಟ ನ್ಯಾಯಯುತವಾಗಿದೆ. ತಕ್ಷಣ ಈ ಕಾನೂನುಗಳನ್ನು ಹಿಂಪಡೆಯಬೇಕು.

ಕಾನೂನುಗಳು‌ಸಮಾಜಕ್ಕೆ ನ್ಯಾಯ ದೊರಕಿಸಬೇಕು. ಆದರೆ ಕೇಂದ್ರದ ಕಾನೂನುಗಳು ಕಾನೂನು ವಿರುದ್ಧವಾಗಿವೆ. ಸಮಾಜಕ್ಕೆ ವಿರುದ್ಧವಾಗಿವೆ. ರೈತ ಸಮುದಾಯಕ್ಕೆ ವಿರುದ್ಧವಾದ ಕಾನೂನು ಮಾಡಿದ್ದಾರೆ. ಆದನ್ನು ರೈತರು ವಿರೋಧಿಸುತ್ತಿದ್ದಾರೆ. ಆದರೂ ರೈತರ ಪ್ರತಿಭಟನೆ ಹತ್ತಿಕ್ಕಲು ಹೊರಟಿದ್ದಾರೆ. ಪಕ್ಷಗಳ ಹಕ್ಕುಗಳ ಧಮನಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್, ಡಿಎಂಕೆ, ಟಿಎಂಸಿ ಎಲ್ಲರೂ ಕಾನೂನು ತಿದ್ದುಪಡಿ ವಿರೋಧಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರನ್ನು ಗುಲಾಮರಂತೆ ಕಾಣುತ್ತಿದೆ ಬಿಜೆಪಿ

ರೈತರನ್ನು ಗುಲಾಮರಂತೆ ಕಾಣುತ್ತಿದೆ ಬಿಜೆಪಿ

ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿ‌ವಕುಮಾರ್ ಅವರು, ದೇಶದ ರೈತರ ಪರ ನಾವಿದ್ದೇವೆ. ರೈತರ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದೇವೆ. ಕೇಂದ್ರ ತಂದಿರುವ ಕಾಯ್ದೆಗಳು ರೈತ ವಿರೋಧಿಯಾಗಿವೆ. ರೈತರಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡಬೇಕು, ಆದರೆ ದೇಶದ ಪ್ರತಿ ಕಾನೂನನ್ನು ಬಿಜೆಪಿ ಬದಲಾಯಿಸುತ್ತಿದೆ. ಇಲ್ಲಿ ವ್ಯಾಪಾರ ಮಾಡಿದರೆ ಸೆಸ್ ಇದೆಯಂತೆ. ಹೊರಗಡೆ ವ್ಯಾಪಾರಕ್ಕೆ ಸೆಸ್ ಹಾಕುವುದಿಲ್ಲವಂತೆ. ರೈತರನ್ನು ಗುಲಾಮರನ್ನಾಗಿ ಮಾಡುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಡಿಕೆಶಿ ಆರೋಪಿಸಿದ್ದಾರೆ.

ಬ್ರಿಟೀಷರ ಕಾಲದ ಕಾನೂನು‌ ಈಗ ಜಾರಿಗೆ

ಬ್ರಿಟೀಷರ ಕಾಲದ ಕಾನೂನು‌ ಈಗ ಜಾರಿಗೆ

ರೈತರು ಬೆಳೆದ ಬೆಳೆ ಮಾರಾಟಕ್ಕೆ ಸ್ವಾತಂತ್ರ್ಯವಿಲ್ಲ. ರೈತರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಅನ್ನದಾತರ ಪರವಾಗಿ ನಾವು ನಿಲ್ಲುತ್ತೇವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಸಿರು ಶಾಲು ಹಾಕಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ರೈತನಿಗೆ ಮಾತ್ರ ಸಹಾಯ ಮಾಡಲ್ಲ. ರೈತರ ಸ್ವಾತಂತ್ರ್ಯವನ್ನೇ ಸರ್ಕಾರ ಹತ್ತಿಕ್ಕಿದೆ. ಕಾನೂನು ತರಲು ಯಾರೊಂದಿಗೆ ಬಳಿ ಚರ್ಚೆ ಮಾಡಿದ್ದಾರೆ? ಲಾಠಿ ಚಾರ್ಜ್ ಮಾಡೋದು, ಕೇಸ್ ಹಾಕೋದು ಮಾತ್ರ ಮಾಡುತ್ತಾರೆ. ಬ್ರಿಟೀಷರ ಕಾಲದ ಕಾನೂನು‌ ಈಗ ಜಾರಿಗೆ ತಂದಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

Recommended Video

ಜಸ್ಟ್ ಕ್ಯಾಮರಾ ನೋಡಿ ತಬ್ಬಿಬ್ಬಾಗಿ ಘೋಷಣೆ ಕೂಗಿದ ನಾಯಕರು | Oneindia Kannada

English summary
Congress legislators and leaders staged a protest in front of the statue of Mahatma Gandhi at the Vidhan Soudha premises today against the Centrel and the state BJP government for implementing lethal agricultural laws. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X